ರಾಜ್ಯ ಸರ್ಕಾರದ ಉತ್ತಮ ಯೋಜನೆ ಆಗಿರುವ ಗೃಹಲಕ್ಷ್ಮಿ ಯೋಜನೆಯ 7ಕಂತಿನ ಹಣವೂ ಈಗಾಗಲೇ ಬಿಡುಗಡೆ ಆಗಿದ್ದು ಹಲವಾರು ಫಲಾನುಭವಿಗಳಿಗೆ 7 ಕಂತಿನ ಹಣವೂ ಪ್ರತಿ ತಿಂಗಳು ಜಮಾ ಆಗಿದೆ. ಆದರೆ ಕೆಲವರಿಗೆ ಮಾತ್ರ ಒಂದು ಕಂತಿನ ಹಣ ಜಮಾ ಆಗಲಿಲ್ಲ ಹಾಗೆಯೇ ಕೆಲವರಿಗೆ ಒಂದು ಕಂತಿನ ಹಣ ಜಮಾ ಆಗಿ ಉಳಿದ ಕಂತಿನ ಹಣವೂ ಜಮಾ ಆಗದೆ ಹಾಗೆಯೇ ಇದೆ. ಆದರೆ ಹಣ ಜಮಾ ಆಗದೆ ಇದ್ದವರು ಬೇಸರ ಪಡುವ ಅಗತ್ಯವಿಲ್ಲ. ಈಗ ರಾಜ್ಯ ಸರ್ಕಾರವು ಒಮ್ಮೆಲೆ ಎಲ್ಲಾ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ. ಗೃಹ ಲಕ್ಷ್ಮಿ ಯೋಜನೆಯ ಹಾಗೆ ಅನ್ನಭಾಗ್ಯ ಯೋಜನೆಯ ಬಾಕಿ ಇರುವ ಹಣವೂ ಸಹ ಈ ತಿಂಗಳ ಕೊನೆಯ ಒಳಗೆ ನಿಮ್ಮ ಖಾತೆಗೆ ಜಮಾ ಆಗಲಿದೆ.
ಒಟ್ಟಿಗೆ ಏಳು ಕಂತಿನ ಹಣ ಜಮಾ ಆಗುತ್ತದೆ?
ಎಲ್ಲ ದಾಖಲೆಗಳು ಸರಿಯಾಗಿದ್ದು, ನಿಮ್ಮ ಖಾತೆಗೆ ಹಣ ಬಾರದೆ ಇದ್ದಾರೆ ನೀವು ಸಲ್ಲಿಸಿದ ದೂರು ಅಥವಾ ಮರು ನೋಂದಣಿ ಪ್ರಕ್ರಿಯೆಯ ಅನುಸಾರ ನಿಮಗೆ ಗೃಹಲಕ್ಷ್ಮಿಯ 7 ಕಂತಿನ ಹಣ ಅಂದರೆ 14,000 ರೂಪಾಯಿಗಳು ಒಟ್ಟಿಗೆ ಜಮಾ ಆಗುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಣ ಜಮಾ ಆಗದೆ ಇರಲು ಕಾರಣಗಳು ಏನು?
- ಕೆಲವು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಜೋಡಣೆಯಾಗಿಲ್ಲದ ಕಾರಣ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಸ್ಥಗಿತಗೊಂಡಿದೆ. ಖಾತೆಗೆ ಹಣ ಪಡೆಯಲು, ದಯವಿಟ್ಟು ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ತಕ್ಷಣ ಜೋಡಿಸಿ.
- ಮಹಿಳೆಯ ಹೆಸರು ರೇಷನ್ ಕಾರ್ಡ್ನಲ್ಲಿ ಯಜಮಾನಿಯಾಗಿ ನೋಂದಾಯಿಸದಿದ್ದರೆ, ಗೃಹ ಲಕ್ಷ್ಮಿ ಯೋಜನೆಯ ಹಣವೂ ಬರುವುದಿಲ್ಲ.
- ಆಧಾರ್ ಲಿಂಕ್ ಮಾಡಿರುವುದು ಮತ್ತು ಮನೆಯ ಯಜಮಾನಿಯಾಗಿರುವುದು ಮಾತ್ರವಲ್ಲ ಎನ್ಪಿಸಿ ಸಿ ಮ್ಯಾಪಿಂಗ್ ಮಾಡಿಸದಿದ್ದರೆ ಸಹ ಹಣ ಜಮಾ ಆಗುವುದಿಲ್ಲ.
- E-KYC ಎಂಬುದು ನಿಮ್ಮ ಗುರುತನ್ನು ಮತ್ತು ವಿಳಾಸವನ್ನು ಪರಿಶೀಲಿಸಲು ಬ್ಯಾಂಕುಗಳಿಗೆ ಅನುಮತಿಸುವ ಒಂದು ಡಿಜಿಟಲ್ ಪ್ರಕ್ರಿಯೆಯಾಗಿದ್ದು ನೀವು ನಿಮ್ಮ ಬ್ಯಾಂಕ್ ಖಾತೆಗೆ e-KYC ಮಾಡಿಸದೆ ಇದ್ದರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ.
- ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲೆಗಳಲ್ಲಿ ಹೆಸರು ಮತ್ತು ವಿಳಾಸವು ಒಂದೇ ರೀತಿಯಲ್ಲಿ ಇರಬೇಕು ಮತ್ತು ಸ್ಪೆಲ್ಲಿಂಗ್ ಮಿಸ್ಟೇಕ್ ಅಥವಾ ಹೆಸರು ಬೇರೆ ಇದ್ದರೆ ಖಾತೆಗೆ ಹಣ ವರ್ಗಾವಣೆಯಲ್ಲಿ ವಿಳಂಬ ಆಗುತ್ತದೆ ಅಥವಾ ನಿಮ್ಮ ಅರ್ಜಿ ರಿಜೆಕ್ಟ್ ಆಗಬಹುದು.
- ನೀವು ಸರ್ಕಾರಿ ನೌಕರರು ಆಗಿದ್ದು ಅಥವಾ ನೀವು ಅಥವಾ ನಿಮ್ಮ ಸಂಗಾತಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ ನಿಮ್ಮ ಅರ್ಜಿ ತಿರಸ್ಕಾರ ಆಗುತ್ತದೆ.
- ಕೆಲವು ತಾಂತ್ರಿಕ ದೋಷಗಳಿಂದ ಸಹ ನಿಮ್ಮ ಖಾತೆಗೆ ಹಣ ಬಾರದೆ ಇರುವ ಸಾಧ್ಯತೆ ಹೆಚ್ಚಿದೆ.
ನಿಮ್ಮ ಖಾತೆಯ ವಿವರಗಳನ್ನು ಪರಿಶೀಲಿಸುವುದು ಹೇಗೆ?
ನಿಮ್ಮ ಗೃಹ ಲಕ್ಷ್ಮಿ ಖಾತೆಯ ಪೂರ್ಣ ವಿವರ ಗಳನ್ನ ಸಂಪೂರ್ಣವಾಗಿ ಪರಿಶೀಲಿಸಲು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ ಸರ್ಕಾರದ ಅಧಿಕೃತ ಅಪ್ಲಿಕೇಶನ್ ಡಿ ಬಿ ಟಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ವಿವರಗಳನ್ನು ನೋಡಬಹುದು.
ಇದನ್ನೂ ಓದಿ: ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) ಯೋಜನೆಯಲ್ಲಿ ಇನ್ವೆಸ್ಟ್ ಮಾಡಿ ಲಾಭ ಗಳಿಸಿ
ಇದನ್ನೂ ಓದಿ: ಬಿಎಂಟಿಸಿ ಯಲ್ಲಿ 2500 ಕಂಡಕ್ಟರ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?