ಯಾವುದೇ ಪೇಮೆಂಟ್ ಮಾಡಲು ನಾವು ಆನ್ಲೈನ್ ಅಪ್ಲಿಕೇಶನ್ ಗಳನ್ನ ಬಳಸುತ್ತೇವೆ. ಅದ್ರಲ್ಲಿ ಫೋನ್ ಪೇ ಸಹ ಒಂದು ಉತ್ತಮ ಅಪ್ಲಿಕೇಶನ್ ಆಗಿದೆ. ಪ್ರತಿ ಪೇಮೆಂಟ್ ಗೆ ಉತ್ತಮ cashback ನೀಡುತ್ತಿದ್ದು, ಬಳಕೆದಾರರಿಗೆ ತ್ವರಿತವಾಗಿ ಮತ್ತು ಸುಲಭವಾಗಿ ಹಣವನ್ನು ಕಳುಹಿಸಬಹುದು ಹಾಗೂ ಸ್ವೀಕರಿಸಬಹುದು ಮತ್ತು ಬಿಲ್ಗಳನ್ನು ಪಾವತಿಸುಲು ಅನುಕೂಲ ಆಗುತ್ತದೆ. ಈಗ ಹೊಸದಾಗಿ ಫೋನ್ಪೇ Application ಗೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸೇರಿಸಬಹುದಾಗಿದೆ.
ಫೋನ್ ಪೇ ಅಪ್ಲಿಕೇಶನ್ ನಲ್ಲಿ ಇರುವ ಸೌಲಭ್ಯಗಳು :- ನೀವು ಫೋನ್ ಪೇ ಅಪ್ಲಿಕೇಶನ್ ನಿಂದ ದೂರದ ಪ್ರವಾಸಕ್ಕೆ ಬಸ್, ಟ್ರೈನ್, ಫ್ಲೈಟ್, ಹೋಟೆಲ್ ಟಿಕೆಟ್ ಬುಕ್ ಮಾಡಲು ಹಾಗೂ ಶಾಂಪಿಂಗ್ ಮಾಡಲು ಹಾಗೂ ಎಲ್ಲಾ ಸಿಮ್ ಮೊಬೈಲ್ ರಿಚಾರ್ಜ್ ಮಾಡಲು ಹಾಗೂ ಕರೆಂಟ್ ಬಿಲ್ ಪಾವತಿಸಲು, ಟಿವಿ ಬಿಲ್ ಪಾವತಿಸಲು ಉಪಯೋಗ ಆಗಲಿದೆ. ಜೊತೆಗೆ ಸ್ಕ್ಯಾನಿಂಗ್ ಮೂಲಕ ನಿಮ್ಮ ಹತ್ತಿರದ ಮಳಿಗೆಯಲ್ಲಿ ನೀವು ಖರಿಧಿಸಿದ ವಸ್ತುಗಳಿಗೆ ನಿಮಿಷಗಳಲ್ಲಿ ಪೇ ಮಾಡಬಹುದು. ನಿಮ್ಮ ಸ್ನೇಹಿತರಿಗೆ ಹಣವನ್ನು ಪಡೆಯಲು ಸಾಧ್ಯ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಒಂದಕ್ಕಿಂತ ಹೆಚ್ಚಿನ ಖಾತೆಯನ್ನು ತೆರೆಯುವುದು ಹೇಗೆ?
ಮೊದಲು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಫೋನ್ಪೇ ಅಪ್ಲಿಕೇಶನ್ ತೆರೆಯಿರಿ. ಫೋನ್ಪೇ ಮುಖಪುಟದಲ್ಲಿ, ಹಣ ವರ್ಗಾವಣೆ ಟು ಸೆಲ್ಫ್ ಅಕೌಂಟ್ ಆಪ್ಷನ್ ಕ್ಲಿಕ್ ಮಾಡಬೇಕು. ನಂತರ ಆ್ಯಡ್ ನ್ಯೂ ಬ್ಯಾಂಕ್ ಅಕೌಂಟ್ ಆಪ್ಷನ್ ಕ್ಲಿಕ್ ಮಾಡಿ. ನಂತರ ಮೊಬೈಲ್ ಸಂಖ್ಯೆಯ ಜೊತೆಗೆ ಬೇರೆ ಬ್ಯಾಂಕ್ ಖಾತೆಯನ್ನು ಆ್ಯಡ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿ ಆಗಿರುವ ಖಾತೆಗಳ ವಿವರ ಪರದೆ ಮೇಲೆ ಕಾಣುತ್ತದೆ. ಇದರ ನಂತರ ನಿಮ್ಮ ಬ್ಯಾಂಕ್ ಹೆಸರು ಹಾಗೂ ಬ್ರಾಂಚ್ ಹೆಸರು, ನಿಮ್ಮ ಹೆಸರಿನ ಜೊತೆಗೆ ಕಾಣುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬೇಕು. ನಂತರ ಪ್ರೊಸೀಡ್ ಟು ಆ್ಯಡ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಬ್ಯಾಂಕ್ ಖಾತೆಯ ಎಟಿಎಂ ಕಾರ್ಡ್ ವಿವರಗಳನ್ನು ಹಾಕಬೇಕು. ನಂತರ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ಬರುವ ಒಟಿಪಿಯನ್ನು ನಮೂದಿಸಿದ ನಂತರ ನಿಮ್ಮ ಯುಪಿಐ ಪಿನ್ ಹಾಕಿ..
ಇದನ್ನೂ ಓದಿ: ನಥಿಂಗ್ ಫೋನ್ 2a ಅನ್ನು ಡ್ಯುಯಲ್ 50MP ಕ್ಯಾಮೆರಾಗಳೊಂದಿಗೆ ನಿಮ್ಮ ಛಾಯಾಗ್ರಹಣ ಸಾಮರ್ಥ್ಯವನ್ನು ಆಕರ್ಷಕ ಬೆಲೆಯಲ್ಲಿ ಪಡೆಯಿರಿ.
ಒಂದಕ್ಕಿಂತ ಹೆಚ್ಚಿನ ಖಾತೆಯನ್ನು ಹೊಂದಿರುವುದರಿಂದ ಏನು ಉಪಯೋಗ ಏನು?
- ನೀವು ಯಾವುದೇ ಬ್ಯಾಂಕ್ ಖಾತೆಯಿಂದ ತ್ವರಿತವಾಗಿ ಮತ್ತು ಸುಲಭವಾಗಿ ಹಣವನ್ನು ವರ್ಗಾಯಿಸಬಹುದು.
- ಸಂಬಳ ಖಾತೆ ಹಾಗೂ ಉಳಿತಾಯ ಖಾತೆ ಹಾಗೂ ಖಾತೆಗಳಂತಹ ವಿವಿಧ ಖಾತೆಗಳನ್ನು ನಿರ್ವಹಿಸಲು ಇದು ಬಹಳ ಉಪಯೋಗ ಆಗುತ್ತದೆ.
- ಕೆಲವೊಮ್ಮೆ ಒಂದಕ್ಕಿಂತ ಹೆಚ್ಚಿನ ಖಾತೆಗಳನ್ನು ಹೊಂದಿರಬಹುದು ರಿಂದ ರಿವಾರ್ಡ್ಗಳು ಮತ್ತು ಪ್ರಯೋಜನಗಳನ್ನು ಪಡೆಯಬಹುದು.
- ಹಲವಾರು ಅಪ್ಲಿಕೇಶನ್ ಬಳಸಿ ಒಂದೊಂದು ಬ್ಯಾಂಕ್ ಅಕೌಂಟ್ ಓಪನ್ ಮಾಡುವುದರ ಬದಲು ಒಂದೇ ಅಪ್ಲಿಕೇಶನ್ ನಲ್ಲಿ ಎಲ್ಲಾ ಬ್ಯಾಂಕ್ ವ್ಯವಹಾರಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.
ಆನ್ಲೈನ್ ಪೇಮೆಂಟ್ ಮಾಡುವ ಮುನ್ನ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು :-
- ನಿಮ್ಮ ಖಾತೆಯ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.
- ಅಪರಿಚಿತರು ಫೋನ್ ಮಾಡಿ ಮೊಬೈಲ್ ಹ್ಯಾಕ್ ಅಥವಾ ಆನ್ಲೈನ್ payment ಬಗ್ಗೆ ಮಾಹಿತಿ ಕೇಳಿದರೆ ತಕ್ಷಣ ನಿಮ್ಮ ಬ್ಯಾಂಕ್ ಗೆ ಫೋನ್ ಮಾಡಿ ಮಾಹಿತಿ ತಿಳಿಸಬೇಕು.
- ಯಾವುದೇ ಪೇಮೆಂಟ್ ಅಪ್ಲಿಕೇಶನ್ ಬಳಸುವ ಮೊದಲು ಇದು ನಿಜವಾದ ಅಪ್ಲಿಕೇಶನ್ ಅಥವಾ ಫೇಕ್ ಅಪ್ಲಿಕೇಶನ್ ಎಂಬುದನ್ನು ಪರಿಶೀಲನೆ ಮಾಡಿ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು.
- ಯಾರೊಂದಿಗೂ ನಿಮ್ಮ upi password ಹಂಚಿಕೊಳ್ಳಬಾರದು
ಇದನ್ನೂ ಓದಿ: ಭಾರತದಲ್ಲಿ ಮೊದಲಬಾರಿಗೆ ಸಂಚರಿಸಲಿದೆ ಜಲಮಾರ್ಗದ ಮೆಟ್ರೋ ಟ್ರೈನ್