ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮನೆ ಕಟ್ಟದ ಖಾಲಿ ನಿವೇಶನಗಳ ಮೇಲೆ ವಿಧಿಸುವ ದಂಡವನ್ನು ಶೇ.25ಕ್ಕೆ ಏರಿಸಲು ಚಿಂತನೆ ನಡೆಸಿದೆ. ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಹಿರಂಗ ಹೇಳಿಕೆಯನ್ನು ರಾಜ್ಯ ಸರ್ಕಾರವು ನೀಡಿಲ್ಲ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿಯಮ ಏನು?: ಬಿಡಿಎ ಸ್ಥಾಪಿಸಿದ ಲೇಔಟ್ಗಳಲ್ಲಿ ನಿವೇಶನ ಖರೀದಿಸಿದವರು ಐದು ವರ್ಷಗಳಲ್ಲಿ ಮನೆ ನಿರ್ಮಿಸಬೇಕು. ಇಲ್ಲದೆ ಇದ್ದರೆ ನಿವೇಶನಗಳ ಮೇಲೆ ಬಿಡಿಎ ದಂಡವನ್ನು ವಿಧಿಸುತ್ತದೆ.
2020 ಅಕ್ಟೋಬರ್ ನಲ್ಲಿ ವಿಧಿಸಿದ ದಂಡ :-
- 20/30 ಸುತ್ತಳತೆಯ ಹೊಂದಿರುವ ಬಿಡಿಎ ನಿವೇಶನಗಳಿಗೆ:- 75,000 ರೂಪಾಯಿ
- 20/30 ರಿಂದ 30/40 ರ ಸುತ್ತಳತೆಯ ಹೊಂದಿರುವ ಬಿಡಿಎ ನಿವೇಶನಗಳಿಗೆ: 15,000 ರೂಪಾಯಿ
- 30/40 ರಿಂದ 40/60 ರ ಸುತ್ತಳತೆಯ ಹೊಂದಿರುವ ಬಿಡಿಎ ನಿವೇಶನಗಳಿಗೆ: 1.20 ಲಕ್ಷ ಲಕ್ಷ ರೂಪಾಯಿ
- 50/80 ರ ನಿವೇಶನಗಳಿಗೆ: ₹6 ಲಕ್ಷ ರೂಪಾಯಿ
ಈಗ ಇರುವ ದಂಡದ ಮೊತ್ತಕ್ಕಿಂತ 25% ದಂಡವನ್ನು ಏರಿಸುವುದಾಗಿ ಬಿಡಿಎ ತಿಳಿಸಿದ್ದು , ಈ ದರವನ್ನು ಬಿಡಿಎ ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸುವುದೆಂದು ತಿಳಿಸಿದೆ. ಬಿಡಿಎ ದಂಡ ವಿಧಿಸುವ ತೀರ್ಮಾನ ಇಂದಿನದು ಅಲ್ಲ ಇದು ಬಹಳ ವರ್ಷಗಳಿಂದ ನಡೆದು ಬಂದಿದೆ. ಆದರೆ ಇದಕ್ಕೆ ಮೂಲ ಕಾರಣಗಳು ಬಹಳ ಇವೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಆದಾಯ ತೆರಿಗೆ ಫೈಲ್ ಮಾಡುವ ಸಮಯದಲ್ಲಿನ ELSS ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದೆ?
ಬಿಡಿಎ ದಂಡ ವಿಧಿಸುವ ಕಾರಣಗಳು ಏನೆಂದರೆ :-
- ಶ್ರೀಮಂತರು ನಿವೇಶನಗಳನ್ನು ಖರೀದಿಸಿ, ಮನೆ ಕಟ್ಟಿಕೊಳ್ಳದೇ ಖಾಲಿ ಬಿಡುತ್ತಾರೆ. ಇದರಿಂದ ಜಾಗವೂ ಬಳಕೆ ಅಗದೆಯೆ ಹಾಗೆ ಉಳಿದು ಬಿಡುತ್ತದೆ.
- ಖಾಲಿ ನಿವೇಶನಗಳಲ್ಲಿ ಗಿಡಗಂಟೆ ಬೆಳೆದು ಹೆಗ್ಗಣ, ಹಾವು, ಚೇಳು, ಸೊಳ್ಳೆ ಗಳು ಹೆಚ್ಚಾಗಿ ಇದರಿಂದ ಸುತ್ತ ಮುತ್ತಲಿನ ಮನೆಯವರಿಗೆ ರೋಗಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
- ಖಾಲಿ ನಿವೇಶನಗಳು ಅಕ್ಕಪಕ್ಕದ ಮನೆಗಳವರಿಗೆ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇದೆ.
ಈ ಎಲ್ಲಾ ಕಾರಣಗಳಿಂದ 5 ವರ್ಷ ನಿವೇಶನ ಖರೀದಿಸಿ ನಂತರ ಮನೆಯನ್ನು ಕಟ್ಟದೆ ಬೇರೆಯವರಿಗೆ ನೀಡದೆ ಹಾಗೆ ಖಾಲಿ ಬಿಟ್ಟಿದ್ದರೆ 10% ದಂಡ ವಿಧಿಸುವ ನಿಯಮ ರೂಪಿಸಲಾಯಿತು. ಆದರೆ ಇದರಿಂದ ಯಾವುದೇ ರೀತಿಯ ಪರಿಣಾಮವು ಆಗದೆ ಇದ್ದರಿಂದ ಈಗ ದಂಡದ ಮೊತ್ತವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ.
ಬೆಂಗಳೂರಿನಲ್ಲಿ ಖಾಲಿ ಇರುವ ನಿವೇಶನಗಳ ಸಂಖ್ಯೆ :- ಬೆಂಗಳೂರಿನಾದ್ಯಂತ ಬಿಡಿಎ ಸ್ಥಾಪಿಸಿದ 64 ಲೇಔಟ್ಗಳಲ್ಲಿ ಸುಮಾರು 70,000 ನಿವೇಶನಗಳು ಖಾಲಿ ಇವೆ. ಮೇಲ್ನೋಟಕ್ಕೆ ಸುಮಾರು 20,000 ನಿವೇಶನಗಳ ಜಾಗ ವ್ಯಾಜ್ಯ ದಿಂದ ಕೂಡಿದೆ. ಇದರಿಂದ ಲೀಸ್ ಕಂ ಸೇಲ್ ಡೀಡ್’ ಪ್ರಕಾರ, ನಿವೇಶನ ಖರೀದಿದಾರರಿಗೆ ನೋಂದಣಿಯಾದ ಕೂಡಲೇ ಅದನ್ನು ಮಾರಾಟ ಮಾಡುವ ಹಕ್ಕನ್ನು ತಿದ್ದುಪಡಿ ಮಾಡಿ ಖರೀದಿದಾರರಿಗೆ 10 ವರ್ಷಗಳವರೆಗೆ ನಿವೇಶನ ಮಾರಾಟ ಮಾಡುವ ಹಕ್ಕು ನಿರಾಕರಿಸಿ ಹಕ್ಕನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಡೆ..
ಬಿಡಿಎ ದಂಡದ ಮೊತ್ತವನ್ನು ಹೆಚ್ಚಿಸಿರುವ ಕಾರಣದಿಂದ ಖಾಲಿ ಇರುವ ನಿವೇಶನಗಳ ಸಂಖ್ಯೆ ಕಡಿಮೆ ಆಗಿ ಮನೆ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇಲ್ಲವೇ ದಂಡದ ಮೊತ್ತವು ಅರ್ಹ ಬಡವರ ಏಳಿಗೆಗೆ ಸಹಾಯಕ ಆಗುತ್ತದೆ.
ಇದನ್ನೂ ಓದಿ: ಅತಿ ಕಡಿಮೆ ಬೆಲೆಯ, ಬಜೆಟ್ ಸ್ನೇಹಿ ಈ ಎಂಟು ಬೈಕುಗಳ ಬೆಲೆಯನ್ನು ತಿಳಿದರೆ ಈಗಲೇ ಬುಕ್ ಮಾಡುತ್ತೀರಾ!
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ ಹಣ ಬಾರದೆ ಇದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ..