ಹೊಸದಾಗಿ ಮನೆ ಮಾಡಿದವರು ಅಥವಾ ತುಂಬಾ ಹಳೆಯ ರೇಷನ್ ಕಾರ್ಡ್ ಹೊಂದಿದ್ದು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಕೆಲವರಿಗೆ ನೂತನ ರೇಷನ್ ಕಾರ್ಡ್ ವಿತರಣೆ ಆಗಿದೆ. ಇನ್ನುಳಿದ ಅರ್ಜಿಯನ್ನು ಮಾರ್ಚ್ 31 ರ ಒಳಗೆ ಪರಿಶೀಲನೆ ಮಾಡಿ ಏಪ್ರಿಲ್ ಒಂದನೇ ತಾರೀಖಿನ ನಂತರ ವಿತರಣೆ ಮಾಡುವ ಕಾರ್ಯ ನಡೆಯುವುದು ಎಂದು ಸದನದಲ್ಲಿ ಸಚಿವ K.H ಮುನಿಯಪ್ಪ ತಿಳಿಸಿದ್ದಾರೆ.
ಇಲ್ಲಿಯವರೆಗೆ ವಿತರಿಸಲಾದ ರೇಷನ್ ಕಾರ್ಡ್ ಸಂಖ್ಯೆ ಏಷ್ಟು?: ವಿಧಾನ ಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆಯುವ ವೇಳೆ ರೇಷನ್ ಕಾರ್ಡ್ ವಿತರಣೆ ಸರಿಯಾಗಿ ಆಗುತ್ತಿಲ್ಲ. ಕೆಲವು ಫಲಾನುಭವಿಗಳಿಗೆ ಸರಿಯಾಗಿ ರೇಷನ್ ಅಕ್ಕಿ ಸಿಗುತ್ತಿಲ್ಲ ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವ K.H ಮುನಿಯಪ್ಪ ಅವರು ಈಗಾಗಲೇ 57 ಸಾವಿರ ಜನರಿಗೆ ನೂತನ ರೇಷನ್ ಕಾರ್ಡ್ ವಿತರಣೆ ಮಾಡಲಾಗಿದೆ. ಹಾಗೆಯೇ ಆರೋಗ್ಯ ತುರ್ತು ಚಿಕತ್ಸೆಯ ಸಲುವಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ತಕ್ಷಣ ಕಾರ್ಡ್ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಈಗಾಗಲೇ ಆರೋಗ್ಯ ತುರ್ತು ಅರ್ಜಿಗಳನ್ನು ಪರಿಶೀಲನೆ ಮಾಡಿ 744 ಜನರಿಗೆ ಕಾರ್ಡ್ ವಿತರಣೆ ಮಾಡಿದ್ದೇವೆ. ಇನ್ನು ಬಾಕಿ ಉಳಿದ ಅರ್ಜಿಗಳನ್ನು ಬರುವ ಮಾರ್ಚ್ 31 ರ ಒಳಗಾಗಿ ಪರಿಶೀಲನೆ ಮಾಡಿ ಏಪ್ರಿಲ್ 1 ರಿಂದ ವಿತರಣೆ ಮಾಡಲಾಗುವುದು ಎಂದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 256 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿಗೆ ಪ್ರಸ್ತಾವನೆ
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
- ನೂತನ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ.
- ಮುಖಪುಟದಲ್ಲಿ ಕಾಣುವ ಇ ಸೇವಾಗಳು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ
- ನಂತರ ಇ ಪಡಿತರ ಚೀಟಿ ಆಪ್ಷನ್ ಕ್ಲಿಕ್ ಮಾಡಿ
- ಹೊಸ ಪಡಿತರ ಚೀಟಿ ಎಂಬ ಆಪ್ಷನ್ ಕ್ಲಿಕ್ ಮಾಡಿ
- ರೇಷನ್ ಕಾರ್ಡ್ ಗಾಗಿ ಹೊಸ ಅರ್ಜಿ ಎಂಬ ಅರ್ಜಿ ಓಪನ್ ಆಗುತ್ತದೆ ನಂತರ ಹೊಸ ಪಡಿತರ ಚೀಟಿ ವಿನಂತಿ ಎಂಬ ಆಪ್ಷನ್ ಕ್ಲಿಕ್ ಮಾಡಿ
- ನಿಮ್ಮ ಕುಟುಂಬದ ಆದಾಯದ ಮೇಲೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಆಪ್ಷನ್ ನಲ್ಲಿ ನಿಮ್ಮ ಕುಟುಂಬದ ಆದಾಯದ ಮೇಲೆ ಒಂದು ಆಪ್ಷನ್ ಆಯ್ಕೆ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ಹಾಕಿ. ನಂತರ captcha ಸಂಖ್ಯೆಯನ್ನು ಭರ್ತಿ ಮಾಡಿ.
- ಫಿಂಗರ್ ಪ್ರಿಂಟ್ ಪರಿಶೀಲನೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಬೆರಳಿನ ಗುರುತನ್ನು ಫಿಂಗರ್ ಪ್ರಿಂಟ್ ಮಶೀನ್ ಮೇಲೆ ಇಟ್ಟು ಧೃಢಿಕರಿಸಿ.
- ನಂತರ ನಿಮ್ಮ ಹೆಸರು ವಿಳಾಸ ಹಾಗೂ ನಿಮ್ಮ ಕುಟುಂಬದವರ ಹೆಸರು ಆಧಾರ್ ಸಂಖ್ಯೆ ವಯಸ್ಸು ಭಾವಚಿತ್ರ ಎಲ್ಲವನ್ನೂ ಅರ್ಜಿಯಲ್ಲಿ ತುಂಬಿ.
- ನಂತರ ನಿಮ್ಮ ಸಮೀಪದ ಪಡಿತರ ವಿತರಣೆ ಹೆಸರು ಕೇಳಲಾಗುತ್ತದೆ. ಅದನ್ನು ಆಯ್ಕೆ ಮಾಡಿ. ನಂತರ ನಗರ ಅಥವಾ ಗ್ರಾಮೀಣ ಭಾಗ ಎಂಬ ಆಯ್ಕೆಗಳು ಇರುತ್ತವೆ. ನಿಮ್ಮ ಕ್ಷೇತ್ರವನ್ನು ಆಯ್ಕೆ ಮಾಡಿ.
- ನಿಮ್ಮ ಕುಟುಂಬದ ಯಜಮಾನಿ ಅಥವಾ ಯಜಮಾನ ಯಾರೂ ಎಂಬ ಮಾಹಿತಿಯನ್ನು ಭರ್ತಿ ಮಾಡಿ. ನಂತರ ನಿಮ್ಮಗೆ ಅರ್ಜಿ ಸ್ವೀಕರಿಸುವ ಬಗ್ಗೆ ಒಂದು ಸಂಖ್ಯೆ ಬರುತ್ತದೆ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಿ . ನೂತನ ರೇಷನ್ ಕಾರ್ಡ್ ನಿಮಗೆ ಸಿಗುವ ವರೆಗೆ ಈ ಸಂಖ್ಯೆ ಯ ಆಧಾರದ ಮೇಲೆ ಸರ್ಕಾರದ ಸೌಲಭ್ಯವನ್ನು ಪಡೆಯಬಹುದು.
ಇದನ್ನೂ ಓದಿ: 79,999 ರೂ ಬೆಲೆ ಮತ್ತು 98 ಕಿಮೀ ಮೈಲೇಜ್ ನೊಂದಿಗೆ ಈಗಷ್ಟೇ ಬಿಡುಗಡೆಯಾಗಿರುವ ಹೊಸ ಲೆಕ್ಟ್ರಿಕ್ಸ್ ಎಲೆಕ್ಟ್ರಿಕ್ ಸ್ಕೂಟರ್