ಉತ್ತರ ಕರ್ನಾಟಕದ ಪ್ರಸಿದ್ದ ಕ್ಷೇತ್ರಗಳಿಗೆ ಪ್ರವಾಸ ಮಾಡಲು ಬಯಸುವ ಭಕ್ತರಿಗೆ ಶಿವರಾತ್ರಿಯಂದು ವಿಶೇಷ ಸೌಲಭ್ಯ ಸಿಗಲಿದೆ. ಹಲವರು ಸಂಘ ಸಂಸ್ಥೆಗಳು ಹಾಗೂ ಭಕ್ತರ ಬೇಡಿಕೆಯ ಮೇರೆಗೆ ಬಸ್ ಸೇವೆ ಆರಂಭ ಮಾಡಲಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ವಿಭಾಗದಿಂದ ಬಸ್ ಸೇವೆ ಆರಂಭವಾಗಲಿದೆ ಎಂದು ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಆಗಿರುವ ಶಶಿಧರ ಚನ್ನಪ್ಪಗೌಡರ ಅವರು ತಿಳಿಸಿದ್ದಾರೆ.
ಯಾವ ಯಾವ ಕ್ಷೇತ್ರಗಳಿಗೆ ಬಸ್ ಪ್ರಯಾಣಿಸಲಿದೆ?
ಧಾರವಾಡ ವಾಯುವ್ಯ ಸರ್ಕಾರಿ ಬಸ್ ಸ್ಟ್ಯಾಂಡ್ ನಿಂದ ವಿಜಯನಗರ ಜಿಲ್ಲೆಯ ಪಂಚಪೀಠದ ಉಜ್ಜಯಿನಿ ಶ್ರೀ ಕ್ಷೇತ್ರಕ್ಕೆ ಸರಕಾರಿ ಬಸ್ ಸೇವೆಯು ಅರಂಭಗೊಳ್ಳಿದೆ. ಈ ಬಸ್ ವಾರದ ಏಳೂ ದಿನವೂ ಸಂಚರಿಸಲಿದೆ. ಬಸ್ ನ ಸಮಯವನ್ನು ತಿಳಿಸಲಾಗಿದ್ದು , ಮಾರ್ಚ್ 8 ರಿಂದ ಬೆಳಗ್ಗೆ 7:15 ಗಂಟೆಗೆ ಧಾರವಾಡದಿಂದ ಹೊರಟು ಮಧ್ಯಾಹ್ನ 12:30 ಗಂಟೆಗೆ ಉಜ್ಜಯಿನಿಗೆ ತಲುಪುತ್ತದೆ. ಅಲ್ಲಿ ಭಕ್ತರು ದೇವರ ದರ್ಶನ ಪಡೆಯಲು ಮತ್ತು ಪ್ರಸಾದ ಸ್ವೀಕರಿಸಲು ಒಂದು ವರೆ ಗಂಟೆಯ ಸಮಯವಧಿ ಸಿಗುವಂತೆ ಅದೇ ಬಸ್ ಉಜ್ಜಾಯಿನಿಯಿಂದ ಮಧ್ಯಾಹ್ನ 2 ಗಂಟೆಗೆ ಉಜ್ಜಯಿನಿಯಿಂದ ಹೊರಟು ಸಂಜೆ 6:30 ಗಂಟೆಗೆ ಧಾರವಾಡಕ್ಕೆ ಬರಲಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಸ್ ಪ್ರಯಾಣದ ಮಾರ್ಗ:- ಧಾರವಾಡ ಹುಬ್ಬಳ್ಳಿ, ಗದಗ, ಮುಂಡರಗಿ, ಹಡಗಲಿ ಮಾರ್ಗವಾಗಿ ಉಜ್ಜಯಿನಿಗೆ ತಲುಪುತ್ತದೆ.
ಉಜ್ಜಯಿನಿ ಕ್ಷೇತ್ರದ ಬಗ್ಗೆ ಮಾಹಿತಿ:- ಉಜ್ಜಯಿನಿ ಕ್ಷೇತ್ರವು ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಸ್ಥಳವಾಗಿದೆ, ಪಂಚಪೀಠದ ನೆಲೆಯಾಗಿ ಪ್ರಸಿದ್ಧಿ ಪಡೆದಿದೆ.
ಕರ್ನಾಟಕ ವಾಯುವ್ಯ ಸಾರಿಗೆಯ ಇತ್ತೀಚಿಗಿನ ಕೊಡುಗೆಗಳು :-
ಇತ್ತೀಚಿಗೆ ವಾಯುವ್ಯ ಸಾರಿಗೆಯು ಬೆಳಗಾವಿಯಲ್ಲಿ 55 ನೂತನ ಇವಿ ಬಸ್ಗಳಿಗೆ ಚಾಲನೆ ನೀಡಿದೆ. ಈ ಬಸ್ ಗಳು ವಿಶೇಷ ತಂತ್ರಜ್ಞಾನ ಹೊಂದಿರುವ ಪರಿಸರ ಸ್ನೇಹಿ ಆಗಿರುವುದು ವಿಶೇಷ. ಅಷ್ಟೇ ಅಲ್ಲದೆ AIS-140 ವಾಹನ ಟ್ರ್ಯಾಕಿಂಗ್ ವ್ಯವಸ್ಥೆ ಮತ್ತು ಪ್ರಯಾಣಿಕರ ಸುರಕ್ಷತೆ ಸಲುವಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಹೊಂದಿರುವ ವಿಶೇಷ ಬಸ್ ಇದಾಗಿದ್ದು ಸುಧಾರಿತ ಎಬಿಎಸ್ವುಳ್ಳ ಬ್ರೇಕಿಂಗ್ ಸಿಸ್ಟಮ್, ಹಾಗೂ ಎಲೆಕ್ಟ್ರಿಕ್ ವಾಹನ ಸುಸ್ಥಿತ ನಿಯಂತ್ರಣ (EVSC) ಹೊಂದಿರುವುದು ಇನ್ನೊಂದು ವಿಶೇಷ. ಇದರ ಜೊತೆಗೆ ನೂತನ ತಂತ್ರಜ್ಞಾನ ಆನ್ ಬೋರ್ಡಿಂಗ್ ಡೆಗ್ನೊಸ್ಟಿಕನ್-02 ವ್ಯವಸ್ಥೆಯೂ ಇದೆ. ಪ್ರಯಾಣಿಕರಿಗೆ ಆರಾಮದಾಯಕ ಆಸನದ ವ್ಯವಸ್ಥೆ ಇದೆ. ಹಾಗೂ ಬೆಂಕಿ ಮುನ್ನೆಚ್ಚರಿಕೆ ನೀಡುವ FDS ಸಾಧನವನ್ನು ಸಹ ಅಳವಡಿಸಲಾಗಿದೆ.
ವಾಯುವ್ಯ ಸಾರಿಗೆ ಸಂಸ್ಥೆಯ ಬಗ್ಗೆ ಒಂದಿಷ್ಟು ಮಾಹಿತಿ:- ಇದು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದು, ಕರ್ನಾಟಕದ ವಾಯುವ್ಯ ಭಾಗದಲ್ಲಿರುವ ಮಹಾರಾಷ್ಟ್ರ, ಗೋವಾ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಕೆಲವು ಪಟ್ಟಣ ಹಾಗೂ ನಗರಗಳಿಗೆ ಸಾರಿಗೆ ಸೇವೆಯನ್ನು ನೀಡುತ್ತಿದೆ. ಕರ್ನಾಟಕದ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ ಮತ್ತು ಹಾವೇರಿ ಹಾವೇರಿ ಜಿಲ್ಲೆಗಳಲ್ಲಿ ಸಂಚರಿಸಲಿದೆ.
ನೂತನ ಬಸ್ ಸೇವೆಗಳು ಮುಂಗಡ ಟಿಕೆಟ್ ಕಾಯ್ದಿರಿಸುವ ಸಾಲವಾಗಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕೃತ ವೆಬ್ಸೈಟ್ https://nwkrtc.karnataka.gov.in/ ಗೆ ತೆರಳಿ. ಈ ವೆಬ್ಸೈಟ್ ಮೂಲಕ ಇಲಾಖೆಯ ಪೂರ್ಣ ಮಾಹಿತಿಯನ್ನು ಪಡೆಯಬಹುದು ಹಾಗೂ ಆನ್ಲೈನ್ ಸೇವೆಯನ್ನು ಪಡೆಯಬಹುದು.
ಇದನ್ನೂ ಓದಿ: Motovolt M7: ಸ್ಮಾರ್ಟ್ ಮತ್ತು ಸ್ಟೈಲಿಷ್ ಆಗಿರುವ ಈ ಸ್ಕೂಟರ್ ನಲ್ಲಿ ಒಮ್ಮೆ ಚಾರ್ಜ್ ಮಾಡಿದರೆ ದಿನವಿಡೀ ಓಡಾಡಬಹುದು
ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ 7 ಕಂತಿನ ಹಣದ ಜೊತೆಗೆ ಇಲ್ಲಿಯವರೆಗೆ ಹಣ ಬಾರದೆ ಇದ್ದವರಿಗೆ 6 ಕಂತಿಗಳ ಹಣ ಒಟ್ಟಿಗೆ ಬರಲಿದೆ.