ಇನ್ನೇನು ಲೋಕಸಭಾ ಚುನಾವಣೆಗೆ ಹತ್ರ ಬಂತು ನಮ್ಮ ನೆಚ್ಚಿನ ನಾಯಕನಿಗೆ ವೋಟ್ ಹಾಕಬೇಕು ಆದ್ರೆ ನಿಮ್ಮ ಹೆಸರು ವೋಟಿಂಗ್ ಲಿಸ್ಟ್ ನಲ್ಲಿ ಇರ್ಬೇಕು. ಹಾಗಾದ್ರೆ ವೋಟಿಂಗ್ ಲಿಸ್ಟ್ ಗೆ ನಿಮ್ಮ ಹೆಸರು ನೋಂದಣಿ ಮಾಡುವುದು ಹೇಗೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ನೀವು 18 ವರ್ಷ ಮೇಲ್ಪಟ್ಟ ಭಾರತೀಯ ಪ್ರಜೆ ಆಗಿದ್ದರೆ ಹೊಸ ವೋಟಿಂಗ್ ಲಿಸ್ಟ್ ಪಡೆಯುವುದು ಹೇಗೆ ಎಂದು ತಿಳಿಯೋಣ.
ವೋಟ್ ಯಾಕೆ ಮಾಡಬೇಕು?: ವೋಟಿಂಗ್ ಕಾರ್ಡ್ ಪಡೆಯುವ ಮೊದಲು ನಾವು ಯಾಕೆ ವೋಟ್ ಮಾಡ್ಬೇಕು ಅಂತ ತಿಳಿಬೇಕು. ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳ ತೀರ್ಮಾನವೇ ಅಂತಿಮ ಅಂದರೆ ನಾವು ಹಾಕಿದ ಒಂದು ವೋಟು ಭಾರತದ ಆರ್ಥಿಕ ಹಾಗು ಸಾಮಾಜಿಕವಾಗಿ ಬಹಳ ಮುಖ್ಯವಾಗುತ್ತದೆ. ದೇಶದ ಅಭಿವೃದ್ಧಿ ಸರಿಯಾದ ದಿಕ್ಕಿನಲ್ಲಿ ಸಾಗಬೇಕು ಎಂದರೆ ನಾವು ಸರಿಯಾದ ವ್ಯಕ್ತಿಗೆ ವೋಟ್ ಹಾಕಬೇಕು. ವೋಟ್ ಹಾಕುವುದು ನಮ್ಮ ಹಕ್ಕು ಮಾತ್ರವಲ್ಲ ನಮ್ಮ ಜವಾಬ್ದಾರಿಯೂ ಹೌದು.
ಆನ್ಲೈನ್ ನಲ್ಲಿ ವೋಟಿಂಗ್ ಲಿಸ್ಟ್ ಪಡೆಯುವುದು ಹೇಗೆ?
ವೋಟಿಂಗ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ನೋಂದಣಿ ಆಗಬೇಕು ಅಂದರೆ ಮೊದಲು ನೀವು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP) ವೆಬ್ಸೈಟ್ಗೆ ಭೇಟಿ ನೀಡಬೇಕು. ಇಲ್ಲವೇ ಪ್ಲೇ ಸ್ಟೋರ್ ನಿಂದ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಡೌನ್ಲೋಡ್ ಮಾಡ್ಬೇಕು. ನಂತರ ನಿಮ್ಮ ಮತದಾರರ ನೋಂದಣಿ ಮಾಡಲು ಆನ್ಲೈನ್ ನಲ್ಲಿ ಫಾರ್ಮ್ 6 ನಲ್ಲಿ ನಿಮ್ಮ ಹೆಸರು ನಿಮ್ಮ ಜನ್ಮ ದಿನಾಂಕ ನಿಮ್ಮ ಅಧಿಕೃತ ವಿಳಾಸ ಲಿಂಗ ನಿಮ್ಮ ತಂದೆ ತಾಯಿಯ ಅಥವಾ ಗಂಡನ ಹೆಸರು ಎಲ್ಲವನ್ನೂ ಫಿಲ್ ಅಪ್ ಮಾಡಬೇಕು.
ಫಾರ್ಮ್ ಫಿಲ್ ಅಪ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ , ಅಥವಾ ಪಾಸ್ಪೋರ್ಟ್ ನಂಬರ್ ಹಾಗೂ ನಿಮ್ಮ ಮೊಬೈಲ್ ನಂಬರ್ ಫಿಲ್ ಅಪ್ ಮಾಡ್ಬೇಕು. ನೀವು ಫಾರ್ಮ್ 6 ಸಲ್ಲಿಸಿದ ನಂತರ ನಿಮ್ಮ ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿಗಳು ಅಂದರೆ BLO ನಿಮ್ಮ ವಾಸಸ್ಥಳ ಪರಿಶೀಲನೆಯನ್ನೂ ಮಾಡುತ್ತಾರೆ. ನಂತರ ನಿಮ್ಮ ಪೋಸ್ಟಲ್ ಅಡ್ರೆಸ್ ಗೆ ನಿಮ್ಮ ವೋಟಿಂಗ್ ಕಾರ್ಡ್ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವವರಿಗೆ ಹೊಸ ನಿಯಮ ಜಾರಿ ಮಾಡಿದ ರೈಲ್ವೆ ಇಲಾಖೆ
ನಿಮ್ಮ ವೋಟಿಂಗ್ ಕಾರ್ಡ್ ನಲ್ಲಿ ಹೆಸರು ಅಥವಾ ವಿಳಾಸ ತಿದ್ದುಪಡಿ ಹೇಗೆ?
ನಿಮ್ಮ ವೋಟಿಂಗ್ ಕಾರ್ಡ್ ನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ ಅಥವಾ ನೀವು ನಿಮ್ಮ ಅಡ್ರೆಸ್ ಚೇಂಜ್ ಮಾಡಿದರೆ ನೀವು ಆನ್ಲೈನ್ ಮೂಲಕ ತಿದ್ದುಪಡಿ ಮಾಡಬಹುದು. ನೀವು ಮತದಾರರ ಸಹಾಯವಾಣಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ನಂತರ ನಿಮ್ಮ ವೋಟಿಂಗ್ ಕಾರ್ಡ್ ನಲ್ಲಿ ಯಾವ ಮಾಹಿತಿ ಚೇಂಜ್ ಮಾಡಲು ಫಾರ್ಮ್ 8 ಅನ್ನು ಫಿಲ್ ಅಪ್ ಮಾಡಬೇಕಾಗುತ್ತದೆ. ನೀವು ಫಾರ್ಮ್ 8 ಫಿಲ್ ಅಪ್ ಮಾಡಲು ನಿಮ್ಮ ವೋಟಿಂಗ್ ಕಾರ್ಡ್ ನಂಬರ್ ಹಾಗೂ ನಿಮ್ಮ ವಿಳಾಸದ ಅಪ್ಡೇಟ್ ನೀಡಬೇಕು. ನಂತರ ನಿಮ್ಮ ವಾಸಸ್ಥಳಕ್ಕೆ BLO ಭೇಟಿ ನೀಡುತ್ತಾರೆ. ಅವರು ಏನಾದರೂ ಮಾಹಿತಿ ಕೇಳಿದರೆ ನೀವು ಮಾಹಿತಿ ನೀಡಬೇಕಾಗುತ್ತದೆ.
ಇನ್ನೂ ನಿಮ್ಮ ಬಳಿ ಸ್ಮಾರ್ಟ್ ಫೋನ್ ಅಥವ ಇಂಟರ್ನೆಟ್ ಕನೆಕ್ಷನ್ ಇಲ್ಲ ಎಂದಾದರೆ BLO ಭೇಟಿ ನೀಡಿ ಇಲ್ಲವೇ ಚುನಾವಣಾ ನೋಂದಣಿ ಕಛೇರಿಗೆ ಭೇಟಿ ನೀಡಿ .ನೀವು ಚುನಾವಣೆ ನಡೆಯುವ ದಿನದ ಸ್ವಲ್ಪ ದಿನಗಳ ಮೊದಲು ನೀವು ವೋಟಿಂಗ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು. ಭಾರತದ ಭವಿಷ್ಯ ಪ್ರತಿ ಭಾರತೀಯ ನೀಡುವ ವೋಟ್ ಮೇಲೆ ನಿರ್ಧಾರ ಆಗಿದೆ.
ಇದನ್ನೂ ಓದಿ: ಮಹಿಳೆಯರಿಗೆ ಮತ್ತೊಂದು ಹೊಸ ಯೋಜನೆ ಘೋಷಣೆ ಮಾಡಿದ ಕಾಂಗ್ರೆಸ್ ; ಪ್ರತಿ ವರ್ಷ 1 ಲಕ್ಷ ಹಣ ಖಾತೆಗೆ ಜಮಾ