ದಿನಸಿ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನಸಾಮಾನ್ಯ ಬದುಕುವುದು ಕಷ್ಟವಾಗಿದೆ. ದೇಶದ ಮುಕ್ಕಾಲು ಭಾಗದಲ್ಲಿ ಅಕ್ಕಿಯನ್ನು ಬಳಸುವ ಜನರಿದ್ದಾರೆ. ಈಗ ಒಂದು ಕೆ.ಜಿ ಅಕ್ಕಿಯ ಬೆಲೆ 45 ರೂಪಾಯಿ ಸರಾಸರಿ ದರ ಇದೆ. ಆದರೆ ಇದು ಮಧ್ಯಮ ಮತ್ತು ಬಡ ವರ್ಗದ ಜನರಿಗೆ ಹೊರೆ ಆಗಲಿದೆ. ಅದನ್ನು ಮನಗಂಡ ಕೇಂದ್ರ ಸರ್ಕಾರ ಭಾರತ್ ಬ್ಯಾಂಡ್ ಅಕ್ಕಿಯನ್ನು ಪರಿಚಯಿಸುತ್ತಿದೆ. ಈಗ ಕರ್ನಾಟಕದ ರಾಜಧಾನಿಯಲ್ಲಿ ಭಾರತ್ ಬ್ಯಾಂಡ್ ಅಕ್ಕಿ ಸಿಗುತ್ತಿದ್ದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಧ್ಯದಲ್ಲಿಯೇ ಭಾರತ್ ಬ್ಯಾಂಡ್ ಅಕ್ಕಿ ಸಿಗುತ್ತದೆ.
ನಗರಗಳಲ್ಲಿ ಯಾವುದೇ ದಿನಸಿ ತರಕಾರಿಗಳನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡುವುದು ಸಾಮಾನ್ಯವಾಗಿದೆ. ಈಗ ಆನ್ಲೈನ್ ನಲ್ಲಿ ಸಹ ಭಾರತ್ ಬ್ರಾಂಡ್ ಅಕ್ಕಿಯು ಸಿಗುತ್ತಿದ್ದು ನೀವು Flipkart , amazon, big basket ಅಪ್ಲಿಕೇಷನ್ ಇಂದ ಅಕ್ಕಿಯನ್ನು ಆರ್ಡರ್ ಮಾಡಬಹುದು. ಉಳಿದ ಅಕ್ಕಿಗಳಿಗಿಂತ ಕಡಿಮೆ ದರದಲ್ಲಿ ಸಿಗುವ ಭಾರತ್ ಬ್ರಾಂಡ್ ಅಕ್ಕಿಯ ಬೆಲೆ ಕೇವಲ 29 ರೂಪಾಯಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನ ಯಾವ ಯಾವ ಏರಿಯಾ ಗಳಲ್ಲಿ ಸಿಗಲಿದೆ ಭಾರತ್ ಬ್ರಾಂಡ್ ಅಕ್ಕಿ?
ಬೆಂಗಳೂರಿನ 50 ವಿವಿಧ ಏರಿಯಾ ಗಳಲ್ಲಿ ಭಾರತ್ ಬ್ರಾಂಡ್ ಅಕ್ಕಿ ಸಿಗುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಕಡೆಯಲ್ಲಿಯೂ ಭಾರತ್ ಬ್ಯಾಂಡ್ ಅಕ್ಕಿ ಸಿಗಲಿದೆ. ಸಧ್ಯ ಬಸವೇಶ್ವರ ನಗರ, ದೀಪಾಂಜಲಿ ನಗರ, ಮಹಾಕ್ಷ್ಮಿ ಲೇಔಟ್, ಗಾಯತ್ರಿ ನಗರ, ನಾಗಸಂದ್ರ, ಅಬ್ಬಿಗೆರೆ, ಚಿಕ್ಕಬಾಣಾವರ, ಥಣಿಸಂದ್ರ, ಹೆಸರಘಟ್ಟ, ಯಲಹಂಕ, ಮಾಗಡಿ ರೋಡ್, ಕೊಡಿಗೆಹಳ್ಳಿ, ಶೇಷಾದ್ರಿಪುರಂ, ಸಂಜಯ್ ನಗರ, ಜಕ್ಕೂರು, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಜೆ.ಸಿ. ನಗರ, ಡೈರಿ ಸರ್ಕಲ್, ಕೊಡಿಗೆಹಳ್ಳಿಗಳಲ್ಲಿ ಅಕ್ಕಿ ಸಿಗಲಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈಗಾಗಲೇ ಭಾರತ್ ಅಟ್ಟ ಮತ್ತು ಭಾರತ್ ದಾಲ್ ಬಹಳ ಬಹಳ ಬೇಡಿಕೆಯಲ್ಲಿ ಇದೆ. ಭಾರತ್ ಅಟ್ಟ ಒಂದು ಕೆ.ಜಿ ಯ ಬೆಲೆ 27.50 ರೂಪಾಯಿ , ಹಾಗೆಯೇ ಒಂದು ಕೆ.ಜಿ ಭಾರತ ದಾಲ್ ಬೆಲೆ 60 ರೂಪಾಯಿ. ಭಾರತ್ ಅಟ್ಟಾ ಹಾಗೂ ದಾಲ್ ಬೆಂಗಳೂರಿನಲ್ಲಿ 2,81,572 ಕೆ.ಜಿ ಭಾರತ್ ದಾಲ್ ಮತ್ತು 1,22,190 ಕೆ.ಜಿ ಗೋಧಿ ಮಾರಾಟವಾಗಿತ್ತು. ಭರತ್ ದಾಲ್ ಮತ್ತು ಭಾರತ್ ಅಟ್ಟಾ ಸಹ Flipkart ಮತ್ತು ಅಮೆಜಾನ್ ಆ್ಯಪ್ ಗಳಲ್ಲಿ ಲಭ್ಯವಿದೆ. ಭಾರತ್ ದಾಲ್ ಮತ್ತು ಭಾರತ್ ಅಟ್ಟಾ ದಿ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ (NAFED), ನ್ಯಾಷನಲ್ ಕನ್ಸ್ಯೂಮರ್ಸ್ ಕೋ ಆಪರೇಟಿವ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NCCF), ಕೇಂದ್ರೀಯ ಭಂಡಾರ್ ಮತ್ತು ಸಫಲ್ಹಾಗೂ ವಿವಿಧ ಚಿಲ್ಲರೆ ಅಂಗಡಿಗಳು ವಿತರಿಸಲಾಗುತ್ತದೆ.
ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣವೂ ಜಮಾ ಆಗದೆ ಇದ್ದಾರೆ ಸರ್ಕಾರವು ಹೊಸ ಮಾರ್ಗವನ್ನು ತಿಳಿಸಿದೆ.
ಭಾರತ್ ಬ್ಯಾಂಡ್ ನಲ್ಲಿ ಏನೇನು ಸಿಗುತ್ತದೆ?
ಭಾರತ್ ಬ್ರಾಂಡ್ ಮಳಿಗೆಯಲ್ಲಿ ತಂಪು ಪಾನೀಯಗಳು ದಿನಸಿ ಸಾಮಗ್ರಿಗಳು ದೇವರ ಪೂಜೆಯ ಸಾಮಗ್ರಿಗಳು ಮೆಡಿಸಿನ್ ಗಳು ಸಿಗುತ್ತವೆ. ಕೆಲವು ದಿನಬಳಕೆಯ ವಸ್ತುಗಳ ಬೆಲೆ ಹೀಗಿದೆ. ಬ್ಲ್ಯಾಕ್ ಸಾಲ್ಟ್ 15 ರೂಪಾಯಿ ಇಂದ ಆರಂಭ, ಒಂದು ಪ್ಯಾಕ್ ಕಲ್ಲುಪ್ಪು 15 ರೂಪಾಯಿ, ಪ್ಲಾಕ್ಸ್ ಸಿಡ್ 35 ರೂಪಾಯಿ, ಲಿನ್ಸೆಡ್ ಎಣ್ಣೆ 150 ರೂಪಾಯಿ, ಬೆಲ್ಲದ ಪುಡಿ 95 ರೂಪಾಯಿ, ನಾಲ್ಕು ಗ್ರಾಂ ಬೆಲ್ಲದ ಕ್ಯೂಬ್ ಗೆ 120 ರೂಪಾಯಿ, ಆಯುರ್ವೇದಿಕ್ ಟೀ 250 ರೂಪಾಯಿ, ತುಳಸಿ ಗ್ರೀನ್ ಟೀ ಪೌಡರ್ 360 ರೂಪಾಯಿ, ನಿಂಬು ಮಸಾಲಾ ಚಾಯ್ 150 ರೂಪಾಯಿ, ಆ್ಯಪಲ್ ಸೈಡರ್ ವಿನೆಗರ್ 350 ರೂಪಾಯಿ.
ಇದನ್ನೂ ಓದಿ: ಬಾಡಿಗೆ ಮನೆಯಲ್ಲಿ ಇರುವ ಗೃಹ ಜ್ಯೋತಿ ಫಲಾನುಭವಿಗಳಿಗೆ ಸರ್ಕಾರ ನೀಡಿದ ಸಿಹಿ ಸುದ್ದಿ ಏನು ?