ಉಳಿತಾಯ ಖಾತೆ ಎಂಬುದು ನಾಳಿನ ಭವಿಷ್ಯಕ್ಕೆ ಉಪಯೋಗ ಆಗುವಂತಹ ಒಂದು ವಿಧದ ಬ್ಯಾಂಕ್ ಖಾತೆ ಆಗಿದೆ. ಮುಂಬರುವ ಹಣಕಾಸಿನ ತೊಂದರೆಗಳಿಗೆ ಪರಿಹಾರ ಮಾರ್ಗವಾಗಿ ಉಳಿತಾಯ ಖಾತೆಯು ಮುಖ್ಯವಾಗಿದೆ. ಬ್ಯಾಂಕ್ ನ ನಿಯಮಗಳ ಅನುಸಾರ ಒಂದೊಂದು ಬ್ಯಾಂಕ್ ನಲ್ಲಿ ಒಂದೊಂದು ರೀತಿಯ ಕನಿಷ್ಠ ಹಣವನ್ನು ಹೂಡಿಕೆ ಮಾಡಬಹುದು. ಆದರೆ ಗರಿಷ್ಠ ಮಿತಿಯನ್ನು ಆದಾಯ ತೆರಿಗೆ ತಿಳಿಸುತ್ತದೆ. ಹಾಗಾದರೆ ನಗದು ಠೇವಣಿ ಮಾಡಲು ಆದಾಯ ತೆರಿಗೆಯಿಂದ ವಿಧಿಸಲಾದ ಗರಿಷ್ಠ ಮಿತಿ ಏಷ್ಟು ಎಂಬುದನ್ನು ತಿಳಿಯೋಣ.
ತೆರಿಗೆ ಇಲಾಖೆಯ ನಿಯಮಗಳು:- ಒಂದು ವಾರ್ಷಿಕ ವರ್ಷದಲ್ಲಿ ಹಣಕಾಸಿನ ಉಳಿತಾಯ ಖಾತೆಗೆ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡುವ ವ್ಯಕ್ತಿಗಳು ತೆರಿಗೆ ಅಧಿಕಾರಿಗಳಿಗೆ ಮಾಹಿತಿಗಳನ್ನು ತಿಳಿಸಬೇಕು. ಹಣದ ಮೂಲದ ಬಗ್ಗೆ ನಿಖರ ಮಾಹಿತಿಯನ್ನು ತೆರಿಗೆ ಇಲಾಖೆಯ ಕೇಳುತ್ತದೆ ಮತ್ತು ನಿಗದಿತ ಮೊತ್ತದ tax ಪಾವತಿಸಬೇಕು. ತೆರಿಗೆ ಇಲಾಖೆಯು ಕೆಲವು ಸೆಕ್ಷನ್ ಗಳಲ್ಲಿ ಹಣ ಹೂಡಿಕೆಯ ಮಿತಿಯ ಬಗ್ಗೆ ತಿಳಿಸಿದೆ. ಉಳಿತಾಯ ಖಾತೆಯ ಜೊತೆಗೆ ಪರ್ಸನಲ್ ಅಕೌಂಟ್, FD ಯೋಜನೆಯ ಮಿತಿಗಳನ್ನು ಸೆಕ್ಷನ್ ನಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕೆಲವು ಮುಖ್ಯ ಆದಾಯ ತೆರಿಗೆಯ ಸೆಕ್ಷನ್ ಗಳ ಬಗ್ಗೆ ಮಾಹಿತಿ:-
1) ಸೆಕ್ಷನ್ 194N: ನೀವು ರೂಪಾಯಿ 1 ಕೋಟಿಗಿಂತ ಹೆಚ್ಚು ಹಣವನ್ನು ನಿಮ್ಮ ಖಾತೆಯಿಂದ ತೆಗೆದರೆ, ಸರ್ಕಾರವು ನಿಮ್ಮ ತೆರಿಗೆಯನ್ನು ಮುಂಚಿತವಾಗಿ ಕಡಿತಗೊಳಿಸುತ್ತದೆ. ಕಳೆದ 3 ವರ್ಷಗಳಲ್ಲಿ ತೆರಿಗೆ ರಿಟರ್ನ್ ಫೈಲ್ ಮಾಡಿದವರಿಗೆ 20 ಲಕ್ಷ ರೂಪಾಯಿ ನಗದು ಹಣವನ್ನು ತೆಗೆದರೆ 2% TDS ಹಾಗೂ ಒಂದು ವರ್ಷದಲ್ಲಿ ಒಂದು ಕೋಟಿಗೂ ಅಧಿಕ ಹಣಕ್ಕೆ 5% TDS ನೀಡಬೇಕಾಗುತ್ತದೆ.
2) ಸೆಕ್ಷನ್ 269ST:- ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 269ST ಯಲ್ಲಿ ಉಲ್ಲೇಖಿಸಿರುವ ಪ್ರಕಾರ ಒಂದು ವರ್ಷದಲ್ಲಿ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸುವ ವ್ಯಕ್ತಿಗಳಿಗೆ ದಂಡ ವಿಧಿಸಲಾಗುತ್ತದೆ. ಈ ದಂಡವು ಬ್ಯಾಂಕ್ ಠೇವಣಿಗಳಿಗೆ ಅನ್ವಯಿಸುವುದಿಲ್ಲ. ಆದರೆ, ನಿಗದಿತ ಮಿತಿಯನ್ನು ಮೀರಿದ ಠೇವಣಿಗಳಿಗೆ TDS ಕಡಿತಗಳ ಮಿತಿಯನ್ನು ಹೊಂದಿದೆ.
3) ಸೆಕ್ಷನ್ 269SS ಮತ್ತು 269T:- ಈ ಸೆಕ್ಷನ್ ನಗದು ರೂಪದ ಸಾಲಕ್ಕೆ ಸಂಭಂದಿಸಿದಂತೆ ನಿಯಮಗಳನ್ನು ಹೇಳುತ್ತದೆ. ಒಂದು ವರ್ಷದಲ್ಲಿ 20,00,000 ರೂಪಾಯಿ ಸಾಲವನ್ನು ಪಡೆಯುವುದು ಮತ್ತು ಸಾಲ ಮರು ಪಾವತಿ ಮಾಡಿದರೆ ಇಲಾಖೆಯು ದಂಡ ವಿಧಿಸಲಾಗುವುದು.
4) ಸೆಕ್ಷನ್ 44AD/44ADA:- ವ್ಯಾಪಾರ ವಹಿವಾಟಿಗೆ ಸಂಭಂಧಿಸಿದ ಠೇವಣಿ ಗಳಿಗೆ ಈ ಸೆಕ್ಷನ್ ನಲ್ಲಿ ನಿಯಮಗಳು ಇವೆ. ಇದು ಪೆನಾಲ್ಟಿ ವಿನಾಯಿತಿಯನ್ನು ನೀಡುತ್ತದೆ. ನಿಯಮಗಳ ವಿರುದ್ಧ ವ್ಯಾಪಾರ ಠೇವಣಿಗಳಿಗೆ ತೆರಿಗೆ ಇಲಾಖೆಯ ದಂಡ ವಿಧಿಸುತ್ತದೆ.
ಇದನ್ನೂ ಓದಿ: 100 KM ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ₹69,000 ರೂಪಾಯಿಗೆ ಖರೀದಿಸಿ
ಯಾವ ಹಣಕ್ಕೆ ತೆರಿಗೆ ಹಣ ಕಾಯಬೇಕಿಲ್ಲ?
ನಿಗದಿತ ಮೊತ್ತದ ಠೇವಣಿಗೆ ಮತ್ತು ಹಣವನ್ನು ತೆಗೆಯುವ ಸಂದರ್ಭದಲ್ಲಿ ಇಲಾಖೆಯಿಂದ ಕೆಲವು ನಿಯಮಗಳು ಇವೆ. ಒಬ್ಬ ವ್ಯಕ್ತಿಯ ಹೆಸರಲ್ಲಿ ಮೂರು ಪ್ರತ್ಯೇಕ ಬ್ಯಾಂಕ್ಗಳಲ್ಲಿ ಮೂರು ವಿಭಿನ್ನ ಬ್ಯಾಂಕ್ ಖಾತೆ ಇದ್ದರೆ, ಅವರು ಪ್ರತಿ ಬ್ಯಾಂಕ್ನಿಂದ 3 ಕೋಟಿ ರೂಪಾಯಿ ತೆಗೆದರೆ ಯಾವುದೇ TDS ಹಣವನ್ನು ನೀಡಬೇಕಿಲ್ಲ. ಹಾಗೆಯೇ ನಗದು ಹಣದ ರೂಪದಲ್ಲಿ 50,000 ರೂಪಾಯಿಗಳ ವರೆಗೆ ನೀಡುವ ಉಡುಗೊರೆಗೆ ಯಾವುದೇ ತೆರಿಗೆ ಮೊತ್ತವು ಅನ್ವಯಿಸುವುದಿಲ್ಲ. ಹಾಗೆಯೇ ನಿಮ್ಮ ತಂದೆ ತಾಯಿ ಅಥವಾ ಅಕ್ಕ ತಂಗಿ, ಅಣ್ಣ ತಮ್ಮ ಅಥವಾ ಯಾವುದೇ ಹತ್ತಿರದ ಸಂಬಂಧಿಕರು ನಿಮಗೆ ಉಡುಗೊರೆಯನ್ನು ನೀಡಿದರೆ ಅದಕ್ಕೆ ನೀವು ಯಾವುದೇ tax ಹಣವನ್ನು ಕಟ್ಟಬೇಕಾಗಿಲ್ಲ.
ಇದನ್ನೂ ಓದಿ: ಮಹಿಳಾ ದಿನಾಚರಣೆ ಪ್ರಯುಕ್ತ LPG ಸಿಲಿಂಡರ್ ದರ ಇಳಿಕೆ ಮಾಡಿದ ಕೇಂದ್ರ ಸರ್ಕಾರ