ಕರ್ನಾಟಕದ ನಂದಿನಿ ಹಾಲು ಸಂಘದವರು ವೆರ್-ವೆರೈಟಿ ಹಾಲಿನ ಪ್ಯಾಕೆಟ್ಗಳನ್ನ ಮಾಡಿ ಜನರಿಗೆಲ್ಲಾ ಸಿಗೋ ಹಾಗೆ ಮಾಡಿದ್ದಾರೆ. ಹಸಿರು, ಹಳದಿ, ಕೆಂಪು, ನೀಲಿ ಅಂತ ಬೇರೆ ಬೇರೆ ಬಣ್ಣದ ಪ್ಯಾಕೆಟುಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ಸಿಗುತ್ತವೆ. ಯಾವ ಉಪಯೋಗಕ್ಕೆ ಯಾವ ಬಣ್ಣದ ಪ್ಯಾಕೆಟ್ ಖರೀದಿಸಬೇಕು ಅನ್ನೋ ಪ್ರಶ್ನೇನ ಇದ್ರು ನಂದಿನಿ ಯಾವದಾದ್ರು ನಂದಿನಿ ಹಾಲೇ ಅಲ್ವಾ ಅಂತ ಜನ ಕಣ್ಮುಚ್ಚಿ ನಂಬುತ್ತಾರೆ ಯಾಕಂದ್ರೆ ಜನರಿಗೆ ನಂದಿನಿ ಮೇಲಿನ ವಿಶ್ವಾಸ ಅಂತದ್ದು. ಯಾವುದಾದ್ರೂ ಸರಿ ನಂದಿನಿ ಆಗಿದ್ರೆ ಸಾಕು ಅಂತ ತರೋದು ವಾಡಿಕೆ. ಅದು ಸಾಮಾನ್ಯವಾಗಿ ನೀಲಿ ಬಣ್ಣದ ಪ್ಯಾಕೆಟ್ಟೇ ಆಗಿರುತ್ತೆ, ಅತೀ ಹೆಚ್ಚಾಗಿ ನಮ್ಮ ಜನ ಅದನ್ನೇ ಬಳಸುತ್ತಾರೆ. ಇನ್ನು ನಂದಿನಿ ಉತ್ಪನ್ನ ಅಂದ್ರೆ ಅನೇಕರು ಇಷ್ಟ ಪಡ್ತಾರೆ. ಹಾಲಿನಿಂದ ಹಿಡಿದು ವಿವಿಧ ಬಗೆಯ ಸ್ವೀಟ್ ಸೇರಿದಂತೆ ಅನೇಕವು ಅಚ್ಚುಮೆಚ್ಚು. ಇದೀಗ ನೀವು ಕಡಿಮೆ ಮೊಸರು ಖರೀದಿ ಮಾಡ್ತೀವಿ ಅಂದ್ರೆ ಅದಕ್ಕೂ ಹೊಸ ನಂದಿನಿ ಲೈಟ್ ಮೊಸರು ಸಿಗಲಿದೆ. ಹೌದು ಮಾರುಕಟ್ಟೆ ಇದೀಗ ನಂದಿನಿಯ ಹೊಸ ಪ್ರಾಡೆಕ್ಟ್ ಲಭ್ಯವಿದ್ದು, ಮೊಸರು ಪ್ರೀಯರಿಗಂತೂ ಬಹಳ ಗುಡ್ ನ್ಯೂಸ್ ಅಂತಲೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ನಂದಿನಿ ಉತ್ಪನ್ನ ಪ್ರಿಯರಿಗೆ ಗುಡ್ ನ್ಯೂಸ್
ಹೌದು ಈ ಬಗ್ಗೆ ಕೆಎಂಎಫ್ ನಿಂದ ಮಾಹಿತಿ ನೀಡಲಾಗಿದ್ದು ಹೊಸ ನಂದಿನಿ ಲೈಟ್ ಮೊಸರು ಮಾರುಕಟ್ಟೆಗೆ ಕೆಎಂಎಫ್ ನಿಂದ ಬಿಡುಗಡೆ ಮಾಡಲಾಗುತ್ತಿದೆ. ಕಡಿಮೆ ಜಿಡ್ಡಿನಂಶ ಅಧಿಕ ಪ್ರೋಟಿನ್, ಅತಿಹೆಚ್ಚು ಪೋಷಕಾಂಶವನ್ನು ಇದು ಒಳಗೊಂಡಿದೆ ಎಂದಿದೆ. ಇನ್ನು ನಂದಿನಿ ಅರ್ಧ ಲೀಟರ್ ಮೊಸರಿನ ಪ್ಯಾಕ್ ದರ 25ರೂಪಾಯಿ ಆಗಿದೆ. ಹೊಸ ನಂದಿನಿ ಲೈಟ್ ಮೊಸರು 180 ಮಿ.ಲೀ ಪ್ಯಾಕ್ 10ರೂಪಾಯಿಗೆ ಇನ್ಮುಂದೆ ಲಭ್ಯವಾಗಲಿದೆ ಎಂದು ತಿಳಿಸಿದೆ. ಅಂದಹಾಗೇ ನಂದಿನಿ ಮೊಸರು ಜೀರ್ಣಕ್ರಿಯೆ ಸುಧಾರಣೆಗೆ ಸಹಕಾರಿಯಾಗಲಿದೆ. ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡಲಿದೆ. ಅಲ್ದೇ ಮೂಳೆಗಳ ಸದೃಢತೆಗೆ ಸಹಾಯಕವಾಗಿಲಿದ್ಯಂತೆ. ಇನ್ನು ಸಂಧಿವಾತ ನಿವಾರಣೆಗೆ, ಹಾಗೂ ರಕ್ತದೊತ್ತಡ ನಿವಾರಣೆಗೆ ಸಹಾಯಕ ಅಂತ ತಿಳಿಸಿದೆ. ಇನ್ನು ಈಗಾಗಲೇ ವಿವಿಧ ಮೊಸರಿನ ಬ್ರಾಂಡ್ ಗಳಿಂದ 10ರುಪಾಯಿಗೆ ಮೊಸರಿನ ಪ್ಯಾಕೇಟ್ ಬಿಡುಗಡೆ ಮಾಡಲಾಗಿತ್ತು. ಈ ಬೆನ್ನಲ್ಲೇ ನಂದಿನಿಯಿಂದ ಲೈಟ್ ಮೊಸರಿನ ಪ್ಯಾಕ್ ಬಿಡುಗಡೆ ಮಾಡಲಾಗಿದೆ ಇದು ಒಂದು ರೀತಿಯಲ್ಲಿ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಅದ್ರಲ್ಲೂ ನಂದಿನಿ ಬ್ರಾಂಡ್ ಅಂತ ಹೇಳೋರಿಗಂತೂ ಒಳ್ಳೆ ಸುದ್ದಿ.
ಹೌದು ಈ ಬಗ್ಗೆ ಅಧಿಕೃತವಾಗಿ ಟ್ವಿಟರ್ ನಲ್ಲಿ ಮಾಹಿತಿ ಲಭ್ಯವಿದ್ದು, ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ಕೆಎಂಎಫ್ನ ನಂದಿನಿ ಜಿಡ್ಡಿನಾಂಶ ಕಡಿಮೆಯಿರುವ ಲೈಟ್ ಮೊಸರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಧಿಕ ಪ್ರೋಟಿನ್ ಮತ್ತು ಪೋಷಕಾಂಶಭರಿತ ಮೊಸರು ಗ್ರಾಹಕರ ಆರೋಗ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಲಿದೆ ಅಂತ DIPR Karnataka ಟ್ವೀಟ್ ಮಾಡಿದೆ. ಇನ್ಮುಂದೆ ಮಾರುಕಟ್ಟೆಯಲ್ಲಿ ಚಿಕ್ಕ ಮೋಸರಿನ ಪ್ಯಾಕೆಟ್ ಲಭ್ಯವಿರಲಿದ್ದು, ಮೊಸರು ಪ್ರಿಯರಿಗೆ ಬಹಳ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೊಸರು ಲಭ್ಯವಾಗಲಿದೆ.