ಪ್ಯಾನ್ ಕಾರ್ಡ್ ಎಂಬುದು ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ಅರ್ಜಿ ಸಲ್ಲಿಸುವ ಯಾವುದೇ ವ್ಯಕ್ತಿಗೆ ನೀಡಲಾದ ಹತ್ತು ಅಕ್ಷರಗಳ ಆಲ್ಫಾನ್ಯೂಮರಿಕ್ ಐಡೆಂಟಿಫೈಯರ್ ಆಗಿದೆ. ಇದು ಭಾರತದಲ್ಲಿ ಹಣಕಾಸಿನ ವಹಿವಾಟುಗಳು ಮತ್ತು ಸರಕಾರದ ಯೋಜನೆಯಲು ಅಥವಾ ಗುರುತಿನ ಚೀಟಿ ಅಂತಹ ಪ್ರಮುಖ ದಾಖಲೆಯಾಗಿ ಪ್ಯಾನ್ ಕಾರ್ಡ್ ಬಳಕೆ ಆಗುತ್ತದೆ. ಹೆಚ್ಚಿನ ಆದಾಯವನ್ನು ಹೊಂದಿದ್ದು ತೆರಿಗೆಗಳನ್ನು ಪಾವತಿಸುವ ವ್ಯಕ್ತಿಗಳು ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಹೊಂದಿರಲೇಬೇಕು. ಪ್ಯಾನ್ ಕಾರ್ಡ್ ಬಳಕೆದಾರರು ತೆರಿಗೆ ವಿನಾಯಿತಿ ಪಡೆಯಲು ಸಾಧ್ಯ. ಒಮ್ಮೆಲೆ ಹೆಚ್ಚಿನ ಹಣ ವರ್ಗಾವಣೆಗೆ ಪ್ಯಾನ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಕೆಲವು ನಕಲಿ ಪ್ಯಾನ್ ಕಾರ್ಡ್ ಬಳಸಿ income tax department ಗೆ ವಂಚನೆ ಮಾಡುತ್ತಾ ಇದ್ದಾರೆ. ಹಾಗಾದರೆ ನಕಲಿ ಪ್ಯಾನ್ ಕಾರ್ಡ್ ಬಳಸಿದರೆ ಏನಾಗುತ್ತದೆ ಎಂದು ತಿಳಿಯೋಣ.
ಒಂದಕ್ಕಿಂತ ಹೆಚ್ಚು PAN ಹೊಂದಿದ್ದರೆ ಏನಾಗುತ್ತದೆ?: ಆದಾಯ ತೆರಿಗೆ ಇಲಾಖೆಯ ನಿಯಮಗಳ ಅನುಸಾರ ನೀವು ಒಂದಕ್ಕಿಂತ ಹೆಚ್ಚು ಪ್ಯಾನ್ ಹೊಂದಿದ್ದರೆ, ನೀವೂ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272ಬಿ ಅಡಿಯಲ್ಲಿ 10,000 ರೂಪಾಯಿಗಳವರೆಗೆ ದಂಡ ಕಟ್ಟಬೇಕಾಗುತ್ತದೆ. ಅದರ ಜೊತೆಗೆ ನಿಮ್ಮ ಎಲ್ಲಾ income source ಬಗ್ಗೆ ಪೂರ್ಣ ಮಾಹಿತಿಯನ್ನು ಸಹ tax department ಕೇಳಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 8GB RAM, ಹಾಗೂ 5000mAh ಬ್ಯಾಟರಿ ಹೊಂದಿರುವ ಈ ಫೋನ್ ನ್ನು ಕೇವಲ 6,999 ರೂಪಾಯಿಗೆ ಖರೀದಿಸಿ..
ಎರಡು ಪ್ಯಾನ್ ಕಾರ್ಡ್ ಹೊಂದಿರಲು ಕಾರಣಗಳೇನು?
- ತಿಳಿಯದೇ ಎರಡು ಬಾರಿ ಅಪ್ಲಿಕೇಷನ್ ಹಾಕಿರಬಹುದು: ನೀವು ಒಮ್ಮೆ ಪ್ಯಾನ್ಗಾಗಿ ಅಪ್ಲಿಕೇಶನ್ ಹಾಕಿ ಹಲವಾರು ದಿನಗಳ ಕಾಲ ಕಾದರೂ ನಿಮ್ಮ ಪ್ಯಾನ್ ಕಾರ್ಡ್ ಬಾರದೆ ಇರಬಹುದು. ಆಗ ನಿಮಗೆ ಏನಾದರೂ ತುರ್ತು ಪ್ಯಾನ್ ಕಾರ್ಡ್ ನ ಅವ್ಯಶ್ಯತೆ ಇದ್ದಲ್ಲಿ ನೀವು ಮತ್ತೆ ಅರ್ಜಿ ಸಲ್ಲಿಸಿದರೆ ನಿಮ್ಮಗೆ ಎರಡೆರಡು ಪ್ಯಾನ್ ಕಾರ್ಡ್ ಬರುತ್ತವೆ. ಇದು ಬೇರೆ ಬೇರೆ ಅಂಕೆಗಳನ್ನು ಹೊಂದಿರುತ್ತದೆ.
- ಪ್ಯಾನ್ ಕಾರ್ಡ್ನಲ್ಲಿ ಹೆಸರು ತಪ್ಪಿದ್ದಾಗ: ಪ್ಯಾನ್ ಕಾರ್ಡ್ ನಲ್ಲಿ ಹೆಸರು ತಪ್ಪಾಗಿದ್ದರೆ, ಕೆಲವರು ಅದನ್ನು ಸರಿಪಡಿಸಲು ಅರ್ಜಿ ಸಲ್ಲಿಸುವ ಬದಲಿ ಹೊಸ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುತ್ತಾರೆ. ಇಂತಹ ಸಮಯದಲ್ಲಿ ಸಹ ಎರಡು ಪ್ಯಾನ್ ಕಾರ್ಡ್ ಬರುತ್ತದೆ.
- ಮದುವೆಯ ನಂತರ ಹೆಸರು ಬದಲಾವಣೆಗೆ: ಮದುವೆಯ ನಂತರ, ಹೆಣ್ಣುಮಕ್ಕಳು ತಮ್ಮ ಹೆಸರನ್ನು ಬದಲಾವಣೆ ಮಾಡಬೇಕಾಗುತ್ತದೆ. ಆಗ ಉಪನಾಮದ ತಿದ್ದುಪಡಿ ನೀಡುವ ಬದಲು ಹೊಸ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಿದರೆ ಆಗ ಒಬ್ಬರ ಬಳಿ ಎರಡು ಕಾರ್ಡ್ಗಳು ಇರುತ್ತವೆ.
- ವಂಚನೆಯ ಉದ್ದೇಶಕ್ಕಾಗಿ: ಯಾವುದೇ income source ವಂಚನೆಯಿಂದ ಕೂಡಿದ್ದರೆ ಅದನ್ನು ಮುಚ್ಚಿಡುವ ಸಲುವಾಗಿ ಎರಡು ಪಾನ್ ಕಾರ್ಡ್ ಹೊಂದಿರುವ ಸಾಧ್ಯತೆ ಇರುತ್ತದೆ. ಇದು ಕಾನೂನು ಕಾನೂನು ಬಾಹಿರ.
ನಕಲಿ ಪಾನ್ ಕಾರ್ಡ್ Tax Department ಗೆ ಸರೆಂಡರ್ ಮಾಡುವ ವಿಧಾನ:-
Offline ಹಾಗೂ Online ಮೂಲಕ ನಿಮ್ಮ ನಕಲಿ ಪಾನ್ ಕಾರ್ಡ್ ಅನ್ನು ಸರೆಂಡರ್ ಮಾಡಬಹುದಾಗಿದೆ. ನೀವು ಆನ್ಲೈನ್ ನಲ್ಲಿ ಪ್ಯಾನ್ ಕಾರ್ಡ್ ಸರೆಂಡರ್ ಮಾಡುತ್ತಿದ್ದರೆ ಪ್ಯಾನ್ ಬದಲಾವಣೆ ವಿನಂತಿಯ ಅರ್ಜಿ ನಮೂನೆಯ ಭರ್ತಿ ಮಾಡಬೇಕು. ಅದರ ಮೇಲ್ಭಾಗದಲ್ಲಿ ನೀವು ಬಳಸುತ್ತಿರುವ ಪ್ಯಾನ್ ಸಂಖ್ಯೆಯನ್ನು ಹಾಕಬೇಕು ಹಾಗೂ ಐಟಂ ನಂ. 11 ರಲ್ಲಿ ನೀವು ನಕಲಿ ಪ್ಯಾನ್ನ ವಿವರಗಳನ್ನು ನೀಡಬೇಕು ಹಾಗೂ ಅದರ ಪ್ರತಿಯನ್ನು ಸಹ ಲಗತ್ತಿಸಬೇಕು ಮತ್ತು ನಂತರ NSDL (nsdl.co.in) ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿಯನ್ನು ಸಲ್ಲಿಸಬೇಕು. ಎಲ್ಲ ಮಾಹಿತಿಯನ್ನು ಪರಿಶೀಲನೆ ಮಾಡಿದ ನಂತರ ನಿಮ್ಮ ಪಾನ್ ಕಾರ್ಡ್ ರದ್ದಾಗುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ನೀವು ಫಾರ್ಮ್ 49A ಅನ್ನು ಭರ್ತಿ ಮಾಡಬೇಕಾಗುತ್ತದೆ. ಫಾರ್ಮ್ನಲ್ಲಿ ಸರೆಂಡರ್ ಮಾಡಬೇಕಾದ ಪ್ಯಾನ್ ಕಾರ್ಡ್ನ ವಿವರಗಳನ್ನು ನಮೂದಿಸಿದ ಫಾರ್ಮ್ ನಿಮ್ಮ ಹತ್ತಿರದ UTI ಅಥವಾ NSDL TIN ಫೆಸಿಲಿಟೇಶನ್ ಸೆಂಟರ್ಗೆ ಸಲ್ಲಿಸಬೇಕಾಗುತ್ತದೆ. ಅದರ ಸ್ವೀಕೃತಿ ರಶೀದಿಯನ್ನು ನೀವು ಪಡೆಯುತ್ತೀರಿ. ನಿಮ್ಮ ಹತ್ತಿರದ ಜ್ಯೂರಿಡಿಕ್ಷನ್ ಆಫೀಸರ್ ಯಾರು ಎಂಬುದನ್ನು ನೀವು ತಿಳಿದುಕೊಂಡು ಅವರಿಗೆ ಪತ್ರ ಬರೆಯಬೇಕು. ಈ ಪತ್ರದಲ್ಲಿ, ನಿಮ್ಮ ಪ್ಯಾನ್ ಕಾರ್ಡ್ನಲ್ಲಿ ನಮೂದಿಸಲಾದ ಎಲ್ಲಾ ವಿವರಗಳು ಹಾಗೂ ನಕಲಿ ಪ್ಯಾನ್ ಕಾರ್ಡ್ನ ವಿವರಗಳನ್ನು ನೀಡಬೇಕು ಇದರ ಜೊತೆಗೆ ನಕಲಿ ಕಾರ್ಡ್ ಹೊಂದಿರಲು ಏನು ಕಾರಣ ಎಂಬ ಬಗ್ಗೆ ಮಾಹಿತಿ ಸಲ್ಲಿಸಬೇಕು. ಹಾಗೂ ನೀವು ನಕಲಿ ಕಾರ್ಡ್ನ ಜೆರಾಕ್ಸ್ ಮತ್ತು NSDL TIN ನಿಂದ ಸ್ವೀಕರಿಸಿದ ಸ್ವೀಕೃತಿ ರಸೀದಿಯನ್ನು ಸಹ ದೃಢೀಕರಿಸಿದ ರಶಿದಿಯನ್ನು ಸಲ್ಲಿಸಬೇಕು. ನಿಮ್ಮ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿದ ನಂತರ ನಿಮ್ಮ ನಕಲಿ ಪಾನ್ ಕಾರ್ಡ್ ರದ್ದಾಗುತ್ತದೆ.