ಗೃಹಲಕ್ಷ್ಮಿ ಯೋಜನೆಯ ಹಣ ಈಗಾಗಲೇ ಆರು ಕಂತುಗಳು ಪೂರೈಸಿದೆ. ಆದರೂ ಸಹ ಕೆಲವರ ಖಾತೆಗಳಿಗೆ ಹಣ ಜಮಾ ಆಗಲಿಲ್ಲ. ಮೂರು ನಾಲ್ಕು ಬಾರಿ ಅರ್ಜಿ ಸಲ್ಲಿಸಿದವರಿಗೆ ಸಹ ಖಾತೆಯ ಹಣವೂ ಬಂದಿಲ್ಲ ಎಂದು ವಿಧಾನಸಭೆಯಲ್ಲಿ ಪ್ರಶ್ನೆ. ಎತ್ತಿದ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರಿಗೆ ಲಿಖಿತ ಉತ್ತರ ನೀಡಿ ಹಣ ಜಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆ ಏನು?: ಈಗಾಗಲೇ ಯೋಜನೆಗೆ ನೊಂದಾಯಿಸಿಕೊಂಡ 1.21ಕೋಟಿ ಜನರಲ್ಲಿ 1.12ಕೋಟಿ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ ಹಣವೂ ಜಮಾ ಆಗಿದೆ. 8.21 ಲಕ್ಷ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ. ಪ್ರತಿ ತಿಂಗಳು 15 ನೇ ತಾರೀಖಿನ ನಂತರ ಖಾತೆಗೆ ಹಣ ಜಮಾ ಆಗಲಿದೆ. ಕೆಲವು ಜಿಲ್ಲೆಗಳ ಫಲಾನುಭವಿಗಳಿಗೆ e-kyc ಮಾಡಿಸದೆ ಇದ್ದಲ್ಲಿ ಅಥವಾ ತಪ್ಪಾದ ಬ್ಯಾಂಕ್ ಖಾತೆಯ ನಂಬರ್ ಕೊಟ್ಟಿದ್ದಾರೆ ಹಾಗೂ ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ದಾಖಲೆ ಆಗದೆ ಇದ್ದರೆ ಹಣವೂ ಜಮಾ ಆಗಲಿಲ್ಲ. ಆದ್ದರಿಂದ ತಾಂತ್ರಿಕ ದೋಷ ಪರಿಹಾರ ಆದ ನಂತರ ಅವರ ಖಾತೆಗಳಿಗೆ ಸಹ ಹಣ ಜಮಾ ಆಗಲಿದೆ ಎಂದರು. ಹಾಗೆ ಈಗಾಗಲೇ ಮನೆಯ ಯಜಮಾನ ನ ಹೆಸರಿನಲ್ಲಿ ರೇಷನ್ ಕಾರ್ಡ್ ಇದ್ದರೆ ಶೀಘ್ರವೇ ಯಜಮಾನಿ ಹೆಸರಿನಲ್ಲಿ ರೇಷನ್ ಕಾರ್ಡ್ ಮಾಡಿಸಿ ಅರ್ಜಿ ಸಲ್ಲಿಸಬೇಕು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ರೇಷನ್ ಕಾರ್ಡ್ನಲ್ಲಿ ಯಜಮಾನನ ಬದಲು ಯಜಮಾನಿ ಹೆಸರು ಬದಲಾವಣೆ ಮಾಡುವುದು ಹೇಗೆ?
ಸಮೀಪದ ಪಡಿತರ ಚೀಟಿ ಸೇವಾಕೇಂದ್ರಗಳಿಗೆ ಹೋಗಿ ಮುಖ್ಯಸ್ಥರ ಹೆಸರು ಬದಲಾವಣೆ ಮಾಡುವುದಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯೊಂದಿಗೆ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಮತ್ತು ಹಳೆಯ ರೇಷನ್ ಕಾರ್ಡ್ ಪ್ರತಿಯನ್ನು ನೀಡಬೇಕು. ನಂತರ ಕುಟುಂಬದ ಎಲ್ಲಾ ಸದಸ್ಯರು ಬಯೋಮೆಟ್ರಿಕ್ ದೃಡೀಕರಣದ ಮಾಡಿಸಬೇಕು. ನಿಮ್ಮ ಎಲ್ಲಾ ವಿವರಗಳನ್ನು ಸೇವಾ ಕೇಂದ್ರದಲ್ಲಿ ಆನ್ಲೈನ್ ಮೂಲಕ ಅಪ್ಲೋಡ್ ಮಾಡಲಾಗುತ್ತದೆ. ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಸ್ವೀಕೃತಿ ಸಂಖ್ಯೆ ಬರುತ್ತದೆ. ನಿಮ್ಮ ಎಲ್ಲಾ ದಾಖಲೆಗಳು ಪರಿಶೀಲನೆ ಆದ ಬಳಿಕ ರೇಷನ್ ಕಾರ್ಡ್ ನೀಡುತ್ತಾರೆ. ಬಿಪಿಎಲ್ ಕಾರ್ಡ್ ಹೊಂದಿರುವವರು ನಿಮ್ಮ ಆದಾಯ ಪ್ರಮಾಣ ಪತ್ರವನ್ನು ನೀಡಬೇಕು. ಮತ್ತು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರವು ಹಲವಾರು ನಿಯಮಗಳನ್ನು ಜಾರಿ ಮಾಡಿದೆ.
ಆನ್ಲೈನ್ ಮೂಲಕ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಕ್ರಮಗಳು:- https://ahara.kar.nic.in/ಗೆ ಲಾಗ್ ಇನ್ ಆಗಬೇಕು. ನಂತರ
ಮುಖಪುಟದಲ್ಲಿ ಇ-ಸೇವೆಗಳು ಎಂಬ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಎಂಬ ಆಪ್ಷನ್ ಕ್ಲಿಕ್ ಮಾಡಿ. ಆಗ ಹೊಸ ಪೇಜ್ ಸಿಗುತ್ತದೆ. ನಿಮ್ಮ ಜಿಲ್ಲೆಗೆ ಹೆಸರು ಕ್ಲಿಕ್ ಮಾಡಿ ಹೊಸ ಸೇರ್ಪಡೆ/ ತಿದ್ದುಪಡಿ ಫಾರ್ಮ್ನಲ್ಲಿ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು ಕುಟುಂಬದ ಸದಸ್ಯರ ಹೆಸರು, ವಯಸ್ಸು, ಆಧಾರ್ ಕಾರ್ಡ್ ನಂಬರ್ ಭರ್ತಿ ಮಾಡುಬೇಕು. ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ. ನಿಮಗೆ ಅರ್ಜಿ ಸಲ್ಲಿಕೆಯ ರಿಜಿಸ್ಟರ್ ನಂಬರ್ ಸಿಗುತ್ತದೆ. ಅದರಿಂದ ಅರ್ಜಿಯ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ.
ಇದನ್ನೂ ಓದಿ: BBMP ಉಚಿತ ಲ್ಯಾಪ್ ಟಾಪ್ ಗೆ ಮತ್ತೊಮ್ಮೆ ದಾಖಲೆ ಸಲ್ಲಿಸಲು 10 ದಿನಗಳ ಅವಕಾಶ
ಇದನ್ನೂ ಓದಿ: ನಿಮ್ಮ ಹಣವನ್ನು ಡಬಲ್ ಮಾಡಬೇಕಾ? ಹಾಗಾದರೆ ಇಲ್ಲಿದೆ ನಿಮಗೆ ಸಹಾಯ ಮಾಡುವ ಟಾಪ್ 10 ಸರ್ಕಾರಿ ಸ್ಕೀಮ್ ಗಳು..