ಭಾರತದಲ್ಲಿ ಮೊದಲಬಾರಿಗೆ ಸಂಚರಿಸಲಿದೆ ಜಲಮಾರ್ಗದ ಮೆಟ್ರೋ ಟ್ರೈನ್..

Indias First Underwater Metro Tunnel

ಅಭಿವೃದ್ಧಿ ಪಥದಲ್ಲಿ ಭಾರತ ಮುಂದೆ ಸಾಗುತ್ತಿದೆ. ಹೊಸ ಹೊಸ ಆವಿಷ್ಕಾರಗಳು ಭಾರತವನ್ನು ವಿಶ್ವದ ಎದುರು ತಲೆ ಎತ್ತಿ ನಡೆಯುವಂತೆ ಮಾಡುತ್ತಿದೆ. ಅದಕ್ಕೆ ಮುಖ್ಯ ಕಾರಣ ಕೇಂದ್ರ ಸರ್ಕಾರ ಎಂದರೆ ತಪ್ಪಲ್ಲ. ಬುಲೆಟ್ ಟ್ರೈನ್ ಎಂದರೆ ಏನು ಅನ್ನುವುದೇ ಗೊತ್ತಿರದ ನಾವು ಬುಲೆಟ್ ಟ್ರೈನ್ ನಲ್ಲಿ ಓಡಾಡುವ ಸಮಯ ಬರಲಿದೆ. ಈಗಾಗಲೇ ಮೆಟ್ರೋ ಟ್ರೈನ್ ಎಲ್ಲಾ ಮುಖ್ಯ ನಗರಗಳಲ್ಲಿ ಸಂಚಾರ ಮಾಡುತ್ತಿದೆ. ಇನ್ನು ಒಂದೇ ಭಾರತ್ ಟ್ರೈನ್ ಭಾರತದಾದ್ಯಂತ ಓಡಾಡುತ್ತಿದ್ದು ಸಾರ್ವಜನಿಕ ಸಾರಿಗೆ ಮಾರ್ಗಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದೆ. ಅಂತೆಯೇ ಈಗ ಹೊಸದಾಗಿ ಭಾರತದಲ್ಲಿ ಜಲಮಾರ್ಗದ ಮೆಟ್ರೋ ಟ್ರೈನ್ ಓಡಾದಲಿದೆ. ಜಲಮಾರ್ಗದ ಮೆಟ್ರೋ ಟ್ರೈನ್ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಡುಗಡೆ ಗೊಳಿಸಿದ್ದಾರೆ.

WhatsApp Group Join Now
Telegram Group Join Now

ಈ ಟ್ರೈನ್ ಬಗ್ಗೆ ಕೆಲವು ಮಾಹಿತಿಗಳನ್ನು ಈ ಲೇಖನದಲ್ಲಿ ನೋಡೋಣ.

ಭಾರತದಲ್ಲಿ ಮೊದಲ ಬಾರಿಗೆ ನದಿಯಲ್ಲಿ ಸುರಂಗ ಮಾರ್ಗ :- ಕೋಲ್ಕತ್ತಾ ಮೆಟ್ರೋ 2023 ರ ಏಪ್ರಿಲ್‌ನಲ್ಲಿ ಒಂದು ಮಹತ್ವದ ಘಟ್ಟವನ್ನು ದಾಟಿತು. ಹೂಗ್ಲಿ ನದಿಯ ಕೆಳಗೆ ಸುರಂಗ ನಿರ್ಮಾಣ ಭಾರತದಲ್ಲಿ ಮೊದಲ ಬಾರಿಗೆ ಸಾಧ್ಯವಾಯಿತು. ಈ ಯೋಜನೆಯು ಭಾರತೀಯ ಮೆಟ್ರೋ ಕಾರ್ಪೊರೇಷನ್ (BMRCL) ಯಿಂದ ಕೈಗೊಳ್ಳಲಾಯಿತು. ಈ ಸುರಂಗ ಮಾರ್ಗವು ಹೌರಾ ಹಾಗೂ ಕೋಲ್ಕತ್ತಾ ನಡುವೆ ಸಂಪರ್ಕ ಹೊಂದುತ್ತದೆ. 16.6 ಕಿ.ಮೀ ಉದ್ದದ ಸುರಂಗ ಮಾರ್ಗವು 520 ಮೀ. ನದಿ ತಳದಲ್ಲಿ ಇರಲಿದೆ. 33 ಮೀ. ನದಿಯ ತಳದವರೆಗೆ ಸುರಂಗವನ್ನು ನಿರ್ಮಾಣ ಮಾಡಲಾಗಿದೆ. ಹೂಗ್ಲಿ ನದಿಯಲ್ಲಿ ಮೆಟ್ರೋ ರೈಲು 45 ಸೆಕೆಂಡುಗಳ ಕಾಲ ಪ್ರಯಾಣ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲಿಂದ ಎಲ್ಲಿಗೆ ಸಂಚರಿಸಲಿದೆ ಈ ರೈಲು?: ಎಸ್‌ಪ್ಲೇನೇಡ್‌ನಿಂದ ಹೌರಾ ಕ್ರೀಡಾಂಗಣಕ್ಕೆ ರೈಲು ಪ್ರತಿ 12 ನಿಮಿಷಕ್ಕೆ ಒಂದು ರೈಲು ಪ್ರಯಾಣಿಸಲಿದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಆರ್‌ಡಿ ಹಾಗೂ SBI ಆರ್‌ಡಿ ಯಲ್ಲಿ ನಿಮಗೆ ಹೆಚ್ಚಿನ ಬಡ್ಡಿದರ ನೀಡುವ RD ಯೋಜನೆ ಯಾವುದು?

ರೈಲಿನ ವಿಶೇಷತೆಗಳು:-

  • ಭಾರತದ ಮೊದಲ ನದಿ ಅಡಿಯಲ್ಲಿ ಸುರಂಗ: ಈ ಮಾರ್ಗವು 5.8 ಕಿ.ಮೀ ಉದ್ದದ ಸುರಂಗವನ್ನು ಹೊಂದಿದ್ದು. ಹೂಗ್ಲಿ ನದಿಯ ಕೆಳಗೆ ಚಲಿಸಲಿದೆ. ಇದು ಭಾರತದ ಮೊದಲ ನದಿ ಅಡಿಯಲ್ಲಿ ಮೆಟ್ರೋ ರೈಲು ಸುರಂಗ ಎಂಬ ಕೀರ್ತಿಯನ್ನು ಪಡೆಯುತ್ತದೆ.
  • ಪೂರ್ವ-ಪಶ್ಚಿಮ ಸಂಪರ್ಕ: ಈ ಮಾರ್ಗವು ಕೋಲ್ಕತ್ತಾದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸಂಪರ್ಕ ಸಾಧಿಸಲು ಬಹಳ ಅನುಕೂಲ ಆಗುತ್ತದೆ. ಇದು ನಗರದ ಸಾರಿಗೆ ವ್ಯವಸ್ಥೆಯನ್ನು ಉತ್ತಮಗೊಳಿಸಲು ಸಹಾಯಕ.
  • ತ್ವರಿತ ಪ್ರಯಾಣ: ಎರಡು ಪ್ರದೇಶಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.
  • ಆಧುನಿಕ ತಂತ್ರಜ್ಞಾನ: ಈ ರೈಲು ಚಾಲಕವಿಲ್ಲದ ರೈಲುಗಳು, ಪರದೆಯ ಡೋರ್‌ಗಳು, ಮತ್ತು ಸ್ಮಾರ್ಟ್ ಕಾರ್ಡ್ ಟಿಕೆಟಿಂಗ್ ವ್ಯವಸ್ಥೆಯಂತಹ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಸುಜ್ಜಾಜಿತ ರೈಲು ಆಗಿದೆ.
  • ವಿಶೇಷ ವಿನ್ಯಾಸ: ಈ ಮಾರ್ಗದ ನಿಲ್ದಾಣಗಳನ್ನು ಸ್ಥಳೀಯ ಕಲೆ ಮತ್ತು ಸಂಸ್ಕೃತಿಯಿಂದ ಪ್ರೇರಿತವಾದ ವಿಶಿಷ್ಟ ವಿನ್ಯಾಸಗಳನ್ನು ಹೊಂದಿದೆ.
  • ಪರಿಸರ ಸ್ನೇಹಿ: ಈ ಮಾರ್ಗವು ಪರಿಸರ ಸ್ನೇಹಿ ವಿದ್ಯುತ್ ರೈಲುಗಳನ್ನು ಬಳಸುತ್ತದೆ.
  • ಸಂಪರ್ಕ ಸಾಧಿಸುವ ಪ್ರದೇಶಗಳು:- ಈ ರೈಲು ಹೌರಾ ಮೈದಾನ, ಎಸ್ಪ್ಲಾನೇಡ್, ಐಟಿ ಹಬ್ ಸಾಲ್ಟ್ ಲೇಕ್ ಸೆಕ್ಟರ್ ವಿ ಅನ್ನು ಸಂಪರ್ಕ ಮಾಡುತ್ತದೆ.

ಇದನ್ನೂ ಓದಿ: 120 ಕಿ.ಮೀ ವ್ಯಾಪ್ತಿಯ ಸ್ಕೂಟರ್ ನ ಆಕರ್ಷಕ ಬೆಲೆಯು ಮಾರುಕಟ್ಟೆಯಲ್ಲಿ ಅಲೆಗಳನ್ನು ಎಬ್ಬಿಸುವುದು ನಿಶ್ಚಿತ. ಈ ನವೀನ ಸ್ಕೂಟರ್‌ನ ಹೆಸರೇನು?

ಇದನ್ನೂ ಓದಿ: 10 ದಿನಗಳ ಕಾಲ ಎಸ್ಕಾಂನ ಎಲ್ಲಾ ಆನ್ ಲೈನ್ ಸೇವೆಗಳು ಸ್ಥಗಿತ! ಕರೆಂಟ್ ಬಿಲ್ ಕಟ್ಟಲು ಸಾಧ್ಯವಿಲ್ಲ..