ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಉತ್ತಮ ಆಹಾರವನ್ನು ಸೇವಿಸಬೇಕು. ಆದರೆ ನಾವು ಸೇವಿಸುವ ಆಹಾರದಿಂದ ನಮ್ಮ ಆರೋಗ್ಯಕ್ಕೆ ಏಷ್ಟು ಉಪಯೋಗ ಹಾಗೂ ನಾವು ಯಾವ ಹಣ್ಣು ಅಥವಾ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು ಎಂಬುದನ್ನು ತಿಳಿದಿರಬೇಕು. ನಮ್ಮ ದೇಹದ ಬಹುಮುಖ್ಯ ಅಂಗ ಲಿವರ್. ನಮ್ಮ ಇಡೀ ದೇಹದ ಕಾರ್ಯ ಚಟುವಟಿಕೆ ಯನ್ನು ಸಮತೋಲನದಲ್ಲಿಡಲು ಲಿವರ್ ಬಹುಮುಖ್ಯ ಅಂಗವಾಗಿದೆ. ಲಿವರ್ ಆರೋಗ್ಯವನ್ನು ಕಾಪಾಡಲು ನಾವು ಕೆಲವು ಹಣ್ಣುಗಳನ್ನು ಸೇವಿಸಬೇಕು. ಯಾವ ಹಣ್ಣು ಸೇವಿಸಿದರೆ ನಿಮ್ಮ ಲಿವರ್ ಆರೋಗ್ಯ ಕಾಪಾಡಲು ಸಾಧ್ಯವೆಂಬುದನ್ನು ಈ ಲೇಖನದಲ್ಲಿ ನೋಡಿ.
ಈ ಹಣ್ಣುಗಳನ್ನು ತಿನ್ನು ನಿಮ್ಮ ಲಿವರ್ ಆರೋಗ್ಯ ಕಾಪಾಡಿಕೊಳ್ಳಿ
ಉತ್ತಮವಾದ ಆಹಾರವನ್ನು ಸೇವಿಸಿ ನಿಮ್ಮ ಲಿವರ್ ಆರೋಗ್ಯ ಕಾಪಾಡಿಕೊಳ್ಳಬಹುದು. ಹಾಗಾದರೆ ನಿಮ್ಮ ಡಯಟ್ ನಲ್ಲಿ ಈ ಹಣ್ಣು ಸೇವಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
- ಸೇಬು ಹಣ್ಣು:- ಸೇಬು ಹಣ್ಣಿನಲ್ಲಿ ಪೆಕ್ಟಿನ್ ಅಂಶವು ಹೇರಳವಾಗಿ ಇರುವುದರಿಂದ ಇದು ನಿಮ್ಮ ಲಿವರ್ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಿದೆ. ಸೇಬುಹಣ್ಣಿನಲ್ಲಿ ಇರುವ ಫಾಲಿಫಿನಾಲ್ ಅಂಶವು ಲಿವರ್ ನ ಸಿರಮ್ ಮತ್ತು ಲಿಪಿಟ್ ಮಟ್ಟವನ್ನು ನಿಯಂತ್ರಣ ಮಾಡಲು ಸಹಾಯಕವಾಗಿದೆ.
- ರಾಸ್ಬೇರಿ:- ಇದು ಬಹಳ ರುಚಿಕರವಾಗಿ ಇರುತ್ತದೆ. ಈ ಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಹೇರಳವಾಗಿ ಇದೆ. ಇದು ಲಿವರ್ ಗೆ ಆಗುವ ಹಾನಿಯನ್ನು ತಪ್ಪಿಸಲು ಸಹಾಯಕವಾಗಿದೆ.
- ಬಾಳೆಹಣ್ಣು:- ಬಾಳೆಹಣ್ಣಿನಲ್ಲಿ ಹೆಚ್ಚಾಗಿ ವಿಟಮಿನ್ V6 ಮತ್ತು ವಿಟಮಿನ್ A ಹೆಚ್ಚಾಗಿದೆ. ಮತ್ತು ಇದರಲ್ಲಿ ಇರುವ ಆರೋಗ್ಯಕರ ಅಂಶಗಳು ಲಿವರ್ ನ ಆರೋಗ್ಯವನ್ನು ಕಾಪಾಡುತ್ತದೆ.
- ಕಪ್ಪು ದ್ರಾಕ್ಷಿ:- ಕಪ್ಪು ದ್ರಾಕ್ಷಿಯಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ ಗುಣಗಳು ಲಿವರ್ ಆರೋಗ್ಯವನ್ನು ಕಾಪಾಡಲು ಸಹಾಯಕ. ಕಪ್ಪು ದ್ರಾಕ್ಷಿ ತಿನ್ನುವುದರಿಂದ ಲಿವರ್ ಡ್ಯಾಮೇಜ್ ಆಗುವುದು ತಪ್ಪುತ್ತದೆ. ಹಾಗೂ ಲಿವರ್ ನ ಕೋಶಗಳು ಹಾನಿಯಾಗದಂತೆ ರಕ್ಷಣೆ ಮಾಡುತ್ತದೆ.
- ಅಂಜೂರ :- ಅಂಜೂರ ಹಣ್ಣು ತಿನ್ನಲು ಬಹಳ ರುಚಿಯಾಗಿರುತ್ತದೆ . ಅಂಜೂರ ಹಣ್ಣನ್ನು ನಿತ್ಯ ಸೇವಿಸುವುದರಿಂದ ಹಣ್ಣಿನ ಆ್ಯಂಟಿ ಆಕ್ಸಿಡೆಂಟ್ ಗುಣವೂ ಕೋಶಗಳ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.
- ಅವಾಕೊಡೋ :- ಈ ಹಣ್ಣಿನಲ್ಲಿ ಗ್ಲೂಟಾಥಿಯೋನ್ ಅಂಶವು ಹೇರಳವಾಗಿ ಇರುವುದರಿಂದ ಲಿವರ್ ನಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಾಯಮಾಡುತ್ತದೆ. ಹಾಗೂ ಜೀವಕೋಶಗಳ ರಕ್ಷಣೆಗೆ ಸಹಾಯ ಆಗುತ್ತದೆ.
- ಪಪ್ಪಾಯಿ :- ಪಪ್ಪಾಯ ಹಣ್ಣು ಎಲ್ಲರಿಗೂ ಪ್ರಿಯ. ಹಾಗೆಯೇ ಇದು ನಮಗೆ ಲಿವರ್ ನ ಆರೋಗ್ಯ ಕಾಪಾಡಲು ಬಹಳ ಸಹಾಯ ಮಾಡುತ್ತದೆ. ಇದರಲ್ಲಿ ಇರುವ ಪೌಷ್ಠಿಕ ಅಂಶಗಳು ಲಿವರ್ ಆರೋಗ್ಯಕ್ಕೆ ಬಹಳ ಉತ್ತಮ.
ಹೀಗೆ ಉತ್ತಮ ಆರೋಗ್ಯಕರ ಅಂಶಗಳನ್ನು ನಮ್ಮ ಆಹಾರ ದಲ್ಲಿ ರೂಢಿಸಿಕೊಂಡರೆ ನಮ್ಮ ಎಲ್ಲಾ ಆರೋಗ್ಯ ರಕ್ಷಣೆಗೆ ಬಹಳ ಮುಖ್ಯವಾಗಿರುತ್ತದೆ. ನಿಮಗೆ ಯಾವುದೇ ಲಿವರ್ ನ ಆರೋಗ್ಯಕ್ಕೆ ಉತ್ತಮ ಆಹಾರ ಗಳನ್ನು ಸೇವಿಸಬೇಕು. ನಮ್ಮ ಆರೋಗ್ಯ ರಕ್ಷಣೆಗೆ ನಾವು ಉತ್ತಮ ಆಹಾರ ಸೇವನೆ ಬಹಳ ಮುಖ್ಯವಾಗುತ್ತದೆ. ನಿಮ್ಮ ಲಿವರ್ problem ಗಳಿಗೆ ಹೆಚ್ಚಿನ ಮಾಹಿತಿಗೆ ನಿಮ್ಮ ಡಾಕ್ಟರ್ ಅನ್ನು ಸಂಪರ್ಕಿಸಿ.
ಇದನ್ನೂ ಓದಿ: ನಿಂಬೆಹಣ್ಣಿನ ರಸವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು !
ಇದನ್ನೂ ಓದಿ: ಹೊಸ ಮಾರುತಿ ಸುಜುಕಿ ಡಿಜೈರ್; ಸನ್ರೂಫ್, 360 ಡಿಗ್ರಿ ಕ್ಯಾಮೆರಾ ಮತ್ತು ದೊಡ್ಡ ಟಚ್ಸ್ಕ್ರೀನ್ನೊಂದಿಗೆ ಬರುತ್ತಿದೆ!