ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಸಿಗಲು ಹಲವಾರು ಯೋಜನೆಗಳು ಲಭ್ಯವಿದೆ. ಆದರೆ ಮಹಿಳೆಯರ ಜೀವನಕ್ಕೆ ಯಾವ ಕ್ಷೇತ್ರದಲ್ಲಿ ಇನ್ವೆಸ್ಟ್ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಈಗ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ನಲ್ಲಿ ಹಲವರು ಉಳಿತಾಯ ಯೋಜನೆ ಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಲಾಭ ನೀಡುವ ಒಂದು ಉತ್ತಮ ಯೋಜನೆ ಎಂದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ. ಈ ಯೋಜನೆಯ ಲಾಭಗಳು ಏನು ಎಂಬುದರ ಪೂರ್ಣ ವಿವರ ತಿಳಿಯಿರಿ.
MSSC ಯೋಜನೆಯಲ್ಲಿ ಏಷ್ಟು ಹಣ ಇನ್ವೆಸ್ಟ್ ಮಾಡಬಹುದು: ಇದು ಮಹಿಳೆಯರ ಸಬಲೀಕರಣಕ್ಕೆ ಇರುವ ಯೋಜನೆಯಾಗಿದ್ದು, ಮಹಿಳೆಯರು ಅಥವಾ ಮಕ್ಕಳ ಹೆಸರಿನಲ್ಲಿ ಪಾಲಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ MSSC ಖಾತೆಯನ್ನು ತೆರೆದು ಕನಿಷ್ಠ 1,000 ಹಾಗೂ ಗರಿಷ್ಠ 2 ಲಕ್ಷದ ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಒಂದು ಬಾರಿ ಹೂಡಿಕೆ ಮಾಡಬಹುದು. ಪ್ರತಿ ಮಹಿಳೆಯೂ ಒಂದು ಅಕೌಂಟ್ ಮಾತ್ರ ತೆರೆಯಲು ಅವಕಾಶ ಇದೆ. ಮಾರ್ಚ್ 2025 ರ ತನಕ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
MSSC ಖಾತೆ ತೆರೆಯುವುದು ಹೇಗೆ?
ಖಾತೆಯನ್ನು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ ತೆರೆಯಬಹುದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗಳಲ್ಲಿ ಖಾತೆ ತೆರೆಯುವುದು ಉತ್ತಮ. ಖಾತೆ ತೆರೆಯಲು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ತೆರಳಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಅರ್ಜಿ ನಮೂನೆಯಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ಆಧಾರ್ ಮತ್ತು ಪ್ಯಾನ್ ಸಂಖ್ಯೆ ಸೇರಿದಂತೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀವು ಭರ್ತಿ ಮಾಡಬೇಕು. ಅಪ್ಲಿಕೇಶನ್ ಫಾರ್ಮ್ ತುಂಬಿದ ನಂತರ ಆನ್ಲೈನ್ ಅಥವಾ ಕ್ಯಾಶ್ ಮೂಲಕ ಹಣ ಠೇವಣಿ ಮಾಡಬಹುದು. ಹಣ ಠೇವಣಿ ಮಾಡಿದ್ದಕ್ಕೆ ನಿಮಗೆ ಪ್ರಮಾಣಪತ್ರ ನೀಡುತ್ತಾರೆ ಅದು ಸುರಕ್ಷಿತವಾಗಿ ಇರಿಸಿಕೊಳ್ಳಬೇಕು. ಈ ಯೋಜನೆಯಲ್ಲಿ ಖಾತೆ ತೆರೆಯಲು ಫಾರ್ಮ್ 1 ಹಾಗೂ ಮೆಚ್ಯೂರಿಟಿ ಪಾವತಿಗೆ ಫಾರ್ಮ್ 2 ಮತ್ತು ಹಣ ಪಡೆಯುವಾಗ ಫಾರ್ಮ್ 3 ಭರ್ತಿ ಮಾಡಬೇಕು.
ಬಡ್ಡಿದರದ ವಿವರ :- ನೀವು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ವಾರ್ಷಿಕವಾಗಿ 7.5% ಬಡ್ಡಿದರ ಸಿಗುತ್ತದೆ. 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಶೇಕಡಾ 7.5 ರ ಬಡ್ಡಿದರದಂತೆ ಸುಮಾರು 1.16 ಲಕ್ಷ ರೂಪಾಯಿ ಸಿಗುತ್ತದೆ. 2 ಲಕ್ಷ ರೂಪಾಯಿ ಇನ್ವೆಸ್ಟ್ ಮಾಡಿದರೆ 2 ವರ್ಷಗಳ ನಂತರ 2.32 ಲಕ್ಷ ರೂಪಾಯಿಗಳನ್ನು ಸಿಗುತ್ತದೆ. ಅಂದರೆ ಗರಿಷ್ಠ 32,044 ರೂ.ಗಳ ಬಡ್ಡಿಯನ್ನು ಪಡೆಯಬಹುದು. ತ್ರೈಮಾಸಿಕ ಆಧಾರದ ಮೇಲೆ ಬಡ್ಡಿಯನ್ನು ಒಟ್ಟುಗೂಡಿಸಿ ನಿಮ್ಮ MSSC ಖಾತೆಗೆ ನೇರವಾಗಿ ಬಡ್ಡಿ ಹಣವನ್ನು ಜಮಾ ಮಾಡಲಾಗುತ್ತದೆ. ಈ ಯೋಜನೆಯ ಅವಧಿ ಎರಡು ವರ್ಷ.
ಇದನ್ನೂ ಓದಿ: ಭಾರತದ ಉತ್ತಮ 13 ಬ್ಯಾಂಕ್ ಗಳು FD ಯೋಜನೆಯಲ್ಲಿ ಹೆಚ್ಚಿನ ಬಡ್ಡಿದರವನ್ನು ನೀಡುತ್ತಿವೆ?
ಇದನ್ನೂ ಓದಿ: ದೈನಂದಿನ ಬಳಕೆಗೆ ಸೂಕ್ತವಾದ ಒಂದೇ ಒಂದು ಬ್ರಾಂಡ್ ಅಂದ್ರೆ ಅದುವೇ ಸುಜುಕಿ ಆಕ್ಸೆಸ್ 125 ಸ್ಕೂಟರ್