ಪ್ರಧಾನಮಂತ್ರಿಗಳ ಹತ್ತು ಹಲವು ಯೋಜನೆಗಳಲ್ಲಿ ಇದು ಸಹ ಒಂದು . ದೇಶದ ಆದಿವಾಸಿ ಬುಡಗಟ್ಟು ಜನಾಂಗದವರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅವರನ್ನು ಮುಂದೆ ತರಬೇಕು ಎಂಬ ನಿಟ್ಟಿನಲ್ಲಿ ಶುರುವಾದ ಯೋಜನೆ ಇದು. ಮೂಲ ಸೌಕರ್ಯ ಇಲ್ಲದೆ ಇರುವ ಜನರ ಬದುಕಿನ ಬದಲಾವಣೆಗೆ ಈ ಸ್ಕೀಮ್ ಕೇಂದ್ರ ಸರಕಾರವು 24,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಈ ಜನಾಂಗವು ಎಲ್ಲರಂತೆ ಬಾಳ್ವೆ ಮಾಡಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸಮಾನತೆ ತರುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬರುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ಈಗಾಗಲೇ ಮೊದಲನೇ ಹಂತದಲ್ಲಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಈಗಾಗಲೇ 1 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ 540 ಕೋಟಿ ರೂಪಾಯಿಗಳನ್ನು ಪಿಎಂ-ಜನ್ಮನ್ ( PM janman) ನೀಡಿದ್ದಾರೆ.
ಈ ಯೋಜನೆಯ ಉದ್ದೇಶವೇನು?: ಬಡವರನ್ನು ಬಡವರಾಗಿಯೇ ಬದುಕಲು ಬಿಡದೆ ಎಲ್ಲರಂತೆಯೇ ಜೀವನ ಸಾಗಿಸಬೇಕು ಎಂಬುದು ಸರ್ಕಾರದ ಧ್ಯೇಯ. ಎಲ್ಲ ಜಾತಿ ಧರ್ಮ ಪಂಗಡವನ್ನು ಸಮನತೆಯಲ್ಲಿ ಇರುವಂತೆ ಮಾಡುವುದು ಇದರ ಹಿಂದಿನ ಉದ್ದೇಶ. ದೇಶದ ಉಳಿದ ಜಾತಿ ಮತಕ್ಕೆ ಹೋಲಿಸಿದರೆ ಅತಿ ಕಡಿಮೆ ಜನರು ಹೊಂದಿರುವ ಕಡಿಮೆ ಮೂಲಭೂತ ಸೌಕರ್ಯ ಹೊಂದಿರುವ ಜನಾಂಗ ಎಂದರೆ ಅದು ಬುಡಗಟ್ಟು ಜನಾಂಗ. ಬುಡಗಟ್ಟು ಜನಾಂಗದವರಿಗೆ ಮೂಲಭೂತ ಸೌಕರ್ಯ, ವಸತಿ, ಕುಡಿಯುವ ನೀರು, ಶೌಚಾಲಯ, ಕರೆಂಟ್, ರೋಡ್ ಎಲ್ಲಾ ವ್ಯವಸ್ಥೆಗಳಿಂದ ವಂಚಿತರಾಗಿ ಇರುವುದರಿಂದ. ಅವರ ಬದುಕನ್ನು ದೇಶದ ಎಲ್ಲ ಜನರಂತೆ ಬದುಕುವಂತೆ ಮಾಡಬೇಕು ಎಂದು ಈ ಸ್ಕೀಮ್ ಜಾರಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಿಂದುಳಿದ ಬುಡಗಟ್ಟು ಜನಾಂಗದವರ ಬಗ್ಗೆ ಒಂದಿಷ್ಟು ಮಾಹಿತಿ: ಅತೀ ಕೆಳಗಿನ ಸ್ಥಿತಿಯಲ್ಲಿ ಬದುಕು ನಡೆಸುತ್ತಾ ಇರುವ , ಹಳೆಯ ಕಾಲದ ಪದ್ಧತಿಗಳ ಆಳವಾದ ಜೀವನವನ್ನು ಇಂದಿಗೂ ಮಾಡುತ್ತಾ ಇರುವ ಅಭಿವೃದ್ದಿಯ ಹೆಸರನ್ನು ಕೇಳದೆಯೇ ಇರುವ ಜನರನ್ನು
ಬುಡಗಟ್ಟು ಜನಾಂಗದವರೆಂದು ಗುರುತಿಸಲಾಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಭಾರತದ ಯಾವ ಯಾವ ರಾಜ್ಯಗಳಲ್ಲಿ ಆದಿವಾಸಿ ಜನರು ವಾಸಿಸುತ್ತಾ ಇದ್ದರೆ?
ಭಾರತದಲ್ಲಿ 18 ರಾಜ್ಯಗಳಲ್ಲಿ ಆದಿವಾಸಿ ಜನರು ವಾಸಿಸುತ್ತಾ ಇದ್ದಾರೆ. ಒಟ್ಟು 75 ಸಮುದಾಯದ ಜನರು ಇದ್ದಾರೆ. ಒಡಿಶಾ ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆದಿವಾಸಿಗಳು ವಾಸಿಸುತ್ತಾ ಇದ್ದಾರೆ. ಎರಡನೇ ಸ್ಥಾನದಲ್ಲಿ ಆಂಧ್ರ ಪ್ರದೇಶ ಇದೆ. ಹಾಗೂ ಮೂರನೇ ಸ್ಥಾನದಲ್ಲಿ ಬಿಹಾರ ಹಾಗೂ ಜಾರ್ಖಂಡ್ ಇದೆ. ನಾಲ್ಕನೇ ಸ್ಥಾನದಲ್ಲಿ ಮಧ್ಯಪ್ರದೇಶ ಇದೇ. ಐದನೇ ಸ್ಥಾನದಲ್ಲಿ ತಮಿಳುನಾಡು ಹಾಗೂ ಆರನೇ ಸ್ಥಾನದಲ್ಲಿ ಕೇರಳ ಹಾಗೂ ಗುಜರಾತ್ ಇದೆ. ಉಳಿದಂತೆ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಹಾಗೂ ಕರ್ನಾಟಕ ಮತ್ತು ಉತ್ತರಾಖಂಡ ಮತ್ತು ರಾಜಸ್ಥಾನ, ತ್ರಿಪುರಾ ಹಾಗೂ ಮಣಿಪುರದಲ್ಲಿ ಕೆಲವು ಕಡೆಗಳಲ್ಲಿ ಇವರನ್ನು ಕಾಣಬಹುದು. ಅಂಡಮಾನ್ ನಲ್ಲಿ ಸಹ ಇವರು ವಾಸವಾಗಿದ್ದಾರೆ.
ಈ ಸ್ವಿಮ್ ನಿಂದಾಗುವ ಉಪಯೋಗಗಳು
- ಬುಡಗಟ್ಟು ಜನಾಂಗದವರು ಮೂಲ ಸೌಕರ್ಯ ಪಡೆಯುವಂತೆ ಆಗುತ್ತದೆ.
- ಅವರ ಜೀವನಕ್ಕೆ ಮನೆ ಕಟ್ಟಲು ಹಣ ಸಿಗುತ್ತದೆ.
- ವಿದ್ಯುತ್ ಸಂಪರ್ಕ ಸಿಗುತ್ತದೆ.
- ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.
- ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಸಿಗುತ್ತದೆ.
- ಕೆಲಸ ಇಲ್ಲದೆ ಇರುವವರಿಗೆ ಸರ್ಕಾರದ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ದೊರೆಯುತ್ತದೆ.
- ಜೀವನೋಪಾಯಕ್ಕೆ ಬೇಕಾದ ರೇಶನ್ ( ration ) ಸಿಗುತ್ತದೆ.
ಇದನ್ನೂ ಓದಿ: ಅನ್ನದಾತರಿಗೆ ಶುಭ ಸುದ್ದಿ , ರೈತರಿಗೆ ಮೋದಿ ಸರಕಾರ ನೀಡುತ್ತಿದ್ದೆ ಹೊಸದೊಂದು ಯೋಜನೆ !