ಪಿಎಸ್ಐ ಹುದ್ದೆಗಳ ನೇಮಕಾತಿಗೆ ಮುಂಬರುವ ಮೇ 8 ರಂದು ಪರೀಕ್ಷಾ ದಿನ ನಿಗದಿ ಆಗಿತ್ತು. ಆದರೆ ಈಗ ಅಭ್ಯರ್ಥಿಗಳಿಗೆ ಕೊಂಚ ನಿರಾಸೆ ಆಗಿದೆ. ಪರೀಕ್ಷೆ ಮುಂದೂಡುವ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿದ್ದು. ಹುದ್ದೆಗೆ ಅರ್ಜಿ ಹಾಕಿದ ಅಭ್ಯರ್ಥಿಗಳು ಮುಂದಿನ ಅಧಿಸೂಚನೆ ಬರುವ ವರೆಗೆ ಕಾಯಬೇಕು.
ಲಿಖಿತ ಪರೀಕ್ಷೆ ಮುಂದೂಡಿಕೆಗೆ ಕಾರಣವೇನು?: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಈ ಕಾರಣದಿಂದ ನಡೆಯಬೇಕಿದ್ದ ಪಿಎಸ್ಐ ಹುದ್ದೆಗಳ ಲಿಖಿತ ಪರೀಕ್ಷೆ ಯನ್ನೂ ಮುಂದೂಡಲಾಗಿದೆ.
ಪರೀಕ್ಷೆ ಯಾವಾಗ ನಡೆಯುತ್ತದೆ?: ಈಗ ಮುಂದಿನ ಪರೀಕ್ಷಾ ದಿನವನ್ನು ಇನ್ನೂ ಘೋಷಣೆ ಮಾಡಲಿಲ್ಲ. ಮುಂದಿನ ಪರೀಕ್ಷಾ ದಿನವನ್ನು ಇಲಾಖೆಯು ಮುಂದಿನ ದಿನಗಳಲ್ಲಿ ಪ್ರಕಟಣೆ ಮಾಡಲಿದೆ. ಪರೀಕ್ಷೆ ದಿನವನ್ನು ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ನಲ್ಲಿ ತಿಳಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ರಿಟರ್ನ್ ಅನ್ನು ಪಡೆಯಿರಿ
ಪಿಎಸ್ಐ ಹುದ್ದೆಗೆ ಲಿಖಿತ ಪರೀಕ್ಷೆ ವಿಧಾನ ಹೇಗೆ?
ಅರ್ಜಿ ಸಲ್ಲಿಸುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಲಿಖಿತ ಪರೀಕ್ಷೆಗೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಪದವಿ ಮಟ್ಟದ ವಿಷಯಗಳಿಗೆ ಸಂಬಧಿಸಿದ ಎರಡು ಪತ್ರಿಕೆಗಳು ಇರುತ್ತದೆ. ಎರಡು ಪತ್ರಿಕೆಯಲ್ಲಿ ಯಾವ ಯಾವ ವಿಷಯಗಳು ಇರುತ್ತವೆ ಎಂಬುದನ್ನು ನೋಡೋಣ.
ಪ್ರಶ್ನೆ ಪತ್ರಿಕೆ -1: ಮೊದಲ ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 50 ಅಂಕಗಳ ಪ್ರಶ್ನೆ ಇರುತ್ತದೆ. ಈ ಪತ್ರಿಕೆಯಲ್ಲಿ ಪ್ರಬಂಧ ಬರಹ, ಸಾರಾಂಶ ಬರಹ, ಭಾಷಾಂತರ ಪ್ರಶ್ನೆಗಳು ಒಳಗೊಂಡಿರುತ್ತದೆ. ಪ್ರಬಂಧ ಬರಹದಲ್ಲಿ ನೀವು 600 ಶಬ್ದಗಳ ಮಿತಿಯನ್ನು ಮೀರಬಾರದು ಎಂಬ ನಿಯಮವಿದೆ. ಈ ಪರೀಕ್ಷೆಯ ಅವಧಿಯು 1-30 ಗಂಟೆ ಇರುತ್ತದೆ. ಪ್ರಬಂಧ ಬರಹವೂ 20 ಅಂಕಗಳಿಗೆ ಇರುತ್ತದೆ. ಸಾರಾಂಶ ಬರಹವು 10 ಅಂಕಗಳಿಗೆ ಇರುತ್ತದೆ. ಕನ್ನಡದಿಂದ ಇಂಗ್ಲೀಷ್ಗೆ ಮತ್ತು ಇಂಗ್ಲೀಷ್ನಿಂದ ಕನ್ನಡ ಭಾಷಾಂತರಕ್ಕೆ 20 ಅಂಕಗಳು ಇರುತ್ತವೆ. ಮೊದಲ ಪರೀಕ್ಷೆಯಲ್ಲಿ ಪಾಸ್ ಆಗಲು ಕನಿಷ್ಠ ಅಂಕಗಳನ್ನು ಪಡೆಯಬೇಕು ಇದರಲ್ಲಿ ಎಂಬ ನಿಯಮ ಇರುವುದಿಲ್ಲ.
ಪ್ರಶ್ನೆ ಪತ್ರಿಕೆ 2: ಎರಡನೇ ಪರೀಕ್ಷೆಯ ಅವಧಿಯು ಸಹ 1-30 ಗಂಟೆ ಆಗಿರುತ್ತದೆ. ಎರಡನೇ ಪ್ರಶ್ನೆ ಪತ್ರಿಕೆಯೂ ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲಿ ಬರೆಯಲು ಸಾಧ್ಯವಿದೆ. 150 ಅಂಕಗಳಿಗೆ Objective ಮಾದರಿಯ ಬಹು ಆಯ್ಕೆ ಉತ್ತರಗಳ ಲಿಖಿತ ಪರೀಕ್ಷೆಯು ಇರುತ್ತದೆ. ಈ ಪ್ರಶ್ನೆ ಪತ್ರಿಕೆಯಲ್ಲಿ ವ್ಯಕ್ತಿಯ ಮಾನಸಿಕ ಸಾಮಾರ್ಥ್ಯವನ್ನು ನೀಡಲಾಗುತ್ತದೆ. ಎರಡನೇ ಪತ್ರಿಕೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ ಶೇ.25 ಅಂಕಗಳನ್ನು ಕಡಿತ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಎರಡು ಪರೀಕ್ಷೆಗಳಿಗೂ ಕಡ್ಡಾಯವಾಗಿ ಹಾಜರಾಗಬೇಕು ಎಂಬ ನಿಯಮ ಇದೆ.
ಅರ್ಜಿದಾರರು ಪರೀಕ್ಷೆಗೆ ತಯಾರಿ ನಡೆಸಲು ಈಗ ಒಂದು ತಿಂಗಳಿಗೂ ಹೆಚ್ಚಿನ ಸಮಯವಿದ್ದು ಚೆನ್ನಾಗಿ ಅಭ್ಯಾಸ ಮಾಡಬಹುದು. ಪರೀಕ್ಷಾ ದಿನಾಂಕ ಮುಂದೂಡಿಕೆ ಆಗಿದ್ದಕ್ಕೆ ಬೇಸರ ಪಡದೆ ಇನ್ನಷ್ಟು ಹೆಚ್ಚಿಗೆ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಿ. ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ.
ಇದನ್ನೂ ಓದಿ: ಇನ್ನು ಮುಂದೆ ಸ್ಮಾರ್ಟ್ಫೋನ್ ಇಲ್ಲದೇ ಪೇಮೆಂಟ್ ಮಾಡುವುದು ಸುಲಭ, ಅದು ಕೂಡ ಸ್ಮಾರ್ಟ್ ವಾಚ್ ನ ಮುಖಾಂತರ!