ಡ್ರೋನ್ ಪ್ರತಾಪ್ ಅವರ ಅನಾರೋಗ್ಯದ ಬಗ್ಗೆ, ಅವರು ತಮ್ಮ ಪ್ರಾಣವನ್ನು ತೆಗೆಯಲು ಪ್ರಯತ್ನಿಸಿದ್ದಾರೆ ಎಂದು ಸಾಕಷ್ಟು ವದಂತಿಗಳು ಹರಡಿದ್ದವು, ಆದರೆ ಅದು ನಿಜವಲ್ಲ. ಸದ್ಯಕ್ಕೆ ಡ್ರೋನ್ ಪ್ರತಾಪ್ ಚೆನ್ನಾಗಿಯೇ ಇದ್ದಾರೆ. ಇಡೀ ಬಿಗ್ ಬಾಸ್ ಸ್ಪರ್ಧಿಗಳಿಂದ ಆತ್ಮಹತ್ಯೆಯ ಪರಿಸ್ಥಿತಿಯ ಬಗ್ಗೆ ಸ್ಪಷ್ಟೀಕರಣ ಸಿಕ್ಕಿದೆ. ನಮಗೆ ಕಲರ್ಸ್ ಕನ್ನಡ ವಾಹಿನಿಯಿಂದಲೂ ಕೂಡ ಸ್ಪಷ್ಟನೆ ಸಿಕ್ಕಿದೆ. ಡ್ರೋನ್ ಪ್ರತಾಪ್ ಅವರದು ಆತ್ಮಹತ್ಯೆ ಪ್ರಯತ್ನವಲ್ಲ. ಇವರು 2 ದಿನಗಳಿಂದ ಏನನ್ನೂ ತಿಂದಿರಲಿಲ್ಲ. ಅವರು ಖಾಲಿ ಹೊಟ್ಟೆಯಲ್ಲಿ ವಿಟಮಿನ್ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಿದ್ದರು. ಆ ರಾತ್ರಿಯೇ ಅವರಿಗೆ ಫುಡ್ ಪಾಯ್ಸನ್ ಆದ ಕಾರಣ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ.
ಪ್ರತಾಪ್ ಇಂದು ಸಂಜೆಯ ನಂತರ ಬಿಗ್ ಬಾಸ್ ಮನೆಗೆ ಮರಳಲಿದ್ದಾರೆ. ಅವರು ಚೆನ್ನಾಗಿ ಮಾತನಾಡುತ್ತಿದ್ದಾರೆ. ಅವರು, ರಾಜರಾಜೇಶ್ವರಿ ನಗರದ ಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. 87 ದಿನಗಳಿಂದ ಮನೆಯಲ್ಲಿದ್ದು ಗೆಲ್ಲಲೇಬೇಕೆಂಬ ಹಂಬಲ ಹೊಂದಿರುವ ಪ್ರತಾಪ್ ಬಗ್ಗೆ ಬಹಳಷ್ಟು ಜನ ಇಲ್ಲ ಸಲ್ಲದ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಡ್ರೋನ್ ಪ್ರತಾಪ್ ಬಿಗ್ ಬಾಸ್ ಲೈವ್ ನಲ್ಲಿ ಕಾಣಿಸಿಕೊಂಡಿಲ್ಲ. ಸಂಗೀತಾ ಕ್ಯಾಮರಾ ಮುಂದೆ ಹೆಜ್ಜೆ ಹಾಕುತ್ತಾ, ‘ನಿಜವಾಗಿಯೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಪ್ರಥೂ’ ಎಂದು ಹೇಳಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕರು ಹಾಗಾದರೆ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿಲ್ಲ ಅವರಿಗೆ ಏನೋ ಸಮಸ್ಯೆ ಆಗಿದೆ ಎಂದು ಇಲ್ಲ ಸಲ್ಲದ ಉಹಾ ಪೋಹಗಳನ್ನು ಹರಡಿದ್ದಾರೆ.
ಪ್ರತಾಪ್ ಆರೋಗ್ಯದ ಬಗ್ಗೆ ಡಾಕ್ಟರ್ ಹೇಳಿದ್ದೇನು?
ಪ್ರತಾಪ ಎಲ್ಲಿ ಹೋದನೆಂದು ಎಲ್ಲರಿಗೂ ಅಚ್ಚರಿಯಾಗಿದೆ. ಹಾಗಾಗಿ, ಪ್ರತಾಪ್ ತನ್ನ ಪ್ರಾಣ ತೆಗೆಯಲು ಯತ್ನಿಸಿದ್ದಾನೆ ಎಂಬ ವದಂತಿಗಳು ಹಬ್ಬಿದ್ದವು. ಸಂಜೀವಿನಿ ಆಸ್ಪತ್ರೆಯ ವೈದ್ಯರು ಇದೀಗ ಸ್ಪಷ್ಟನೆ ನೀಡಿದ್ದಾರೆ. ಪ್ರತಾಪ್ ಅವರು ಕಳೆದ ಬುಧವಾರ (ಜನವರಿ 3) ರಂದು ರಾತ್ರಿ ಅಡ್ಮಿಟ್ ಆಗಿದ್ದರು. ಇಂದು ಅವರ ಆರೋಗ್ಯ ಚೇತರಿಕೆ ಆಗಿದೆ ಎಲ್ಲಾ ರೀತಿಯಿಂದಲೂ ಕೂಡ ಪ್ರತಾಪ್ ಚೆನ್ನಾಗಿದ್ದಾರೆ. ಎಂದು ಸಂಜೀವಿನಿ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಕೆಲವು ಕೆಟ್ಟ ಆಹಾರ ಪದ್ಧತಿಯಿಂದ ಪ್ರತಾಪ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆಸ್ಪತ್ರೆಗೆ ಬಂದಾಗ ಪ್ರತಾಪ್ ತಣ್ಣಗಿದ್ದ. ಅವರು ಯಾವುದೇ ಮಾತ್ರೆಗಳನ್ನು ತೆಗೆದುಕೊಂಡಿಲ್ಲ. ‘ಬಿಗ್ ಬಾಸ್’ ಮನೆಯಲ್ಲಿನ ಆಹಾರ ಅವರಿಗೆ ತಿನ್ನಲು ತುಂಬಾ ಕಷ್ಟ. ಅವರು ಆಸ್ಪತ್ರೆಗೆ ಬಂದಾಗ, ಅವರು ಕೆಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಪ್ರತಾಪ್ ಮಾನಸಿಕವಾಗಿ ಗಟ್ಟಿಮುಟ್ಟಾದವರು. ಪ್ರತಾಪ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಹೆಚ್ಚು ಮಾತನಾಡುವುದಿಲ್ಲ. ವಿಷಯಗಳು ಕಠಿಣವಾದಾಗ ಅವರು ವಿಚಲಿತರಾಗುತ್ತಾರೆ.
ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಹೇಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಅಲ್ಲಿ ಹೆಚ್ಚು ಯಾರು ತಂಟೆಗೂ ಕೂಡ ಹೋಗುವುದಿಲ್ಲ ಅವರಾಯಿತು ಅವರ ಕೆಲಸವಾಯಿತು ಅಂತ ಇದ್ದಾರೆ ಆದರೆ ಜನಗಳು ಮಾತ್ರ ಅವರವರ ಪಾಡಿಗೆ ಇರಲು ಬಿಡುತ್ತಿಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಒಂದು ಟ್ರೋಲ್ ಮಾಡುತ್ತಾನೆ ಇದ್ದಾರೆ ಆಹಾರದಿಂದ ಒಂದು ಚಿಕ್ಕ ಸಮಸ್ಯೆಯಾಗಿರುವುದನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಅವರು ಸು*ಸೈಡ್ ಗೆ ಅಟ್ಟೆಂಪ್ಟ್ ಮಾಡಿದ್ದಾರೆ ಎಂದು ಸುದ್ದಿಯನ್ನು ಹರಡಿದ್ದಾರೆ. ಆದರೆ ಪ್ರತಾಪ್ ಮಾತ್ರ ಚೆನ್ನಾಗಿಯೇ ಇದ್ದಾರೆ ಏನೋ ಒಂದು ಸಣ್ಣ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ. ಇಂದು ರಾತ್ರಿ ಬಿಗ್ ಬಾಸ್ ಮನೆಗೂ ಕೂಡ ತೆರಳಲಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ಮಹಿಳಾ ಸರ್ಕಾರಿ ನೌಕರರು ಪಿಂಚಣಿದಾರರು ಗಂಡನ ಬದಲಿಗೆ ನಿಮ್ಮ ಮಕ್ಕಳಿಗೆ ನಾಮ ನಿರ್ದೇಶಿಸಬಹುದು..