ಸಾಮಾನ್ಯವಾಗಿ ಯಾವುದೇ ಸರಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಲಿಖಿತ ಪರೀಕ್ಷೆಯನ್ನು ಅಟೆಂಡ್ ಆಗಬೇಕು. ಅದಕ್ಕೆ ಹಲವರು ತಿಂಗಳುಗಳ ಕಾಲ ಪರಿಶ್ರಮ ಪಡಬೇಕು. ಏಷ್ಟು ಪರಿಶ್ರಮ ಪಟ್ಟರು ಸರ್ಕಾರಿ ಹುದ್ದೆಗಳ ಪರೀಕ್ಷೆ ಪಾಸ್ ಆಗಿ ಹೆದ್ದೆಗೆ ನೇಮಕಾತಿ ಆಗುವುದು ಕಷ್ಟ. ಹಾಗಿದ್ದಾಗ ಈಗ ಲಿಖಿತ ಪರಿಕ್ಷೆ ಇಲ್ಲದೆಯೇ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಾರೆ ಎಂದರೆ ಸರ್ಕಾರಿ ಹುದ್ದೆ ಸಿಗಬೇಕು ಎಂಬ ಕನಸು ಕಂಡ ಅಭ್ಯರ್ಥಿಗಳಿಗೆ ನಿಜವಾಗಿಯೂ ಇದು ಒಂದು ಸಿಹಿ ಸುದ್ದಿ. ಹಾಗಾದರೆ ಈ ಹುದ್ದೆಯ ಬಗ್ಗೆ ಪೂರ್ಣ ಮಾಹಿತಿ ಪಡೆಯೋಣ.
ಯಾವ ಗ್ರಾಮ ಪಂಚಾಯಿತಿಯಲ್ಲಿ ನೇರ ನೇಮಕಾತಿ ನಡೆಯುತ್ತಿದೆ?: ಹಾಸನ ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ 12 ಲೈಬ್ರರಿ ಸೂಪರ್ವೈಸರ್ ಹುದ್ದೆಗೆ ನೇರ ನೇಮಕಾತಿ ನಡೆಯುತ್ತಿದೆ. ಹಾಸನದ ಸುತ್ತ ಮುತ್ತಲಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹುದ್ದೆಯ ವಿವರ:-
ಲೈಬ್ರೆರಿ ಸುಪ್ರವೈಸರ್ ಹುದ್ದೆ ಮಾಡಲು ಇಚ್ಛೆ ಪಡುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಇಲಾಖೆಯು ಅಧಿಸೂಚನೆಯಲ್ಲಿ ತಿಳಿಸಿದೆ. ಅಧಿಸೂಚನೆಯಲ್ಲಿ ಹೇಳಿರುವಂತೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವ ವಿಶ್ವ ವಿದ್ಯಾಲಯ ಅಥವಾ ಮಂಡಳಿಯಿಂದ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಲೈಬ್ರೆರಿ ಸೈನ್ಸ್ನಲ್ಲಿ ಸರ್ಟಿಫಿಕೇಶನ್ ಕೋರ್ಸ್ ಮುಗಿಸಿರಬೇಕು ಹಾಗೂ ಸಾಮಾನ್ಯ ವರ್ಗದ ಅರ್ಜಿದಾರರ ವಯಸ್ಸು 18 ರಿಂದ 35 ವರ್ಷ. ವಯೋಮಿತಿ ಸಡಿಲಿಕೆ ನಿಯಮದ ಪ್ರಕಾರ, ಪ್ರವರ್ಗ-2ಎ, 2ಬಿ, 3ಎ,3ಬಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ SC ,ST, ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ಹಾಗೂ PWD ಅಥವಾ ವಿಧವೆ ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಸಡಿಲಿಕೆ ಇದೆ. ಹುದ್ದೆಗೆ ನೇಮಿಸಿಕೊಂಡ ಅಭ್ಯರ್ಥಿಗೆ ಇಲಾಖೆಯು ತಿಂಗಳಿಗೆ 15,196.72 ರೂಪಾಯಿ ಸಂಬಳವನ್ನು ನೀಡಲಿದೆ.
ಹುದ್ದೆಗೆ ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಅನುಸಾರವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಪ್ಲಿಕೇಶನ್ ಫೀಸ್ ವಿವರ :- ಅಭ್ಯರ್ಥಿಗಳು ಆನ್ಲೈನ್ ಮೂಲಕ ಫೀಸ್ ಕಟ್ಟಬೇಕು. PWD ಅಭರ್ಥಿಯದರೆ 100 ರೂಪಾಯಿ, SC, ST, ಪ್ರವರ್ಗ-I, ಮಾಜಿ ಸೈನಿಕರದರೆ 200 ರೂಪಾಯಿ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಾದರೆ ರೂ.300 ರೂಪಾಯಿ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದವರಿಗೆ 500 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು :- ಆಧಾರ್ ಕಾರ್ಡ್, ಪಿಯುಸಿ ಅಂಕಪಟ್ಟಿ, ಲೈಬ್ರೆರಿ ಸೈನ್ಸ್ ಸರ್ಟಿಫಿಕೇಟ್ ,ಜಾತಿ ಪ್ರಮಾಣ ಪತ್ರ, ಹಾಗೂ ಭಾವಚಿತ್ರ ಹಾಗೂ ಯಾವುದೇ ಕ್ಷೇತದಲ್ಲಿ ಅನುಭವ ಹೊಂದಿದ್ದರೆ ಅದರ ಬಗ್ಗೆ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ನೀಡಬೇಕು.
ಇದನ್ನೂ ಓದಿ: ಪಿಯುಸಿ, ನೀಟ್ ಮತ್ತು ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ..
ಅರ್ಜಿ ಸಲ್ಲಿಸುವ ವಿಧಾನ :-
ಹಾಸನ ಜಿಲ್ಲೆಯ ಅಧಿಕೃತ ವೆಬ್ಸೈಟ್ www.hassan.nic.in ಗೆ ಹೋಗಿ “ಜಿಲ್ಲೆ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ ಮಾಡುವ ಬಗ್ಗೆ ನೇಮಕಾತಿ ಅರ್ಜಿ “ಯ ಮೇಲೆ ಕ್ಲಿಕ್ ಮಾಡಿ. ನಂತರ ಅರ್ಜಿ ನಮೂನೆಯಲ್ಲಿ ಹೆಸರು , ಹುದ್ದೆಯ ಹೆಸರು, ತಾಲೂಕು ಪಂಚಾಯಿತಿ ಹೆಸರು ಅರ್ಜಿ ಸಲ್ಲಿಸುವ ತಾಲೂಕು ಪಂಚಾಯಿತಿಯ ಹೆಸರು, ಎಲ್ಲವನ್ನೂ ಭರ್ತಿ ಮಾಡಿ , ನಂತರ ನಿಮ್ಮ ವಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿ. ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಓದಿ ಭರ್ತಿ ಮಾಡಿ ಕೊನೆಯದಾಗಿ Captcha ಅಂಕೆಯನ್ನು ನಮೂದಿಸಿ ಅರ್ಜಿ ಸಲ್ಲಿಸಿ.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ