ಆಧಾರ್ ಕಾರ್ಡ್(Aadhaar card) ಈಗ ಯಾವುದೇ ಕಚೇರಿಗೆ ಹೋದರು ಸಹ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಸ್ಕೂಲ್ ಕಾಲೇಜ್ ಅಡ್ಮಿಷನ್ ಗೆ , ತಿಂಗಳ ರೇಷನ್ ಪಡೆಯಲು, ಯಾವುದಾದರೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು, ಅಥವಾ ಯಾವುದೇ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಬಹಳ ಮುಖ್ಯವಾಗಿದೆ. ಆದರೆ ಇದನ್ನು ಗುರುತಿನ ಚೀಟಿ ಎಂದು ಪರಿಗಣಿಸುತ್ತಾರೆ ಹೊರತು ಭಾರತದ ಪ್ರಜೆ ಎಂಬ ದಾಖಲೆಯಾಗಿ ಪರಿಗಣನೆ ಮಾಡುವುದಿಲ್ಲ ಎಂದು ಹಲವರು ಇಲಾಖೆಗಳು ಹೇಳಿವೆ. ಪ್ರತಿಯೊಂದಕ್ಕೂ ಆಧಾರ್ ಕಾರ್ಡ್(Aadhaar card) ಮುಖ್ಯ ಆದರೆ ಯಾಕೆ ಭಾರತದ ಪ್ರಜೆ ಎಂಬ ದಾಖಲೆಯಾಗಿ ಪರಿಗಣಿಸುವುದಿಲ್ಲ ಎಂದು ತಿಳಿಯೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆಧಾರ್ ಅನ್ನು ಜನ್ಮ ದಾಖಲೆಯಾಗಿ ಪರಿಗಣಿಸದ ಇಲಾಖೆಗಳು:-
- ಭಾರತ ಚುನಾವಣಾ ಆಯೋಗ:- ಭಾರತ ಚುನಾವಣಾ ಆಯೋಗವು ಈಗ ಜನ್ಮ ದಾಖಲೆಯನ್ನು ಖಚಿತ ಪಡಿಸಲು ಆಧಾರ್ ಕಾರ್ಡ್ ಪ್ರೂಫ್ ಕೇಳುತ್ತಿದೆ. ಆದರೆ ಇದು ಮುಂದುವರೆಯುವ ಲಕ್ಷಣಗಳು ಇಲ್ಲ. ಯಾವುದೇ ಸಮಯದಲ್ಲಿ ಇದನ್ನು ನಿರಾಕರಿಸಬಹುದು.
- ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ):- EPFO ಕಳೆದ ಜನವರಿಯಲ್ಲಿ ಕೇಂದ್ರ ಭವಿಷ್ಯ ನಿಧಿ ಆಯುಕ್ತರ ನಿರ್ದೇಶನದ ಅನುಸಾರ ಆಧಾರ್ ಕಾರ್ಡ್ ಹುಟ್ಟಿದ ದಿನಾಂಕದ ಆಧಾರಕ್ಕೆ ಪರಿಗಣನೆ ಮಾಡುವುದಿಲ್ಲ ಎಂದು ತಿಳಿಸಿತು.
- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ :- ಇಲಾಖೆಯು 2018 ರಲ್ಲಿ ಆಧಾರ್ ಕಾರ್ಡ್(Aadhaar card) ಜನ್ಮ ದಾಖಲೆಯ ಪುರಾವೆಯಾಗಿ ಪರಿಗಣಿಸುವುದಿಲ್ಲ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿತು.
- ಕೋರ್ಟ್ ಹೇಳಿಕೆ :- 2023 ರಲ್ಲಿ ಬಾಂಬೆ ಹೈಕೋರ್ಟ್ ಒಂದು ಕೇಸ್ ನಲ್ಲಿ ಎರಡು ಆಧಾರ್ ಕಾರ್ಡ್ಗಳಲ್ಲಿ ಜನ್ಮ ದಾಖಲೆಯನ್ನು ವಿರೋಧಿಸುವ ಆರೋಪಿಗೆ ಆಧಾರ್ ವಿವರಗಳನ್ನು ಕೋರಿ ಮಹಾರಾಷ್ಟ್ರ ರಾಜ್ಯ ಸರ್ಕಾರದಿಂದ ಅರ್ಜಿಯು ವಜಾಗೊಂಡಿತು. ಈ ಕೇಸ್ ನಿಂದ ಆಧಾರ್ ಜನ್ಮ ದಿನಾಂಕದ ಪುರಾವೆಯಲ್ಲ ಎಂಬುದು ಮತ್ತೆ ಸ್ಪಷ್ಟವಾಯಿತು.
ಪೌರತ್ವದ ಕುರಿತು UIDAI ನಿಲುವುಗಳು :-
- ಕೇವಲ ರೆಸಿಡೆನ್ಸಿ ಆಧಾರಕ್ಕೆ ಆಧಾರ್ ಬಳಕೆ:- ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರಕಾರ ಆಧಾರ್ ಕೇವಲ ವಿಳಾಸವನ್ನು ಪರಿಶೀಲಿಸಲು ಇರುವುದೇ ಹೊರತು ಭಾರತದ ಪ್ರಜೆ ಎಂಬ ದಾಖಲೆಗೆ ಅಲ್ಲ ಎಂಬ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದೆ. ಆಧಾರ್ ಕಾರ್ಡ್ ಗೆ ಅಪ್ಲಿಕೇಶನ್ ಹಾಕುವ ಮೊದಲು 182 ದಿನಗಳವರೆಗೆ ಭಾರತದಲ್ಲಿ ನಿವಾಸಿಯ ಉಪಸ್ಥಿತಿಯನ್ನು ಪರಿಶೀಲಿಸಲು ಆಧಾರ್ ಕಾಯಿದೆಯು UIDAI ಅನ್ನ ಕಡ್ಡಾಯಗೊಳಿಸಿದೆ. ಪೌರತ್ವ ಸ್ಥಿತಿಯಿಂದ ಗುರುತಿನ ಪ್ರಕ್ರಿಯೆಯನ್ನು ದೂರವಿಟ್ಟಿದೆ.
- ಸುಪ್ರೀಂ ಕೋರ್ಟ್ ಆದೇಶ:- ಸುಪ್ರೀಂ ಕೋರ್ಟ್ ಯಾವುದೇ ವಲಸಿಗರಿಗೆ ಆಧಾರ್ ಕಾರ್ಡ್ ನೀಡಬಾರದೆಂದು UIDAI ಗೆ ಆದೇಶ ನೀಡಿದೆ. ಇದು ಸಹ ಪೊರತ್ವ ದಾಖಲೆ ಗಿಂತ ಗುರುತಿನ ಪುರಾವೆಯಾಗಿ ಅಲ್ಲ.
ದುರ್ಬಳಕೆ ಮತ್ತು ಗುಣಮಟ್ಟ :-
- ದುರ್ಬಳಕೆಗಳು:- ಸುಳ್ಳು ಮಾಹಿತಿಗಾಗಿ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕರಣಗಳು ಬೆಳಕಿಗೆ ಬಂದಿದೆ. ಇದರಿಂದ UIDIA ಸುಳ್ಳು ಮಾಹಿತಿಗೆ ಆಧಾರ್ ಅರ್ಜಿ ಹಾಕಿದವರಿಗೆ ನೊಟೀಸ್ ನೀಡಿತ್ತು. ಅದರಂತೆ ಆಧಾರ್ ಕಾರ್ಡ್ ಕಚೇರಿಗಳ ಮೇಲೆ ತನಿಖೆ ನಡೆಸಿತು.
- ಗುಣಮಟ್ಟ:- UIDAI ಆಧಾರ್ ವ್ಯವಸ್ಥೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಗುಣಮಟ್ಟ ಸುಧಾರಣೆ ಪ್ರಕ್ರಿಯೆಗಳನ್ನು ಜಾರಿಗೊಳಿಸಿದೆ. ಮತ್ತು ವಂಚನೆಗಳ ಪತ್ತೆಗೆ ಹೆಚ್ಚಿನ ಪಾತ್ರ ವಹಿಸಿದೆ.
ಇದನ್ನೂ ಓದಿ: ವಿಜಯಪುರ ನಗರದಲ್ಲಿ 93 ಪೌರಕಾರ್ಮಿಕರು ಹುದ್ದೆಗಳಿಗೆ ಅರ್ಜಿ ಆಹ್ವಾನ
ಇದನ್ನೂ ಓದಿ: ಕನ್ನಡದೊಂದಿಗೆ ಹದಿಮೂರು ಪ್ರಾದೇಶಿಕ ಭಾಷೆಗಳಲ್ಲಿ ಕಾನ್ಸ್ಟೇಬಲ್ ಪರೀಕ್ಷೆ; ಅಡೆ-ತಡೆಗಳನ್ನು ಮೀರಿದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ