ಅನ್ನದಾತ ದೇಶದ ಬೆನ್ನೆಲುಬು. ನಾವು ಊಟ ಮಾಡುವ ಪ್ರತಿ ತುತ್ತು ರೈತ ನೀಡಿದ ಭಿಕ್ಷೆ . ಅನ್ನದಾತನ ಪ್ರತಿ ಹನಿಯೂ ದೇಶಕ್ಕೆ ದೊಡ್ಡ ಆಸ್ತಿಯಾಗಿದೆ. ರೈತ ಸಾಲದ ಸುಳಿಯಿಂದ , ಬೆಳೆದ ಬೆಳೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಹಲವಾರು ಬಗೆಯ ಸಂಕಷ್ಟಗಳನ್ನು ಅನುಭವಿಸುತ್ತಾ ಇದ್ದಾನೆ. ಇದನ್ನು ಅರಿತ ಸರಕಾರವು ಈಗಾಗಲೇ ಮೋದಿ ಸರಕಾರ ಅಧಿಕಾರ ಬಂದಾಗ ಮೊದಲು ಪ್ರತಿ ರೈತನ ಖಾತೆಗೆ ನೇರವಾಗಿ 2,000 ರೂಪಾಯಿ ಹಣವನ್ನು ಜಮಾ ಮಾಡುತ್ತಾ ಬಂದಿದೆ. ಅದರ ಜೊತೆಗೆ ಹಲವು ಯೋಜನೆಗಳು ರೈತನಿಗೆ ನೀಡುತ್ತಾ ಇದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು , ಸಬ್ಸಿಡಿ ದರದಲ್ಲಿ ಯಂತ್ರಗಳನ್ನು ನೀಡುವುದು . ಇವೆಲ್ಲ ಯೋಜನೆಗಳು ಈಗ ಜನಪ್ರಿಯವಾಗಿವೆ. ಈಗ ಮತ್ತೊಮ್ಮೆ ರೈತರಿಗೆ ಸಿಹಿ ಹಂಚುವ ಹೊಸ ಯೋಜನೆ ಬರುವ ಸಾಧ್ಯತೆ ಇದೆ.
ಈಗಾಗಲೇ ರೈತರ ಮತ್ತು ಬಡವರ ಪರವಾಗಿ ಹಲವಾರು ಅನುದಾನಗಳನ್ನು ಮೋದಿ ಸರಕಾರ ಜನರಿಗೆ ನೀಡಿದೆ . ಪ್ರತಿ ಬಜೆಟ್ ನಲ್ಲಿ ಸಹ ಒಂದೊಂದು ಹೊಸ ಯೋಜನೆಗಳನ್ನು ಜಾರಿ ಮಾಡಿ ಜನರ ಪರವಾಗಿ ಸರ್ಕಾರ ಇದೆ ಎಂಬುದನ್ನು ನಿರೂಪಿಸುತ್ತಾ ಇದೆ. ಆದರಿಂದ ಈ ಬಜೆಟ್ ಜನರು ಎದುರು ನೋಡುತ್ತಾ ಇದ್ದಾರೆ. ಯಾವ ಯಾವ ಕ್ಷೇತ್ರಕ್ಕೆ ಏಷ್ಟು ಹಣ ನೀಡುತ್ತಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಆರ್ಥಿಕ ತಜ್ಞರು ಈಗಾಗಲೇ ಹಲವಾರು ರೀತಿಯ ಸಲಹೆ ಸೂಚನೆಗಳನ್ನು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನೀಡಿದ್ದಾರೆ. ತಜ್ಞರ ಅಭಿಪ್ರಾಯ ಹಾಗೂ ಬಡವರ ಮತ್ತು ರೈತರ ಕಷ್ಟಗಳನ್ನು ಪರಿಗಣಿಸಿ ಈ ಮಧ್ಯಂತರ ಬಜೆಟ್ ಮಂಡನೆ ಆಗುವ ಸಾಧ್ಯತೆಗಳು ಹೆಚ್ಚಿವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಏನಿರಬಹುದು ಮೋದಿ ಸರ್ಕಾರದ ಯೋಜನೆ ?
ಗ್ರಾಮೀಣ ಭಾಗದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ಎಂಜಿಎನ್ಆರ್ಇಜಿಎ) ಅನುದಾನವನ್ನು ಹೆಚ್ಚಿಸಬೇಕೆಂದು ಸರಕಾರ ಚಿಂತನೆ ಮಾಡುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಯವಾಗಿನಿಂದ ಜಾರಿಯಗಬಹುದು ಈ ಯೋಜನೆ :- 2024 ಮೇ ತಿಂಗಳಲ್ಲಿ ಲೋಕಸಭೆ ಎಲೆಕ್ಷನ್ ಇದೆ. ಅದಕ್ಕೂ ಮೊದಲು ಫೆಬ್ರವರಿ ಮಧ್ಯಂತರ ಬಜೆಟ್ ಬರುವ ಸಾಧ್ಯತೆ ಇದೆ . ಈ ಅವಧಿಯ ಕೊನೆಯ ಬಜೆಟ್ ಆಗಿರುವುದರಿಂದ ಮೋದಿ ಸರಕಾರ ರೈತರಿಗೆ ಅನುದಾನ ನೀಡುವ ಮೂಲಕ ರೈತರ ಬದುಕಿಗೆ ಸಿಹಿ ಸುದ್ದಿ ನೀಡುತ್ತದೆ .. ಏಕೆಂದರೆ ಚುನಾವಣಾ ಹೊಸ್ತಿಲಲ್ಲಿ ಇರುವುದರಿಂದ ಮಧ್ಯಂತರ ಬಜೆಟ್ ಬಹಳ ಮುಖ್ಯವಾಗಿದೆ. ಇದರ ಸಲುವಾಗಿ , ಸಚಿವೆ ನಿರ್ಮಲಾ ಸೀತಾರಾಮನ್ ಗ್ರಾಮೀಣ ಆರ್ಥಿಕತೆಯನ್ನು ಸಬಲಗೊಳಿಸಲು ಕೆಲವು ಪ್ರಮುಖ ಯೋಜನೆಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ.
ಮಧ್ಯಂತರ ಬಜೆಟ್ ನಲ್ಲಿ ಏನೇನಿರಬಹುದು :- ಮಧ್ಯಂತರ ಬಜೆಟ್ನಲ್ಲಿ ನೂತನ ಯೋಜನೆಗಳು ಅಥವಾ ತೆರಿಗೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ . ತಜ್ಞರು ನೀಡಿರುವ ಸಲಹೆಯ ಮೇರೆ ಬಜೆಟ್ ಸಿದ್ಧವಾಗುತ್ತದೆ. ಮೂಲಗಳ ಪ್ರಕಾರ ಈ ಬಜೆಟ್ ನಲ್ಲಿ ಮಹಿಳೆಯರು ಮತ್ತು ಬಡವರ ಸಲುವಾಗಿ ಕೆಲವು ಮಹತ್ವದ ಘೋಷಣೆಗಳು ಆಗುವ ಸಾಧ್ಯತೆ ಇದೆ. ಕೃಷಿಯಲ್ಲಿ ರೈತರ ಆದಾಯವನ್ನು ಹೆಚ್ಚಿಸಬೇಕು ಕಾರಣ ಬೆಲೆ ಏರಿಕೆಯಿಂದ ರೈತರಿಗೆ ಸಂಕಷ್ಟ ಆಗುತ್ತುದೆ . ಇದರಿಂದ ಗ್ರಾಮೀಣ ಭಾಗದ ಜನರ ಜೀವನ ಕಷ್ಟವಾಗಿದೆ. ಅದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಈ ಸಲದ ಬಜೆಟ್ ಸಿದ್ಧವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಂಕ್ರಾಂತಿಗೆ ಭರ್ಜರಿ ಉಡುಗೊರೆ !! ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಐದನೇ ಕಂತಿನ ಹಣ ಇಂದೆ ಸಿಗಬಹುದು !!