Darshan apology latter to media: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಕನ್ನಡ ಚಿತ್ರರಂಗದಲ್ಲಿ ಒಂದು ದೈತ್ಯ ಪ್ರತಿಭೆ, ಬಹಳ ಕಷ್ಟ ಪಟ್ಟು ಇಂಡಸ್ಟ್ರಿ ಯಲ್ಲಿ ನೆಲೆಯೂರಿದ ಸ್ಟಾರ್ ನಟ. ಆದ್ರೆ ಕೆಲವೊಂದು ಸಂದರ್ಭಗಳಲ್ಲಿ ಕೆಲವೊಂದು ವಿಚಾರಗಳು ಎಷ್ಟೇ ದೊಡ್ಡ ವ್ಯಕ್ತಿಯನ್ನಾದ್ರೂ ತುಂಬಾ ಕೆಳಗಡೆ ಇಳಿಸಿಬಿಡುತ್ತದೆ. ಹೌದು ದರ್ಶನ್ ಅವ್ರು ಮಾಧ್ಯಮದವರ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರೆ ಅನ್ನೋ ಆಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಹೌದು ದರ್ಶನ್ ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್ ಆಗುತ್ತಿದ್ದಂತೆ ಮಾಧ್ಯಮದವರು ದರ್ಶನ್ ಅವರನ್ನು ಅಘೋಷಿತ ಬ್ಯಾನ್ ಮಾಡಿದ್ದರು. ದರ್ಶನ್ ಅವರ ಯಾವುದೇ ಸುದ್ದಿಯನ್ನು ಪ್ರಸಾರ ಮಾಡದಂತೆ ನಿರ್ಧಾರ ಮಾಡಿ ಅದರಂತೆ ನಡೆದುಕೊಂಡಿದ್ವು. ದರ್ಶನ್ ಅವ್ರು ಕೂಡ ಇದರ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಅಭಿಮಾನಿಗಳು ಮಾತ್ರ ದರ್ಶನ್ ಅವ್ರ ಸಿನಿಮಾಗಳ ಪ್ರಚಾರ ವನ್ನ ಅವ್ರೆ ಮಾಡಲು ಶುರು ಮಾಡ್ತಾರೆ. ಮಾಧ್ಯದವರು ಇಲ್ಲ ಅಂದ್ರೇನು ನಮ್ಮ ಬಾಸ್ ಸಿನಿಮಾಗಳಿಗೆ ನಾವೇ ಪ್ರಮೋಷನ್ ಮಾಡ್ತೀವಿ ಅಂತ ಮಾಡ್ತಾ ಇದ್ದಾರೆ. ಆದ್ರೆ ಈ ಮಧ್ಯೆ ದರ್ಶನ್ ಅವ್ರು ಮಾಧ್ಯಮದವರಿಗೆ ಕ್ಷಮೆ ಕೇಳಿದ್ದಾರೆ ಅನ್ನೋ ಸುದ್ದಿ ವೈರಲ್ ಆಗ್ತಿದೆ.
ಪತ್ರದಲ್ಲಿ ಏನು ಬರೆಯಲಾಗಿದೆ?
Darshan apology latter to media: ಹೌದು ಇದೀಗ ದರ್ಶನ್ ಅವರು ಬರೆದಿದ್ದಾರೆ ಎನ್ನಲಾದ ಪತ್ರ ಸುದ್ಧಿ ಮಾಧ್ಯಮಗಳ ಕಛೇರಿಗೆ ತಲುಪಿದೆ ಅಂತ ಹೇಳಲಾಗುತ್ತಿದ್ದೂ, ದರ್ಶನ್ ಬರೆದಿದ್ದಾರೆ ಎನ್ನಲಾದ ಅವ್ರ ಸಹಿ ಇರುವ ಪ್ರೆಸ್ ನೋಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗ್ತಿದೆ. ಇದನ್ನ ನೋಡಿದ ದಾಸನ ಅಭಿಮಾನಿಗಳು ಮಾತ್ರ ಸಿಟ್ಟಿಗೆದಿದ್ದಾರೆ. ಅಷ್ಟಕ್ಕೂ ಆ ಪಾತ್ರದಲ್ಲಿ ಏನಿದೆ ಅಂದ್ರೆ,
ಎಲ್ಲಾ ಮಾಧ್ಯಮ ಮಿತ್ರರಿಗೂ ನಮಸ್ಕಾರ..,
75 ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಕೆಲವು ವ್ಯಕ್ತಿಗಳು ಮತ್ತು ಕೆಲವು ಹೆಸರುಗಳು ಮಾತ್ರ ಚರಿತ್ರೆಯಲ್ಲಿ ಉಳಿದಿರುತ್ತವೆ. ಆ ಸಾಲಿನಲ್ಲಿ ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ, ದಿನೇಶ್ ಇವರ ಸಮಕಾಲೀನ ದಿಗ್ಗಜರುಗಳನ್ನು ಕರ್ನಾಟಕದ ಜನತೆ ಮೆಚ್ಚಿಕೊಂಡು ಮೆರೆಸಿದರು. ಒಪ್ಪುವ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರೋತ್ಸಾಹಿಸಿರುತ್ತೀರಿ. ಈ ಸಾಲಿನಲ್ಲಿ ಇದ್ದಂತಹ ಕನ್ನಡ ಚಿತ್ರರಂಗ ಮರೆಯಲಾಗದಂತಹ ನಟ ತೂಗುದೀಪ ಶ್ರೀನಿವಾಸ್ ರವರ ಕುಟುಂಬ ದಿಂದ ಬಂದಂತಹ ಸಣ್ಣ ಕುಡಿ ನಾನು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ನನ್ನನ್ನು ಆಶೀರ್ವದಿಸಿ ಪ್ರೋತ್ಸಾಹಿಸಿ ಹಲವಾರು ಬಾರಿ ನಾನು
ಮಾಡಿರುವ ಪಾತ್ರಗಳ ಬಗ್ಗೆ ವಿಶ್ಲೇಷಣೆ ಮಾಡಿ, ನನ್ನ ಪಾತ್ರದಲ್ಲಿರುವ ತಪ್ಪುಗಳನ್ನು ತಿದ್ದಿ ಹೇಳಿರುವಿರಿ. ನಾನು ಸಹ ಮುಂದಿನ ದಿನಗಳಲ್ಲಿ ಮಾಡಿರುವಂತ ಚಿತ್ರಗಳಲ್ಲಿ ನನ್ನ ಪಾತ್ರಗಳಲ್ಲಿ ಬರುವ ತಪ್ಪುಗಳ ಬಗ್ಗೆ ಎಚ್ಚೆತ್ತುಕೊಂಡು ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿರುವೆನು. ಅದೇ ರೀತಿಯಲ್ಲಿ ನಿಜ ಜೀವನದಲ್ಲಿ ಸಹ ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯ ದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ – ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ. ಜೀವನವೆಂಬುದು ಬಹಳ ಅಮೂಲ್ಯ ಹಾಗೂ ತುಂಬಾ ಚಿಕ್ಕದ್ದು, ಈ ಚಿಕ್ಕ ಸಮಯದಲ್ಲಿ ನಗು ನಗುತಾ ಬಾಳೋಣ. ನನ್ನ ಈ ಭಾವನೆಯನ್ನು ನನ್ನ ಎಲ್ಲಾ ಮಿತ್ರರು ಹಾಗೂ ಅಭಿಮಾನಿಗಳು ಅರ್ಥ ಮಾಡಿಕೊಂಡು ಗೌರವಿಸಬೇಕು.
ಇಂತಿ ನಿಮ್ಮ ದಾಸ
ದರ್ಶನ್ ತೂಗುದೀಪ. ಈ ರೀತಿಯ ಪ್ರೆಶ್ ನೋಟ್ ಒಂದು ಅದುವೇ ದರ್ಶನ್ ಸಹಿ ಮಾಡಿರುವ ಈ ಪತ್ರ ಎಲ್ಲ ಕಡೆ ಓಡಾಡುತ್ತಿದೆ.
ಇದನ್ನು ಓದಿ: ಕ್ರಾಂತಿ ಸಿನಿಮಾ ಪ್ರಚಾರ ಮಾಡಿ ಕೆಲಸ ಕಳೆದುಕೊಂಡಿದ್ದ ದರ್ಶನ್ ಅಭಿಮಾನಿ! ಇದೀಗ ವಿದೇಶದಲ್ಲಿ ಕಾಟೇರ ಪ್ರಚಾರ
ಫೇಕ್ ನ್ಯೂಸ್ ಅಂತ ಅಭಿಮಾನಿಗಳು ರೊಚ್ಚಿಗೆಳ್ತಿರೋದು ಯಾಕೆ?
ಈ ಪತ್ರವಿರುವ ಪೋಸ್ಟ್ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಸಿಟ್ಟಿಗೆದಿದ್ದಾರೆ. ಕೆಲವರು ನೀವು ಕ್ಷಮೆ ಕೇಳಬಾರದಿತ್ತು ಅಂತ ಹೇಳ್ತಿದ್ದರೆ, ಇನ್ನು ಕೆಲವ್ರು ಈ ಸುದ್ದಿ ಸುಳ್ಳು, ಫೇಕ್ ಸುದ್ದಿನಾ ಯಾಕ್ ವೈರಲ್ ಮಾಡ್ತಿದ್ದೀರಾ ಅಂತ ಬಾಯಿಗೆ ಬಂದಾಗೆ ಬೈಯುತ್ತಿದ್ದಾರೆ. ಆದ್ರೆ ಇದರ ಬಗ್ಗೆ ದರ್ಶನ್ ಅವ್ರು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹೀಗಾಗಿ ಅಭಿಮಾನಿಗಳು ಇದು ಸುಳ್ಳು ಸುದ್ದಿ ಅಂತ ಹೇಳ್ತಿದ್ದಾರೆ. ಇತ್ತ ಕಡೆ ಮಾಧ್ಯಮ ದವರು ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಇದು ಅಸಲಿನ ನಕಲಿನ ಅಂತ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ಇನ್ನು ಇಷ್ಟು ದಿನ ಯಾವುದಕ್ಕೂ ತಲೆಕೆಡಿಸಿಕೊಳ್ಳದ ದರ್ಶನ್ ತಮ್ಮ ಮುಂದಿನ ಚಿತ್ರದ ಪ್ರಚಾರಕ್ಕೆ ಹೀಗೆ ಮಾಡ್ತಿದ್ದಾರೆ ಅಂತ ಕೆಲವರು ಟೀಕೆ ಮಾಡ್ತಿದ್ದಾರೆ. ಇನ್ನು ಕೆಲವರು ಬಾಸ್ ಚಿತ್ರಕ್ಕೆ ಯಾರ ಪ್ರಚಾರನು ಬೇಕಿಲ್ಲ.. ನಮ್ ಬಾಸ್ ಚಿತ್ರಗಳು ಪ್ರಚಾರ ಇಲ್ಲ ಅಂದ್ರು ನಮ್ಮ ಬಾಸ್ ಬಾಕ್ಸ್ ಅಫೀಸ್ ಸುಲ್ತಾನನೇ ಅಂತ ಹೇಳ್ತಿದ್ದಾರೆ. ಒಟ್ಟಿನಲ್ಲಿ ನಟ ದರ್ಶನ್ ಅಥವಾ ಮಾಧ್ಯಮದವರು ಮಾತನಾಡಿದಾಗಲೇ ಸತ್ಯಾಸತ್ಯತೆ ಹೊರಬೇಳೋದು.
ಇದನ್ನು ಓದಿ: ಕಿರುತೆರೆ ಧಾರಾವಾಹಿ ಗಳಿಂದ ದೂರಾಗಿದ್ದ ನಟಿ ಅಭಿನಯ ಈಗ ಮತ್ತೆ ಕಂಬ್ಯಾಕ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram