ಕೇಂದ್ರ ಸರ್ಕಾರ ಜನರಿಗೆ ಆರ್ಥಿಕ ಹೊರೆ ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಭಾರತ್ ಬ್ರಾಂಡ್ ಎಂಬ ಹೆಸರಿನಲ್ಲಿ ಆಹಾರ ಪದಾರ್ಥಗಳಾದ ಅಕ್ಕಿ , ಬೆಳೆ, ಹಾಗೂ ಭಾರತ್ ಅಟ್ಟಾ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇಷ್ಟು ದಿನಗಳ ಕಾಲ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಸೀಮಿತವಾಗಿದ್ದ ಭಾರತ್ ಬ್ರಾಂಡ್ ದಿನಸಿ ವಸ್ತುಗಳು ಈಗ ಎಲ್ಲ ರಾಜ್ಯದ ಚಿಕ್ಕ ಚಿಕ್ಕ ತಾಲೂಕಿಗೆ ಸಹ ಬರುತ್ತಿದೆ. ಆದರೆ ಈಗ ಕೆಲವು ಏಜೆನ್ಸಿ ಗಳು ಮಾತ್ರ ಭಾರತ್ ಬ್ರಾಂಡ್ ಅಕ್ಕಿಯನ್ನು ಮಾರಾಟ ಮಾಡುತ್ತಿವೆ. ಕಡಿಮೆ ದರದಲ್ಲಿ ಸಿಗುವ ಅಕ್ಕಿಗೆ ಹೆಚ್ಚಿನ ಬೇಡಿಕೆ ಇದೆ. ಹಾಗಾದರೆ ಭಾರತ್ ಬ್ರಾಂಡ್ ಅಕ್ಕಿ ವಿತರಕರು ಯಾರು ಹಾಗೂ ಯಾವಾಗ ಎಲ್ಲಾ ಶಾಪ್ ಗಳಲ್ಲಿ ಭಾರತ್ ಬ್ರಾಂಡ್ ಅಕ್ಕಿ ಸಿಗುತ್ತದೆ ಎಂಬ ಮಾಹಿತಿ ಇಲ್ಲಿದೆ.
ಭಾರತ್ ಬ್ರಾಂಡ್ ಅಕ್ಕಿಯ ಬೆಲೆ :- ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಭಾರತ್ ಬ್ರಾಂಡ್ ಅಕ್ಕಿಯನ್ನು ಬಿಡುಗಡೆ ಮಾಡಲಾಗಿದೆ. ಅಕ್ಕಿಯ ಬೆಲೆ ಒಂದು ಕೆ.ಜಿ ಗೆ ಕೇವಲ 29 ರೂಪಾಯಿ. ಭಾರತ್ ಬ್ರಾಂಡ್ ಅಕ್ಕಿಯು 5 ಕೆ.ಜಿ ಹಾಗೂ 10 ಕೆ.ಜಿ ಚೀಲಗಳಲ್ಲಿ ಈಗ ಲಭ್ಯವಿದೆ. ಮೈಸೂರಿನ ನಗರದಲ್ಲಿ ಭಾರತ್ ಬ್ರಾಂಡ್ ಅಕ್ಕಿಯು ಕೆಲವೇ ಗಂಟೆಗಳಲ್ಲಿ 10 ಕೆ.ಜಿ ಯ 600 ಚೀಲ ಖಾಲಿ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಭಾರತ್ ಬ್ರಾಂಡ್ ಅಕ್ಕಿ ಎಲ್ಲೆಲ್ಲಿ ಸಿಗುತ್ತದೆ?
ಈಗ ಸಾಧ್ಯ ಎಲ್ಲಾ ಪ್ರದೇಶಗಳಲ್ಲಿ ಖಾಸಗಿ ಏಜೆನ್ಸಿಗಳು ಮೊಬೈಲ್ ವ್ಯಾನ್ ನಲ್ಲಿ ಭಾರತ್ ಬ್ರಾಂಡ್ ಅಕ್ಕಿಯನ್ನು ಮಾರಾಟ ಮಾಡುತ್ತಿವೆ. ಪ್ರತಿ ತಾಲೂಕಿನ ಮುಖ್ಯ ಪ್ರದೇಶದಲ್ಲಿ ವ್ಯಾನ್ ಬರುತ್ತಿದ್ದು. ಮೈಕ್ ಮೂಲಕ ಅನೌನ್ಸ್ ಮಾಡಲಾಗುತ್ತಿದೆ. ಒಬ್ಬ ವ್ಯಕ್ತಿಗೆ 10 ಕೆ.ಜಿ ಅಕ್ಕಿಯನ್ನು ಒಮ್ಮೆ ನೀಡುತ್ತಿದ್ದಾರೆ. ದಿಲ್ಲಿಯಿಂದ ನೇರವಾಗಿ ಹುಬ್ಬಳ್ಳಿ ಹಾಗೂ ಬೆಂಗಳೂರಿಗೆ ಅಕ್ಕಿ ಬರುತ್ತಿದೆ. ಅಲ್ಲಿಂದ ಲಾರಿ ಮತ್ತು ರೈಲುಗಳ ಮೂಲಕ ಅಕ್ಕಿಯನ್ನು ರಾಜ್ಯದ ಉಳಿದ ಜಿಲ್ಲೆಗೆ ಕಳುಹಿಸಲಾಗುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ನಲ್ಲೂ ಸಿಗಲಿದೆ ಭಾರತ್ ಬ್ರಾಂಡ್ ಅಕ್ಕಿ:- ಸದ್ಯದಲ್ಲಿಯೇ ಭಾರತ್ ಬ್ರಾಂಡ್ ಅಕ್ಕಿ ರಿಲಯನ್ಸ್ ಮಾರ್ಟ್, ಫ್ಲಿಪ್ ಕಾರ್ಟ್, ಬ್ಲಿಂಕಿಟ್ ಸೇರಿದಂತೆ ಅನೇಕ ಆನ್ಲೈನ್ ಶಾಪಿಂಗ್ ಆ್ಯಪ್ಗಳಲ್ಲೂ ಭಾರತ್ ಅಕ್ಕಿ 29 ರೂಪಾಯಿಗೆ ಸಿಗಲಿದೆ. ಹತ್ತಿರದ ಕಿರಾಣಿ ಅಂಗಡಿಗಳಲ್ಲಿ ಸಹ ಮಾರಾಟ ಮಾಡುವ ಕಾರ್ಯ ನಡೆಯುತ್ತಿದೆ. ಬೇಡಿಕೆ ಹೆಚ್ಚಾದಂತೆ ಎಲ್ಲಾ ಮಳಿಗೆಗಳಲ್ಲಿ ಸಹ ಭಾರತ್ ಬ್ರಾಂಡ್ ಅಕ್ಕಿ ಸಿಗಲಿದೆ.
ಭಾರತ್ ಬ್ರಾಂಡ್ ಅಕ್ಕಿಯ ಜೊತೆಗೆ ಭಾರತ್ ಬ್ರಾಂಡ್ ಅಟ್ಟಾ ಹಾಗೂ ಭಾರತ್ ದಾಲ್ ಸಹ ಪ್ರೈವೇಟ್ ಏಜೆನ್ಸಿಗಳು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಾ ಇದ್ದಾರೆ.
ಕೆಲವೇ ನಿಮಿಷಗಳಲ್ಲಿ ಭಾರತ್ ಬ್ರಾಂಡ್ ಅಕ್ಕಿ ಖಾಲಿ ಆಗುತ್ತಿವೆ: ಪ್ರತಿ ಜಿಲ್ಲೆಯಲ್ಲಿ ಸಹ ಭಾರತ್ ಬ್ರಾಂಡ್ ಅಕ್ಕಿಯ ವ್ಯಾನ್ ಬರುತ್ತಿದ್ದಂತೆ ಜನರು ಮುಗಿಬಿದ್ದು ಅಕ್ಕಿಯನ್ನು ಖರೀದಿ ಮಾಡುತ್ತಾ ಇದ್ದಾರೆ. ಬೆಂಗಳೂರಿನ ನಗರ ಒಂದರಲ್ಲಿ ಒಂದು ಗಂಟೆಯಲ್ಲಿ ಒಂದು ಟನ್ ಅಕ್ಕಿ ಮಾರಾಟ ಆಗಿದೆ. ಗ್ರಾಹಕರು ಸ್ಥಳದಲ್ಲಿಯೇ ಪ್ಯಾಕ್ ಓಪನ್ ಮಾಡಿ ಅಕ್ಕಿಯ ಗುಣಮಟ್ಟವನ್ನು ಮರಿಶೀಲನೆ ಮಾಡುತ್ತಾ ಇದ್ದಾರೆ. ಕಡಿಮೆ ಬೆಲೆಯಲ್ಲಿ ಅಕ್ಕಿ ಸಿಗುವುದು ದುರ್ಬಲ ಕುಟುಂಬಗಳಿಗೆ ಬಹಳ ಉಪಯೋಗ ಆಗಿದೆ ಎಂದು ಕೇಂದ್ರ ಸರ್ಕಾರದ ಭಾರತ್ ಬ್ರಾಂಡ್ ಅಕ್ಕಿಯನ್ನು ಜನರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಏಪ್ರಿಲ್ ಒಂದರಿಂದ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಇದನ್ನೂ ಓದಿ: UPI ಮುಖಾಂತರ ನಿಮ್ಮ ಹಣವನ್ನು ತಪ್ಪಾಗಿ ಬೇರೆಯವರಿಗೆ ಕಳುಹಿಸಿದ್ದಾರೆ ಈ ರೀತಿ ವಾಪಸ್ ಪಡೆಯಿರಿ..