ರೈತರರಿಗೆ ಸಹಾಯ ಮಾಡುವ ಉದ್ದೇಶದಿಂದ ರೈತರಿಗೆ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಕಿಸಾನ್ ಸಮ್ಮನ್ ಯೋಜನೆಯಲ್ಲಿ ಪ್ರತಿ ಕಂತಿನಲ್ಲಿ ಈಗಾಗಲೇ ರೈತರ ಖಾತೆಗೆ ನೇರವಾಗಿ 2,000 ಹಣವನ್ನು ಕೇಂದ್ರ ನೀಡುತ್ತಿದೆ. ಅದರ ಜೊತೆಗೆ ಬೆಳೆ ವಿಮೆ, ರಿಯಾಯಿತಿ ದರದಲ್ಲಿ ಬಿತ್ತನೆಯ ಬೀಜಗಳು, ಸಬ್ಸಿಡಿ ದರದಲ್ಲಿ ಯಂತ್ರಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅದರ ಜೊತೆಗೆ ಈಗ ಮುಂದಿನ ಮುಂಗಾರು ಬೆಳೆಗೆ ರಸಗೊಬ್ಬರವನ್ನು ಕೇಂದ್ರ ಸರ್ಕಾರ ರಿಯಾಯತಿ ದರದಲ್ಲಿ ರೈತರಿಗೆ ನೀಡಲು ಕೇಂದ್ರ ಚಿಂತನೆ ನಡೆಸಿದೆ.
ಯಾವುದೇ ಬೆಳೆ ಚೆನ್ನಾಗಿ ಫಸಲು ಬರಲು ಸರಿಯಾದ ಪ್ರಮಾಣದ ನೀರು , ಗೊಬ್ಬರ, ಮಣ್ಣು ಬಹಳ ಅಗತ್ಯ. ಮಲೆನಾಡಿನ ಕಡೆ ನೀರು ಹೇರಳವಾಗಿ ಇದ್ದರೂ ಒಳ್ಳೆಯ ರಸಗೊಬ್ಬರ ಹಾಕದೆ ಇದ್ದರೆ ಬೆಳೆ ಅಂದುಕೊಂಡ ಪ್ರಮಾಣದಲ್ಲಿ ಸಿಗುವುದಿಲ್ಲ. ಒಂದು ಚೀಲ ರಸಗೊಬ್ಬರಕ್ಕೆ ಹೆಚ್ಚಿನ ಮೊತ್ತ ಕೊಟ್ಟು ಖರೀದಿ ಮಾಡುವ ಶಕ್ತಿ ಎಲ್ಲರಲ್ಲೂ ಇರುವುದಲ್ಲ ಅಂತವರಿಗೆ ಕೇಂದ್ರ ಸರ್ಕಾರದ ಈ ಚಿಂತನೆ ಬಹಳ ಉಪಯೋಗ ಆಗಲಿದೆ.
ಕೇಂದ್ರ ಸರಕಾರ ಬಿಡುಗಡೆ ಮಾಡಿದ ಹಣದ ಮೊತ್ತ ಏಷ್ಟು ?
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದ್ದು, ಮುಂದಿನ ಮುಂಗಾರು ಬೆಳೆಯ ಬಿತ್ತೆನೆಗೆ ಸಹಾಯ ನೀಡುವ ನಿಟ್ಟಿನಲ್ಲಿ 24,420 ಕೋಟಿ ರೂಪಾಯಿ ರಸಗೊಬ್ಬರ ಸಹಾಯಧನ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ. ಇದರ ಪ್ರಕಾರ ಪ್ರತಿ ಕೆಜಿಗೆ 47.02 ರೂಪಾಯಿ ಸಾರಜನಕಕ್ಕೆ, 28.72 ರೂಪಾಯಿ ಪಾಸ್ಪೇಟಿಕ್‌ಗೆ, 2.38 ರೂಪಾಯಿ ಪೊಟ್ಯಾಶಿಯಂಗೆ ಮತ್ತು 1.89 ರೂಪಾಯಿ ಸಲ್ಫರ್‌ಗೆ ಸಹಾಯಧನ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಏಪ್ರಿಲ್ ತಿಂಗಳಿನಿಂದ ಸೆಪ್ಚೆಂಬರ್ ತಿಂಗಳ ವರೆಗೆ ಮುಂಗಾರು ಬೆಳೆಯನ್ನು ಬೆಳೆಯಲಾಗುತ್ತದೆ. ಈ ಸಮಯದಲ್ಲಿ ಫಾಸ್ಪೇಟಿಕ್ ಹಾಗೂ ಪೊಟ್ಯಾಶಿಯಂ ರಸಗೊಬ್ಬರಗಳಿಗೆ ಸಹಾಯಧನ ನೀಡುವ ಬಗ್ಗೆ ಒಪ್ಪಿಗೆ ದೊರೆತಿದೆ. ಈ ಹಿಂದೆ ರಸಗೊಬ್ಬರ ಇಲಾಖೆಯು 2024-25ನೇ ಸಾಲಿನಲ್ಲಿ ಪೋಷಕಾಂಶ ಆಧಾರಿತ ರಸಗೊಬ್ಬರಕ್ಕೆ ಸಹಾಯ ನೀಡುವ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಇಲಾಖೆಯ ಮನವಿಗೆ ಸಂಪುಟ ಸಭೆ ಅನುಮೋದನೆ ಸಿಕ್ಕಿದಂತೆ ಆಗಿದೆ.
ಸರಕಾರದ ರೈತರಿಗೆ ಸಹಾಯಧನ ಘೋಷಣೆ ಮಾಡಿದ ನಂತರ ಪ್ರತಿ ಬ್ಯಾಗ್ ಡಿಎಪಿ ಗೆ 1,350 ರೂಪಾಯಿ ಹಾಗೂ ಮ್ಯೂರಿಯೇಟ್ ಪಾಸ್ಪೇಟ್ ಗೆ 1,670 ರೂಪಾಯಿ ಹಾಗೂ ಎನ್‌ಪಿಪಿಗೆ 1,470 ರೂಪಯಿ ಸಿಗುತ್ತದೆ.
ಇದನ್ನೂ ಓದಿ: ಪಿಎಂ ಸೂರ್ಯಘರ್ ಯೋಜನೆಯಲ್ಲಿ ಸಿಗಲಿದೆ ಉಚಿತ ವಿದ್ಯುತ್; ಸಬ್ಸಿಡಿ ಎಷ್ಟು ಸಿಗಲಿದೆ? ಅರ್ಜಿ ಸಲ್ಲಿಸುವುದು ಹೇಗೆ?
ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ನೀಡುವುದರಿಂದ ಹಲವು ಉಪಯೋಗಗಳು ಇವೆ. :-
- ಕಡಿಮೆ ದರದಲ್ಲಿ ರಸಗೊಬ್ಬರ ಸಿಗುವುದರಿಂದ ರೈತರಿಗೆ ಬಂಡವಾಳದ ಖರ್ಚು ಕಡಿಮೆ ಆಗುತ್ತದೆ.
- ರಸಗೊಬ್ಬರ ಹಾಕದೆ ಬೆಳೆಯುವ ಬೆಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯಗಳ ಉತ್ಪಾದನೆ ಆಗುತ್ತದೆ. ಕೃಷಿ ಉತ್ಪಾದನೆ ಭಾರತದ ಆರ್ಥಿಕತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ನೀಡುವುದರಿಂದ ಕೃಷಿ ಉತ್ಪಾದನೆ ಮತ್ತು ರಾಷ್ಟ್ರೀಯ ಆರ್ಥಿಕತೆ ಇನ್ನಷ್ಟು ಹೆಚ್ಚಾಗಲಿದೆ.
- ರಸಗೊಬ್ಬರ ಬಳಸುವ ರೈತರ ಸಂಖ್ಯೆ ಹೆಚ್ಚಾಗಿ ರಸಗೊಬ್ಬರ ಕಂಪನಿಗಳಿಗೆ ಹೆಚ್ಚಿನ ಆದಾಯ ದೊರೆಯುತ್ತದೆ.
- ಇಂದಿನ ಯುವಕರಿಗೆ ಇಂತಹ ಯೋಜನೆಗಳು ರೈತಾಪಿ ಬದುಕಿನ ಕಡೆಗೆ ಒಲವು ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ದೈನಂದಿನ ಬಳಕೆಗೆ ಸೂಟ್ ಆಗುವಂತಹ ಒಂದೇ ಒಂದು ಸ್ಕೂಟರ್ ಎಂದರೆ ಅದು Ather Rizta Electric Scooter, ಅಬ್ಬಾ ಏನು ವೈಶಿಷ್ಟ್ಯತೆ!