ಪಿಯುಸಿ ಮುಗಿಸಿ ಸರ್ಕಾರಿ ನೌಕರಿ ಹುಡುಕುತ್ತಾ ಇರುವ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ. ಖಾಲಿ ಇರುವ ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಜಾಬ್ ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗಾದರೆ ಹುದ್ದೆಯ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿಯಬೇಕು ಎಂದರೆ ಈ ಆರ್ಟಿಕಲ್ ಓದಿ.
ಹುದ್ದೆಯ ಬಗ್ಗೆ ವಿವರಗಳು:-
- ನೇಮಕಾತಿ ಅಧಿಸೂಚನೆ ಹೊರಡಿಸಿದ ಸಂಸ್ಥೆ:- ಕಂದಾಯ ಇಲಾಖೆ.
- ಒಟ್ಟು ಖಾಲಿ ಇರುವ ಹುದ್ದೆಗಳು :- 1000
- ಸಂಬಳ :- 21,400 ರೂಪಾಯಿಯಿಂದ 42,000
- ಶೈಕ್ಷಣಿಕ ಅರ್ಹತೆ :- ಪಿಯುಸಿ
- ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ:- ಅರ್ಜಿ ಸಲ್ಲಿಸಲು ಕನಿಷ್ಟ 18ವರ್ಷ ಗರಿಷ್ಠ 35 ವರ್ಷ, ಇಲಾಖೆಯ ಅಧಿಸೂಚನೆಯಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮತ್ತು ಒಬಿಸಿ ಅವರಿಗೆ ವಯಸ್ಸಿನ ಸಡಿಲಿಕೆ ಇದೆ.
- ಅರ್ಜಿ ಸಲ್ಲಿಸಲು ಆರಂಭ ದಿನಾಂಕ :- 4-3-2024.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 3-4-2024
- ಶುಲ್ಕದ ವಿವರ :- ಸಾಮಾನ್ಯ ವರ್ಗದವರಿಗೆ 750 ರೂಪಾಯಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 500 ರೂಪಾಯಿ . ಶುಲ್ಕ ಪಾವತಿಸಲು 6-4-2024 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ: ಇಲಾಖೆಯ ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ ಭೇಟಿ ನೀಡಿ. ನಂತರ ‘ಹುದ್ದೆಗಳಿಗೆ ಅರ್ಜಿ’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ‘ಗ್ರಾಮ ಅಧಿಕಾರಿ’ ಆಯ್ಕೆ ಕ್ಲಿಕ್ ಮಾಡಿ. ನಂತರ ಅರ್ಜಿ ನಮೂನೆಯಲ್ಲಿ ನಿಮ್ಮ ಹೆಸರು ವಯಸ್ಸು ಲಿಂಗ ವಿಳಾಸ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ನಿಮ್ಮ ಮಾರ್ಕ್ಸ್ ಕಾರ್ಡ್ ಮತ್ತು ಫೋಟೋ, (ಜಾತಿ ಪ್ರಮಾಣ ಪತ್ರ ಇದ್ದಲ್ಲಿ) ಎಲ್ಲವನ್ನೂ ಸ್ಕ್ಯಾನ್ ಮಾಡಿ ನಂತರ ನಿಮ್ಮ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯಾವ ಜಿಲ್ಲೆಯಲ್ಲಿ ಏಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಇಲ್ಲಿದೆ:-
ಬೆಂಗಳೂರು ನಗರ 32, ಬೆಂಗಳೂರು ಗ್ರಾಮಾಂತರ 34, ಚಿತ್ರದುರ್ಗ 32, ಕೋಲಾರ 45, ತುಮಕೂರು 73, ರಾಮನಗರ 51, ಚಿಕ್ಕಬಳ್ಳಾಪುರ 42, ಶಿವಮೊಗ್ಗ 31, ಮೈಸೂರು 66, ಚಾಮರಾಜನಗರ 55, ಮಂಡ್ಯ 60, ಹಾಸನ 54, ಚಿಕ್ಕಮಗಳೂರು 23, ಕೊಡಗು 6, ಉಡುಪಿ 22, ದಕ್ಷಿಣ ಕನ್ನಡ 50, ಬೆಳಗಾವಿ 64, ವಿಜಯಪುರ 7, ಬಾಗಲಕೋಟೆ 22, ಧಾರವಾಡ 12, ಗದಗ 30, ಹಾವೇರಿ 34, ಉತ್ತರ ಕನ್ನಡ 2, ಕೊಪ್ಪಳ 3, ಬಳ್ಳಾರಿ 3, ಬೀದರ್ 5, ಯಾದಗಿರಿ 8, ವಿಜಯನಗರ 03.
ಕಲ್ಯಾಣ ಕರ್ನಾಟಕ ಸ್ಥಳೀಯ ಹುದ್ದೆಗಳ ಸಂಖ್ಯೆ :-
ಕಲಬುರ್ಗಿ 67, ರಾಯಚೂರು 4, ಕೊಪ್ಪಳ 16, ಬಳ್ಳಾರಿ 14, ಬೀದರ್ 19, ಯಾದಗಿರಿ 1, ವಿಜಯನಗರ 10.
ಕರ್ನಾಟಕದ ಯಾವುದೇ ಪ್ರದೇಶಕ್ಕೆ ಕೆಲಸಕ್ಕೆ ನೇಮಕ ಮಾಡಿದರು ಕೆಲಸ ಮಾಡಲು ಒಪ್ಪಿಗೆ ಇರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಎಕ್ಸಾಮ್ ದಿನಾಂಕವನ್ನು ತಿಳಿಯುತ್ತಾರೆ. ಲಿಖಿತ ಪರೀಕ್ಷೆ ಮತ್ತು ಇಂಟರ್ವ್ಯೂ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹಳ್ಳಿಗಳಲ್ಲಿ ಸೇವೆ ಮಾಡಲೇ ಇಚ್ಛಿಸುವ ಅಭ್ಯರ್ಥಿಗಳಿಗೆ ಇದು ಒಂದು ಸದಾವಕಾಶ ಆಗಿದೆ.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ರೈತ ವಿದ್ಯಾನಿಧಿ ವೇತನಕ್ಕೆ ಅರ್ಜಿ ಆಹ್ವಾನ..