ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆಗಳು(Bank account) ಅನಿವಾರ್ಯವಾಗಿವೆ. ಹೆಚ್ಚಿದ ತಂತ್ರಜ್ಞಾನದಿಂದಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆಗಳಾಗಿವೆ. ವಿಶೇಷವಾಗಿ ಸರ್ಕಾರವು ಯೋಜನೆಗಳನ್ನು ನಿರ್ವಹಿಸಲು ಬ್ಯಾಂಕ್ ಖಾತೆಗಳನ್ನು ಬಳಸುತ್ತಿದೆ. ಆದರೆ ಖಾತೆ ನಿರ್ವಹಣೆ ಗ್ರಾಹಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅನೇಕ ಬ್ಯಾಂಕುಗಳು ಗ್ರಾಹಕರಿಗೆ ತಮ್ಮ ಉಳಿತಾಯ ಖಾತೆಯನ್ನು ನೀಡುತ್ತವೆ, ಆದರೆ ನೀವು ಕನಿಷ್ಟ ಬ್ಯಾಲೆನ್ಸ್ ಅನ್ನು ಕಾಪಾಡಿಕೊಳ್ಳಬೇಕು. ಹಾಗೆ ಮಾಡಲು ವಿಫಲವಾದರೆ ಪೆನಾಲ್ಟಿ ಶುಲ್ಕಗಳು ಹೆಚ್ಚಾಗಿದ್ದು, ಗ್ರಾಹಕರಿಗೆ ಇದು ತಲೆಬಿಸಿ ಆಗಿ ಹೋಗಿತ್ತು. ಇದೀಗ ಆರ್. ಬಿ. ಐ ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಪ್ ಕೊಟ್ಟಿದೆ ಅಂತಲೇ ಹೇಳಬಹುದು. ಹೌದು ನೀವು ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರೆ ಅಥವಾ ಖಾತೆ ನಿಷ್ಕ್ರಿಯವಾಗಿದ್ದವರಿಗೆ ರಿಸರ್ವ್ ಬ್ಯಾಂಕ್ ದೊಡ್ಡ ರಿಲೀಫ್ ನೀಡಿದೆ.
ಇನ್ನು ಮುಂದೆ ನಿಷ್ಕ್ರಿಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ ಬ್ಯಾಂಕ್ಗಳು ಯಾವುದೇ ರೀತಿಯ ದಂಡವನ್ನು ವಿಧಿಸುವಂತಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಸತತ 2 ವರ್ಷಗಳ ಕಾಲ ನಿಮ್ಮ ಖಾತೆಯಿಂದ ಯಾವುದೇ ರೀತಿಯ ವಹಿವಾಟು ನಡೆಸದಿದ್ದರೆ ಅಥವಾ ಖಾತೆಯು ನಿಷ್ಕ್ರಿಯಗೊಂಡಿದ್ದರೆ, ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ, ಬ್ಯಾಂಕ್ ಅದರ ಮೇಲೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸಲು ಸಾಧ್ಯವಾಗುವುದಿಲ್ಲವಂತೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಹಣ ಇಲ್ಲ ಅಂದೇ ಚಿಂತೆ ಮಾಡುವಂತಿಲ್ಲ
ಉಳಿತಾಯ ಖಾತೆಯನ್ನು ಚಾಲನೆಯಲ್ಲಿಡಲು, ಪ್ರತಿಯೊಬ್ಬ ಖಾತೆದಾರನು ತನ್ನ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಇಟ್ಟಿರಬೇಕಾಗುತ್ತದೆ. ಇದನ್ನು ಸಾಮಾನ್ಯವಾಗಿ ಸರಾಸರಿ ಮಾಸಿಕ ಬ್ಯಾಲೆನ್ಸ್ (AMB) ಅಥವಾ ಕನಿಷ್ಠ ಬ್ಯಾಲೆನ್ಸ್ ಎಂದು ಕರೆಯಲಾಗುತ್ತದೆ. ಖಾತೆಯ ಬ್ಯಾಲೆನ್ಸ್ ಈ ಮಿತಿಗಿಂತ ಕಡಿಮೆಯಿದ್ದರೆ ಬ್ಯಾಂಕ್ ನಿಮಗೆ ದಂಡ ವಿಧಿಸುತ್ತದೆ. ಇದು ಬ್ಯಾಂಕ್ನಿಂದ ಬ್ಯಾಂಕ್ಗೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಆದ್ರೆ ಇನ್ಮುಂದೆ ಈಗಾಗೋದಿಲ್ಲ, ಹೌದು ಸತತ 2 ವರ್ಷಗಳ ಕಾಲ ನಿಮ್ಮ ಖಾತೆಯಿಂದ ಯಾವುದೇ ರೀತಿಯ ವಹಿವಾಟು ನಡೆಸದಿದ್ದರೆ ಅಥವಾ ಖಾತೆಯು ನಿಷ್ಕ್ರಿಯಗೊಂಡಿದ್ದರೆ, ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ, ಬ್ಯಾಂಕ್ ಅದರ ಮೇಲೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸಲು ಸಾಧ್ಯವಾಗುವುದಿಲ್ಲ ಅಂತ ಆರ್. ಬಿ. ಐ ತಿಳಿಸಿದೆ.
ಇದರೊಂದಿಗೆ, ಸ್ಕಾಲರ್ಶಿಪ್ ಮೊತ್ತ ಅಥವಾ ನೇರ ಲಾಭ ವರ್ಗಾವಣೆಗಾಗಿ ರಚಿಸಲಾದ ಖಾತೆಗಳ ಮೇಲೆ ಬ್ಯಾಂಕ್ಗಳು ಯಾವುದೇ ರೀತಿಯ ಕನಿಷ್ಠ ಬ್ಯಾಲೆನ್ಸ್ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಈ ಖಾತೆಗಳನ್ನು 2 ವರ್ಷಗಳಿಗಿಂತ ಹೆಚ್ಚು ಕಾಲ ಬಳಸದಿದ್ದರೂ ಖಾತೆಯ ಮೇಲೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕ್ಗಳಿಗೆ ಈ ಸೂಚನೆ ನೀಡಿದೆ. ಜೊತೆಗೆ ಉಳಿತಾಯ ಖಾತೆ ನಿಷ್ಕ್ರಿಯವಾಗಿದ್ದರೂ ಬ್ಯಾಂಕ್ಗಳು ಯಾವಾಗಲೂ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಸರ್ಕಾರಿ ಯೋಜನೆ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ದರೂ ಅವುಗಳನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುವುದಿಲ್ಲ. ಅಲ್ಲದೆ, ಕನಿಷ್ಠ ಬ್ಯಾಲೆನ್ಸ್ ದಂಡವನ್ನು ವಿಧಿಸುವಂತಿಲ್ಲ ಅಂತ ಹೇಳಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
SMS ಮತ್ತು ಮೇಲ್ ಮೂಲಕ ಸಂಪರ್ಕಿಸಿ: ಹೊಸ ನಿಯಮಗಳ ಪ್ರಕಾರ, ಬ್ಯಾಂಕ್ಗಳು ತಮ್ಮ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದರ ಕುರಿತು SMS, ಪತ್ರ ಅಥವಾ ಇಮೇಲ್ ಮೂಲಕ ಗ್ರಾಹಕರಿಗೆ ತಿಳಿಸಬೇಕಾಗುತ್ತದೆ. ನಿಷ್ಕ್ರಿಯ ಖಾತೆಯ ಮಾಲೀಕರು ಪ್ರತಿಕ್ರಿಯಿಸದಿದ್ದರೆ, ಖಾತೆದಾರರನ್ನು ಪರಿಚಯಿಸಿದ ವ್ಯಕ್ತಿ ಅಥವಾ ಆ ಖಾತೆಯ ನಾಮಿನಿಯನ್ನು ಸಂಪರ್ಕಿಸುವಂತೆ ಬ್ಯಾಂಕ್ಗಳಿಗೆ ತಿಳಿಸಲಾಗಿದೆ. ಕ್ಲೈಮ್ ಮಾಡದ ಠೇವಣಿಗಳು ಮಾರ್ಚ್ 2023 ರ ಅಂತ್ಯದ ವೇಳೆಗೆ 28 ಪ್ರತಿಶತದಷ್ಟು ಹೆಚ್ಚಾಗಿದ್ದು, 42,272 ಕೋಟಿ ರೂ. ಆಗಿದೆ. ಇದು ವರ್ಷದ ಹಿಂದೆ 32,934 ಕೋಟಿ ರೂ. ಇತ್ತು. ಈ ಹಿಂದೆಯೂ ಆರ್ಬಿಐ ಬ್ಯಾಂಕ್ಗಳಿಗೆ ಕನಿಷ್ಠ ಬ್ಯಾಲೆನ್ಸ್ ಉಳಿಸದಿದ್ದಕ್ಕಾಗಿ ದಂಡದ ಶುಲ್ಕ ವಿಧಿಸುವುದರಿಂದ ಖಾತೆಗಳಲ್ಲಿನ ಬ್ಯಾಲೆನ್ಸ್ ಋಣಾತ್ಮಕವಾಗದಂತೆ ನೋಡಿಕೊಳ್ಳಲು ನಿರ್ದೇಶನ ನೀಡಿತ್ತು. ಇದಾದ ನಂತರವೂ ಬ್ಯಾಂಕ್ಗಳು ದಂಡ ವಿಧಿಸುವುದನ್ನು ಮುಂದುವರಿಸಿದ್ದು, ಹಲವು ಉದಾಹರಣೆಗಳು ಬೆಳಕಿಗೆ ಬಂದಿವೆ. ಹೀಗಾಗಿ ಬ್ಯಾಂಕ್ಗಳಲ್ಲಿ ಕ್ಲೈಮ್ ಮಾಡದ ಖಾತೆಗಳು ಮತ್ತು ಕ್ಲೈಮ್ ಮಾಡದ ಮೊತ್ತವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಸೂಚನೆಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕ್ಲೈಮ್ ಮಾಡದ ಠೇವಣಿಗಳ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಆರ್ಬಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಇದರೊಂದಿಗೆ, ಕ್ಲೈಮ್ ಮಾಡದ ಠೇವಣಿಗಳನ್ನು ಅವರ ನಿಜವಾದ ಮಾಲೀಕರು/ಹಕ್ಕುದಾರರಿಗೆ ಹಿಂದಿರುಗಿಸಲು ಇದು ಸಹಾಯ ಮಾಡುತ್ತದೆ ಅಂತ ಹೇಳಲಾಗುತ್ತಿದೆ.
ಇದನ್ನೂ ಓದಿ: ಮಹಿಳಾ ಸರ್ಕಾರಿ ನೌಕರರು ಪಿಂಚಣಿದಾರರು ಗಂಡನ ಬದಲಿಗೆ ನಿಮ್ಮ ಮಕ್ಕಳಿಗೆ ನಾಮ ನಿರ್ದೇಶಿಸಬಹುದು..