ಟ್ರೂ ಕಾಲರ್ ಅಪ್ಲಿಕೇಶನ್ ನಮ್ಮ ಮೊಬೈಲ್ ನಂಬರ್ ಗೆ Unkown ನಂಬರ್ ನಿಂದ ಫೋನ್ ಅಥವ ಮೆಸೇಜ್ ಬಂದರೆ ಪತ್ತೆ ಹಚ್ಚುವ ಅಪ್ಲಿಕೇಶನ್ ಆಗಿದ್ದು. ಇದರಿಂದ ನಾವು Fake Number ನಿಂದ ಫೋನ್ ಅಥವಾ ಮೆಸೇಜ್ ಬಂದರೆ ನಾವು ಈ ಆ್ಯಪ್ ಮೂಲಕ ಪತ್ತೆ ಹಚ್ಚಬಹುದು. ಈಗ fake call ಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇದು ಅದಕ್ಕೆ ಬಹಳ use ಆಗಿದೆ. ಯಾವುದೇ ಅಪ್ಲಿಕೇಶನ್ ಅಪ್ಡೇಟ್ ಆಗುವ ಸಮಯದಲ್ಲಿ ಒಂದಿಷ್ಟು ಹೊಸ ಫೀಚರ್‌ಗಳನ್ನು ನೀಡುವುದು ಸಾಮಾನ್ಯವಾಗಿದೆ. ಹಾಗೆಯೇ ಈಗ ಟ್ರೂ ಕಾಲರ್ ಹೊಸದೊಂದು ಫೀಚರ್ ಪರಿವರ್ತಿಸುತ್ತದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ.
ಹೊಸ ಫೀಚರ್ ಏನು?: ಭಾರತದಲ್ಲಿ ಟ್ರೂ ಕಾಲರ್ ತನ್ನ ಪ್ರಾಬಲ್ಯವನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಕಾಲ್ ರೆಕಾರ್ಡಿಂಗ್ ಮತ್ತು AI ಚಾಲಿತ ಪ್ರತಿಲೇಖನ ಫೀಚರ್‌ಗಳನ್ನು ಪರಿಚಯ ಮಾಡುತ್ತಿದೆ. ಈ ಫೀಚರ್‌ಗಳಿಂದ ಬಳಕೆದಾರರಿಗೆ ಹಲವು ರೀತಿಯ ಪ್ರಯೋಜನಗಳಾಗಲಿವೆ.
ಹೊಸದಾಗಿ AI ಚಾಲಿತ ಟ್ರಾನ್ಸ್ಕ್ರಿಪ್ಯನ್ ಫೀಚರ್ ನೀಡುತ್ತಿದೆ. ಈ ಫೀಚರ್ ಬಳಕೆದಾರರಿಗೆ ಇನ್ಕಮಿಂಗ್ ಕಾಲ್ ಮತ್ತು ಔಟ್ ಗೋಯಿಂಗ್ ಕಾಲ್ ಗಳು ರೆಕಾರ್ಡ್ ಮಾಡಲು AI ಸಹಾಯವನ್ನು ಪಡೆದು ಮಾಹಿತಿಯನ್ನು ನೀಡುತ್ತದೆ. ಈ ಫೀಚರ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಡಿವೈಸ್‌ಗಳಲ್ಲಿಯೂ ಲಭ್ಯವಿದೆ. ಆದರೆ ಈ ಹೊಸ ಫೀಚರ್ ಗಳನ್ನು ಉಚಿತವಾಗಿ ಪಡೆಯಲು ಸಾಧ್ಯವಿಲ್ಲ. ಈ ಹೊಸ ಫೀಚರ್ ಬಳಸುವವರು ಪ್ರೀಮಿಯಂ ಪಡೆಯಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಹೊಸ ಫೀಚರ್ ನ ಉಪಯೋಗಾಗಳೇನು?
- ಈ ಹೊಸ ಫೀಚರ್ ನಿಂದ ನೀವು ಸುಲಭವಾಗಿ ಕರೆಯನ್ನು ರೆಕಾರ್ಡ್ ಮಾಡುವುದರಿಂದ ನಿಮಗೆ ಬೇರೆ ಅಪ್ಲಿಕೇಶನ್ ಗಳನ್ನು ಬಳಸುವ ಅಗತ್ಯವಿಲ್ಲ.
- ರೆಕಾರ್ಡ್ ಮಾಡಿದ ಕರೆಗಳನ್ನು ನಿಮಗೆ ಅಕ್ಷರ ರೂಪದಲ್ಲಿ ನಿಮಗೆ ಸಿಗುತ್ತದೆ. ಇದರಿಂದ ನಿಮಗೆ ಯಾರಾದರೂ ಥ್ರೆಡ್ call ಬಂದರೇ ನೀವು ಪೊಲೀಸ್ compliant ಕೊಡಲು ಬಹಳ ಅನುಕೂಲ ಆಗುತ್ತದೆ.
- ಇದು ಕಾನೂನು ಬದ್ಧವಾಗಿ ಇರುವುದರಿಂದ ನಿಮಗೆ ಅಪ್ಲಿಕೇಶನ್ ಬಳಸಲು ಯಾವುದೇ ಭಯ ಪಡುವ ಅಗತ್ಯ ಇಲ್ಲ.
ಈ ಹೊಸ ಫೀಚರ್ ಬಳಸುವ ವಿಧಾನ ಹೇಗೆ?
ಟ್ರೂಕಾಲರ್ ಬಳಕೆದಾರರು ಸರ್ಚ್ ಪೇಜ್‌ಗೆ ಹೋಗಿ ಕಾಲ್ ರೆಕಾರ್ಡ್ ಮಾಡಲು ಮೊದಲು ರೆಕಾರ್ಡ್ ಬಟನ್ ಓಪನ್ ಮಾಡಬೇಕಾಗುತ್ತದೆ, ಇದರಿಂದ ಟ್ರೂ ಕಾಲರ್ ರೆಕಾರ್ಡಿಂಗ್ ಲೈನ್‌ಗೆ ಕರೆ ಮಾಡುತ್ತದೆ. ರೆಕಾರ್ಡಿಂಗ್ ಲೈನ್‌ಗೆ ಕರೆ ಸಂಪರ್ಕಿಸಿದ ನಂತರ, ನೀವು ರೆಕಾರ್ಡ್ ಮಾಡಲು ಬಯಸುವ ವ್ಯಕ್ತಿಗೆ ಕಾಲ್ ಮಾಡಬೇಕು. ಎರಡೂ ಕರೆಗಳನ್ನು ವಿಲೀನಗೊಳಿಸುವ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಕಾಲ್ ರೆಕಾರ್ಡ್ ಆರಂಭ ಆಗುತ್ತದೆ. ಕಾಲ್ ರೆಕಾರ್ಡಿಂಗ್ ಆಗುವ ಸಮಯದಲ್ಲಿ ಟ್ರೂಕಾಲರ್ ಪುಶ್ ಅಧಿಸೂಚನೆಯನ್ನು ಕಳುಹಿಸುತ್ತದೆ. ಕಾಲ್ ರೆಕಾರ್ಡ್ ಮಾಡಿದ ಎಲ್ಲವೂ ನಿಮ್ಮ ಫೋನ್ ನ ಸ್ಟೋರ್ ಆಗುತ್ತದೆ. ಅದರ ಜೊತೆಗೆ ಬಳಕೆದಾರರು iCloud ನಲ್ಲಿ ಎಲ್ಲಾ call record ಗಳನ್ನು ಬ್ಯಾಕಪ್ ಮಾಡಬಹುದು. ಆಂಡ್ರಾಯ್ಡ್ ನಲ್ಲಿ ಈ ಅಪ್ಲಿಕೇಶನ್ ಬಳಕೆ ಮಾಡುವುದು ಬಹಳ ಸುಲಭವಾಗಿದೆ. ಈ ರೆಕಾರ್ಡ್ ನೀವು ಖಾಸಗಿಯಾಗಿ ಇರಿಸಬಹುದಾಗಿದೆ. ಅನಗತ್ಯ ಕರೆಗಳ ರೆಕಾರ್ಡ್ ನೀವು ಯಾವಾಗ ಬೇಕಾದರೂ ಡಿಲಿಟ್ ಮಾಡುವ ಸೌಲಭ್ಯ ಹೊಂದಿದೆ.
ಇದನ್ನೂ ಓದಿ: 2500 ಬಿಎಂಟಿಸಿ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಪ್ರಕಟ
ಇದನ್ನೂ ಓದಿ: PPF ಸ್ಕೀಮ್: ಮಾಸಿಕ ರೂ 5,000 ಠೇವಣಿ, ರೂ 42 ಲಕ್ಷ ಲಾಭ! ಸ್ಕೀಮ್ ನ ಪೂರ್ತಿ ವಿವರಗಳು