ವೃದ್ಧಪ್ಯಾದಲ್ಲಿ ನೆಮ್ಮದಿಯಾಗಿ ಜೀವನ ನಡೆಸಬೇಕು ಯಾರ ಮೇಲು ಡಿಪೆಂಡ್ ಆಗಬಾರದು ಅಂದುಕೊಳ್ಳುವವರಿಗೆ ಅಂಚೆ ಕಚೇರಿಯ ಕೆಲವೊಂದು ಯೋಜನೆಗಳು ಬಹಳ ಪ್ರಮುಖ್ಯತೆಯನ್ನ ವಹಿಸುತ್ತವೆ ಅಂತಲೇ ಹೇಳಬಹುದು. ಹೌದು ಪೋಸ್ಟ್ ಆಫೀಸ್ ಜಾರಿಗೆ ತಂದಿರುವ ಅಂಚೆ ಕಛೇರಿ ಗ್ರಾಮ ಸುರಕ್ಷಾ ಯೋಜನೆಯು ಕಡಿಮೆ ಅಪಾಯಗಳೊಂದಿಗೆ ಭರ್ಜರಿ ಆದಾಯವನ್ನು ನೀಡುತ್ತದೆ. ಮೆಚ್ಯೂರಿಟಿ ಸಮಯದಲ್ಲಿ ಸುಮಾರು 31 ರಿಂದ 35 ಲಕ್ಷ ರೂಪಾಯಿಗಳ ಆದಾಯ ಪಡೆಯಲು ಹೂಡಿಕೆದಾರರು ಪ್ರತಿ ತಿಂಗಳು 1500 ರೂಪಾಯಿಗಳನ್ನು ಠೇವಣಿ ಮಾಡಬೇಕಾಗುತ್ತದೆ. ಹೌದು ನೀವು ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಬಯಸದಿದ್ದರೆ ನಿಮ್ಮ ಹಣವನ್ನು ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ಉತ್ತಮ ವೇದಿಕೆಯಾಗಿದೆ. ಹೌದು ಇದಕ್ಕೆ ಪೋಸ್ಟ್ ಆಫೀಸ್ ಸುರಕ್ಷಿತ ವೇದಿಕೆಯಾಗಿದೆ ಅಲ್ದೇ ಇದರ ಜೊತೆಗೆ ಉತ್ತಮ ಆದಾಯವನ್ನು ಒದಗಿಸುತ್ತದೆ.
ಹೌದು, ಪೋಸ್ಟ್ ಆಫೀಸ್ ಜಾರಿಗೆ ತಂದಿರುವ ಅಂಚೆ ಕಛೇರಿ ಗ್ರಾಮ ಸುರಕ್ಷಾ ಯೋಜನೆಯು ಕಡಿಮೆ ಅಪಾಯಗಳೊಂದಿಗೆ ಭರ್ಜರಿ ಆದಾಯವನ್ನು ನೀಡುತ್ತದೆ. ಮೆಚ್ಯೂರಿಟಿ ಸಮಯದಲ್ಲಿ ಸುಮಾರು 31 ರಿಂದ 35 ಲಕ್ಷ ರೂಪಾಯಿಗಳ ಆದಾಯ ಪಡೆಯಲು ಹೂಡಿಕೆದಾರರು ಪ್ರತಿ ತಿಂಗಳು 1500 ರೂಪಾಯಿಗಳನ್ನು ಠೇವಣಿ ಮಾಡಬೇಕಾಗುತ್ತದೆ. ಅಂಚೆ ಕಛೇರಿ ಗ್ರಾಮ ಸುರಕ್ಷಾ ಯೋಜನೆಯು 19 ರಿಂದ 55 ವರ್ಷದೊಳಗಿನ ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ ಅಂದ್ರೆ ಇವ್ರೆಲ್ಲರೂ ಕೂಡ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಹಾಗಾದ್ರೆ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೋಡ್ತಾ ಹೋಗೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕಡಿಮೆ ಹೂಡಿಕೆಯೊಂದಿಗೆ ಹೆಚ್ಚು ಹಣ ಪಡೆಯಿರಿ
ಇನ್ನು ಪ್ರಸ್ತುತ, ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣವು ಕಡಿಮೆ ಅಪಾಯದೊಂದಿಗೆ ಹೆಚ್ಚಿನ ಆದಾಯವನ್ನು ತರುತ್ತದೆ. ಹೌದು ಗ್ರಾಮೀಣ ಜನರನ್ನು ಗುರಿಯಾಗಿಟ್ಟುಕೊಂಡು ಕಾರ್ಯಕ್ರಮಗಳನ್ನು ಪರಿಚಯಿಸಿದ ಭಾರತ ಅಂಚೆ, ಈಗ ತನ್ನ ಗ್ರಾಮೀಣ ಕಾರ್ಯಕ್ರಮದ ಭಾಗವಾಗಿ ಗ್ರಾಮ ಸುರಕ್ಷಾ ಯೋಜನೆಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ, ತಿಂಗಳಿಗೆ 1500ರೂಪಾಯಿ ಠೇವಣಿ ಮಾಡುವ ಹೂಡಿಕೆದಾರರು 31 ರಿಂದ 35 ಲಕ್ಷ ರೂಪಾಯಿವರೆಗೆ ರಿಟರ್ನ್ ಪಡೆಯಬಹುದು. ಹೌದು ಇಂಡಿಯಾ ಪೋಸ್ಟ್ ನೀಡುವ ಈ ರಕ್ಷಣಾ ಯೋಜನೆಯು ಕಡಿಮೆ ಅಪಾಯದೊಂದಿಗೆ ಉತ್ತಮ ಆದಾಯ ನೀಡುತ್ತದೆ.
ಇನ್ನು ಮುಖ್ಯವಾಗಿ 19 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಗ್ರಾಮ ಸುರಕ್ಷಾ ಯೋಜನೆಯ ಭಾಗವಾಗಿ ಇದಕ್ಕೆ ಅರ್ಹರಾಗಿರುತ್ತಾರೆ. ಈ ಯೋಜನೆಗೆ ಗರಿಷ್ಠ ಅರ್ಹತೆಯ ವಯಸ್ಸು 55 ವರ್ಷಗಳು. ಈ ಯೋಜನೆಯಡಿಯಲ್ಲಿ ಕನಿಷ್ಠ ವಿಮಾ ಮೊತ್ತವು 10,000ರೂಪಾಯಿಯಿಂದ 10 ಲಕ್ಷಗಳವರೆಗೆ ಇರುತ್ತದೆ. ಈ ಯೋಜನೆಯ ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಬಹುದು. ವ್ಯಕ್ತಿಯು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವನಾಗಿದ್ದಾಗ ಈ ಯೋಜನೆಯು ಪ್ರಯೋಜನ ಪಡೆಯಬಹುದು. ಇನ್ನು ಗ್ರಾಹಕರು ಪ್ರೀಮಿಯಂ ಪಾವತಿಸಲು 30 ದಿನಗಳ ಗ್ರೇಸ್ ಅವಧಿಯನ್ನು ಹೊಂದಿದ್ದಾರೆ. ಪಾಲಿಸಿ ಅವಧಿಯಲ್ಲಿ ಡೀಫಾಲ್ಟ್ ಆಗಿದ್ದಲ್ಲಿ, ಪಾಲಿಸಿದಾರರು ಬಾಕಿ ಇರುವ ಪ್ರೀಮಿಯಂ ಪಾವತಿಸಿ ವಿಮೆಯನ್ನು ನವೀಕರಿಸಬಹುದು ಈ ಆಯ್ಕೆಯು ಕೂಡ ಇದೆ.
ಈ ಯೋಜನೆಯ ಮೂಲಕ ಸಾಲ ಸೌಲಭ್ಯವೂ ದೊರೆಯುತ್ತದೆ. ಕ್ಲೈಂಟ್ ಮೂರು ವರ್ಷಗಳ ನಂತರ ಪಾಲಿಸಿಯನ್ನು ಸರೆಂಡರ್ ಮಾಡಲು ಆಯ್ಕೆ ಮಾಡಬಹುದು. ಆದರೆ, ಆ ಸಂದರ್ಭದಲ್ಲಿ ಯಾವುದೇ ಗ್ರಾಮ ಭದ್ರತಾ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಇನ್ನು ಒಬ್ಬ ವ್ಯಕ್ತಿಯು 19 ನೇ ವಯಸ್ಸಿನಲ್ಲಿ ಗ್ರಾಮ ಸುರಕ್ಷಾ ಪಾಲಿಸಿಯಲ್ಲಿ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಮಾಸಿಕ ಪ್ರೀಮಿಯಂ 55 ವರ್ಷಕ್ಕೆ 1,515 ರೂ., 58 ವರ್ಷಕ್ಕೆ 1,463 ಮತ್ತು 60 ವರ್ಷಕ್ಕೆ 1,411 ರೂ. 55 ವರ್ಷಗಳ ವಿಮೆಗೆ ಮೆಚ್ಯೂರಿಟಿ ಲಾಭ ರೂ. 31.60 ಲಕ್ಷಗಳು, 58 ವರ್ಷಗಳ ಪಾಲಿಸಿಗೆ ರೂ. 33.40 ಲಕ್ಷ. 60 ವರ್ಷಗಳ ಮೆಚುರಿಟಿ ಲಾಭ ರೂ.34.60 ಲಕ್ಷಗಳಾಗಿರುತ್ತದೆ.
ಹೀಗಾಗಿ ಮುಖ್ಯವಾಗಿ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಅಂಚೆ ಕಚೇರಿಯ ಗ್ರಾಮ ಭದ್ರತಾ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಈ ಯೋಜನೆಯು ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಯಾಕಂದ್ರೆ ಯೋಜನೆಯು ನಿಮ್ಮ ವೃದ್ಧಾಪ್ಯವನ್ನು ಸುರಕ್ಷಿತವಾಗಿರಿಸಲು ಕೆಲಸ ಮಾಡುತ್ತದೆ. ಗ್ರಾಮ ಸುರಕ್ಷಾ ಯೋಜನೆಯಡಿ ಈ ಮೊತ್ತವನ್ನು ವ್ಯಕ್ತಿಗೆ 80 ವರ್ಷವಾದಾಗ ಹಸ್ತಾಂತರಿಸಲಾಗುತ್ತದೆ. ಮತ್ತೊಂದೆಡೆ, ವ್ಯಕ್ತಿಯು ಸತ್ತರೆ, ಈ ಮೊತ್ತವು ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿಗೆ ಹೋಗುತ್ತದೆ. ಹೀಗಾಗಿ. ಎಲ್ಲ ರಕ್ಷಣಾತ್ಮಕ ಆಯ್ಕೆ ಇರೋದ್ರಿಂದ ಈ ಹೂಡಿಕೆ ಅತ್ಯಂತ ಸುರಕ್ಷತಾ ಅಂತ ಹೇಳಬಹುದು.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಇದನ್ನೂ ಓದಿ: ಕಾರು ಪ್ರಿಯರಿಗೆ ಗುಡ್ ನ್ಯೂಸ್, 2024 ಕ್ಕೆ 3 ಹೊಸ ಕಿಯಾ ಕಾರುಗಳು ಭಾರತೀಯ ಮಾರುಕಟ್ಟೆಗೆ