ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಖಾಲಿ ಇರುವ ಪೋಸ್ಟ್ ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. 13 ಕನ್ಸಲ್ಟೆಂಟ್(Consultant) ಪೋಸ್ಟ್ ಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ.
ಉದ್ಯೋಗದ ಬಗ್ಗೆ ಪೂರ್ಣ ಮಾಹಿತಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ದಲ್ಲಿ ಮೂರು ಡೆಪ್ಯುಟಿ ಡೈರೆಕ್ಟರ್- ಟೆಕ್ನಾಲಜಿ( deputy director – technology ) ಹುದ್ದೆ , ಎರಡು ಅಸಿಸ್ಟೆಂಟ್ ಡೈರೆಕ್ಟರ್- ಟೆಕ್ನಾಲಜಿ( assistent director – technology) ಹುದ್ದೆಗಳು ಹಾಗೂ 8 ಟೆಕ್ನಿಕಲ್ ಆಫೀಸರ್ (technical officer) ಹುದ್ದೆ ಖಾಲಿ ಇವೆ. ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಎಂಜಿನಿಯರಿಂಗ್ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಯು 63 ವರ್ಷದ ಒಳಗೆ ಅರ್ಜಿ ಸಲ್ಲಿಸಬಹುದು. ದೆಹಲಿ, ಬೆಂಗಳೂರು, ಮನೇಸರ ಪ್ರದೇಶಗಳಲ್ಲಿ ಕೆಲಸ ಮಾಡಲು ಸಿದ್ಧವಿರಬೇಕು. ಮೀಸಲಾತಿಯ ಆಧಾರದ ಮೇಲೆ ವಯಸ್ಸಿನ ಸಡಿಲಿಕೆ ಇದೆ. ಫೆಬ್ರವರಿ 21, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಲಿಖಿತ ಪರೀಕ್ಷೆ ನಡೆಸಿ ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗೆ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಯು ಆಫ್ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು. ನಿರ್ದೇಶಕರು (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), 4 ನೇ ಮಹಡಿ, ಬಾಂಗ್ಲಾ ಸಾಹಿಬ್ ರಸ್ತೆ, ಕಾಳಿ ಮಂದಿರದ ಹಿಂದೆ, ಗೋಲ್ ಮಾರ್ಕೆಟ್, ನವದೆಹಲಿ-110001 ಈ ವಿಳಾಸಕ್ಕೆ ನಿಮ್ಮ ಅರ್ಜಿಯನ್ನು ಭರ್ತಿ ಮಾಡಿ ಪೋಸ್ಟ್ ಮೂಲಕ ಕಳುಹಿಸಬೇಕು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗೆ ನಿಗದಿಯಾಗಿರುವ ಸಂಬಳ: ಡೆಪ್ಯುಟಿ ಡೈರೆಕ್ಟರ್- ಟೆಕ್ನಾಲಜಿ( deputy director – technology ) ಹುದ್ದೆಗೆ 75,000 ರೂಪಾಯಿ ,
ಅಸಿಸ್ಟೆಂಟ್ ಡೈರೆಕ್ಟರ್- ಟೆಕ್ನಾಲಜಿ( assistent director – technology) ಹುದ್ದೆಗೆ 60,000 ರೂಪಾಯಿ, ಟೆಕ್ನಿಕಲ್ ಆಫೀಸರ್ ( technical officer) ಹುದ್ದೆಗೆ 50,000 ರೂಪಾಯಿ.
UIDAI ಬಗ್ಗೆ ಮಾಹಿತಿ :- 2016 ಇಸವಿಯಲ್ಲಿ ಭಾರತ ಸರ್ಕಾರದ ವಿದ್ಯುನ್ಮಾನಗಳು ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾಗಿರುವ ಒಂದು ಶಾಸನಬದ್ಧ ಪ್ರಾಧಿಕಾರವಾಗಿದೆ. ಭಾರತದ ಎಲ್ಲಾ ಪ್ರತಿಯೊಬ್ಬ ಪ್ರಜೆಯ, ಗುರುತನ್ನು ಸುಲಭವಾಗಿ ಪರಿಶೀಲಿಸಲಿ ಹಾಗೂ ದೃಢೀಕರಣ ನಡೆಸಲು “ಆಧಾರ್ ಕಾರ್ಡ್ ಎಂದು ವಿಶಿಷ್ಟ ಗುರುತಿನ ಸಂಖ್ಯೆಗಳನ್ನು ನೀಡುವ ಉದ್ದೇಶದಿಂದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವನ್ನು ರಚನೆ ಮಾಡಲಾಯಿತು. ಆಧಾರ್ ನೋಂದಣಿ ಮತ್ತು ದೃಢೀಕರಣವನ್ನೂ UIDIA ಹೊಂದಿದೆ. ಆಧಾರ್ ಕಾರ್ಡ್ ಪ್ರತಿ ಹಂತದ ನಿರ್ವಹಣೆಯನ್ನು ಈ ಪ್ರಾಧಿಕಾರ ಹೊಂದಿದೆ. ವ್ಯಕ್ತಿಗಳಿಗೆ ಆಧಾರ್ ಕಾರ್ಡ್ ನಂಬರ್ ನೀಡುವುದು. ದೇಶದ ಮೂಲೆ ಮೂಲೆಯ ಪ್ರಜೆಯ ಮಾಹಿತಿಯನ್ನು ಪ್ರತ್ಯೇಕವಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ 9000 ಟೆಕ್ನೀಷಿಯನ್ ಹುದ್ದೆಗಳ ನೇಮಕಾತಿಗೆ ಶಾರ್ಟ್ ನೋಟಿಫಿಕೇಶನ್ ಬಿಡುಗಡೆ
ಉದ್ದೇಶಗಳು ಏನೇನಿದೆ?
- ಭಾರತದ ಪ್ರತಿಯೊಬ್ಬ ಪ್ರಜೆಗೆ ವಿಶಿಷ್ಟ ಗುರುತಿನ ಅಂಕಿಯನ್ನು ನೀಡುವ ಮೂಲಕ ಸರ್ಕಾರದಿಂದ ತಲುಪುವ ಯಾವುದೇ ರೀತಿಯ ಯೋಜನೆಗಳು ಸಹಾಯಧನಗಳನ್ನು ಪಾರದರ್ಶಕವಾಗಿ ನೀಡಬಹುದು.
- ಭಾರತೀಯ ಪ್ರಜೆಯ ಭಾವಚಿತ್ರ ಮತ್ತು ಬಯೋಮೆಟ್ರಿಕ್ ಹಾಗೂ ಸಂಪೂರ್ಣ ವಿಳಾಸ ಮತ್ತು ವಿವರಗಳು ಒಂದೇ ಕಾರ್ಡ್ ನಲ್ಲಿ ಲಭ್ಯವಿರುತ್ತದೆ.
- ವಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿ ಇಡಲು ಇದು ಉತ್ತಮ ಯೋಜನೆ ಆಗಿದೆ.
- ಭಾರತದ ಯಾವುದೇ ಸ್ಥಳಕ್ಕೆ ನೀವು ನೆಲೆಸಿದರು ಆಧಾರ್ ಕಾರ್ಡ್ ಬದಲಾಯಿಸಬೇಕಾಗಿಲ್ಲ.
- ಭಾರತದಲ್ಲಿ ಹುಟ್ಟಿದ ಮಗುವಿನಿಂದ ಸಹ ಆಧಾರ್ ಕಾರ್ಡ್ ನೀಡುವುದರಿಂದ ದೇಶದ ಜನಸಂಖ್ಯೆ ಲೆಕ್ಕಹಾಕಲು ಉಪಯೋಗ ಆಗುತ್ತದೆ.
ಇದನ್ನೂ ಓದಿ: MG ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಇಷ್ಟೊಂದು ಇಳಿಕೆನಾ? ಇದನ್ನು ಯಾರು ಬೇಕಾದರೂ ಖರೀದಿಸಬಹುದು