ಹಳ್ಳಿಯ ಮತ್ತು ಬಡ ಮಹಿಳೆಯರಿಗೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ ಹೊಗೆಯಿಂದ ಮುಕ್ತಗೊಳಿಸಬೇಕು ಎಂಬ ಉದ್ದೇಶದಿಂದ ಶುರುವಾದ ಯೋಜನೆ ಉಜ್ವಲ 2016 ಇಸವಿಯಲ್ಲಿ ಕೇಂದ್ರ ಸರಕಾರ ಈ ಯೋಜನೆಗೆ ಚಾಲನೆ ನೀಡಿತು. ಈಗಾಗಲೇ ಸಾವಿರಾರು ಕುಟುಂಬಗಳು ಈ ಯೋಜನೆಯಿಂದ ಲಾಭ ಪಡೆದಿದೆ..
ಏನಿದು ಉಜ್ವಲ 2.0 ಯೋಜನೆ?: ಹಳ್ಳಿಯ ಜನರಿಗೆ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಹಿಂದುಳಿದ ವರ್ಗದ ಜನರಿಗೆ ಹೊರೆಯಾಗದಂತೆ ಎಲ್. ಪಿ. ಜಿ. ಸಿಲೆಂಡರ್ ತಲುಪಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಯಾಗಿದೆ. ಈಗ ಎರಡನೇ ಹಂತದಲ್ಲಿ 1.6 ಕೋಟಿ ಜನರಿಗೆ ಈ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಈಗ ಪ್ರಧಾನಮಂತ್ರಿ ಉಜ್ವಲ 2.0 ಯೋಜನೆಗೆ ಮತ್ತೆ ಚಾಲನೆ ನೀಡಿದ್ದಾರೆ. ಅಪ್ಲಿಕೇಶನ್ ಹಾಕಲು ಅರ್ಹರು ಯಾರು ಯಾರು? ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
- ಎಲ್ ಪಿ ಜಿ ಕನೆಕ್ಷನ್ ಹೊಂದಿಲ್ಲದೆ ಇರುವ ಬಡ ಕುಟುಂಬದ ಮಹಿಳೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು .
- ಹಿಂದುಳಿದ ವರ್ಗದ ಜನರಿಗೆ ಈ ಯೋಜನೆ ಸಿಗುತ್ತದೆ.
- ಬುಡಕಟ್ಟು ಜನಾಂಗದ ಮಹಿಳೆಯರು ಅರ್ಜಿ ಸಲ್ಲಿಸಬಹುದು.
- ಕಡಿಮೆ ಆದಾಯ ಹೊಂದಿರುವ ಕುಟುಂಬದವರು ಅರ್ಜಿ ಹಾಕಬಹುದು.
ಈ ಯೋಜನೆಯ ಲಾಭಗಳೇನು?
- ಮಹಿಳೆಯರು ವೇಗವಾಗಿ ಅಡುಗೆ ಕೆಲಸಗಳನ್ನು ಮಾಡಬಹುದು.
- ಕಟ್ಟಿಗೆಯ ಹೊಗೆಯಿಂದ ಬರುವ ಕಾಯಿಲೆಗಳನ್ನು ತಪ್ಪಿಸಬಹುದು.
- ಉಚಿತವಾಗಿ ಸಿಗುವುದರಿದ ಇದಕ್ಕೆ ಯಾವುದೇ ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ.
ಅಪ್ಲಿಕೇಶನ್ ಹಾಕಲು ನೀಡಬೇಕಾದ ಕಾಗದ ಪತ್ರಗಳು(Documents)
- ಆಧಾರ್ ಕಾರ್ಡ್ ಜೆರಾಕ್ಸ್.
- ಪಾಸ್ಪೋರ್ಟ್ ಸೈಜ್ ಫೋಟೋ.
- ಬ್ಯಾಂಕ್ ಪಾಸಬುಕ್ ಜೆರಾಕ್ಸ್.
- ಜಾತಿ ಪ್ರಮಾಣ ಪತ್ರ.
- ಆದಾಯ ಪ್ರಮಾಣ ಪತ್ರ.
- ರೇಷನ್ ಕಾರ್ಡ್ ಜೆರಾಕ್ಸ್.
ಅಪ್ಲಿಕೇಶನ್(Application) ಹಾಕುವುದು ಹೇಗೆ?
- Ujjwala Yojana 2.0 Application ಲಿಂಕ್ ಗೆ ಹೋಗಿ ಇಲ್ಲಿ ಕ್ಲಿಕ್ ಮಾಡಿ.
- ಆನ್ಲೈನ್ ಪೋರ್ಟಲ್(online portal) ಎಂಬುದನ್ನು ಆಯ್ಕೆ ಮಾಡಿ.
- ನಿಮಗೆ ಯಾವ ಕಂಪನಿಯ ಸಿಲೆಂಡರ್ ಬೇಕು ಎಂಬುದನ್ನು ಆಯ್ಕೆ ಮಾಡಿ . ಅಲ್ಲಿ ನಿಮಗೆ Bhartah gas, Indian, HP ಎಂಬ ಆಯ್ಕೆಗಳು ಸಿಗುತ್ತವೆ. ನಿಮ್ಮ ಹತ್ತಿರದ ಹಾಗೂ ನಿಮಗೆ ಇಷ್ಟವಾಗುವ ಕಂಪನಿ ಯನ್ನೂ ನೀವು ಆಯ್ಕೆ ಮಾಡಬಹುದು.
- ಟೈಪ್ ಆಫ್ ಕನೆಕ್ಷನ್ (type of connection ) ಎಂಬುದನ್ನು ಆಯ್ಕೆ ಮಾಡಿ , ಅಲ್ಲಿ ಉಜ್ವಲ 2.0 ಕನೆಕ್ಷನ್ (ujwala 2.0 connnection) ಎಂಬ ಆಪ್ಷನ್ ಕ್ಲಿಕ್ ಮಾಡಿ.
- ಅಲ್ಲಿ ನಿಮಗೆ ರಾಜ್ಯ ಮತ್ತು ಜಿಲ್ಲೆಗಳ ಹೆಸರಿನ ಪಟ್ಟಿ ಸಿಗುತ್ತದೆ. ನಿಮ್ಮ ಜಿಲ್ಲೆ ಮತ್ತು ರಾಜ್ಯದ ಹೆಸರನ್ನು ಆಯ್ಕೆ ಮಾಡಿ.
- ನಿಮ್ಮ ಮೊಬೈಲ್ ಸಂಖ್ಯೆ ನೊಂದಾಯಿಸಿ.
- ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಯನ್ನೂ ಹಾಕಿ.
- ನಿಮ್ಮ ಆಧಾರ್ ಸಂಖ್ಯೆ ರೇಶನ್ ಕಾರ್ಡ್ ವಿವರ ಹಾಗೂ ನಿಮ್ಮ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣಪತ್ರ , ಫೋಟೋ ಎಲ್ಲವನ್ನೂ ಕಾಣುವ ಅಪ್ಲಿಕೇಶನ್ ಫಾರ್ಮ್ ನಲ್ಲಿ ತುಂಬಿ ಅಪ್ಲೈ ಬಟನ್ ಒತ್ತಿ.
- ನಿಮ್ಮ ಮೊಬೈಲ್ ಸಂಖ್ಯೆಗೆ ನೀವು ಅಪ್ಲೈ ಮಾಡಿರುವ ಬಗ್ಗೆ ಮೆಸೇಜ್ ಬರುತ್ತದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram