ಪೆಟ್ರೋಲ್ ಬೆಲೆ ಏರಿಕೆ ಜನರಿಗೆ ಪರ್ಯಾಯ ಮೂಲವಾದ ಎಲೆಕ್ಟ್ರಿಕ್ ಬೈಕ್ ಬಗ್ಗೆ ಹೆಚ್ಚಿನ ಒಲವು ಉಂಟಾಗಿದೆ. ಪರಿಸರ ಸ್ನೇಹಿ ಆಗಿರುವ ಎಲಿಕ್ಟ್ರಿಕ್ ಸ್ಕೂಟರ್ಗಳು ಯಾವುದಾದರೂ ಹೊಗೆ ಅಥವಾ ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸುವುದಿಲ್ಲ. ಹಾಗೂ ನೋಡಲು ಸೊಗಸಾಗಿ ಇರುವುದರಿಂದ ಜನರು ಬಹು ಬೇಗ ಆಕರ್ಷಿತರಾಗುತ್ತಾರೆ. ಎಲೆಕ್ಟ್ರಿಕ್ ಸ್ಕೂಟಿ ಖರೀದಿಸುವ ಜನರಿಗೆ ಈಗ ಹೀರೋ ಕಂಪನಿಯಿಂದ ಎಲೆಕ್ಟ್ರಿಕ್ ಸ್ಕೂಟಿ ಬರುತ್ತಿದೆ. ನಿಮ್ಮ ಕೈಗೆಟುಕುವ ಬೆಲೆಯಲ್ಲಿ ಸಿಗುವ ಈ ಬೈಕ್ ವಿಶೇಷತೆಗಳು ಏನೆಂದು ನೋಡೋಣ.
ಹೀರೋ ಎಲೆಕ್ಟ್ರಿಕ್ ಎಡ್ಡಿ ಸ್ಕೂಟರ್ ನ ವಿಶೇಷತೆಗಳು :-
ನಿಮ್ಮ ಬಜೆಟ್ ಗೆ ತಕ್ಕಂತೆ ಕಡಿಮೆ ದರದಲ್ಲಿ ಸಿಗುವ ಈ ಸ್ಕೂಟರ್ ನ ಮಾರುಕಟ್ಟೆಯ ಬೆಲೆ 75,089 ಸಾವಿರ ರೂಪಾಯಿ ಆಗಿದೆ. ಸ್ಕೂಟರ್ ಹಳದಿ ಮತ್ತು ನೀಲಿ ಎರಡು ಬಣ್ಣಗಳಲ್ಲಿ ಸಿಗುತ್ತದೆ. ಇನ್ನು ಈ ಸ್ಕೂಟರ್ ನ ವಿಶೇಷತೆಗಳ ಏನೆಂದರೆ ಡಿಜಿಟಲ್ ಟ್ರಿಪ್ ಮೀಟರ್ ಹೊಂದಿದೆ. ಹಾಗೂ ಡಿಜಿಟಲ್ ಸ್ಪೀಡೋಮೀಟರ್ ಇವೆ. ಯುಎಸ್ಡಬಿ ಚಾರ್ಜಿಂಗ್ ಪೋರ್ಟ್ ಹಾಗೂ ಫೈಂಡ್ ಮೈ ಬೈಕ್ ವಿಶೇಷತೆ ಆಗಿದೆ. ಎಲ್ಸಿಡಿ ಡಿಸ್ಪ್ಲೇ ಜೊತೆಗೆ ಎ ಲುಕ್ ಹೊಂದಿದೆ. ಎಲ್ ಇಡಿ ಹೆಡ್ಲೈಟ್ ಮತ್ತು ಟೈಲ್ ಲೈಟ್ ಸಿಂಗಲ್ ಲ್ಯಾಂಪ್ ಬಲ್ಬ್ ಸಹ ಅಳವಡಿಸಲಾಗಿದೆ.
ಈ ಸ್ಕೂಟರ್ ನ ಬ್ಯಾಟರಿ ಸಾಮರ್ಥ್ಯ ಗಂಟೆಗೆ 1.54 ಕಿಲೋವ್ಯಾಟ್. ತೂಕ 60 ಕೆ.ಜಿ. ಇದ್ದು 250 ಕಿಲೋ ವ್ಯಾಟ್ ಮೋಟಾರ್ ಹೊಂದಿದೆ. ಇದರ ವೇಗ ಗಂಟೆಗೆ 25 ಕಿಲೋಮೀಟರ್. 12 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಒಳಗೊಂಡಿದೆ. ಮುಂಭಾಗ ಮತ್ತು ಹಿಂಭಾಗ ಡ್ರಮ್ ಬ್ರೇಕ್ ಹೊಂದಿದೆ. 90-ವಿಭಾಗ ಟೈರ್ ಹೊಂದಿದೆ. ನಾಲ್ಕು ಗಂಟೆಗಳ ಕಾಲ ಚಾರ್ಜ್ ಮಾಡಬೇಕು. 1.54 kWh ಲಿಥಿಯಂ-ಐಯಾನ್ ಬ್ಯಾಟರಿ ಇದೇ . ಈ ಬ್ಯಾಟರಿ ಲಿಯಾನ್ ಕಂಪನಿ ತಯಾರಿಸಿದೆ. ಒಮ್ಮೆ ಫುಲ್ ಚಾರ್ಜ್ ಮಾಡಿದರೆ 85 ಕಿಲೋಮೀಟರ್ ನ ತನಕ ಯಾವುದೇ ಆತಂಕವಿಲ್ಲದೆ ಸ್ಕೂಟರ್ ಓಡಿಸಬಹುದು. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಹೊಂದಿದೆ. ಹಿಂಭಾಗದಲ್ಲಿ ಯಾವುದೇ ಸಸ್ಪೆನ್ಷನ್ ಇಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೀರೋ ಎಲೆಕ್ಟ್ರಿಕ್ ಎಡ್ಡಿ ಬೈಕ್ ಗೆ ಪೈಪೋಟಿ ನೀಡುವ ಬೈಕ್ ಗಳು :-
ನೇರವಾಗಿ ಪೈಪೋಟಿ ಮಾಡದೆ ಇದ್ದರೂ ಸಹ ಕೆಲವು ಒಂದೇ ತರಹದ ವಿಶೇಷತೆಗಳನ್ನು ಕಾಣಬಹುದಾದ ಕೆಲವು ಕಂಪನಿಯ ಬೈಕ್ ಗಳು ಇವೆ ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.
- BGauss A2
- Ampere Reo Plus
- TVS NTORQ 125
ಎಲೆಕ್ಟ್ರಿಕ್ ಬೈಕ್ ಗಳ ಉಪಯೋಗಗಳು :-
- ಪರಿಸರ ಸ್ನೇಹಿ ಬೈಕ್ :- ಪೆಟ್ರೋಲ್ ಹಾಗೂ ಡಿಸೇಲ್ ನಿಂದ ಆಗುವ ಮಾಲಿನ್ಯವನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ಸ್ಕೂಟರ್ ಗಳು ಬಹಳ ಸಹಾಯ ಮಾಡುತ್ತದೆ.
- ಕಡಿಮೆ ಖರ್ಚು: ಪೆಟ್ರೋಲ್ ಬೈಕ್ ಗಳಿಗೆ ಹೋಲಿಸಿದರೆ ವಿನಿಯೋಗಿಸುವ ಖರ್ಚಿನ ಪ್ರಮಾಣ ಕಡಿಮೆ ಆಗುತ್ತದೆ.
- ಸುಲಭ ನಿರ್ವಹಣೆ: ಇದರ ನಿರ್ವಹಣೆಗೆ ಹೆಚ್ಚಿನ ಸಮಯ ಹಾಗೂ ಹೆಚ್ಚಿನ ಕರ್ಚು ಇರುವುದಲ್ಲ.
ಉಪಯೋಗಗಳು ಜೊತೆಗೆ ಕೆಲವು ಅನುಕೂಲಗಳು ಸಹ ಇವೆ ಹಾಗಾದರೆ ಅನುಕೂಲಗಳು ಏನು ಎಂಬುದನ್ನು ನೋಡೋಣ ,:
- ಚಾರ್ಜಿಂಗ್ ವ್ಯವಸ್ಥೆ :- ಪೆಟ್ರೋಲ್ ಬಂಕ್ ಗಳು ಎಲ್ಲಾ ಕಡೆಯಲ್ಲಿನಿರುವ ಹಾಗೇ charging points ಗಳು ಎಲ್ಲಾ ಕಡೆಯಲ್ಲಿ ಇಲ್ಲ. ಇದರಿಂದ ಸದ್ಯಕ್ಕೆ ದೂರದ ಪ್ರಯಾಣ ಸಾಧ್ಯವಿಲ್ಲ.
- ಚಾರ್ಜಿಂಗ್ ಸಮಯ: ಚಾರ್ಜ್ ಮಾಡಲು ಹಲವಾರು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ.
- ವಾತಾವರಣದ ಪರಿಸ್ಥಿತಿಗಳು: ಭಾರೀ ಮಳೆ ಅಥವಾ ಹಿಮದಲ್ಲಿ ಚಲಿಸಲು ಸೂಕ್ತವಾಗಿರುವುದಿಲ್ಲ.
ಇದನ್ನೂ ಓದಿ: ಬೆರಗುಗೊಳಿಸುವ ವಿನ್ಯಾಸ ಮತ್ತು ಜಾವ್-ಡ್ರಾಪಿಂಗ್ 34% ರಿಯಾಯಿತಿಯೊಂದಿಗೆ ಹೊಸ Poco M6 Pro 5G ಯ ಈಗಿನ ಬೆಲೆ ಎಷ್ಟು ಗೊತ್ತಾ?
ಇದನ್ನೂ ಓದಿ: ಅತಿ ಕಡಿಮೆ ಬೆಲೆಯ, ಬಜೆಟ್ ಸ್ನೇಹಿ ಈ ಎಂಟು ಬೈಕುಗಳ ಬೆಲೆಯನ್ನು ತಿಳಿದರೆ ಈಗಲೇ ಬುಕ್ ಮಾಡುತ್ತೀರಾ!