ಯುಪಿಐ Transaction ಅನ್ನುವುದು ಪಟ್ಟಣದಿಂದ ಹಿಡಿದು ಸಣ್ಣ ಸಣ್ಣ ಹಳ್ಳಿಯಲ್ಲಿ ಸಹ ಸಾಮಾನ್ಯವಾಗಿದೆ. ತರಕಾರಿ ಹಣ್ಣು, ಬಟ್ಟೆ, ದಿನಸಿ ವಸ್ತುಗಳು ಹೀಗೆ ಏನೇ ಕೊಂಡರು ಸಹ ನಾವು ಪಾವತಿ ಮಾಡುವುದು ಯುಪಿಐ ಮೂಲಕವೇ. ಒಂದು ರೂಪಾಯಿ ಚಿಲ್ಲರೆಗಾಗಿ ಯಾರು ಇಷ್ಟೆಲ್ಲಾ ಪ್ರಯತ್ನ ಮಾಡುತ್ತಾರೆ ಗೂಗಲ್ ಪೇ, ಫೋನ್ ಪೇ ಅಂತಹ ಯುಪಿಐ ಅಪ್ಲಿಕೇಶನ್ ಗಳಲ್ಲಿ ರಗಳೆ ಇಲ್ಲದೆಯೇ ನಿಮಿಷದ ಒಳಗೆ ಪೇ ಮಾಡಬಹುದು ಎಂದು cash ರಹಿತ ವ್ಯವಹಾರವನ್ನು ಬಹಳ ವ್ಯಾಪಕವಾಗಿ ಬಳಸುತ್ತಾರೆ. ಆದರೆ ಈಗ ಬಳಕೆದಾರರಿಗೆ ದೊಡ್ಡ ಶಾಕಿಂಗ್ news ನೀಡುತ್ತಿದೆ ಕೇಂದ್ರ. ಇದರಿಂದ ನೀವು ಇನ್ನೂ ಮುಂದೆ ಯುಪಿಐ ಮೂಲಕ ಪೇಮೆಂಟ್ ಮಾಡುವಾಗ ನೀವು ಶುಲ್ಕವನ್ನು ಸೇರಿಸಿ ಪಾವತಿ ಮಾಡಬೇಕಾಗಬಹುದು.
ಶುಲ್ಕ ರಹಿತ ಯುಪಿಐ ಇರುವುದರಿದಲೇ ಬೇಡಿಕೆ ಜಾಸ್ತಿ :- ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆಯೇ ನಾವು ತೆಗೆದುಕೊಂಡ ವಸ್ತುವಿನ ನಿಖರ ಬೆಲೆಯನ್ನು ನೋಡಿ ಅಷ್ಟೇ ಪಾವತಿ ಮಾಡುವ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಜನ ಯುಪಿಐ ಬಳಕೆ ಮಾಡುತ್ತಾ ಇದ್ದರೆ ಅದೇ ಪ್ರತಿ trasaction ಗೆ ಶುಲ್ಕ ವಿಧಿಸಿದರೆ ಯುಪಿಐ ಬಳಕೆದಾರರ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣಬಹುದು.
ಸಮೀಕ್ಷೆಯ ವರದಿ ಏನು ಹೇಳುತ್ತದೆ:- 364ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 34,000ಕ್ಕೂ ಹೆಚ್ಚಿನ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಇದೆ. ಸಮೀಕ್ಷೆಯಲ್ಲಿ 67% ಪುರುಷರು ಮತ್ತು 33% ಮಹಿಳೆಯರು ಭಾಗವಹಿಸಿದ್ದರು. ಯುಪಿಐ ಮೂಲಕ ಸುಮಾರು 50% UPI ಬಳಕೆದಾರರು ತಿಂಗಳಿಗೆ 10 ಕ್ಕೂ ಹೆಚ್ಚು ಬಾರಿ ಯುಪಿಐ ಬಳಕೆ ಮಾಡುವುದಾಗಿ ತಿಳಿಸಿದ್ದಾರೆ. ಸಮೀಕ್ಷೆಯ ಪ್ರಕಾರ ಅಚ್ಚರಿ ಎಂಬಂತೆ ಕೇವಲ 23% UPI ಬಳಕೆದಾರರು transaction ಗೆ ಶುಲ್ಕವನ್ನು ಪಾವತಿಸಲು ಒಪ್ಪಿದ್ದಾರೆ ಎಂಬುದು ಬಹಿರಂಗವಾಗಿದೆ. ಉಳಿದ 77 % ಜನರು ಶುಲ್ಕ ಪಾವತಿ ಮಾಡಿ ಪೇಮೆಂಟ್ ಮಾಡಲು ತಯಾರಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕೆಲವು ವಹಿವಾಟಿಗೆ ಶುಲ್ಕ ವಿಧಿಸಲಾಗುತ್ತಿದೆ.
ಈಗಾಗಲೇ ಕೆಲವು ಅಪ್ಲಿಕೇಶನ್ ಬಳಸಿ ಪೇಮೆಂಟ್ ಮಾಡುವಾಗ ಶುಲ್ಕ ವಿಧಿಸುವುದು ಅನಿವಾರ್ಯವಾಗಿದೆ. ಉದಾಹರಣೆಗೆ IRCTC application ನಲ್ಲಿ ಟ್ರೈನ್ ticket book ಮಾಡುವಾಗ ticket ದರದ ಜೊತೆಗೆ 20 ರೂಪಯಿ ಅನುಕೂಲತೆ ಶುಲ್ಕವನ್ನು ಗ್ರಾಹಕರು ಪಾವತಿಸಬೇಕು.
ಈ ಹಿಂದೆ ಅಂದರೆ 2022 ಆಗಸ್ಟ್ ನಲ್ಲಿ, RBI ವಿವಿಧ ಮೊತ್ತದ ಬ್ಯಾಂಡ್ಗಳ ಪಾವತಿಗೆ UPI ಬಳಸಿದರೆ ಶುಲ್ಕವನ್ನು ವಿಧಿಸುವ ಬಗ್ಗೆ ಪ್ರಸ್ತಾಪಿಸುವ ಚರ್ಚೆಯ ಬಗ್ಗೆ ಪತ್ರವನ್ನು ಬಿಡುಗಡೆ ಮಾಡಿದ ಬಗ್ಗೆ ಸುದ್ದಿಯಾಗಿತ್ತು. ಆದರೆ ಇದರ ಬಳಿಕ ಯುಪಿಐ transaction ಗಳ ಮೇಲೆ ಯಾವುದೇ ರೀತಿಯ ಶುಲ್ಕ ವಿಧಿಸುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂಬುದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿತ್ತು.
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) transaction ಗರಿಷ್ಠ ಪ್ರಮಾಣವು ಫೆಬ್ರವರಿಯಲ್ಲಿ 1,800 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಕಳೆದ ವಾರ ಹಣಕಾಸು ತಂತ್ರಜ್ಞಾನ (ಫಿನ್ಟೆಕ್) ಕಂಪನಿಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಯುಪಿಐ ವಹಿವಾಟುಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಅನುಷ್ಠಾನದ ವಿಷಯವನ್ನು ಪ್ರಸ್ತಾಪಿಸಿವೆ ಎಂಬ ಬಗ್ಗೆ ಮಾಹಿತಿ ಇದೆ. UPI ಪಾವತಿಗಳಿಗೆ MDR ಫಿನ್ಟೆಕ್ ಯೋಜನೆಯ ಅನುಷ್ಠಾನಕ್ಕೆ ಕಂಪನಿಗಳಿಂದ ದೀರ್ಘಕಾಲದ ಬೇಡಿಕೆಯಾಗಿದ್ದು,. MDR ಎಂದರೆ ವಿವಿಧ ಪಾವತಿ ಸಾಧನಗಳಿಗೆ ಪಾವತಿ ಪ್ರಕ್ರಿಯೆ ಸೇವೆಗಳಿಗಾಗಿಯೇ ವ್ಯಾಪಾರಿಗಳಿಗೆ ವಿಧಿಸುವ ಶುಲ್ಕದ ಮೊತ್ತವಾಗಿದೆ.
ಇದನ್ನೂ ಓದಿ: TVS ಜುಪಿಟರ್ ಹೊಸ EMI ಯೋಜನೆಯೊಂದಿಗೆ, ಅದೂ ಕೂಡ ನಿಮ್ಮ ಕೈಗೆಟುಕುವ ಬೆಲೆಯಲ್ಲಿ
ಇದನ್ನೂ ಓದಿ: ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿದ ಕೇಂದ್ರ ಸರ್ಕಾರ