ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಹಲವಾರು ಇಲಾಖೆಗಳಲ್ಲಿ ಹುದ್ದೆಗಳು ಲಭ್ಯವಿದೆ. ಬ್ಯಾಂಕ್ ನಲ್ಲಿ ಕೆಲಸ ಮಾಡುವ ಇಷ್ಟ ಪಡುವವರಿಗೆ ಈಗ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬರೋಬ್ಬರಿ 3,000 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಹುದ್ದೆ ಲಭ್ಯವಿದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ನಿಯಮಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ತಿಳಿಯಿರಿ.
ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ನಿಯಮಗಳು ಹೀಗಿವೆ:- ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರುವರಿ 21-2024 ರಿಂದ ಮಾರ್ಚ್ 6-2024 ರ ವರೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 1-04-1996 ರಿಂದ 31.03-2024 ರ ಒಳಗೆ ಜನಿಸಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಇಲಾಖೆಯ ನಿಯಮದಂತೆ SC ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಸಡಿಲಿಕೆ ಇದೆ. ಅಭ್ಯರ್ಥಿಗಳು ಮಾರ್ಚ್ 31 2020 ರ ನಂತರ ಪದವಿ ಮುಗಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ :-
ಇಲಾಖೆಯ ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ ಭೇಟಿನೀಡಿ ನಂತರ ನೋಂದಣಿ ಮಾಡಿಕೊಳ್ಳಬೇಕು. ನಿಮ್ಮ ಹೆಸರು ವಿಳಾಸ ವಯಸ್ಸು ಆಧಾರ್ ಸಂಖ್ಯೆ ಮತ್ತು ನಿಮ್ಮ ವಿದ್ಯಾರ್ಹತೆ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ನಂತರ ನಿಮ್ಮ ಎಸೆಸೆಲ್ಸಿ, ಪಿಯುಸಿ, ಮತ್ತು ಡಿಗ್ರೀ ಪ್ರಮಾಣ ಪತ್ರವನ್ನು ಸ್ಕ್ಯಾನ್ ಮಾಡಿ ಅಪ್ಲಿಕೇಶನ್ ತುಂಬಬೇಕು. ಅರ್ಜಿ ಸಲ್ಲಿಸಲು ಅಂಗವಿಕಲ ಅಭ್ಯರ್ಥಿಗಳು 400 ರೂಪಾಯಿ ಶುಲ್ಕವನ್ನು ತುಂಬಬೇಕು. ಮಹಿಳಾ ಅಭ್ಯರ್ಥಿಗಳು 600 ರೂಪಾಯಿ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳು 800 ರೂಪಾಯಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕದ ಜೊತೆಗೆ GST ಮೊತ್ತವನ್ನು ತುಂಬಬೇಕಿದೆ.
ನೇಮಕಾತಿ ಪ್ರಕ್ರಿಯೆ ಹೇಗೆ?: ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸುತ್ತಾರೆ. ಪರೀಕ್ಷೆಯಲ್ಲಿ ಒಟ್ಟು 5 ಭಾಗಗಳು ಇವೆ.
- quantitative general english, resonaing aptitude and computer knowledge,
- basics retail liblility products
- basics retail asset products
- basic Investment products
- basic insurance products
ಹಾಗೂ ಇದರ ಜೊತೆಗೆ ಲೋಕಲ್ ಲಾಂಗ್ವೇಜ್ ಪ್ರೂಫ್ ನೀಡಬೇಕು. ಉದಾಹರಣೆಗೆ ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಬೇಕು ಎಂದರೆ ಎಸೆಸೆಲ್ಸಿ, ಪಿಯುಸಿ ಅಥವಾ ಡಿಗ್ರೀ ಯಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಆಯ್ಕೆ ಮಾಡಿಕೊಂಡಿರಬೇಕು. ಹೀಗೆ ಉಳಿದ ರಾಜ್ಯಗಳಿಗೆ ಸಹ ಇದೆ ನಿಯಮ ಅನ್ವಯ ಆಗುತ್ತದೆ.
ಅಪ್ರೆಂಟಿಸ್ ಶಿಪ್ ಅವಧಿ ಕೇವಲ ಒಂದು ವರ್ಷ. ನೀವು ಒಂದು ವರ್ಷ ಅಪ್ರೆಂಟಿಸ್ ಆಗಿ ಕೆಲಸ ಮಾಡಿದ ನಂತರ ನಿಮಗೆ ಸೆಂಟರ್ಲ್ ಬ್ಯಾಂಕ್ ಅಫ್ ಇಂಡಿಯಾ ಸರ್ಟಿಫಿಕೇಟ್ ನೀಡುತ್ತದೆ. ಈ ಸರ್ಟಿಫಿಕೇಟ್ ನಿಮಗೆ ಮುಂದೆ SBI ಯಾವುದೇ ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ ಮಾಡಿದರೆ ಅಪ್ರೆಂಟಿಸ್ ಶಿಪ್ ಮುಗಿಸಿದ ಅಭ್ಯರ್ಥಿಗಳಿಗೆ ಕೆಲವು ಪರ್ಸೆಂಟ್ ಮೀಸಲಾತಿ ಇರುತ್ತದೆ. ಅಪ್ರೆಂಟಿಸ್ ಶಿಪ್ ಗೆ ಜಾಯಿನ್ ಅದ ನಂತರ ನಿಮಗೆ ಯಾವುದೇ ಸಂಬಳ ಸಿಗುವುದಿಲ್ಲ. ಸಂಬಳದ ಬದಲು ನಿಮಗೆ stipend ಸಿಗುತ್ತದೆ. ಪ್ರತಿ ತಿಂಗಳು 15,000 stipend ನೀಡುತ್ತಾರೆ.
ಇದನ್ನೂ ಓದಿ: ಪಿ.ಎಂ ವಿಶ್ವಕರ್ಮ ಯೋಜನೆಯಲ್ಲಿ ಯಾವುದೇ ದಾಖಲೆ ಇಲ್ಲದೆ 3 ಲಕ್ಷ ಸಾಲ ಸಿಗುತ್ತದೆ
ಇದನ್ನೂ ಓದಿ: fixed deposit ಗೆ 9% ಬಡ್ಡಿದರ ನೀಡುವ ಬ್ಯಾಂಕ್ ಗಳು ಯಾವುದು?