ಯುಪಿಐ ಎಂದರೆ “ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್”. ಇದು ಭಾರತದಲ್ಲಿ ಸುರಕ್ಷಿತವಾಗಿ ಮತ್ತು ಯಾವಾಗ ಬೇಕಾದರೂ ನಿಮಿಷದಲ್ಲಿ ಹಣವನ್ನು ಡಿಜಿಟಲ್ ಮೂಲಕ ಪಾವತಿ ಮಾಡುವ ವ್ಯವಸ್ಥೆ. ಯೂಪಿಐ ಮೂಲಕ ನೀವು ಯಾವುದೇ ಬ್ಯಾಂಕ್ ಖಾತೆಯಿಂದ ಯಾವುದೇ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬಹುದು. ಈಗ ಎಲ್ಲ ಅಂಗಡಿ ಮುಂಗಟ್ಟು ಮಾಲ್ ಬಸ್ ಸ್ಟ್ಯಾಂಡ್ ಎಲ್ಲಾ ಕಡೆ ಯುಪಿಐ ಬಳಸಬಹುದು. ಯುಪಿಐ ಬಂದ್ಮೇಲೆ ಹಣ ಚಲಾವಣೆ ಕಡಿಮೆ ಆಗುತ್ತಾ ಬಂದಿದೆ. ಯುಪಿಐ ನಲ್ಲಿ ಹಣ ಪಾವತಿ ಮಾಡಲು ಪಾಸ್ವರ್ಡ್ ನಮೂದಿಸಬೇಕು. ಆದರೆ ಕೆಲವು ಬಾರಿ ನಮಗೆ ಪಾಸ್ವರ್ಡ್ ಮರೆತು ಹೋಗುತ್ತದೆ. ಆಗ ನಾವು ಯಾವ ಕ್ರಮ ಅನುಸರಿಸಬೇಕು ಎಂಬ ಮಾಹಿತಿ ಇಲ್ಲಿದೆ.
ಯುಪಿಐ ಪಿನ್ ಮರೆತು ಹೋದರೆ ಈ ಕ್ರಮ ಅನುಸರಿಸಿ
- ಹಂತ 1: ಯುಪಿಐ ಸೇವೆಗಳನ್ನು ನೀಡುವ ಯಾವುದೇ ಮೊಬೈಲ್ ಅಪ್ಲಿಕೇಶನ್ (ಫೋನ್ಪೇ, ಗೂಗಲ್ ಪೇ, ಪೇಟಿಎಂ, ಭೀಮ್ ಯುಪಿಐ) ತೆರೆಯಿರಿ.
- ಹಂತ 2: ಮುಖ್ಯ ಪುಟದಲ್ಲಿ ಪ್ರೊಫೈಲ್ ಅಥವಾ ಸೆಟ್ಟಿಂಗ್ಸ್ ಅನ್ನು ಟ್ಯಾಪ್ ಮಾಡಿ.
- ಹಂತ 3: ಯುಪಿಐ ಪಿನ್ ನೀವು ಬಯಸುವ ಬ್ಯಾಂಕ್ ಖಾತೆಯನ್ನು ಕ್ಲಿಕ್ ಮಾಡಿ.
- ಹಂತ 4: UPI PIN ಅಥವಾ Security ವಿಭಾಗ, “UPI PIN ಬದಲಾಯಿಸಿ” ಅಥವಾ UPI PIN ಮರುಹೊಂದಿಸಿ ಆಯ್ಕೆ ಟ್ಯಾಪ್ ಮಾಡಿ.
- ಹಂತ 5: ನಿಮ್ಮ ಡೆಬಿಟ್ ಕಾರ್ಡ್ / ATM ಕಾರ್ಡ್ / ಆಧಾರ್ ಕಾರ್ಡ್ ಯಂತಹ ವಿವರಗಳನ್ನು ನಮೂದಿಸಿ. ಕೆಲವು ಅಪ್ಲಿಕೇಶನ್ಗಳಲ್ಲಿ, MPIN / OTP / ಪಾಸ್ವರ್ಡ್ ನಮೂದಿಸಬೇಕಾಗಬಹುದು.
- ಹಂತ 6: ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ನಮೂದಿಸಿ ಮತ್ತು ಪರಿಶೀಲಿಸು ಬಟನ್ ಕ್ಲಿಕ್ ಮಾಡಿ.
- ಹಂತ 7: 4-6 ಅಂಕೆಗಳ ಹೊಸ UPI PIN ರಚಿಸಿ. ಕೆಲವು ಅಪ್ಲಿಕೇಶನ್ಗಳಲ್ಲಿ, ಪಿನ್ ಖಚಿತಪಡಿಸಲು ಮತ್ತೊಮ್ಮೆ ನಮೂದಿಸಬೇಕಾಗಬಹುದು.
- ಹಂತ 8: ಸಲ್ಲಿಸು ಅಥವಾ ದೃಢೀಕರಿಸು ಟೈಪ್ ಮಾಡಿ. ಯಶಸ್ವಿ ಪಿನ್ ಬದಲಾವಣೆಯ ಸಂದೇಶವನ್ನು ನೀವು ಪಡೆಯುತ್ತೀರಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
UPI ಬಳಕೆಯಿಂದಾಗುವ ಕೆಲವು ಪ್ರಮುಖ ಉಪಯೋಗಗಳು ಈ ಕೆಳಗಿನಂತಿವೆ:
- ತ್ವರಿತ ಪಾವತಿಗಳು: UPI ಮೂಲಕ, ನೀವು ಕೆಲವೇ ಕ್ಲಿಕ್ಗಳಲ್ಲಿ ಯಾರಿಗಾದರೂ ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು.
- ಸುಲಭ ಬಳಕೆ: UPI ಬಳಸಲು ತುಂಬಾ ಸುಲಭ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ, UPI ID ರಚಿಸಿ, ಮತ್ತು ನೀವು ಪಾವತಿಗಳನ್ನು ಮಾಡಬಹುದು.
- ಸುರಕ್ಷಿತ ಪಾವತಿಗಳು: UPI ಯು ಎಂಡ್-ಟು-ಎಂಡ್ಕ್ರಿಪ್ಶನ್ ಮತ್ತು 2-ಫ್ಯಾಕ್ಟರ್ ಅಥೆಂಟಿಕೇಶನ್ (2FA) ರೀತಿಯ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ.
- ಯಾವುದೇ ಶುಲ್ಕವಿಲ್ಲ: UPI ಬಳಸಲು ನೀವು ಯಾವುದೇ ರೀತಿಯ ಶುಲ್ಕ ನೀಡುವ ಅಗತ್ಯ ಇಲ್ಲ.
- 24/7 ಲಭ್ಯತೆ: UPI ಪಾವತಿ ಮಾಡಲು 24/7 ಸಾಧ್ಯವಿದೆ, ಆದ್ದರಿಂದ ನೀವು ಯಾವುದೇ ಸಮಯದಲ್ಲಿ ಪಾವತಿಗಳನ್ನು ಮಾಡಬಹುದು.
- ವಿವಿಧ ಪಾವತಿಗಳಿಗೆ ಬಳಕೆ: UPI ಅನ್ನು ವಿವಿಧ ವ್ಯಕ್ತಿಗಳಿಗೆ ಹಣ ಕಳುಹಿಸಲು , ವ್ಯಾಪಾರಿಗಳಿಗೆ ಹಣ ಪಾವತಿ ಮಾಡಲು , ಕರೆಂಟ್ ಬಿಲ್ , ರೇಷನ್ ಬಿಲ್, ಯಾವುದೇ ತಿಂಡಿ ತಿನಿಸು ತಿಂದರೆ ನಿಮ್ಮ ಮೊಬೈಲ್ ಟಿವಿ ಅಥವಾ ಯಾವುದೇ ಅಪ್ಲಿಕೇಶನ್ ಗೆ ರಿಚಾರ್ಜ್ ಮಾಡಬಹುದಾಗಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಇದುವೇ ಬೆಸ್ಟ್ ಟೈಂ; ಮುಂದಿನ ತಿಂಗಳಿಂದ ಬೆಲೆ ಏರಿಕೆ
ಇದನ್ನೂ ಓದಿ: Jio ದ ದೈನಂದಿನ 3 GB ಪ್ಲಾನ್ ನೊಂದಿಗೆ ಸುಲಭವಾಗಿ IPL 2024 ಅನ್ನು ವೀಕ್ಷಣೆ ಮಾಡಿ!