ದೇಶದಲ್ಲಿ ಅತಿ ಹೆಚ್ಚು ಜನರು ರೈಲ್ವೆ ಪ್ರಯಾಣವನ್ನು ಇಷ್ಟ ಪಡ್ತಾರೆ. ಕಡಿಮೆ ಖರ್ಚಿನಲ್ಲಿ ದೂರದ ಪ್ರಯಾಣ ಮಾಡಲು ರೈಲ್ವೆ ಅನುಕೂಲ ಆಗಿದೆ. ಆಧುನಿಕತೆಯ ಬಂದಿರುವುದರಿಂದ ಈಗ ವಿವಿಧ ರೀತಿಯ ರೈಲುಗಳು ಬಂದಿವೆ. ಹಿಂದಿನಂತೆ ಈಗ ರೈಲು ಬರಲು ಗಂಟೆಗಳ ಕಾಲ ಕಾಯುವ ಅಗತ್ಯ ಇಲ್ಲ. ಹಾಗೆಯೇ ಈಗ ಮೊಬೈಲ್ ಮೂಲಕ ನಮ್ಮ ರೈಲು ಎಲ್ಲಿದೆ ಎಂಬುದನ್ನು ತಿಳಿಯಬಹುದು. ಇಷ್ಟು ತಂತ್ರಜ್ಞಾನ ಇದ್ದರೂ ಸಹ ನಾವು ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡುತ್ತಾ ಇರುವಾಗ ನಾವು ಇಳಿಯುವ ಸ್ಟೇಷನ್ ಹಿಂದೆ ಹೋಯಿತೋ ಏನೋ ಅಂತ ಆತಂಕ ಆಗುತ್ತದೆ. ಗೊತ್ತಿಲ್ಲದ ಊರಿಗೆ ಅಥವಾ ನಮ್ಮ ಊರಿಗೆ ಪ್ರಯಾಣ ಮಾಡುವಾಗ ರಾತ್ರಿ ನಿದ್ರೆಗೆ ಜಾರಿ ನಮ್ ಸ್ಟೇಷನ್ ನಲ್ಲಿ ಇಳಿಯದೆ ಮುಂದೆ ಯಾವುದೋ ಸ್ಟೇಷನ್ ನಲ್ಲಿ ಇಳಿದು ಮತ್ತೆ ಬಸ್ ಆಟೋ ಅಂತ ದುಡ್ಡು ಖರ್ಚು ಮಾಡಿ ನಾವು ಹೋಗುವ ಸ್ಥಳಕ್ಕೆ ಹೋಗುತ್ತೇವೆ. ಅದೇ ಕಾರಣಕ್ಕೆ ಸ್ಲೀಪರ್ ಕೋಚ್ ಬುಕ್ ಮಾಡಿದರೂ ಸಹ ನಿದ್ರೆ ಮಾಡದೆಯೇ ಪ್ರತಿ ಸ್ಟೇಷನ್ ನಲ್ಲಿ ಯಾವ ಸ್ಟೇಷನ್ ಎಂದು ಪಕ್ಕದ ಪ್ಯಾಸೆಂಜರ್ ನೂ ಸಹ ಎಬ್ಬಿಸುವ ಪರಿಸ್ಥಿತಿ ತಪ್ಪಿಸಲು ರೈಲ್ವೆ ಇಲಾಖೆ ಹೊಸ ನಿಯಮ ಜಾರಿ ಮಾಡಿದೆ.
ರೈಲ್ವೆ ಇಲಾಖೆಯ ಹೊಸ ನಿಯಮವೇನು?
ರೈಲ್ವೆ ಇಲಾಖೆಯ ಹೊಸ ನಿಯಮದಲ್ಲಿ ಇನ್ನೂ ಮುಂದೆ ನಿಮ್ಮ ಸ್ಟೇಷನ್ ಬಂದಾಗ ನೀವು ಟಿಟಿ ಯ ಬಳಿ ನಿಮ್ಮನ್ನು ಎಚ್ಚರಿಸುವಂತೆ ಹೇಳಬಹುದು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ಗಂಟೆಯ ವರೆಗೆ ಮಾತ್ರ ಈ ವ್ಯವಸ್ಥೆ ಇರುತ್ತದೆ. ಈ ನಿಯಮವನ್ನು ಪಾಲಿಸುವ ಸಲುವಾಗಿ ಟಿಟಿ ವೇಕ್ ಅಪ್ ಮೆಮೊ ಜಾರಿಗೊಳಿಸಲಾಗಿದೆ. ನಿಮ್ಮ ಟಿಕೆಟ್ ಚೆಕಿಂಗ್ ಮಾಡಲೇ ಟಿ ಟಿ ಬಂದಾಗ ಪ್ರಯಾಣಿಕರ ಪೂರ್ಣ, ಹೆಸರು ಹಾಗೂ ಸೀಟ್ ನಂಬರ್ ಅನ್ನು ಮೆಮೊದಲ್ಲಿ ನಮೂದಿಸಬೇಕು.
ಇದರ ಜೊತೆಗೆ ರೈಲ್ವೆ ಸ್ಟೇಷನ್ ಬರುವ ಮೊದಲು ಕೋಚ್ ಅಟೆಂಡೆಂಟ್ ಅನ್ನು ಪ್ಯಾಸೆಂಜರ್ ಗೆ ಟಿಟಿ ಕಳುಹಿಸಬೇಕು, ಹಾಗೂ ಪ್ರಯಾಣಿಕರನ್ನು ಟಿಟಿ ಎಚ್ಚರಗೊಳಿಸಿ ಈಗ ಇರುವ ಸ್ಥಳದ ಮಾಹಿತಿ ಮತ್ತು ಮುಂದಿನ ಸ್ಟೇಷನ್ ಬಗ್ಗೆ ಪೂರ್ಣ ವಿವರ ನೀಡಬೇಕು. ಹಾಗೂ ಪ್ರಯಾಣಿಕರು ರಾತ್ರಿ ಒಂದು ನಿಲ್ದಾಣದಲ್ಲಿ ಇಳಿದು ಮತ್ತೊಂದು ರೈಲನ್ನು ಹತ್ತಿ ಇನ್ನೊಂದು ಕಡೆಗೆ ಪ್ರಯಾಣ ಮಾಡಬೇಕು ಎಂದರೆ ಪ್ರಯಾಣಿಕರ ಟಿಕೆಟ್ನ ಪಿಎನ್ಆರ್ ನಂಬರ್ ಒಂದೇ ಇರಬೇಕು. ಆಕಸ್ಮಾತ್ ಟಿಟಿ ಪ್ರಯಾಣಿಕರನ್ನು ಎಳಿಸದೆ ಇದ್ದರೆ ಟಿಟಿ ವಿರುದ್ಧ ಕಂಪ್ಲೇಂಟ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೊಸ ನಿಯಮದಿಂದ ಪ್ರಯಾಣಿಕರಿಗೆ ಏನು ಅನುಕೂಲ?
- ಆರಾಮದಾಯಕ ಪ್ರಯಾಣ:- ನಾವು ಎಲ್ಲಿದ್ದೇವೆ ಎಂಬುದನ್ನು ಅರಿಯದೆ ರಾತ್ರಿ ಎಲ್ಲ ಪ್ರತಿ ಸ್ಟೇಷನ್ ನಲ್ಲಿ ಇದು ಯಾವುದೂ ಎಂದು ನೋಡುವುದು ಅಥವಾ ಬೇರೆಯವರನ್ನು ಕೇಳುತ್ತಾ ಟೆನ್ಶನ್ ನಲ್ಲಿಯೇ ಪ್ರಯಾಣ ಮಾಡುವುದು ತಪ್ಪುತ್ತದೆ.
- ಖರ್ಚಿನ ಉಳಿತಾಯ :- ಇಳಿಯುವ ಸ್ಟೇಷನ್ ತಪ್ಪು ಮುಂದಿನ ಯಾವುದೋ ಸ್ಟೇಷನ್ ನಲ್ಲಿ ಇಳಿದು ಮತ್ತೆ ಬಸ್ ಆಟೋ ಕಾರ್ ಅಥವಾ ಬೇರೆ ರೈಲು ಹತ್ತಿ ಅದಕ್ಕೆ ಹೆಚ್ಚಿನ ಮೊತ್ತವನ್ನು ವಿನಿಯೋಗಿಸುವುದು ತಪ್ಪುತ್ತದೆ.
- ಸಮಯ ಉಳಿತಾಯ :- ಇಳಿಯಬೇಕದ ಸ್ಟೇಷನ್ ನಲ್ಲಿ ಇಳಿಯದೆ ಪ್ರಯಾಣದ ವೆಚ್ಚದ ಜೊತೆಗೆ ಹೆಚ್ಚಿನ ಸಮಯ ಕೂಡಾ ವ್ಯರ್ಥವಾಗುತ್ತದೆ.
ಇದನ್ನೂ ಓದಿ: ನಥಿಂಗ್ ಫೋನ್ (2a); ಕೇವಲ ಒಂದೇ ಒಂದು ದಿನದಲ್ಲಿ 1 ಲಕ್ಷ ಸ್ಮಾರ್ಟ್ ಫೋನ್ ಮಾರಾಟ! ಬೆಲೆ ಎಷ್ಟು ಗೊತ್ತಾ?
ಇದನ್ನೂ ಓದಿ: OnePlus Nord CE4: ಕಡಿಮೆ ಬೆಲೆ, ಭರ್ಜರಿ ಫೀಚರ್ಸ್ ನೊಂದಿಗೆ ನಿಮ್ಮ ಕನಸಿನ ಫೋನ್, ಇನ್ನು ಮುಂದೆ ನಿಮ್ಮ ಕೈಯಲ್ಲಿ