EPF ಖಾತೆ ಎಂದರೆ ‘ಉದ್ಯೋಗಿಗಳ ಭವಿಷ್ಯ ನಿಧಿ’ ಖಾತೆ ಎಂದರ್ಥ. ಭಾರತ ಸರ್ಕಾರವು ಉದ್ಯೋಗಿಗಳ ಭವಿಷ್ಯದ ಭದ್ರತೆಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ನಿಮ್ಮ ಸಂಬಳದ ಅಲ್ಪ ಮೊತ್ತವು EPF ಖಾತೆಗೆ ನೇರವಾಗಿ ಕಂಪನಿಯು ವರ್ಗಾವಣೆ ಮಾಡುತ್ತದೆ. ಇದು ನಿಮ್ಮ ರಿಟೈರ್ಮೆಂಟ್ ಲೈಫ್ ಗೆ ಉಪಯೋಗ ಆಗಲಿದೆ. ಆದರೆ ರಿಟೈರ್ಮೆಂಟ್ ಆಗುವ ಮೊದಲು ಈ ಖಾತೆಯ ಹಣವನ್ನು ಪಡೆಯಬಹುದು. ಹಾಗೂ ಮುಂಗಡವಾಗಿ EPF ಖಾತೆಯ ಹಣವನ್ನು ಪಡೆಯಬಹುದಾಗಿದೆ. ಹಾಗದರೆ ಮುಂಗಡವಾಗಿ EPF ಖಾತೆಯ ಹಣವನ್ನು ಹೇಗೆ ತೆಗೆಯಬಹುದು ಎಂದು ನೋಡೋಣ.
EPF ಹಣವನ್ನು ಪಡೆಯುವ ಮಾರ್ಗ ಏನು?
ಯಾವುದೇ ತುರ್ತು ಸಮಯದಲ್ಲಿ EPF ಹಣವನ್ನು ಹಿಂಪಡೆಯಬೇಕು ಎಂದಾದರೆ ನೀವು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ನೀವು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುತ್ತಿರಿ ಎಂದಾದರೆ ನೀವು ಫಾರ್ಮ್ 19 ಬಳಸಿ PF ಕ್ಲೈಮ್ ಮಾಡಬೇಕು. ನೀವು ಪೂರ್ಣ ಪಿಎಫ್ ಹಣದ ಅಥವಾ ಒಂದು ನಿರ್ಧಿಷ್ಟ ಮೊತ್ತದ ಪಿಎಫ್ ಹಣವನ್ನು ಪಡೆಯಲು ಅವಕಾಶ ಇದೆ. ಫಾರ್ಮ್ 19 ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು EPFO ಕಚೇರಿಗೆ ಅಥವಾ ನಿಮ್ಮ ಸಂಸ್ಥೆಯ ಅಕೌಂಟ್ ಡಿಪಾರ್ಟ್ಮೆಂಟ್ ಗೆ ಅರ್ಜಿ ಸಲ್ಲಿಸುವ ಬಗ್ಗೆ ಪೂರ್ಣ ಮಾಹಿತಿ ಪಡೆದು ಅರ್ಜಿಯನ್ನು ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನರೇಗಾ ಮಕ್ಕಳ ಕಾರ್ಮಿಕ ಮಹಿಳೆಯರಿಗಾಗಿ ಕೂಸಿನ ಮನೆ ಯೋಜನೆಗೆ ರಾಜ್ಯ ಸರ್ಕಾರವು ಚಾಲನೆ ನೀಡಿದೆ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಹೇಗೆ?
- ಹಂತ 1: EPFO ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಇಲ್ಲಿ ಕ್ಲಿಕ್ ಮಾಡಿ
- ಹಂತ 2: ನಿಮ್ಮ UAN ಸಂಖ್ಯೆ, ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಲಾಗಿನ್ ಮಾಡಿ.
- ಹಂತ 3: ಆನ್ಲೈನ್ ಸೇವೆಗಳು ಟ್ಯಾಬ್ನಲ್ಲಿ, ಕ್ಲೈಮ್ (ಫಾರ್ಮ್-31, 19, 10C ಮತ್ತು 10D) ಕ್ಲಿಕ್ ಮಾಡಿ.
- ಹಂತ 4: UAN ಗೆ ಲಿಂಕ್ ಮಾಡಲಾದ ನಿಮ್ಮ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು
ವೆರಿಫೈ ಕ್ಲಿಕ್ ಮಾಡಿ. - ಹಂತ 5: EPFO ನಿಯಮಗಳನ್ನು ಓದಿ ಮತ್ತು ಒಪ್ಪಿಗೆ ನೀಡಿ.
- ಹಂತ 6: ಕ್ಲೈಮ್ಗಾಗಿ ಅರ್ಜಿ ಸಲ್ಲಿಸಿ ಬಟನ್ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ.
- ಹಂತ 7:ಕೊನೆಯದಾಗಿ ‘ಸಲ್ಲಿಸು’ ಕ್ಲಿಕ್ ಮಾಡಿ.
ಪಿಎಫ್ ಖಾತೆಯ ಹಣವನ್ನು ಹಿಂಪಡೆಯುವ ಮೊದಲು ಕೆಲವು ಮುಖ್ಯ ಅಂಶಗಳ ಬಗ್ಗೆ ಯೋಚಿಸಬೇಕು. ಮೊದಲನೆಯದಾಗಿ PF ಖಾತೆಯಿಂದ ಹಣವನ್ನು ಹಿಂಪಡೆಯುವ ಮೊದಲು ನಿಮ್ಮ ಹಣಕಾಸಿನ ಅಗತ್ಯಗಳನ್ನು ಪರಿಶೀಲನೆ ಮಾಡಬೇಕು. ಈ ಮಾರ್ಗದ ಹೊರತಾಗಿ ಬೇರೆ ಕಡೆಯಿಂದ ಹಣ ಪಡೆಯುವ ಬಗ್ಗೆ ಒಮ್ಮೆ ಚಿಂತನೆ ಮಾಡುವುದು ಉತ್ತಮ ಯಾಕೆಂದರೆ PF ಖಾತೆಯಿಂದ ಹಣವನ್ನು ಪಡೆಯುವುದರಿಂದ ನಿಮ್ಮ ಭವಿಷ್ಯದ ಭದ್ರತೆಯ ಮೇಲೆ ಪರಿಣಾಮ ಬೀರಬಹುದು. ಎರಡನೆಯದು PF ಖಾತೆಯನ್ನು ನಿಷ್ಕ್ರಿಯಗೊಳಿಸುವ ಬದಲು, ಹಣವನ್ನು ಉಳಿಸಲು ಮತ್ತು ಪಿಂಚಣಿ ಪ್ರಯೋಜನಗಳನ್ನು ಪಡೆಯಲು ಖಾತೆಯನ್ನು ಚಾಲ್ತಿಯಲ್ಲಿಡಲು ಪ್ರಯತ್ನಿಸಿ. ಇದರ ಜೊತೆಗೆ ನಿಮ್ಮ ಮುಂದಿನ ಜೀವನಕ್ಕೆ ಬೇರೆ ರೀತಿಯ ಯಾವುದೇ ಸ್ಕೀಮ್ ನ ಅಡಿಯಲ್ಲಿ ನೀವು ಈ ಮೊದಲು ಅಥವಾ ಇನ್ನೂ ಮುಂದೆ ಹಣವನ್ನು ಉಳಿಸುವ ಬಗ್ಗೆ ಚಿಂತನೆ ಮಾಡುವುದು ಬಹಳ ಮುಖ್ಯವಾಗಿದೆ. ಈ ಚಿಂತನೆಯೂ ನಿಮ್ಮ ಭವಿಷ್ಯದ ಹಣಕಾಸಿನ ಸಮಸ್ಯೆಗಳಿಗೆ ನೆರವಾಗಬಹುದು.
ಇದನ್ನೂ ಓದಿ: ಕರ್ನಾಟಕ ವಿಧಾನ ಪರಿಷತ್ ನಲ್ಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.