ಬೇಸಿಗೆ ಬಂದರೆ ಎಲ್ಲೆಡೆ ಕಲ್ಲಂಗಡಿ ಹಣ್ಣು ಸಿಗುತ್ತದೆ. ನೋಡಲು ಸುಂದರವಾಗಿ ಇರುತ್ತದೆ, ಕಲ್ಲಂಗಡಿ ಹಣ್ಣು ಸಾಮಾನ್ಯವಾಗಿ ಕೆಂಪು ತಿರುಳು ಮತ್ತು ಹಸಿರು ಸಿಪ್ಪೆ ಇರುತ್ತದೆ. ಇದು ನೋಡಲು ಸೌತೆಕಾಯಿಗಳು, ಚೀನೀಕಾಯಿಗಳು ಮತ್ತು ಪ್ಯಾರೆಕಾಯಿಗಳ ಹಾಗೆ ಇರುತ್ತದೆ. ನಾವು ತಿನ್ನುವ ಹಣ್ಣಿನ ಇತಿಹಾಸ ಮತ್ತು ಉಪಯೋಗಗಳ ಬಗ್ಗೆ ತಿಳಿಯೋಣ.
ಕಲ್ಲಂಗಡಿ ಹಣ್ಣಿನ ವಿಶೇಷತೆಗಳು :- ಹೆಚ್ಚಿನ ಪ್ರಮಾಣದ ನೀರು ಹೊಂದಿರುವ ಈ ಹಣ್ಣು ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಡಯಟ್ ಮಾಡುವ ವ್ಯಕ್ತಿಗಳಿಗೆ ಇದು ತುಂಬಾ ಉಪಯೋಗ ಆಗುತ್ತದೆ ಯಾಕೆಂದರೆ ಒಂದು ಕಪ್ ಕಲ್ಲಂಗಡಿಯಲ್ಲಿ ಕೇವಲ 45 ಕ್ಯಾಲೋರಿಗಳು ಮಾತ್ರ ಇರುತ್ತವೆ. ಹಾಗೂ ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಹೆಚ್ಚಾಗಿದೆ. ಹಣ್ಣಿನಲ್ಲಿ 92% ನೀರು ಇದೆ. ಇದರಿಂದ ನಿಮ್ಮ ಬಾಯಾರಿಕೆ ಜೊತೆಗೆ ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಫೈಬರ್ ಕಂಟೆಂಟ್ ಇರುವುದರಿಂದ ನಿಮಗೆ ಹಸಿವಾಗಿವುದನ್ನು ತಡೆಯುತ್ತದೆ. ನಿಮಗೆ ಸ್ವಲ್ಪ ಹಣ್ಣು ತಿಂದರೆ ಹೊಟ್ಟೆ ತುಂಬಿದ ಅನುಭವ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕಲ್ಲಂಗಡಿ ಹಣ್ಣಿನ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು :-
- 1200 ವಿಧಗಳು: ಪ್ರಪಂಚದಾದ್ಯಂತ ಸುಮಾರು 1200 ವಿವಿಧ ರೀತಿಯ ಕಲ್ಲಂಗಡಿ ಗಳು ಇವೆ ಎಂದು ತಿಳಿಯಲಾಗಿದೆ.
- ಪೆಟ್ಟಿಗೆಯಾಕಾರದ ಕಲ್ಲಂಗಡಿ: ಕಳೆದ 40 ವರ್ಷಗಳಿಂದ ಜಪಾನ್ನಲ್ಲಿ ಪೆಟ್ಟಿಗೆಯ ಆಕಾರದಲ್ಲಿ ಕಲ್ಲಂಗಡಿಗಳನ್ನು ಬೆಳೆಯುತ್ತಾ ಇದ್ದಾರೆ.
- ಅಮೇರಿಕಾದಲ್ಲಿ ಜನಪ್ರಿಯ : ಯುನೈಟೆಡ್ ಸ್ಟೇಟ್ಸ್ನಲ್ಲಿ ಕಲ್ಲಂಗಡಿ ಹೆಚ್ಚು ಜನರು ಸೇವಿಸುವ ಹಣ್ಣು ಕಲ್ಲಂಗಡಿ.
- ಕಡಿಮೆ ಕ್ಯಾಲೋರಿ: ಪ್ರತಿ ಕಪ್ ಕಲ್ಲಂಗಡಿಯಲ್ಲಿ ಕೇವಲ 40 ಕ್ಯಾಲೋರಿಗಳು ಇರುತ್ತವೆ. ಇದು ನಿಮಗೆ ಬೊಜ್ಜಿನಿಂದ ಬಳಲುವುದನ್ನು ತಪ್ಪಿಸುತ್ತದೆ.
- ಬೆಳೆಯಲು ಸಮಯ: ಕೆಲವು ವಿಧದ ಕಲ್ಲಂಗಡಿಗಳು ಹಣ್ಣಾಗಲು 130 ದಿನಗಳು ಬೇಕು.
- ಪ್ರಾಚೀನ ಈಜಿಪ್ಟ್ ನಲ್ಲಿ ಬಳಸುವ ವಿಧಾನ: ಪ್ರಾಚೀನ ಈಜಿಪ್ಟ್ನಲ್ಲಿ, ಕಲ್ಲಂಗಡಿಗಳನ್ನು ಸಮಾಧಿಯ ಅಡಿಯಲ್ಲಿ ಸಮಾಧಿಯ ಪೋಷಣೆಯ ಸಂಕೇತವಾಗಿ ಇರಿಸಲಾಗುತ್ತದೆ.
- ಇತಿಹಾಸ : 13 ನೇ ಶತಮಾನದಲ್ಲಿ ಯುರೋಪ್ನಲ್ಲಿ ಮತ್ತು 10 ನೇ ಶತಮಾನದಲ್ಲಿ ಚೀನಾದಲ್ಲಿ ಕಲ್ಲಂಗಡಿ ಬೆಳೆಯಲಾಯಿತು.
ಇದನ್ನೂ ಓದಿ: ಮಹಿಳೆಯರಿಗೆ 11 ಸಾವಿರ ನೀಡುವ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
ಆರೋಗ್ಯಕ್ಕೆ ಏಷ್ಟು ಸಹಾಯಕ?
- ಉರಿಯೂತ ನಿವಾರಕ : ಕಲ್ಲಂಗಡಿ ನಿಮ್ಮ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
- ತೂಕ ನಷ್ಟಕ್ಕೆ ಸಹಾಯಕ : ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊಂದಿರುವುದಿಲ್ಲ, ಇದು ಉತ್ತಮ ರೀತಿಯಲ್ಲಿ ತೂಕ ನಷ್ಟ ಮಾಡಲು ಕೆಲಸ ಮಾಡುತ್ತದೆ.
- ಚರ್ಮದ ರಕ್ಷಣೆ :- ಕಲ್ಲಂಗಡಿಯಲ್ಲಿರುವ ವಿಟಮಿನ್ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
- ಹೃದಯದ ಆರೋಗ್ಯ :- ಕಲ್ಲಂಗಡಿಯಲ್ಲಿರುವ ಪೊಟ್ಯಾಸಿಯಮ್ ನಿಮ್ಮ ಹೃದಯವನ್ನು ನಿಯಂತ್ರಿಸಲು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ರೋಗ ನಿವಾರಕ :- ಕಲ್ಲಂಗಡಿ ಹಣ್ಣಿನಲ್ಲಿ ಕ್ಯಾನ್ಸರ್ ಅಂತಹ ರೋಗ ಬರದಂತೆ ತಡೆಯುವ ಶಕ್ತಿ ಇದೆ. ಇದು ಕ್ಯಾನ್ಸರ್ ರೋಗವನ್ನು ತಡೆಯುವ ರಾಸಾಯನಿಕ ಶಕ್ತಿ ಹೊಂದಿದೆ.
ಇದನ್ನೂ ಓದಿ: ನಿಮ್ಮ ಅನುಕೂಲತೆಗೆ ಯಾವುದು ಸೂಕ್ತ? ಟೇಸರ್ನ ಮಿತವ್ಯಯ ಅಥವಾ ಫ್ರಾಂಕ್ಸ್ನ ವಿನ್ಯಾಸ, ಯಾವುದನ್ನು ಆಯ್ಕೆ ಮಾಡುತ್ತೀರಾ
ಇದನ್ನೂ ಓದಿ: ಬೋಟ್ ಏರ್ಡೋಪ್ಸ್ 120: ಚಾರ್ಜ್ ಬಗ್ಗೆ ಚಿಂತೆ ಮಾಡದೆ 40 ಗಂಟೆಗಳ ಕಾಲ ಬಿಂದಾಸ್ ಉಪಯೋಗಿಸಬಹುದು