ಕಳೆದ ಕೆಲವು ದಿನಗಳಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ಕ್ಯೂ ನಲ್ಲಿ ನಿಂತಿದ ದೃಶ್ಯಗಳು ಇಡೀ ರಾಜ್ಯದ್ಯಂತ ಕಂಡುಬಂದಿತ್ತು. ಕ್ಯೂ ನಿಲ್ಲಲು ಕಾರಣ ಒಂದು ವದಂತಿ ಹೌದು ಸೋಶಿಯಲ್ ಮೀಡಿಯಾದಲ್ಲಿ ಎಲ್ ಪಿ ಜಿ ಗ್ಯಾಸ್ ಗಳಿಗೆ ಡಿಸೆಂಬರ್ 31ನೇ ತಾರೀಖಿನ ಒಳಗಡೆ ಇ ಕೆವೈಸಿ ಅಪ್ಡೇಟ್ ಮಾಡಿಸಿಲ್ಲ ಅಂದ್ರೆ ಗ್ರಾಹಕರಿಗೆ ಯಾವುದೇ ಸಬ್ಸಿಡಿ ಸಿಗುವುದಿಲ್ಲ ಹಾಗೆ ಮುಂದಿನ ತಿಂಗಳಿಂದ ನಿಮ್ಮ ಗ್ಯಾಸ್ ಬಂದ್ ಆಗಲಿದೆ ಎಂದು ಹಲವಾರು ಸುಳ್ಳು ಸುದ್ದಿಗಳು ವೈರಲ್ ಆಗಿದ್ದವು. ಈ ಬಗ್ಗೆ ಆಹಾರ ಇಲಾಖೆ ಈಗ ಸ್ಪಷ್ಟನೆ ನೀಡಿದ್ದು ಇ-ಕೆವೈಸಿ ಮಾಡಿಸಲ್ಲು ಯಾವುದೇ ಅಂತಿಮ ದಿನಾಂಕ ನಿಗದಿಪಡಿಸಿಲ್ಲ ಎಂದು ಹೇಳಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗ್ಯಾಸ್ ಇ -ಕೆವೈಸಿ ಆಪ್ ಡೇಟ್ ಮಾಡಿಸಲು ಯಾವುದೇ ದಿನಾಂಕ ನಿಗದಿಪಡಿಸಿಲ್ಲ
ಈ ಕುರಿತಂತೆ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು. ದಿನಾಂಕ 31-12-2023ರ ಒಳಗಾಗಿ ಗ್ಯಾಸ್ ಏಜೆನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಸಿಗುತ್ತಿದೆ ಮತ್ತು ಸಿಲೆಂಡರ್ ಸರಬರಾಜು ಮಾಡಲಾಗುತ್ತದೆ ಎನ್ನುವ ವದಂತಿ ಮತ್ತು ಇ-ಕೆವೈಸಿ ಕಾರ್ಯಾಕ್ಕೆ ಹಣ ನೀಡಬೇಕು ವದಂತಿ, ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಠಿಗೆ ಕಾರಣವಾಗಿರುತ್ತದೆ.
ಸಾರ್ವಜನಿಕರಲ್ಲಿ ಪ್ರಕಟಣೆ ಏನೆಂದರೆ ಮೇಲ್ಕಂಡ ವಿಷಯವು ಕೇವಲ ವದಂತಿಯಾಗಿದ್ದು, ಅಡುಗೆ ಅನಿಲ ಗ್ರಾಹಕರು ತಮ್ಮ ಏಜೆನ್ಸಿಗೆ ತೆರಳಿ ಇ-ಕೆವೈಸಿ ನೀಡಬಹುದಾಗಿದೆ. ಅದು ಸಹ ಉಚಿತವಾಗಿ ನೀಡಬಹುದು. ಆದರೆ ಕೇಂದ್ರ ಸರ್ಕಾರವು ಯಾವುದೇ ಕೊನೆಯ ದಿನಾಂಕವನ್ನು ನಿಗಧಿಪಡಿಸಿರುವುದಿಲ್ಲ. ಉಜ್ವಲ ಯೋಜನೆಯ ಗ್ಯಾಸ್ ಸಂಪರ್ಕ ಪಡೆದಿರುವವರು ಇ-ಕೆವೈಸಿ ಮೊದಲು ಆದ್ಯತೆಯಾಗಿ ನೀಡಬೇಕಾಗಿದೆ ಉಳಿದಂತೆ ಗ್ಯಾಸ್ ಸಂಪರ್ಕ ಹೊಂದಿರುವವರು ಆಧಾರ್ ಸಂಖ್ಯೆ ದಾಖಲೆಯೊಂದಿಗೆ ಸಂಬಂಧಿಸಿದೆ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಕೆವೈಸಿ ನೀಡಬಹುದಾಗಿದೆ. ಸಾರ್ವಜನಿಕರು ಸದರಿ ಕಾರ್ಯವನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ ಎಂದು ಹೇಳಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಇಂಥವರಿಗೆ ಸಿಗಲ್ಲ ಯುವನಿಧಿ ಯೋಜನೆಯ ಹಣ; ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಇದನ್ನ ಗಮನಿಸಿ
ಇದನ್ನೂ ಓದಿ: ನಿಮ್ಮ CIBIL ಸ್ಕೋರ್ ಅನ್ನು ಹೆಚ್ಚಿಸಿಕೊಳ್ಳಬೇಕಾ? ಹಾಗಾದರೆ ಈ ಸರಳ ಉಪಾಯಗಳನ್ನು ಪಾಲಿಸಿ