ಬಾಗಲಕೋಟೆ ಜಿಲ್ಲೆಯ ವಿಜಯಪುರ ಮಹಾನಗರಪಾಲಿಕೆಯಲ್ಲಿ ಪೌರ ಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪೌರ ಕಾರ್ಮಿಕ ಹುದ್ದೆಗೆ ಈಗಾಗಲೇ ಎಕ್ಸ್ಪೀರಿಯೆನ್ಸ್ ಇರುವವರಿಗೆ ಮೊದಲ ಆದ್ಯತೆ ನೀಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ಹುದ್ದೆಯನ್ನು ಹುಡುಕುತ್ತಾ ಇರುವವರು ಈಗಲೇ ಅರ್ಜಿ ಸಲ್ಲಿಸಿ.
ಉದ್ಯೋಗದ ಬಗ್ಗೆ ಮಾಹಿತಿ :- ಅರ್ಜಿ ಆಹ್ವಾನ ಮಾಡಿದ ಸಂಸ್ಥೆಯ ಹೆಸರು ವಿಜಯಪುರ ನಗರ ನಿಗಮ. 93 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ. ಉದ್ಯೋಗ ಮಾಡುವ ಸ್ಥಳ ವಿಜಯಪುರ. 17,000 ರೂಪಾಯಿಯಿಂದ 28,950 ರೂಪಾಯಿವರೆಗೆ ಸಂಬಳ. ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ 18 ರಿಂದ 55 ವರ್ಷ. ಹಿಂದುಳಿದ ವರ್ಗದವರಿಗೆ ವಯೋಮಿತಿಯ ಸಡಿಲಿಕೆ ಇದೆ ( sc/st ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 5 ವರ್ಷ). ಫೆಬ್ರುವರಿ 5 2024 ರಿಂದ ಮಾರ್ಚ್ 5 2027 ಅರ್ಜಿ ಸಲ್ಲಿಸಲು ಸಮಯ ನೀಡಲಾಗಿದೆ. ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಹಾಗೂ ಅನುಭವಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಅಭ್ಯರ್ಥಿಗಳು, ಮಹಿಳಾ ಅಭ್ಯರ್ಥಿಗಳಿಗೆ 100 ರೂಪಾಯಿ ಹಾಗೂ ಹಿಂದುಳಿದ ವರ್ಗ, ಸಾಮಾನ್ಯ ವರ್ಗದವರಿಗೆ 200 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ವಿಧಾನ :-
- ವಿಜಯಪುರ ಸಿಟಿ ಕಾರ್ಪೊರೇಷನ್ ನೇಮಕಾತಿ ಅಧಿಸೂಚನೆಯನ್ನು ಪೂರ್ಣವಾಗಿ ಓದಿ ಮತ್ತು ರೂಲ್ಸ್ ಗಳ ಬಗ್ಗೆ ತಿಳಿದುಕೊಳ್ಳಿ. ಅರ್ಜಿ ನಮೂನೆ ಮತ್ತು ವಿವರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ವೆಬ್ಸೈಟ್ ಲಿಂಕ್ ಗೆ ಹೋಗಿ.
- ಅರ್ಜಿಯನ್ನು ಡೋನಾಲ್ಡ್ ಮಾಡಿ ನಿಮ್ಮ ಹೆಸರು ವಿದ್ಯಾರ್ಹತೆ, ಎಕ್ಸ್ಪೀರಿಯೆನ್ಸ್, ಫೋನ್ ನಂಬರ್, ಭಾವಚಿತ್ರ , ಆಧಾರ್ ಕಾರ್ಡ್ ನಂಬರ್ ಎಲ್ಲವನ್ನೂ ಭರ್ತಿ ಮಾಡಿ.
- ಅರ್ಜಿ ನಮೂನೆಯ ಜೊತೆಗೆ ಆಧಾರ್ ಕಾರ್ಡ್ ಜೆರಾಕ್ಸ್ ನಿಮ್ಮ ಐಡಿ ಪ್ರೂಫ್ ಜೆರಾಕ್ಸ್ , ನಿಮ್ಮ ಎಜುಕೇಷನ್ ಸರ್ಟಿಫಿಕೇಟ್ ಗಳ ಜೆರಾಕ್ಸ್ ಹ ಮತ್ತು ನಿಮ್ಮ resume ಎಲ್ಲವನ್ನೂ “ವಿಜಯಪುರ ನಗರ ನಿಗಮ, ಬಾಗಲಕೋಟ ರಸ್ತೆ, ಜಲನಗರ-586109, ವಿಜಯಪುರ, ಕರ್ನಾಟಕ ” ಈ ಅಡ್ರೆಸ್ ಗೆ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪಿಡಿಎಫ್ ಮೂಲಕ ಕಳುಹಿಸಿ. ಮಾರ್ಚ್ 5 2024 ರಂದು ಅಥವಾ ಈ ದಿನಾಂಕದ ಒಳಗೆ ಅರ್ಜಿ ತಲುಪುವಂತೆ ನೋಡಿಕೊಳ್ಳಿ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಿಯಮಗಳು ಮತ್ತು ಅರ್ಹತೆಗಳು:-
- ಅಭ್ಯರ್ಥಿಯು ವಿಜಯಪುರ ನಗರ ಪಾಲಿಕೆಯ ಅಡಿಯಲ್ಲಿ ನೇರ ವೇತನ ಅಥವಾ ಕಲ್ಯಾಣ ಅಭಿವೃದ್ಧಿ ಕಾಯ್ದೆ ಅಥವಾ ಸಮಾನ ಕೆಲಸಕ್ಕೆ ಸಮಾನ ಸಂಬಳದ ಅಡಿಯಲ್ಲಿ ಕನಿಷ್ಠ ಎರಡು ವರ್ಷ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿರಬೇಕು.
- ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಮಾತನಾಡಲು ಬರಬೇಕು.
- ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿಗಳನ್ನು ನೀಡಿದರೆ ಅಂತಹ ಅರ್ಜಿಗಳನ್ನು ತಿರಸ್ಕಲಾಗುತ್ತದೆ ಹಾಗೂ ಅಂತಹ ಅರ್ಜಿದಾರರ ವಿರುದ್ಧ ಪಾಲಿಕೆಯ ಕಾನೂನಿನ ಪ್ರಕಾರ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ 50 ಸಾವಿರ ರೂಪಾಯಿಗಳ ವರೆಗೂ ಸಾಲ ಸೌಲಭ್ಯ: ಹೀಗೆ ಅರ್ಜಿ ಸಲ್ಲಿಸಿ
ಇದನ್ನೂ ಓದಿ: ನಿರುದ್ಯೋಗಿ ಯುವಕ ಯುವತಿಯರಿಗೆ ಸರ್ಕಾರದಿಂದ ರಾಜ್ಯ ಮಟ್ಟದ ಉದ್ಯೋಗ ಮೇಳದ ನೋಂದಣಿ ಕಾರ್ಯ ನಡೆಯುತ್ತಿದೆ. ಈಗಲೇ ರಿಜಿಸ್ಟರ್ ಆಗಿ.