ಬೆಂಗಳೂರಿನ ನೀರಿನ ಸಮಸ್ಯೆಗೆ ಆನ್ಲೈನ್ ನಲ್ಲಿ ಟ್ಯಾಂಕರ್ ಬುಕ್ ಮಾಡಿ

How to order water Tanker Online in Bengaluru

ಮಳೆಗಾಲವು ಸಮಪ್ರಮಾಣದಲ್ಲಿ ಆಗದಿರುವ ಕಾರಣದಿಂದ ಫೆಬ್ರುವರಿ ತಿಂಗಳಿನಿಂದಲೇ ನೀರಿನ ಹಾಹಾಕಾರ ಶುರುವಾಗಿದೆ. ಪಟ್ಟಣ ಹಳ್ಳಿಗಳು ಎಲ್ಲಾ ಕಡೆಗಳಲ್ಲಿ ಬಾವಿಗಳು ಬತ್ತಿ ಹೋಗುತ್ತಿವೆ. ನೀರಿನ ಪೂರೈಕೆ ಮಾಡುವುದು ದೊಡ್ಡ ಸಾಹಸವೇ ಆಗಿದೆ. ಪ್ರೈವೇಟ್ ಟ್ಯಾಂಕರ್ ಬೆಲೆ ಗಗನಕ್ಕೆ ಏರಿದ್ದು ಜನಸಾಮಾನ್ಯರಿಗೆ ಬಹಳ ತೊಂದರೆ ಉಂಟಾಗುತ್ತಿದೆ.

WhatsApp Group Join Now
Telegram Group Join Now

ರಾಜ್ಯ ರಾಜಧಾನಿಯಲ್ಲಿ ನೀರಿನ ಹಾಹಾಕಾರ :- ಬೆಂಗಳೂರಿನ ಜನಸಂಖ್ಯೆಯು ವೇಗವಾಗಿ ಬೆಳೆಯುತ್ತಿರುವ ಕಾರಣದಿಂದ ನೀರಿನ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ನೀರಿನ ಪೂರೈಕೆ ಮಾಡಲು ರಾಜ್ಯ ಸರ್ಕಾರಕ್ಕೆ ಇದೊಂದು ಸವಾಲಾಗಿದೆ. ದಿನೇ ದಿನೇ ಬೆಳೆಯುತ್ತಿರುವ ದೊಡ್ಡ ದೊಡ್ಡ aprtment ಗಳಲ್ಲಿ ವಾಸಿಸುವ ಜನರಿಗೆ ಸಮರ್ಪಕವಾಗಿ ನೀರಿನ ಪೂರೈಕೆ ಕಷ್ಟ ಆಗುತ್ತಿದೆ. ಪ್ರೈವೇಟ್ ಕಂಪನಿಯ ಟ್ಯಾಂಕರ್ ಬುಕ್ ಮಾಡಿದರೆ 5,000 ಲೀಟರ್ ಗೆ 500 ರೂಪಾಯಿ ಇದ್ದ ಟ್ಯಾಂಕರ್ ಬೆಲೆ ಈಗ 2,000 ರೂಪಾಯಿ ಆಗಿದೆ. ಬರೋಬ್ಬರಿ 1,500 ರೂಪಾಯಿ ಹೆಚ್ಚಾಗಿದ್ದು, ಮಾಧ್ಯಮ ವರ್ಗದ ಜನರಿಗೆ ಮೂಲಸೌಕರ್ಯಗಳಿಗೆ ಇಷ್ಟೊಂದು ಹಣ ನೀಡುವುದು ಬಹಳ ಕಷ್ಟವಾಗಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡುತ್ತಿದೆ:- ಪ್ರೈವೇಟ್ ಕಂಪನಿಯು ಹೆಚ್ಚಿನ ಹಣವನ್ನು ವಸೂಲಿ ಮಾಡುವುದನ್ನು ಗಮನಿಸಿದ ಸರ್ಕಾರವು ಈಗ ಸರ್ಕಾರದ ವತಿಯಿಂದ ನೀರಿನ ಪೂರೈಕೆ ಮಾಡಲು ನಿರ್ಧರಿಸಿದ್ದು, ಸರ್ಕಾರವು ಎಲ್ಲಾ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡಿ ಟ್ಯಾಂಕರ್ ಬೇಕಾದಲ್ಲಿ ಸಂಪರ್ಕಿಸಲು ನಿವಾಸಿಗಳಿಗೆ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಸಹಾಯವಾಣಿಯ ನಿಮಗೆ ನೀರು ಬಿಡುಗಡೆಯಾಗುವ ಸಮಯ, ನೀರಿನ ಲಭ್ಯತೆ ಮತ್ತು ನೀರಿನ ಟ್ಯಾಂಕರ್‌ಗಳ ಬುಕಿಂಗ್‌ಗೆ ಸಹಾಯ ಮಾಡುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರ ನೀರಿನ ಮರು ಬಳಕೆ ಮಾಡಲು ಸೂಚನೆ ನೀಡಿದೆ:-

ನೀರಿನ ಕೊರತೆ ಹೆಚ್ಚಾಗುತ್ತಿರುವ ಕಾರಣದಿಂದ ಹಾಗೂ ಬೆಂಗಳೂರಿನ ನೀರಿನ ಪೂರೈಕೆಗೆ ಏಕೈಕ ಮೂಲವಾಗಿರುವ ಶ್ರೀರಂಗಪಟ್ಟಣದ ಕೆಆರ್‌ಎಸ್ ಅಣೆಕಟ್ಟಿನ ನೀರಿನ ಮಟ್ಟವು ವೇಗವಾಗಿ ಕಡಿಮೆ ಆಗುತ್ತಿರುವ ಕಾರಣದಿಂದ ನಿಯಮಿತವಾಗಿ ನೀರಿನ ಬಳಕೆಯ ಜೊತೆಗೆ ನೀರನ್ನು ಮರು ಬಳಕೆ ಮಾಡಬೇಕು. ಏಕೆಂದರೆ ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ಇನ್ನಷ್ಟು ನೀರಿನ ಕೊರತೆ ಉಂಟಾಗುವ ಸಂಭವ ಇದೆ ಎಂದು ಸರ್ಕಾರವು ಮುನ್ನೆಚ್ಚರಿಕೆ ನೀಡಿದೆ.

ಆನ್ಲೈನ್ ನಲ್ಲಿ ಟ್ಯಾಂಕರ್ ಬುಕಿಂಗ್ ಮಾಡುವ ವಿಧಾನ :- ಬೆಂಗಳೂರಿನ ನಿವಾಸಿಗಳು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನೀರಿನ ಟ್ಯಾಂಕರ್ ಬುಕಿಂಗ್ ಮಾಡಲು ಅಧಿಕೃತ ವೆಬ್ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ವೆಬ್ಸೈಟ್ ಹೆಸರು:-bwssb.gov.in. ನೋಂದಣಿ ಮಾಡಿಕೊಂಡ ಬಳಿಕ ನೀವು ಕೆಲವು ಮಾಹಿತಿಗಳನ್ನು ನೀಡಬೇಕಾಗುತ್ತದೆ. ಮಾಹಿತಿಗಳನ್ನು ನೀಡಿದ ಬಳಿಕ ನೀವು ಬೆಂಗಳೂರು ನಿವಾಸಿ ಆಗಿದ್ದರೆ ಮಾತ್ರ ಟ್ಯಾಂಕರ್ ಬುಕಿಂಗ್ ಮಾಡಬಹುದು.

ನೋಂದಣಿ ಮಾಡುವಾಗ ಸಲ್ಲಿಸಬೇಕಾಗಿರುವ ಮಾಹಿತಿಗಳು :- ನಿಮ್ಮ ಹೆಸರು ಮತ್ತು ನಿಮ್ಮ ವಿಳಾಸವನ್ನು ನಮೂದಿಸಬೇಕು. ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ 8 ವಲಯಗಳಲ್ಲಿ ನಿಮ್ಮ ವಿಳಾಸವು ಯಾವ ವಲಯಕ್ಕೆ ಬರುತ್ತದೆ ಎಂಬ ಮಾಹಿತಿ ಹಾಗೂ ಪಿನ್ ಕೋಡ್ ನಮೂದಿಸಬೇಕು.

ಸಹಾಯವಾಣಿ ಸಂಖ್ಯೆ :- ಟ್ಯಾಂಕರ್ ಬುಕಿಂಗ್ ಮಾಡಲು ಅಥವಾ ಯಾವುದೇ ಸಮಸ್ಯೆಯ ಪರಿಹಾರಕ್ಕೆ ಇಲಾಖೆಯ ಸಹಾಯವಾಣಿ ಸಂಖ್ಯೆ (ಟೋಲ್-ಫ್ರೀ ಸಂಖ್ಯೆ) 1916 ಕರೆ ಮಾಡಬಹುದು. ಅಥವಾ [email protected] ಈ ಮೇಲ್ ಅಡ್ರೆಸ್ ಗೆ ಮೇಲ್ ಮಾಡಿ ನಿಮ್ಮ ದೂರನ್ನು ಸಲ್ಲಿಸಬಹುದು.

ಇದನ್ನೂ ಓದಿ: ಸೂರ್ಯ ಘರ್ ಯೋಜನೆಗೆ ಪೋಸ್ಟ್ ಆಫೀಸ್ ನಲ್ಲೂ ಸಹ ಅರ್ಜಿ ಸಲ್ಲಿಸಬಹುದು