ಕಳೆದ 20 ರಿಂದ 30ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿ ಜೀವನ ನಡೆಸುತ್ತಿದ್ದವರಿಗೆ ಅರಣ್ಯ ಭೂಮಿ ಅಕ್ರಮ ಸಾಗುವಳಿ ತೆರವಿನ ಕ್ರಮ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು, ಹೌದು ಇಷ್ಟು ವರ್ಷಗಳ ಕಾಲ ಭೂಮಿ ನಂಬಿ ಜೀವನ ನಡೆಸುತ್ತ ಬಂದಿದ್ದ ರೈತರು ಮುಂದೇನು ಎನ್ನುವ ಚಿಂತೆಯಲ್ಲಿ ಕಾಲ ನೂಕುವಂತಾಗಿತ್ತು. ಮೊದಲೆಲ್ಲ ಕೃಷಿ ಮಾಡುವಷ್ಟು ಜಮೀನು ಇಲ್ಲದ್ದರಿಂದ ಕುಟುಂಬದ ಜೀವನ ನಿರ್ವಹಣೆಗೆ ಅನಿವಾರ್ಯವಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಹಲವಾರು ರೈತರು ಅನೇಕ ವರ್ಷಗಳಿಂದ ಅಂತಹ ಪ್ರದೇಶಗಳಲ್ಲಿ ಸಾಗುವಳಿ ಮಾಡುತ್ತ ತಮ್ಮದಲ್ಲದ ಜಮೀನಿನಲ್ಲಿ ಮೈಮುರಿದು ದುಡಿದು ಒಪ್ಪತ್ತಿನ ಗಂಜಿ ಕುಡಿದು ಇತರರಂತೆ ಜೀವನ ಸಾಗಿಸುತ್ತಾ ಬಂದಿದ್ದಾರೆ. ಅದರಲ್ಲಿಯೇ ಅಲ್ಪಸ್ವಲ್ಪ ಉಳಿತಾಯ ಮಾಡಿ ತಮ್ಮಂತೆ ಮಕ್ಕಳು ಆಗಬಾರದು ಅವರಿಗೆ ಶಿಕ್ಷಣ ಕೊಡಿಸಬೇಕು. ಎನ್ನುವ ಛಲದಿಂದ ರೈತರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಭೂಮಿ ಒತ್ತುವರೀ ತೆರವು ಆದೇಶ ರೈತರಿಗೆ ದೊಡ್ಡ ಮಟ್ಟದಲ್ಲಿ ಒಡೆತ ಕೊಡುವಂತಿತ್ತು.
ಇನ್ನು ರಾಜ್ಯ ಉಚ್ಚನ್ಯಾಯಾಲಯದ ಆದೇಶದ ಮೇರೆಗೆ ಸಾಗುವಳಿ ಮಾಡುತ್ತಿರುವ ಅರಣ್ಯ ಭೂಮಿಯನ್ನು ತೆರವುಗೊಳಿಸಿ ಅರಣ್ಯೀಕರಣ ಮಾಡಲಾಗುವುದು. ಅಕ್ರಮ ಅರಣ್ಯ ಭೂಮಿ ಸಕ್ರಮಗೊಳಿಸಿ ತಮಗೆ ಪಟ್ಟಾ ನೀಡುವಂತೆ ಕೆಲವರು ಗ್ರಾಮ ಅರಣ್ಯ ಹಕ್ಕುಗಳ ಸಮಿತಿಗಳಿಗೆ ಅರ್ಜಿ ಸಲ್ಲಿಸಿದ್ರು. ಸದ್ಯ ಇದೀಗ ವಿಚಾರದಲ್ಲಿ ರೈತರಿಗೆ ಸ್ವಲ್ಪ ನೆಮ್ಮದಿ ಸಿಕ್ಕಂತಾಗಿದ್ದು, 7ಸಾವಿರ ರೈತರಿಗೆ ಅರಣ್ಯ ಭೂಮಿಯಲ್ಲಿ ಕೃಷಿ ಮಾಡಲು ಕೋರಿ ನಿಗಧೀತ ಅವಧಿಯಲ್ಲಿ ಅರ್ಜಿ ಸಲ್ಲಿಸಿದ್ದ ರೈತರಿಗೆ ಹಕ್ಕು ಪತ್ರ ನೀಡಲು ಮುಂದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಿಗಧಿ ಅವಧಿಯೊಳಗೆ ಅರ್ಜಿ ಸಲ್ಲಿಸಿದ್ದ ರೈತರಿಗೆ ಹಕ್ಕುಪತ್ರ
ಹೌದು ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಇದೀಗ ಸಿಹಿ ಸುದ್ದಿ ಕೊಟ್ಟಿದೆ ಅಂತಲೇ ಹೇಳಬಹುದು. ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿದ ರೈತರಿಗೆ ಇದೀಗ ಅರಣ್ಯ ಭೂಮಿಯಲ್ಲಿ ಕೃಷಿ ಮಾಡಲು ಅನುವನ್ನು ಮಾಡಿಕೊಡಲಾಗಿದೆ. ಅರ್ಜಿ ಸಲ್ಲಿಸಿದ ಸುಮಾರು ಏಳು ಸಾವಿರ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಕೊಟ್ಟಿದ್ದಾರೆ. ನಿಗದಿತ ಅವಧಿ ಒಳಗಡೆ ಅರ್ಜಿ ಸಲ್ಲಿಸಿದಂತಹ ಸುಮಾರು 13,750 ಪ್ರಕರಣಗಳ 31864 ಎಕರೆ ಭೂಮಿಯಿದ್ದು, ಈ ಪೈಕಿ 7,000 ರೈತರಿಗೆ ಹಕ್ಕು ಪತ್ರ ನೀಡಲಾಗುವುದು ಅಂತ ಈಶ್ವರ್ ಖಂಡ್ರೆ ಹೇಳಿದ್ದಾರೆ. ಹೌದು 7,000 ಪ್ರಕರಣಗಳಲ್ಲಿ ರೈತರಿಗೆ ಕೃಷಿ ಭೂಮಿಯ ಹಕ್ಕು ಪತ್ರ ನೀಡಲಾಗುತ್ತಿದ್ದು ಮೂರು ಎಕರೆಗಿಂತ ಅಧಿಕ ಕೃಷಿ ಭೂಮಿ ಹೊಂದಿರುವವರಿಗೆ ಹಕ್ಕುಪತ್ರ ನೀಡಲಾಗುವುದಿಲ್ಲ ಅಂತ ತಿಳಿಸಿದ್ದಾರೆ.
ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ 1980 ಜಾರಿಗೂ ಮುನ್ನವೇ ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರತಕ್ಕಂತ ರೈತರಿಗೆ ರಾಜ್ಯ ಸರ್ಕಾರ ಹಕ್ಕು ಪತ್ರ ನೀಡಲು ಮುಂದಾಗಿದೆ. ಜನವರಿ ತಿಂಗಳ ಒಳಗಾಗಿ ಸುಮಾರು 7,000 ರೈತರಿಗೆ ಹಕ್ಕು ಪತ್ರವನ್ನು ನೀಡಲಾಗುವುದು ಅಂತ ಇದೀಗ ಸ್ವತಃ ಕೃಷಿ ಸಚಿವ ಈಶ್ವರ್ ಖಂಡ್ರೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಅದರಲ್ಲಿಯೂ ಕೂಡ ಒಂದು ಷರತ್ತನ್ನ ಹಾಕಲಾಗಿದ್ದು ಮೂರು ಎಕರೆಗಿಂತ ಅಧಿಕ ಜಮೀನಿನ ಒತ್ತುವರಿ ಮಾಡಿಕೊಂಡು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿರುವ ರೈತರಿಗೆ ಜಮೀನನ ನೀಡ್ಲಾಗುವುದಿಲ್ಲ ಅದಕ್ಕಿಂತ ಕಡಿಮೆ ಸಾಗುವಳಿ ಭೂಮಿಯಲ್ಲಿ ಕೃಷಿ ಮಾಡುತ್ತಿರು ತಕ್ಕಂತ ರೈತರಿಗೆ ಮಾತ್ರ ಅರಣ್ಯ ಭೂಮಿಯನ್ನು ನೀಡಲಾಗುವುದು ಅಂತ ಸಚಿವರು ತಿಳಿಸಿದ್ದಾರೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಈ ತಿಂಗಳ ಒಳಗಾಗಿ ಎಲ್ಲಾ 7000 ರೈತರಿಗೆ ಹಕ್ಕು ಪತ್ರ
ಹೌದು ಈ ಹಿಂದೆ ಅರಣ್ಯ ಭೂಮಿಯನ್ನು ನೆಚ್ಚಿಕೊಂಡು ಕೃಷಿ ಮಾಡ್ತಾ ಹೇಗೋ? ಬಂದದ್ರಲ್ಲಿ ತೃಪ್ತಿ ಪಟ್ಟುಕೊಂಡು ಜೀವನ ಸಾಗ್ತಿದ್ದಂತಹ ರೈತರಿಗೆ ಅರಣ್ಯ ಸಂರಕ್ಷಣಾ ಕಾಯ್ದೆ ಬಹಳಷ್ಟು ತಲೆನೋವನ್ನು ಉಂಟು ಮಾಡಿತ್ತು ಈ ಹಿನ್ನೆಲೆ ನೊಂದ ರೈತರು ಕೋರ್ಟ್ ಗೆ ಅರ್ಜಿಯನ್ನು ಕೂಡ ಸಲ್ಲಿಸಿದ್ರು ಇದೀಗ ಅದೆಲ್ಲವನ್ನು ವಿಚಾರಣೆ ಮಾಡಿ ತದನಂತರ ಇದೀಗ ಕೃಷಿ ಸಚಿವರು ಒಂದು ನಿರ್ಣಯಕ್ಕೆ ಬಂದಿದ್ದು 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಯಾಗೋಕು ಮೊದಲಿಂದಲೂ ಯಾರು ಅರಣ್ಯ ಭೂಮಿಯಲ್ಲಿ ಕೃಷಿಯನ್ನು ಮಾಡಿಕೊಂಡು ಬಂದಿದ್ದಾರೋ ಅಂತವರಿಗೆ ಅದರಲ್ಲೂ ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ ಮಾಡಿಕೊಂಡು ಕೃಷಿಯಲ್ಲಿ ತೊಡಗಿರತಕ್ಕಂತ ರೈತರಿಗೆ ಅರಣ್ಯ ಭೂಮಿಯನ್ನು ಕೊಡಲಿಕ್ಕೆ ರಾಜ್ಯ ಸರ್ಕಾರ ತೀರ್ಮಾನವನ್ನು ಮಾಡಿದೆ ಸುಮಾರು 7000 ಅರ್ಹ ರೈತರಿಗೆ ಇದೀಗ ಹಕ್ಕುಪತ್ರ ವಿತರಣೆ ಮಾಡ್ಲಿಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು ಈ ಒಂದು ಕೃಷಿಯ ವಿಚಾರವನ್ನು ಕೃಷಿ ಸಚಿವ ಈಶ್ವರ್ ಖಂಡ್ರೆ ಅವರು ಅಧಿಕೃತವಾಗಿ ತಿಳಿಸಿದ್ದಾರೆ.
ಸುಮಾರು 40 ದಶಕದಿಂದಲೂ ಕೂಡ ಅರಣ್ಯ ಭೂಮಿಯನ್ನೇ ಕೃಷಿ ಭೂಮಿಯನ್ನಾಗಿ ಮಾಡಿಕೊಂಡಿದ್ದ ರೈತರ ಮುಖದಲ್ಲಿ ಇದೀಗ ಸಂತಸ ಮೂಡಿದೆ ಅಂತಲೇ ಹೇಳಬಹುದು ಅದರಲ್ಲೂ 7000 ಅರ್ಹ ರೈತರಿಗೆ ಇದೀಗ ಅರಣ್ಯ ಭೂಮಿಯ ಹಕ್ಕುಪತ್ರ ಸಿಕ್ತಾ ಇರೋದು ನಿಜಕ್ಕೂ ಕೂಡ ಖುಷಿಯ ಸಂಗತಿ ಅಂತಲೇ ಹೇಳಬಹುದು. ಇನ್ನು ಈ ತಿಂಗಳ ಒಳಗಾಗಿ ಎಲ್ಲಾ ಅರ್ಹ 7,000 ರೈತರಿಗೆ ಹಕ್ಕುಪತ್ರವಿತತೆ ಆಗಿದೆ ಅಂತ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿರುವ 13,750 ಪ್ರಕರಣಗಳ 31,864 ಎಕರೆ ಭೂಮಿ ಇದೆ. ಈ ಪೈಕಿ 7 ಸಾವಿರ ಪ್ರಕರಣಗಳಿಗೆ ಹಕ್ಕು ಪತ್ರ ನೀಡಲಾಗುವುದು. ಆದರೆ 3 ಎಕರೆಗಿಂತ ಹೆಚ್ಚಿನ ಭೂಮಿ ನೀಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.#landregistration @eshwar_khandre pic.twitter.com/1moD0XRKbj
— DIPR Karnataka (@KarnatakaVarthe) January 3, 2024