ಅಭಿಮಾನಿಗಳ ಪಾಲಿನ ದಾಸ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಟೇರ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರನ್ನ ರಂಜಿಸಲು ಬರ್ತಿದ್ದಾರೆ. ದೇಶಾದ್ಯಂತ ಭರ್ಜರಿಯಾಗಿ 457 ಥಿಯೇಟರ್ಗಳಲ್ಲಿ ಕಾಟೇರ ಸಿನಿಮಾ ರಿಲೀಸ್ ಆಗುತ್ತಿದೆ. ಹೌದು ಸಿನಿಮಾ ಡಿಸೆಂಬರ್ 29 ರಂದು ಅದ್ಧೂರಿಯಾಗಿ ರಿಲೀಸ್ ಆಗಲಿದ್ದು, ಅದಕ್ಕೂ ಮೊದಲೇ ಟಿಕೆಟ್ ಸೋಲ್ಡ್ ಔಟ್ ಆಗಿವೆಯಂತೆ. ಈ ಮೂಲಕ ನಟ ದರ್ಶನ್ ಅವರ ಸಿನಿಮಾ ಅಬ್ಬರ ಏನು? ಅನ್ನೋದು ಜಗತ್ತಿಗೆ ಗೊತ್ತಾಗುತ್ತಿದೆ. ಹೌದು 2023 ಡಿ-ಬಾಸ್ ದರ್ಶನ್ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದೆ. ಯಾಕೆ ಅಂದ್ರೆ, ಈ ವರ್ಷವೇ ಎರಡೆರಡು ಸಿನಿಮಾ ರಿಲೀಸ್ ಆಗುತ್ತಿವೆ. ಕೆಲವು ತಿಂಗಳ ಹಿಂದಷ್ಟೇ ‘ಕ್ರಾಂತಿ’ ಸಿನಿಮಾ ರಿಲೀಸ್ ಆಗಿ ದಾಖಲೆಗಳನ್ನ ಧೂಳಿಪಟ ಮಾಡಿತ್ತು. ಇದೀಗ ಫ್ಯಾನ್ಸ್ ಪಾಲಿನ ಡಿ-ಬಾಸ್, ನಟ ದರ್ಶನ್ ಅವರು ಕಾಟೇರ ಸಿನಿಮಾ ಮೂಲಕ ರೀ ಎಂಟ್ರಿಯನ್ನ ಕೊಡ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಇದೆ. ಹೀಗಿದ್ದಾಗ ಈ ಸಿನಿಮಾ ನೋಡಲು ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ.
ಹೌದು, ಮೊದಲೇ ಹೇಳಿದಂತೆ ಕಾಟೇರ ರಾಜ್ಯದ 457 ಥಿಯೇಟರ್ನಲ್ಲಿ ರಿಲೀಸ್ ಆಗುತ್ತಿದ್ದು, ಬಹು ನಿರೀಕ್ಷೆ ಮೂಡಿಸಿದೆ. ಚಿತ್ರದ ಕಂಟೆಂಟ್ & ದಾಸ ದರ್ಶನ್ ಅವರ ರಗಡ್ ಲುಕ್ ಎಲ್ಲ ಅಭಿಮಾನಿಗಳ ಎದೆಯಲ್ಲಿ ಹೊಸ ಆಸೆ ಮೂಡಿಸಿದೆ. ಹೀಗಾಗಿ ಟಿಕೆಟ್ಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಹೀಗಾಗಿ ಅಭಿಮಾನಿಗಳು ಮುಗಿಬಿದ್ದು ಕಾಟೇರ ಸಿನಿಮಾ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಹೌದು ಸಲಾರ್ & ಡಂಕಿ ಸಿನಿಮಾಗಳ ನಡುವೆ ಕಾಟೇರ ಸಿನಿಮಾ ಕೂಡ ಭರ್ಜರಿಯಾಗಿ ರಿಲೀಸ್ ಆಗ್ತಾಯಿದ್ದು, ಅಭಿಮಾನಿಗಳು ಈ ಸಿನಿಮಾ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಹೀಗೆ ಕಾಟೇರ ಅಬ್ಬರದ ಆರಂಭಕ್ಕೆ ಅಖಾಡ ಸಜ್ಜಾಗಿದೆ. ಅಭಿಮಾನಿಗಳು ಟಿಕೆಟ್ ಬುಕ್ ಮಾಡಿ ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಈ ಮಧ್ಯೆ ಟಿಕೆಟ್ ಬುಕ್ಕಿಂಗ್ ನಲ್ಲೂ ಕಾಟೆರಾ ಸಿನಿಮಾ ದಾಖಲೆ ಬರೆದಿದೆ ಅಂತಲೇ ಹೇಳಬಹುದು. ಒಂದೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಟಿಕೆಟ್ ಸೋಲ್ಡ್ ಔಟ್ ಅಗಿದ್ಯಂತೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
24ಗಂಟೆಯಲ್ಲಿ ಸೇಲ್ ಆಗಿದ್ದು ಬರೋಬ್ಬರಿ 20ಸಾವಿರಕ್ಕೂ ಹೆಚ್ಚು ಟಿಕೆಟ್
ಕಾಟೇರ ಸಿನಿಮಾದ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಸದ್ಯ ಟಿಕೆಟ್ ವಿಷಯಕ್ಕೆ ಬರೋದಾದ್ರೆ ಆನ್ಲೈನ್ ಬುಕಿಂಗ್ ನಲ್ಲಿ ಈಗಾಗ್ಲೇ ಟಿಕೆಟ್ ಗಳು ಬುಕ್ ಆಗ್ತಿದ್ದು, 1ದಿನ ಅಂದ್ರೆ 24ಗಂಟೆಯಲ್ಲಿ ಬರೋಬ್ಬರಿ 20,000ಸಾವಿರಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್ ಆಗಿವಯಂತೆ. ಸ್ವತಃ ಚಿತ್ರತಂಡವೇ ಈ ಬಗ್ಗೆ ಹೇಳಿಕೊಂಡಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕ್ರೇಜ್ ಹುಟ್ಟಿಸಿದೆ. ಯಾವ ಥಿಯೇಟರ್ಗಳಲ್ಲಿ ಯಾವ ಶೋ ಸೋಲ್ಡ್ ಔಟ್ ಆಗಿದೆ ಅನ್ನೋದನ್ನ ಕೂಡ ಸಿನಿಮಾ ತಂಡವೇ ಹೇಳಿಕೊಂಡಿದೆ. ಡಿಸೆಂಬರ್-29 ರಂದು ರಾಜ್ಯದೆಲ್ಲೆಡೆ ರಿಲೀಸ್ ಆಗ್ತಿರೋ ಕಾಟೇರ ಬಿಗೆಸ್ಟ್ ನಿರೀಕ್ಷೆ ಹುಟ್ಟುಹಾಕಿದೆ. ಬಹು ಕೋಟಿ ವೆಚ್ಚದ ಕನ್ನಡದ ಈ ಚಿತ್ರ ಕನ್ನಡದಲ್ಲಿ ಮಾತ್ರ ರಿಲೀಸ್ ಆಗುತ್ತಿದೆ. ಕನ್ನಡದ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿರೊ ದರ್ಶನ್ ತಮ್ಮ ಈ ಚಿತ್ರದಲ್ಲಿ ಕನ್ನಡಿಗರಿಗೆ ಆದ್ಯತೆ ಕೊಟ್ಟಿದ್ದಾರೆ. ಕನ್ನಡದ ಕಲಾವಿದರೇ ಈ ಚಿತ್ರದಲ್ಲಿ ಅತಿ ಹೆಚ್ಚು ಇರೋದು ವಿಶೇಷ ಅಂತಲೇ ಹೇಳಬಹುದು.
ಹೌದು ದಾಸ ದರ್ಶನ್ ಅಭಿನಯದ ಕಾಟೇರ ಎಲ್ಲೆಡೆ ರಿಲೀಸ್ ಆಗುತ್ತಿದೆ. ಬೆಂಗಳೂರಿನ ಮೇನ್ ಥಿಯೇಟರ್ ಅಲ್ಲದೇ ಇನ್ನೂ ಹಲವು ಥಿಯೇಟರ್ನಲ್ಲೂ ಚಿತ್ರ ಪ್ರದರ್ಶನವಾಗಲಿದೆ. ಹೀಗಾಗಿ ಆ ಎಲ್ಲ ಥಿಯೇಟರ್ಗಳಲ್ಲಿ ಟಿಕೆಟ್ ಬುಕ್ ಆಗಿವೆ. ಅಲ್ದೇ ಕಾಟೇರ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ. ಗಾಂಧಿನಗರದ ಅನುಪಮಾ ಹಾಗೂ ರಾಕ್ಲೈನ್ ಮಾಲ್ ಸೇರಿದಂತೆ ಹಲವೆಡೆ ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ರಾಕ್ಲೈನ್ ಮಾಲ್ನಲ್ಲಿ ಮಧ್ಯರಾತ್ರಿ 12 ಗಂಟೆಗೆ ಕಾಟೇರನ ದರ್ಶನವಾಗಲಿದೆ. ಇನ್ನು ಅನುಪಮಾ ಚಿತ್ರಮಂದಿರದಲ್ಲಿ ಸೂರ್ಯ ಹುಟ್ಟುವುದಕ್ಕು ಮುನ್ನ ಕಾಟೇರನ ಆರ್ಭಟ ಶುರುವಾಗಲಿದೆ. ಇದರಿಂದಾಗಿ ಈಗಾಗಲೇ ಮೂರ್ನಾಲ್ಕು ಶೋಗಳು ಸೋಲ್ಡ್ಔಟ್ ಆಗೋಗಿದೆ. ಇನ್ನು ಅಡ್ವಾನ್ಸ್ ಬುಕ್ಕಿಂಗ್ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಹೀಗಾಗಿ ಡಿಸೆಂಬರ್ 29ಕ್ಕೆ ರಾಜ್ಯಾದ್ಯಂತ ದೊಡ್ಡಮಟ್ಟದಲ್ಲೇ ಕಾಟೇರ ಸಿನಿಮಾ ಬಿಡುಗಡೆಯಾಗಲಿದೆ. ಸಾಕಷ್ಟು ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದ್ದು, ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಕಾಟೇರನ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಅಡ್ವಾನ್ಸ್ ಬುಕಿಂಗ್ ನಲ್ಲಿ ಒಂದು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಕಾಟೇರ
ಕಾಟೇರ ಸಿನಿಮಾವು ಇನ್ನೊಂದು ದಾಖಲೆಯನ್ನು ಸೃಷ್ಟಿಸಿದ್ದು ಅಡ್ವಾನ್ಸ್ ಬುಕಿಂಗ್ ನಲ್ಲಿ ಕೇವಲ 48 ಗಂಟೆಯಲ್ಲಿ ಒಂದು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದದಲ್ಲಿ ಒಂದು ಇತಿಹಾಸ ನಿರ್ಮಿಸಿ ಮುನ್ನುಗ್ಗುತ್ತಿದೆ. ಹಲವು ಚಿತ್ರಮಂದಿರಗಳಲ್ಲಿ ಮೊದಲ ದಿನದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು ಕಾಟೇರ ನೋಡಲು ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ: ವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 22 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿಯನ್ನು ಸಲ್ಲಿಸಿ
ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್, ಶೀಘ್ರವೇ 7500 ಶಿಕ್ಷಕರನ್ನು ನೇಮಿಸಿಕೊಳ್ಳಲಿರುವ ಶಿಕ್ಷಣ ಇಲಾಖೆ