ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಹಲವು ವಿದ್ಯಾರ್ಥಿ ಸ್ಕಾಲರ್ಶಿಪ್ ಗಳನ್ನ ನೀಡಲಾಗುತ್ತದೆ. ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರಕಾರ ದ ಜೊತೆ ಹಲವು ಖಾಸಗಿ ಸಂಸ್ಥೆಗಳು ಸಹ ಸ್ಕಾಲರ್ಶಿಪ್ ನೀಡುತ್ತದೆ. ಕರ್ನಾಟಕ ಸರ್ಕಾರವು 2023-24ನೇ ಸಾಲಿನ ಮುಖ್ಯಮಂತ್ರಿ ರೈತ ವಿದ್ಯಾನಿಧಿ(Raita Vidya Nidhi Scholarship) ಮತ್ತು ಭೂರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿಯ ಬಗ್ಗೆ ಮಾರ್ಗಸೂಚಿ ನೀಡಿದೆ.
ರೈತ ನಿಧಿ ಅರ್ಜಿ ಸಲ್ಲಿಸಲು ವಿಧಿಸಿರುವ ಷರತ್ತು ಏನೇನು?
- ಸಾಮಾನ್ಯ ವರ್ಗದ ಪೋಷಕರ ಒಟ್ಟು ವಾರ್ಷಿಕ ಆದಾಯ 2.5 ಲಕ್ಷ ಮೀರಿರಬಾರದು.
- ಫೆಬ್ರುವರಿ 29 ರ ಒಳಗೆ ವೆಬ್ಸೈಟ್ ಗೆ ಆದಾಯ ಪ್ರಮಾಣ ಪತ್ರವನ್ನು ನೀಡಬೇಕು.
- 2023-24 ನೇ ಸಾಲಿನಲ್ಲಿ ಸರ್ಕಾರದ ಬೇರೆ ಬೇರೆ ಇಲಾಖೆಗಳಿಂದ ಈಗಾಗಲೇ ವಿದ್ಯಾರ್ಥಿ ವೇತನ ಪಡೆದಿರುವ ವಿದ್ಯಾರ್ಥಿಗಳು ಈ ಯೋಜನೆ ಅರ್ಜಿ ಸಲ್ಲಿಸುವಂತಿಲ್ಲ.
- ಅರ್ಜಿ ಸಲ್ಲಿಸಲು ಕೇವಲ ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇದೆ. ಅರ್ಜಿ ಸಲ್ಲಿಸುವಾಗ ವಿಳಾಸ ದಾಖಲೆಯನ್ನು ನೀಡಬೇಕು.
- ರೈತ ಕುಟುಂಬದ ಮಕ್ಕಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ.
- ಹತ್ತನೇ ತರಗತಿ ಬಳಿಕ ಉನ್ನತ ಶಿಕ್ಷಣ ಪಡೆಯುವ ರೈತ ಮಕ್ಕಳು ಅರ್ಜಿ ಸಲ್ಲಿಸಬಹುದು.
ರೈತ ವಿದ್ಯಾರ್ಥಿ ವೇತನಕ್ಕೆ ನೀಡಬೇಕಾದ ದಾಖಲೆಗಳು :-
- ಆಧಾರ್ ಕಾರ್ಡ್
- ವಿಳಾಸದ ಮಾಹಿತಿ ಹೊಂದಿರುವ ಯಾವುದೇ ಗುರುತಿನ ಚೀಟಿ ( ಪಡಿತರ ಚೀಟಿ, ಎಲೆಕ್ಷನ್ ಕಾರ್ಡ್)
- ಪಾಸ್ಪೋರ್ಟ್ ಅಳತೆಯ ಫೋಟೋ
- ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
- ಬ್ಯಾಂಕ್ ಪಾಸ್ ಬುಕ್ ನ ಜೆರಾಕ್ಸ್
- ಪಾಲಕರ ರೈತ ಗುರುತಿನ ಚೀಟಿ
- 10ನೇ ತರಗತಿ ಅಂಕಪಟ್ಟಿಯ ಜೆರಾಕ್ಸ್
- ಆದಾಯ ಪ್ರಮಾಣ ಪತ್ರ
- * ಉನ್ನತ ವ್ಯಾಸಂಗ ಮಾಡುತ್ತಿರುವ ದಾಖಲೆ
ಯಾವ ಯಾವ ಕೋರ್ಸ್ ಗಳಿಗೆ ಏಷ್ಟು ಶಿಷ್ಯವೇತನ ಸಿಗುತ್ತದೆ?
ಪಿಯುಸಿ ಅಥವಾ ಐಟಿಐ ವಿದ್ಯಾರ್ಥಿಗಳಿಗೆ ಹುಡುಗರಿಗೆ ₹2500/- ಹೆಣ್ಣು ಮಕ್ಕಳಿಗೆ ₹3000/- ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
BA, BSC, BCOM, MBBS, BE, ಮತ್ತು ಇತರ ವೃತ್ತಿಪರ ಕೋರ್ಸ್ಗಳಲ್ಲಿ ಓದುತ್ತಿರುವವರಿಗೆ ಹುಡುಗರಿಗೆ ₹5000/- ಹಾಗೂ ಹೆಣ್ಣು ಮಕ್ಕಳಿಗೆ ₹5500/- ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಕಾನೂನು, ಅರೆವೈದ್ಯಕೀಯ, ನರ್ಸಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹುಡುಗರಿಗೆ ₹7500/- ಹಾಗೂ ಹೆಣ್ಣು ಮಕ್ಕಳಿಗೆ ₹8000/- ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಸ್ನಾತಕೋತ್ತರ ಪದವಿ
ಹುಡುಗರಿಗೆ ₹10000/- ಹಾಗೂ ಹೆಣ್ಣು ಮಕ್ಕಳಿಗೆ ₹11000/- ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಿ
ಈ ಯೋಜನೆಯ ಲಾಭಗಳು ಏನು?
- ಆರ್ಥಿಕ ಅಡೆತಡೆಗಳ ನಡುವೆಯೂ ಅವರು ತಮ್ಮ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯ.
- ಈ ಯೋಜನೆಯು ರೈತರ ಮಕ್ಕಳಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುತ್ತದೆ.
- ಈ ಯೋಜನೆಯಿಂದ ರಾಜ್ಯದ ಸಾಕ್ಷರತೆಯ ಪ್ರಮಾಣ ಹೆಚ್ಚಾಗುತ್ತದೆ.
- ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದರಿಂದ ಯಾವುದೇ ರೀತಿಯ ಮಧ್ಯವರ್ತಿ ಗಳ ಕಾಟ ಇರುವುದಲ್ಲ.
- ಮಧ್ಯಮ ವರ್ಗದ ರೈತ ವರ್ಗದ ಜನರ ಆರ್ಥಿಕ ಹೊರೆಯನ್ನು ಇಳಿಸುತ್ತದೆ.
- ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಲು ಇದು ಬಹಳ ಅನುಕೂಲ ಆಗಲಿದೆ.
- ಶಿಕ್ಷಣದ ಮೂಲಕ ರೈತ ಕುಟುಂಬಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗುತ್ತದೆ.
ಇದನ್ನೂ ಓದಿ: ಭಾಗ್ಯಲಕ್ಷ್ಮಿ ಯೋಜನೆಯ ಹಣವನ್ನು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಠೇವಣಿ ಮಾಡಲಾಗುತ್ತದೆ.