ಪ್ರತಿ ತಿಂಗಳು ಸಂಬಳದ ಜೊತೆಗೆ ಹೆಚ್ಚಿನ ಆದಾಯವು ಬರುವುದಾದರೆ ಯಾರು ತಾನೇ ಇನ್ವೆಸ್ಟ್ಮೆಂಟ್ ಮಾಡಲು ಬಯಸುವುದಿಲ್ಲ. ಪ್ರತಿ ತಿಂಗಳ ಸಂಬಳ ಮನೆ ಖರ್ಚು, ಪೆಟ್ರೋಲ್, ಮಕ್ಕಳ ಬೇಡಿಕೆ, ಹೊಸ ವಸ್ತುಗಳ ಖರೀದಿ, LIC ಸ್ಕೀಮ್ ನ ಇನ್ವೆಸ್ಟ್ಮೆಂಟ್ ಹೀಗೆ ತಿಂಗಳ ಕೊನೆಯಲ್ಲಿ ಹಣವೂ ಬ್ಯಾಂಕ್ ಅಕೌಂಟ್ ನಲ್ಲಿ ಆಗಲಿ ಜೇಬಿನಲ್ಲಿ ಆಗಲಿ ಇರುವುದಿಲ್ಲ. ಅದಕ್ಕೆ ಪ್ರತಿ ತಿಂಗಳು ನೀವು ಎಕ್ಸ್ಟ್ರಾ ಹಣ ಪಡೆಯಲು ಪೋಸ್ಟ್ ನಲ್ಲಿ ಹೂಡಿಕೆಯ ಆಪ್ಷನ್ ಗಳು ಇವೆ. ಹಾಗಾದರೆ ಅವುಗಳ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿಯೋಣ.
ಅಂಚೆ ಕಛೇರಿಯು ಹಲವಾರು ಉಳಿತಾಯ ಯೋಜನೆಗಳನ್ನು ಒದಗಿಸಿದರೂ, ಮಾಸಿಕ ಆದಾಯ ಯೋಜನೆಯು ಹೂಡಿಕೆದಾರರಿಗೆ ತಿಂಗಳು ಹಣ ಸಿಗುವಂತೆ ಮಾಡಲು ಕೆಲವು ಯೋಜನೆಗಳು ಇವೆ. ಈ ಯೋಜನೆಗಳಲ್ಲಿ, ಒಬ್ಬ ವ್ಯಕ್ತಿಯು ಏಕಾಂಗಿಯಾಗಿ ಅಥವಾ ಜೀವನ ಸಂಗಾತಿಯ ಜಂಟಿ ಖಾತೆಯನ್ನು ತೆರೆಯಬಹುದು. ಪೂರ್ಣ ಹಣವನ್ನು ಠೇವಣಿ ಮಾಡಿದರೆ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಪಡೆಯುತ್ತೀರಿ.
ಪ್ರತಿ ತಿಂಗಳು ಆದಾಯ ಪಡೆಯುವುದು ಹೇಗೆ?
1)ಪ್ರತಿ ತಿಂಗಳು ಆದಾಯ ಯೋಜನೆ :- ಈ ಯೋಜನೆಯಲ್ಲಿ ನೀವು ಒಬ್ಬರೇ ಖಾತೆಯನ್ನು ಓಪನ್ ಮಾಡಬಹುದು. ಈ ಯೋಜನೆಯಲ್ಲಿ ನೀವು ಗರಿಷ್ಠ 9 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಬಹುದು. ನೀವು ಈ ಯೋಜನೆಯಲ್ಲಿ ಜಂಟಿ ಖಾತೆ ತೆರೆದರೆ ನೀವು ಗರಿಷ್ಠ 15 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಕನಿಷ್ಠ 5 ವರ್ಷಗಳವರೆಗೆ ನಿಯಮಿತವಾಗಿ ಹಣ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ನೀವು ಪ್ರತಿ ತಿಂಗಳು ಬಡ್ಡಿಯಿಂದ ಆದಾಯವನ್ನು ಗಳಿಸಲು ಸಾಧ್ಯ. ನೀವು ಜಂಟಿ ಖಾತೆಯನ್ನು ತೆರೆದು 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನೀವು ಪ್ರತಿ ತಿಂಗಳು 9,250 ರೂಪಾಯಿ ಬಡ್ಡಿದರ ಸಿಗುತ್ತದೆ. ಒಬ್ಬರೇ ಖಾತೆ ತೆರೆದು 9 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 5500 ರೂಪಾಯಿ ಬಡ್ಡಿ ನಿಮಗೆ ಸಿಗುತ್ತದೆ.
2) 7.4% ಬಡ್ಡಿದರ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ :- ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ನಿಮಗೆ ನೀವು ಮಾಡಿದ ಹೂಡಿಕೆಗೆ 7.4% ಬಡ್ಡಿದರ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ವಯಸ್ಸಿನ ಮಿತಿ ಇಲ್ಲ. ನೀವು ಚಿಕ್ಕ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ನೀವು ಜಂಟಿ ಖಾತೆ ತೆರುವುದಾದರೆ ಜಂಟಿ ಖಾತೆಗೆ ಮೂರು ಜನ ಸೇರಬಹುದು. ಈ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಖಾತೆ ತೆರಬೇಕು ಎಂದರೆ ನೀವು ಮನೆಯ ವಿಳಾಸ, ಫೋಟೋ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮತ್ತು ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಅರ್ಜಿ ಫಾರ್ಮ್ ಜೊತೆಗೆ ಪೋಸ್ಟ್ ಆಫೀಸ್ ಗೆ ತೆರಳಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸಮಯಕ್ಕೆ ಮುಂಚಿತವಾಗಿ ಹಣವನ್ನು ಹಿಂಪಡೆಯುವುದರೆ ಏಷ್ಟು ಹಣ ನಿಮಗೆ ಸಿಗುತ್ತದೆ?
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ 5 ವರ್ಷಗಳಿಗೆ ಹೂಡಿಕೆ ಮಾಡಲು ಬಯಸಿದ್ದರೆ ನೀವು ಯಾವುದೇ ಅಗತ್ಯ ಕಾರಣಗಳಿಗೆ ಸಮಯ್ದ ಒಳಗೆ ಹಣವನ್ನು ಹಿಂಪಡೆಯಲು ಬಯಸಿದರೆ ನೀವು ಖಾತೆಯನ್ನು ತೆರೆದು ಒಂದು ವರ್ಷದ ಬಳಿಕ ನೀವು ನಿಮ್ಮ ಖಾತೆಯ ಹಣವನ್ನು ಪಡೆಯಬಹುದು. ಆದರೆ ನೀವು ಹಣ ಹಿಂಪಡೆಯಿವಾಗ ಶುಲ್ಕವನ್ನು ಪಾವತಿಸಬೇಕು. ನೀವು ಮೂರು ವರ್ಷಕ್ಕೆ ಅಥವಾ ಮೂರು ವರ್ಷದ ಒಳಗೆ ಹಣವನ್ನು ಹಿಂಪಡೆಯಲು ನೀವು ಇನ್ವೆಸ್ಟ್ ಮಾಡಿದ ಮೊತ್ತದ ಬಡ್ಡಿಯನ್ನು ಶೇಕಡಾ 2 ರಷ್ಟು ಕಡಿತಗೊಳಿಸಿ ಉಳಿದ ಮೊತ್ತವನ್ನು ನಿಮಗೆ ನೀಡಲಾಗುತ್ತದೆ. ಮೂರರಿಂದ ಐದು ವರ್ಷ ಪೂರ್ಣವಾಗುವ ಮೊದಲು ಹಣವನ್ನು ಹಿಂಪಡೆಯಲು ಬಯಸಿದರೆ ಹಣದ ಮೊತ್ತಕ್ಕೆ ಒಂದು ಶೇಕಡಾ ಶುಲ್ಕವನ್ನು ನೀಡಬೇಕು. 5 ವರ್ಷಗಳ ಬಳಿಕ ಹಣ ತೆಗೆದರೆ ನಿಮಗೆ ಪೂರ್ಣ ಪ್ರಮಾಣದ ಹಣ ಮತ್ತು ಬಡ್ಡಿಯ ಮೊತ್ತವು ಸಿಗುತ್ತದೆ. ಮತ್ತೆ ಹಣವನ್ನು ಹೂಡಿಕೆ ಮಾಡಲು ಬಯಸಿದರೆ ನೀವು ಅದೇ ಹಣವನ್ನು ಮತ್ತೆ 5 ವರ್ಷಗಳ ವರೆಗೆ ಹೂಡಿಕೆ ಮಾಡಬಹುದು.
ಇದನ್ನೂ ಓದಿ: 108 MP ಕ್ಯಾಮೆರಾದೊಂದಿಗೆ ಎಲ್ಲರಿಗೂ ಅನುಕೂಲವಾಗುವ ಬಜೆಟ್ ನಲ್ಲಿ Tecno Pova 6 Pro ಸ್ಮಾರ್ಟ್ ಫೋನ್
ಇದನ್ನೂ ಓದಿ: ಕರ್ನಾಟಕ ಲೋಕಸೇವಾ ಆಯೋಗ ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ 97 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ