ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ “ಕೂಸಿನ ಮನೆ” ಯೋಜನೆ ಒಂದಾಗಿದ್ದು, ನರೇಗಾ ಮಕ್ಕಳ ಕಾರ್ಮಿಕ ಮಹಿಳೆಯರಿಗೆ ರಾಜ್ಯಾದ್ಯಂತ 3787 ಕೂಸಿನ ಮನೆಗೆ ಸರ್ಕಾರವು ಚಾಲನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೂಸಿನ ಮನೆ ನಿರ್ಮಾಣ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಇನ್ನೂ ಕೂಸಿನ ಮನೆ ಯೋಜನೆಯು ಸರಿಯಾಗಿ ಅನುಷ್ಠಾನಕ್ಕೆ ಬರುವ ನಿಟ್ಟಿನಲ್ಲಿ 14.09.2023 ರಲ್ಲಿ ರಾಜ್ಯ ಜಿಲ್ಲೆ ತಾಲೂಕುಗಳಲ್ಲಿ ಪ್ರತ್ಯೇಕ ಸಮಿತಿಯನ್ನು ರಚಿಸಿ ಕೆಲವು ಮೇಲ್ವಿಚಾರಣಾ ಕಾರ್ಯವನ್ನು ಮಾಡಲು ಆದೇಶವವನ್ನು ರಾಜ್ಯಸರ್ಕಾರ ಹೊರಡಿಸಿತ್ತು. ಆದ್ರ ಪ್ರಕಾರ ರಾಜ್ಯ ಜಿಲ್ಲೆ ತಾಲೂಕು ಸಮಿತಿಗಳ ಮುಖ್ಯ ಕಾರ್ಯಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕೂಸಿನ ಮನೆ ರಾಜ್ಯ ಸಮಿತಿಯ ಮೇಲ್ವಿಚಾರಣೆ ಕಾರ್ಯಗಳು :-
- ಯೋಜನೆಯ ಅನುಷ್ಠಾನಕ್ಕೆ ನೀತಿ ರೂಪಿಸಿ, ಸರ್ಕಾರಿ ಆದೇಶ, ಮಾರ್ಗಸೂಚಿಗಳನ್ನು ಹೊರಡಿಸಲು ನಿರ್ದೇಶನವನ್ನು ನೀಡುವ ಕಾರ್ಯವನ್ನು ರಾಜ್ಯ ಸಮಿತಿಯು ಮಾಡಬೇಕು.
- ಇಲಾಖೆಯಿಂದ ಶಿಶುಪಾಲನಾ ಕೇಂದ್ರಗಳ ಕಾರ್ಯಾಚರಣೆಗೆ ಅಗತ್ಯ ಸಂಪನ್ಮೂಲಗಳು ಮತ್ತು ಬೆಂಬಲವನ್ನು ಪಡೆಯುವ ಸಲುವಾಗಿ ಕ್ರಮಗಳನ್ನು ಕೈಗೊಳ್ಳಬೇಕು.
- ರಾಜ್ಯ ಮಟ್ಟದಲ್ಲಿ ಪ್ರಗತಿ ಪರಿಶೀಲನೆ ಮಾಡಲು ಅನುವಾಗುವಂತೆ ಪಂಚತಂತ್ರ 2.0 ತಂತ್ರಾಂಶದ ಅಭಿವೃದ್ಧಿ ಪಡಿಸಲು ಆಗತ್ಯ ನಿರ್ದೇಶನಗಳನ್ನು ನೀಡಬೇಕಾಗುತ್ತದೆ.
ಕೂಸಿನ ಮನೆ ಯೋಜನೆ ಜಿಲ್ಲಾ ಮೇಲ್ವಿಚಾರಣಾ ಸಮಿತಿಯ ಕಾರ್ಯಗಳು:
- ಶಿಶುಪಾಲನಾ ಕೇಂದ್ರಕ್ಕೆ ಉತ್ತಮ ಗುಣಮಟ್ಟದ ಆಹಾರ ಪೂರೈಕೆ ಖಚಿತಪಡಿಸಿಕೊಳ್ಳುವುದು.
- ಮಕ್ಕಳಿಗೆ ಸಮತೋಲಿತ ಪೌಷ್ಟಿಕಾಂಶ ಒದಗಿಸುವುದು..
- ಆಹಾರ ಪಟ್ಟಿ (ಮೆನು) ನಿರ್ಧರಿಸುವಾಗ ಪೌಷ್ಟಿಕ ಆಹಾರಗಳನ್ನು ಸಮಪ್ರಮಾಣದಲ್ಲಿ ನೀಡುವುದು.
- ಶಿಶುಪಾಲನಾ ಕೇಂದ್ರಗಳಿಗೆ ಸಂಬಂಧಿಸಿದ ಕೆಲಸ ಮಾಡುತ್ತಿರುವ ಸಂಘಟನೆಗಳ ಜೊತೆ ಸಮನ್ವಯ ಸಾಧಿಸುವುದು.
- ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸುವುದು.
- ಶಿಶುಪಾಲನಾ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ಆಹಾರ ಧಾನ್ಯಗಳ ಪೂರೈಕೆ ಆಗುತ್ತಿದೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡುವುದು.
ಇದನ್ನೂ ಓದಿ: ಕರ್ನಾಟಕ ವಿಧಾನ ಪರಿಷತ್ ನಲ್ಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ತಾಲೂಕು ಮಟ್ಟದ ಕಾರ್ಯಕಾರಿ ಸಮಿತಿಯ ಕಾರ್ಯಗಳು :-
‘ಕೂಸಿನ ಮನೆ’ ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲು ಅರ್ಹವಿರುವ ಸರ್ಕಾರಿ ಕಟ್ಟಡ ಗುರುತಿಸಿ ಕುಡಿಯುವ ನೀರಿನ ವ್ಯವಸ್ಥೆ , ಶೌಚಾಲಯ ವಿದ್ಯುತ್ ಸಂಪರ್ಕಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಶಿಶುಪಾಲನಾ ಕೇಂದ್ರಗಳ ಕುರಿತು ಸಾರ್ವಜನಿಕರ ಹಾಗೂ ಪೋಷಕರ ಕುಂದುಕೊರತೆ ಪರಿಹಾರವನ್ನು ತಿಳಿಸಲು, ಪಾರದರ್ಶಕತೆ ಮತ್ತು ಜವಾಬ್ದಾರಿಯುತ ನಿರ್ವಹಣೆ ಖಚಿತಪಡಿಸಿಕೊಳ್ಳಲು ಸಲಹಾ ಸೂಚನೆ ಪೆಟ್ಟಿಗೆಯ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಶಿಶುಪಾಲನಾ ಕೇಂದ್ರಗಳಿಗೆ ನಿಗದಿತ ಸಮಯಕ್ಕೆ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳು, ಹಾಲು, ಮೊಟ್ಟೆ, ಸರಬರಾಜು ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಪೌಷ್ಟಿಕಾಂಶದ ಸಲಹೆ ಪಡೆದು ಸಮತೋಲಿತ ಆಹಾರ ಪಟ್ಟಿ ಸಿದ್ಧಮಡಬೇಕು. ತಾಲ್ಲೂಕು ಮಟ್ಟದ ಮಾಸ್ಟರ್ ತರಬೇತುದಾರರನ್ನು ಗುರುತಿಸಿ ಜಿಲ್ಲಾ ಸಮಿತಿಗೆ ಕಳಿಸುವ ವ್ಯವಸ್ಥೆ ಮಾಡಬೇಕು.
ಈ ಯೋಜನೆಯು ರಾಜ್ಯದ ಮುಖ್ಯಮಂತ್ರಿಗಳ ಕನಸಿನ ಯೋಜನೆ ಆಗಿದ್ದು ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಮಾತ್ರ ಈ ಯೋಜನೆಯ ಸೌಲಭ್ಯ ಸಿಗುತ್ತದೆ. 3 ವರ್ಷದ ಒಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎಂದು ಈ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಮನೆಯಲ್ಲಿ ಮಕ್ಕಳ್ಳನ್ನು ಬಿಟ್ಟು ಕೂಲಿಗೆ ಹೋಗುವ ತಾಯಂದಿರ ಕಷ್ಟಕ್ಕೆ ಈ ಯೋಜನೆ ಪರಿಹಾರವಾಗಿ ಸಿಗಲಿದೆ.
ಇದನ್ನೂ ಓದಿ: ಹೊಸ ವರ್ಷದಲ್ಲಿ ಬದಲಾದ ಕ್ರೆಡಿಟ್ ಕಾರ್ಡ್ ನ ನಿಯಮಗಳು, ಯಾವೆಲ್ಲ ಕಾರ್ಡುಗಳಲ್ಲಿ ಬದಲಾವಣೆ ಇರಬಹುದು?
ಕೂಸಿನ ಮನೆ ಚಾಲನೆಯ ಉಪಯೋಗಗಳು:
- ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಮಾನ್ಯತೆ ನೀಡುವ ನಿಟ್ಟಿನಲ್ಲಿ ಆರಂಭಗೊಳ್ಳುವ ಈ ಯೋಜನೆಯಲ್ಲಿ ಮಕ್ಕಳನ್ನು ಕೇಂದ್ರದಲ್ಲಿ ಬಿಟ್ಟಿ ಮಹಿಳೆಯರು ಧೈರ್ಯದಿಂದ ಕೆಲಸಕ್ಕೆ ಹೋಗಬಹುದು. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಗಳಿಸಲು ಅವಕಾಶ ಸಿಗುತ್ತದೆ.
- ಮಕ್ಕಳ ಅಭಿವೃದ್ಧಿ ಗೆ ಉತ್ತಮ ಮಾರ್ಗವಾಗಿದ್ದು ಮಕ್ಕಳಿಗೆ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರದಿಂದ ಉತ್ತಮ ದೈಹಿಕ ಬೆಳವಣಿಗೆ ಸಾಧ್ಯ ಆಗುತ್ತದೆ.
- ಒಟ್ಟಾರೆ ಈ ಯೋಜನೆಯಿಂದ ಸಮಾಜದ ಅಭಿವೃದ್ಧಿ ಆಗುತ್ತದೆ. ಏಕೆಂದರೆ ಮಹಿಳಾ ಸಬಲೀಕರಣದಿಂದ ಸಮಾಜದ ಒಟ್ಟಾರೆ ಅಭಿವೃದ್ಧಿ ಸಾಧ್ಯ ಮತ್ತು ಮಕ್ಕಳ ಉತ್ತಮ ಭವಿಷ್ಯದಿಂದ ರಾಷ್ಟ್ರದ ಪ್ರಗತಿಗೆ ಉತ್ತೇಜನ ಸಿಗುತ್ತದೆ.