ತನ್ನದೇ ಆಗಿರುವ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವ ಕನಸು ಯಾರಿಗೆ ತಾನೇ ಇರುವುದಿಲ್ಲ ಹೇಳಿ, ಆದರೆ ಕೆಲವೊಮ್ಮೆ ಅ ಕನಸು ಕನಸಾಗಿಯೇ ಉಳಿದು ಹೋಗಿರುತ್ತೆ. ಇನ್ನು ಮುಖ್ಯವಾಗಿ ಎಲ್ಲಾದ್ರೂ ಒಂದು ಕಡೆ ಒಂದು ಪುಟ್ಟ ಮನೆಯದ್ರು ಸರಿ ಅನುಕೂಲಕ್ಕೆ ತಕ್ಕಂತೆ ಒಂದು ಮನೆಯಾದ್ರೆ ಸಾಕು ಅದು ನಗರ ಭಾಗದಲ್ಲಿ ಇರಬಹುದು ಅಥವಾ ಹಳ್ಳಿಯಲ್ಲಿಯೇ ಇರಬಹುದು. ಆದ್ರೆ ಸಾಕಷ್ಟು ಜನ ತಮ್ಮದೇ ಆಗಿರುವ ಒಂದು ಮನೆ ಕೂಡ ಹೊಂದಿರುವುದಿಲ್ಲ. ಅದಕ್ಕೂ ಸಾಕಷ್ಟು ಕಷ್ಟ ಪಡುತ್ತಾರೆ. ಆದ್ರೆ ಇದಕ್ಕೆ ಮುಖ್ಯವಾಗಿ ಬಡತನ ಕಾರಣವಾಗಿರುತ್ತದೆ ಅಂದ್ರೆ ತಪ್ಪಾಗೋದಿಲ್ಲ… ಹೌದು ಆದ್ರೆ ಸ್ವಂತ ಮನೆ ಕನಸು ಕಾಣುವ ಜನರಿಗೆ ಒಂದು ರೀತಿಯಲ್ಲಿ ಗುಡ್ ನ್ಯೂಸ್ ಸಿಕ್ಕಿದೆ ಅಂತಲೇ ಹೇಳಬಹುದು. ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಉಚಿತ ಮನೆ ವಿತರಣೆ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಇನ್ನಷ್ಟು ಕೋಟ್ಯಾಂತರ ಅನುದಾನ ನೀಡುತ್ತಿದೆ. ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರು ಮಾತ್ರವಲ್ಲದೆ ನಗರ ಭಾಗದಲ್ಲಿ ಇರುವ ಜನರು ಕೂಡ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.
ಸ್ವಂತ ಮನೆ ಮಾಡಿಕೊಳ್ಳಲು ಕೆಲವರು ಹೋಮ್ ಲೋನ್ (Home Loan) ಮೊರೆ ಹೋದರೆ, ಬಹುತೇಕರಿಗೆ ಹೋಮ್ ಲೋನ್ (Home Loan) ಕೂಡ ಸಿಗುವುದಿಲ್ಲ. ಮನೆ ನಿರ್ಮಾಣ ಮಾಡುವುದು ಅಂದ್ರೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕು. ಅಷ್ಟು ಹಣ ಎಲ್ಲರ ಬಳಿ ಇರಲು ಸಾಧ್ಯವೇ ಇಲ್ಲ. ಆದರೆ ಇದಕ್ಕೆ ಮನೆ ನಿರ್ಮಾಣ ಮಾಡಿ ಕೊಳ್ಳುವ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದಲ್ಲ. ಯಾಕೆಂದರೆ ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಮನೆ ಹಂಚಿಕೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ರಾಜ್ಯದಲ್ಲಿ ಸಾವಿರಾರು ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.,ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬರುತ್ತಾರೆ. ಹಾಗೆಯೇ ಅಲ್ಲಿಯೇ ಇರಲು ಮನೆಯನ್ನು ಕಟ್ಟಿಕೊಳ್ಳಲು ಅಥವಾ ಹುಡುಕಲು ಶುರುಮಾಡುತ್ತಾರೆ. ಆದರೆ ಬೆಂಗಳೂರಿನಲ್ಲಿ ಮನೆ ಹುಡುಕುವುದು ಕಷ್ಟ ಸಾಧ್ಯ ಅದರಲ್ಲೂ ಬಡವರಿಗೆ ಮತ್ತು ಆರ್ಥಿಕ ಕಷ್ಟದಲ್ಲಿ ಇರುವರಿಗೂ ಅಸಾಧ್ಯದ ಮಾತು. ಆದರೆ ಈಗ ಮನೆ ಹುಡುಕಲು ಯಾವುದೇ ಸಮಸ್ಯೆ ಇಲ್ಲ. ಇಂಥವರಿಗಾಗಿಯೇ ಇದೀಗ ಸರ್ಕಾರ ಈಗ ಸ್ವಂತ ಮನೆಯನ್ನು ಕಡಿಮೆ ವೆಚ್ಚದಲ್ಲಿ ನೀಡಲು ಮುಂದಾಗಿದ್ದು, 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಬೆಂಗಳೂರು ವಸತಿ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಗೆ ಈಗ ನೋಂದಣಿ ಪ್ರಕ್ರಿಯೆಯೂ ಕೂಡ ಆರಂಭವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮನೆ ಹಂಚಿಕೆಗೆ ಅರ್ಜಿ ಆಹ್ವಾನ!ಈ ಕೆಲಸ ತಪ್ಪದೆ ಮಾಡಿ
ಇನ್ನು ಬೆಂಗಳೂರು ನಗರದಲ್ಲಿ ಸರ್ಕಾರದ ವತಿಯಿಂದ ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆಯನ್ನ ಆರಂಭಿಸಲಾಗಿದೆ. ಈಗಾಗಲೇ ವಸತಿ ಸಮುಚ್ಛಯಗಳು ನಿರ್ಮಾಣವಾಗಿವೆ. ಇದರಲ್ಲಿ 2 ಬಿಎಚ್ಕೆ ಮನೆಗಳನ್ನು ನಿರ್ಮಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 5 ತಾಲೂಕುಗಳಲ್ಲಿ ಬರುವ ಸರ್ಕಾರಿ ಜಮೀನುಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಅಡಿಯಲ್ಲಿ 2 ಬಿಎಚ್ಕೆಯ ಒಟ್ಟು 8096 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮನೆಗಳನ್ನು ಶೇರ್ ವಾಲ್ ತಂತ್ರಜ್ಞಾನದ ಮೂಲಕ ನಿರ್ಮಿಸಲಾಗಿದೆ. ಇವುಗಳ ಪೈಕಿ ಮೊದಲ ಹಂತದಲ್ಲಿ 3138 ಮನೆಗಳ ಹಂಚಿಕೆಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಹೀಗಾಗಿ ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ಸರ್ಕಾರದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮಂಡಳಿಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಬಳಿಕ ನಿಮಗೆ ನಿಮ್ಮ ಕನಸಿನ ಮನೆ ಬೇಕೆ ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ಅರ್ಜಿ ಸಲ್ಲಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ವಿಧಾನಸಭಾ ಕ್ಷೇತ್ರ ಹಾಗೂ ಪ್ರದೇಶವನ್ನು ಆಯ್ಕೆ ಮಾಡಬೇಕು. ಅಲ್ಲಿ ತಾಲೂಕು, ಹೋಬಳಿ ಹೀಗೆ ಕೇಳಲಾದ ಎಲ್ಲ ವಿವರಗಳನ್ನು ಆಯ್ಕೆ ಮಾಡಬೇಕು. ಎಲ್ಲ ವಿವರಗಳನ್ನು ಆಯ್ಕೆ ಮಾಡಿದ ಮೇಲೆ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ಹಾಗೆಯೇ ಇದರಲ್ಲಿ ಒಂದು ಲಕ್ಷ ರೂಪಾಯಿಯನ್ನು ಪಾವತಿಸಿ ಫ್ಲಾಟ್ ಅನ್ನು ಬುಕ್ ಕೂಡ ಮಾಡಬಹುದಾಗಿದೆ. ಈ ಒಂದು ಸೌಲಭ್ಯದ ಅಡಿಯಲ್ಲಿ ನೀವೇನಾದರೂ ಪ್ಲಾಟ್ ಅಥವಾ ಮನೆ ಕೊಂಡುಕೊಳ್ಳಲು ಬಯಸಿದರೆ ಅದಕ್ಕಾಗಿ 3 ಹಂತದಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ. ಹಾಗೆಯೇ ಇದಕ್ಕೆ ಕಾಲಮಿತಿಯನ್ನು ಸಹ ನಿಗದಿಪಡಿಸಲಾಗಿದೆ. ಹೀಗಾಗಿ ಕನಸಿನ ಮನೆ ಹೊಂದಬೇಕು ಅನ್ನೋ ನಿಮ್ಮ ಕನಸಿಗೆ ಇದು ಅತ್ಯಂತ ಸೂಕ್ತವಾಗಿದ್ದು ಆಸಕ್ತರು ಅರ್ಜಿ ಸಲ್ಲಿಸುವ ಮೂಲಕ ಸೌಲಭ್ಯ ಪಡೆದುಕೊಳ್ಳಬಹುದು.
ಇದನ್ನೂ ಓದಿ: ಲೇಬರ್ ಕಾರ್ಡ್ ನೊಂದಣಿ ಪ್ರಕ್ರಿಯೆ ಆರಂಭ; ಹೊಸ ಲೇಬರ್ ಕಾರ್ಡ್ ಪಡೆಯಲು ಏನ್ ಮಾಡಬೇಕು