2006 ನಂತರ ನೇಮಕಗೊಂಡ ಸರ್ಕಾರಿ ನೌಕರರ ಪಿಂಚಣಿ ವ್ಯವಸ್ಥೆಯಲ್ಲಿ 2004 ರಲ್ಲಿ ಕೇಂದ್ರ ಸರ್ಕಾರವು ಬದಲಾವಣೆ ಮಾಡಿತ್ತು. ಆದರೆ ಇದನ್ನು ವಿರೋಧಿಸಿ ಸರ್ಕಾರಿ ನೌಕರರು ಸರ್ಕಾರದ ಮುಂದೆ ಮತ್ತೆ ಹಳೆಯ ಪಿಂಚಣಿ ವ್ಯವಸ್ಥೆ ನೀಡುವಂತೆ ಮನವಿ ಮಾಡಿದ್ದರು. ಅವರುಗಳ ಕೋರಿಕೆಯನ್ನು ಪರಿಗಣಿಸಿ ಕೆಲವು ಮಾನದಂಡಗಳೊಂದಿಗೆ ಈ ಯೋಜನೆ ಮತ್ತೆ ಜಾರಿ ಮಾಡಿದೆ. ಮತ್ತೆ ಹಳೆ ಪಿಂಚಣಿ ಯೋಜನೆಯನ್ನು ಪಡೆದುಕೊಳ್ಳಲು ಅರ್ಜಿ ಆಹ್ವಾನ ಮಾಡಿದೆ.
ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳು
- ಸರ್ಕಾರ ಹೊರಡಿಸಿದ ನೇಮಕಾತಿ ಅಧಿಸೂಚನೆ ಪ್ರತಿ.
- ನೇಮಕಾತಿ ಅಧಿಸೂಚನೆಯ ಪ್ರತಿ.
- ನೇಮಕಾತಿ ಆದ ಬಳಿಕ ಹುದ್ದೆಯಲ್ಲಿ ಬದಲಾವಣೆ ಆದರೆ ಅದರ ಬಗ್ಗೆ ಮಾಹಿತಿ.
- ಕೆಜಿಐಡಿ ನಂಬರ್, NPS ಪ್ರಾನ್ ನಂಬರ್
- ಸ್ಯಾಲರಿ ಸ್ಲಿಪ್. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಹಳೆಯ ಪಿಂಚಣಿ ಯೋಜನೆಗೆ ಅರ್ಜಿ ಹಾಕಲು (ಅಭಿಪ್ರಾಯ ಮಂಡನ ಅರ್ಜಿ) ಇರುವ ನಿಯಮಗಳು:-
- 01.04.2006 ತಾರೀಖಿಗೆ ಮೊದಲು ಸರಕಾರಿ ನೌಕರಿ joining letter ಪಡೆದು ನಂತರದಲ್ಲಿ ಕೆಲ್ಸಕ್ಕೆ ಸೇರಿದವರಾಗಿರಬೇಕು ತಮ್ಮ ಅಭಿಪ್ರಾಯವನ್ನು ಇಲಾಖೆಗೆ ತಿಳಿಸಬೇಕು.
- ಒಬ್ಬರು ಒಂದು ಬಾರಿ ಮಾತ್ರ ಅಭಿಪ್ರಾಯ ಪತ್ರ ಸಲ್ಲಿಸಬಹುದು.
- ಇದು ಕೇವಲ ರಾಜ್ಯ ಸರ್ಕಾರಿ ನೌಕಕರು ಮಾತ್ರ ಅರ್ಜಿ ಸಲ್ಲಿಸಬಹುದು.
- ಜೂನ್ 2024 ರ ಒಳಗೆ ಅಭಿಪ್ರಾಯ ಮಂಡನೆಯ ಸಲ್ಲಿಸಬೇಕು. ಇಲ್ಲದೆ ಇದ್ದಲ್ಲಿ ರಾಷ್ಟೀಯ ಪಿಂಚಣಿ ಆಯೋಗದ ನಿಯಮದಂತೆ ನಿಮಗೆ ಪಿಂಚಣಿ ಸಿಗಲಿದೆ.
- ಕೇಂದ್ರ ಸರ್ಕಾರಿ ನೌಕರಿಗೆ ಈ ಯೋಜನೆಗೆ ಸಿಗುವುದಿಲ್ಲ.
- ಅಭಿಪ್ರಾಯ ಮಂಡನೆಯ ಅರ್ಜಿಗಳನ್ನು ಪರಿಶೀಲನೆ ಮಾಡಿ ಅರ್ಹರ ಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಲಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಹಳೆ ಪಿಂಚಣಿ ಯೋಜನೆ ಜಾರಿಗೆ ತರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಟ್ವಿಟ್(tweet ) ಮಾಡಿದ್ದರು:
ಹಳೆಯ ಪಿಂಚಣಿ ಯೋಜನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್ ನಲ್ಲಿ ” 2006 ಏಪ್ರಿಲ್ ತಿಂಗಳಿಗೂ ಮೊದಲು ನೇಮಕಾತಿ ಆಗಿ 2006 ರ ನಂತರದಲ್ಲಿ ಉದ್ಯೋಗ ಸೇರಿರುವ ಬಗ್ಗೆ ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ಕೆಲಸಗಾರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ತೀರ್ಮಾನಿಸಲಾಗಿದೆ. ರಾಜ್ಯ ಸಭಾ ಚುನಾವಣೆಗೆ ಮುಂಚೆ ಎನ್.ಪಿ.ಎಸ್ ಕೆಲಸಗಾರರು ಮುಷ್ಕರು ಮಾಡುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂಬ ವಿಶ್ವಾಸ ನೀಡಿದೆವು. ಅವರಿಗೆ ಪ್ರಮಾಣ ಮಾಡಿದ ಮಾತಿನ ಪ್ರಕಾರ ಹಳೆಯ ಪಿಂಚಣಿ ಯೋಜನೆಗೆ ಅವರನ್ನು ಸೇರಿಸುವ ವಿಚಾರವಾಗಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಹಳೆ ಪಿಂಚಣಿ ಯೋಜನೆ ಮತ್ತೆ ಜಾರಿ ಆದಲ್ಲಿ 13,000 ಎನ್.ಪಿ.ಎಸ್ ನೌಕರರ ಕುಟುಂಬಗಳಿಗೆ ಖುಷಿ ಆಗುತ್ತದೆ ನಮ್ಮ ಸರ್ಕಾರ ನಂಬಿದೆ ” ಎಂಬುದಾಗಿ ಸಿದ್ಧರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಹಳೆಯ ಪಿಂಚಣಿ ಹೇಗಿತ್ತು?: ಹಳೆಯ ಪಿಂಚಣಿ ಯೋಜನೆಯಲ್ಲಿ ವೃತ್ತಿಯಿಂದ ನಿವೃತ್ತ ಪಡೆದ ಬಳಿಕ ಜೀವಿತವಾಗಿ ಇರುವ ವರೆಗೆ ಪ್ರತಿ ತಿಂಗಳು ಒಂದೇ ರೀತಿಯ ಹಣ ಸಿಗುತ್ತದೆ. ಹಳೆಯ ಪಿಂಚಣಿ ವ್ಯವಸ್ಥೆಯಲ್ಲಿ ನಿವೃತ್ತ ಸರ್ಕಾರಿ ನೌಕರರು ತಮ್ಮ ಕೊನೆಯ ಸಂಬಳದ 50 ಪರ್ಸೆಂಟ್ ಹಣವನ್ನು ಕಡಿತಗೊಳಿಸಿ ಅದನ್ನು ಪ್ರತಿ ತಿಂಗಳು ಸಂಬಳದ ರೂಪದಲ್ಲಿ ಸಿಗುತ್ತದೆ.
ಇದನ್ನೂ ಓದಿ: TCS iON ನೀಡುತ್ತಿದೆ 15 ದಿನಗಳ ಉಚಿತ ಡಿಜಿಟಲ್ ಸರ್ಟಿಫಿಕೇಟ್ ಕೋರ್ಸ್