ಹೆಚ್ಚಿನ ಜನರು ರೈಲು ಪ್ರಯಾಣವನ್ನು ಇಷ್ಟ ಪಡುತ್ತಾರೆ. ಕಡಿಮೆ ಖರ್ಚಿನಲ್ಲಿ ದೂರದ ಪ್ರಯಾಣವನ್ನು ತಡೆರಹಿತವಾಗಿ ಇರುವುದರಿಂದ ಹೆಚ್ಚಿನ ಜನರಿಗೆ ರೈಲು ಪ್ರಯಾಣ ಇಷ್ಟ. ಅಷ್ಟೇ ಅಲ್ಲದೆ ರೈಲು ಪ್ರಯಾಣದಲ್ಲಿ ಪ್ರಯಾಣದ ಆಯಾಸ ಕಡಿಮೆ ಆದ್ದರಿಂದ ರೈಲು ಸೇವೆ ಉಳಿದ ಸಾರಿಗೆ ಸೇವೆಗಳಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದೆ. ಪ್ರಯಾಣಕ್ಕೆ ಮಾತ್ರವಲ್ಲ ಸರಕು ಸಾಗಾಣಿಕೆ ರೈಲು ಹೆಚ್ಚು ಉಪಯುಕ್ತ. ಪ್ರಯಾಣಿಕರು ಮತ್ತು ಸರಕು ಸಾಗಾಣಿಕೆ ಹೆಚ್ಚಾಗಿರುವುದರಿಂದ ಬೆಂಗಳೂರಿನಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಿದೆ . ಒಟ್ಟು ಆರು ವಿಭಾಗಗಳಲ್ಲಿ ರೈಲ್ವೆ ಮಂಡಳಿಯು ಆಟೋಮ್ಯಾಟಿಕ್ ಸಿಗ್ನಲಿಂಗ್ ಕಾರ್ಯಗಳನ್ನು ಅನುಮೋದನೇ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆಟೋಮ್ಯಾಟಿಕ್ ಸಿಗ್ನಲಿಂಗ್ ಕಾರ್ಯಕ್ಕೆ ಯಾವ ಆರು ವಿಭಾಗಗಳು ಯಾವ ಯಾವ ಮಾರ್ಗದಲ್ಲಿ ಅನುಮೋದನೆ ನೀಡಿದೆ?
- ಬೆಂಗಳೂರು ನಗರ – ಯಶವಂತಪುರ – ಯಲಹಂಕ ಮಾರ್ಗವಾಗಿ 17.75 ಕಿಲೋಮೀಟರ್
- ಯಶವಂತಪುರ- ಅರಸೀಕೆರೆ ವಿಭಾಗದಲ್ಲಿ ಒಟ್ಟು 160.65 ಕಿಲೋಮೀಟರ್
- ಲೊಟ್ಟೆಗೊಲ್ಲಹಳ್ಳಿ-ಹೊಸೂರು ವಿಭಾಗದ ದೂರ 63.6 ಕಿಲೋಮೀಟರ್
- ವೈಟ್ಫೀಲ್ಡ್ – ಜೋಲಾರ್ಪೇಟೆ ವಿಭಾಗದಲ್ಲಿ 119 ಕಿಲೋಮೀಟರ್
- ಬೈಯ್ಯಪ್ಪನಹಳ್ಳಿ- ಪೆನುಕೊಂಡ ವಿಭಾಗದಲ್ಲಿ ಚನ್ನಸಂದ್ರ ಮಾರ್ಗದಲ್ಲಿ 139.8 ಕಿಲೋಮೀಟರ್
- ಬೆಂಗಳೂರು ನಗರ-ಮೈಸೂರು 138.25 ಕಿಲೋಮೀಟರ್
ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಗೆ ಸರ್ಕಾರದಿಂದ ಬಿಡುಗಡೆ ಆದ ಅನುದಾನದ ಮೊತ್ತ:- SWR(south western railway) ತಿಳಿಸಿರುವ ಪ್ರಕಾರ ಒಟ್ಟು 639.05 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಅನುಮೋದನೆ ದೊರೆತಿದ್ದು ಒಟ್ಟು 874.12 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಅನುಮೋದನೆ ಸಿಕ್ಕಿದೆ. ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯಿಂದ ಕಡಿಮೆ ಅಂತರದಲ್ಲಿ ಹೆಚ್ಚು ರೈಲುಗಳು ಪ್ರಯಾಣ ಮಾಡಲು ಅನುಕೂಲ ಆಗುತ್ತದೆ. ಪ್ರಯಾಣಿಕರ ಬೇಡಿಕೆಯ ಅನುಸಾರ ಈ ವ್ಯವಸ್ಥೆಗೆ ಅನುಮೋದನೆ ದೊರೆತಿದೆ. ಇದಲ್ಲದೆ ಪ್ರಯಾಣಿಕರ ನುಕೂ ನುಗ್ಗಲು ಕಡಿಮೆ ಆಗುತ್ತದೆ. ಹಾಗೂ ಆರ್ಥಿಕ ಅಭಿವೃದ್ದಿಗೆ ಉತ್ತೇಜನ ಸಿಗುತ್ತದೆ.
ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆಯಿಂದ ಆಗುವ ಅನುಕೂಲಗಳು:- SWR ಅಧಿಕಾರಿಗಳು ತಿಳಿಸಿರುವ ವಿಷಯ ಏನೆಂದರೆ ಆಟೋಮ್ಯಾಟಿಕ್ ಸಿಗ್ನಲಿಂಗ್ ಕಾರ್ಯ ಥ್ರೋಪುಟ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹಾಗೂ ಚೆನ್ನೈ, ಮೈಸೂರು, ಹುಬ್ಬಳ್ಳಿ ಮತ್ತು ಹೈದರಾಬಾದ್ ಸೇರಿದಂತೆ ಎಲ್ಲಾ ಮಾರ್ಗಗಳಿಂದ ಬೆಂಗಳೂರಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ರೈಲುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಾಗುತ್ತದೆ. ಇದು ನಿಲ್ದಾಣಗಳಿಂದ ಕೋಚಿಂಗ್ ರೈಲುಗಳ ಕ್ಲಿಯರೆನ್ಸ್ ಅನ್ನು ಸರಿಯಾಗಿ ತಿಳಿಸುವ ಮೂಲಕ ಪ್ಲಾಟ್ಫಾರ್ಮ್ಗಳಂತಹ ಸ್ಥಿರ ಸ್ವತ್ತುಗಳ ಅತ್ಯುತ್ತಮ ಬಳಕೆಗೆ ಅನುಕೂಲವಾಗಲಿದೆ. ಇದರಿಂದ ರೈಲುಗಳ ಸಂಚಾರ ವ್ಯವಸ್ಥೆಗೆ ಸಮಯದ ವಿಳಂಬವನ್ನು ಕಡಿಮೆ ಮಾಡುತ್ತದೆ ಅಂದರೆ ಕ್ರಾಸಿಂಗ್ ಸಮಯದಲ್ಲಿ ರೈಲು ನಿಲ್ಲುವ ಸಮಯವನ್ನು ಕಡಿಮೆ ಮಾಡುತ್ತದೆ ಹಾಗೂ ದಕ್ಷತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಲೈನ್ ಸಾಮರ್ಥ್ಯವನ್ನೂ ಹೆಚ್ಚಿಸಿ ಶುದ್ಧತ್ವವು ಸಂಭವಿಸಿದ ವಿಭಾಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ನ ಪರಿಚಯದಿಂದ ಹೆಚ್ಚಿನ ಸಂಖ್ಯೆಯ ಕೋಚಿಂಗ್ ಮತ್ತು ಸರಕು ರೈಲುಗಳ ಕಾರ್ಯಾಚರಣೆಯನ್ನು ಇನ್ನಷ್ಟು ಬಲಪಡಿಸಲಿದೆ.
ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆ ಎಂದರೇನು?
ಇದು ಆಧುನಿಕ ಸಂವಹನ ಆಧಾರಿತ ವ್ಯವಸ್ಥೆಯಾಗಿದೆ. ಸಮಯೋಚಿತ ಮತ್ತು ನಿಖರವಾದ ರೈಲು ನಿಯಂತ್ರಣ ಮಾಹಿತಿಯನ್ನು ವರ್ಗಾಯಿಸಲು ರೇಡಿಯೊ ಸಂವಹನವನ್ನು ಬಳಸುತ್ತದೆ. ಇದು ಸಮೂಹ-ಸಾರಿಗೆ ರೈಲ್ವೇ ನಿರ್ವಾಹಕರ ಆಯ್ಕೆ ಆಗಿರುತ್ತದೆ. ಇದು ರೈಲ್ವೆ ಇಲಾಖೆಯ ಆಧುನೀಕರಣಕ್ಕೆ ಒಂದು ಉತ್ತಮ ಹೆಜ್ಜೆಯಾಗಿದೆ. ಈಗಾಗಲೇ ಈ ವ್ಯವಸ್ಥೆಯು ಫ್ರಾನ್ಸ್, ಜರ್ಮನಿ, ಜಪಾನ್, ಕೆನಡಾ ಮತ್ತು ಚೀನಾ ದೇಶಗಳಲ್ಲಿ ಬಳಕೆ ಆಗುತ್ತಿದೆ. ಈಗ ಭಾರತವು ಸಹ ಇದರ ಪ್ರಯೋಜನವನ್ನು ಪಡೆಯಲು ಅನುದಾನ ನೀಡುತ್ತಿದೆ.
ಇದನ್ನೂ ಓದಿ: ಕೇವಲ 7299 ರೂ.ನಲ್ಲಿ 8 GB ವರೆಗಿನ RAM ಮತ್ತು 128 GB ಸಂಗ್ರಹವಿರುವ ಹೊಸ ಸ್ಮಾರ್ಟ್ಫೋನ್ TECNO Spark Go ದ ವೈಶಿಷ್ಟತೆಗಳು
ಇದನ್ನೂ ಓದಿ: TVS XL100 ಈ ಶಕ್ತಿಶಾಲಿ ಬೈಕ್ನ ವೈಶಿಷ್ಟತೆಗಳನ್ನು ಬಾಯಿ ಮಾತಿನಲ್ಲಿ ಹೇಳಿದರೆ ಸಾಲುವುದಿಲ್ಲ ಕಣ್ಣಾರೆ ನೀವೇ ನೋಡಿ.