ನಮ್ಮ ದೇಹದ ಬಹು ಮುಖ್ಯ ಅಂಗ ಕಣ್ಣು. ನಾವು ಏನನ್ನಾದರೂ ನೋಡಬೇಕು ಓದಬೇಕು ಎಂದರೆ ನಮಗೆ ಕಣ್ಣಿನ ದೃಷ್ಠಿ ಬಹಳ ಚೆನ್ನಾಗಿ ಇರಬೇಕು. ಈಗಿನ ಮೊಬೈಲ್ ಲ್ಯಾಪ್ಟಾಪ್ ಲೋಕದಲ್ಲಿ ಚಿಕ್ಕ ಮಕ್ಕಳಿಗೂ ಸಹ ದೃಷ್ಟಿ ದೋಷ ಬರುತ್ತಿದೆ. ಆದರೆ ಕೆಲವು ಹಣ್ಣು ಮತ್ತು ತರಕಾರಿಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೃಷ್ಠಿ ದೋಷವನ್ನು ಸುಧಾರಿಸಲು ಸಾಧ್ಯವಿದೆ. ಹಾಗಾದರೆ ನಮ್ಮ ಕಣ್ಣಿನ ದೃಷ್ಠಿ ದೋಷವನ್ನು ದೂರಮಾಡಲು ನಾವು ನಿತ್ಯ ಯಾವ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿದರೆ ಉತ್ತಮ ಎಂದು ನೋಡೋಣ.
ದೃಷ್ಠಿ ದೋಷ ನಿವಾರಣೆಗೆ ಇವುಗಳನ್ನು ಹೆಚ್ಚಾಗಿ ಸೇವಿಸಿ :-
1) ಕೊತ್ತುಂಬರಿ ಸೊಪ್ಪು:- ಕೊತ್ತುಂಬರಿ ಸೊಪ್ಪನ್ನು ನಾವು ನಿತ್ಯ ಅಡುಗೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸೇವನೆ ಮಾಡುತ್ತೇವೆ. ಇದು ನಮ್ಮ ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಕೊತ್ತುಂಬರಿ ಸೊಪ್ಪನ್ನು ನಿತ್ಯ ಸೇವನೆ ಮಾಡುವುದರಿಂದ ನಮ್ಮ ದೃಷ್ಠಿ ದೋಷ ನಿವಾರಣೆ ಸಾಧ್ಯ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
2) ಕಿತ್ತಳೆ ರಸ:- ಕಿತ್ತಳೆ ರಸದಲ್ಲಿ ಹೆಚ್ಚಾಗಿ ವಿಟಮಿನ್ ಗಳು ಇರುವುದರಿಂದ ಕಣ್ಣಿನ ಆರೋಗ್ಯ ಮಾತ್ರವಲ್ಲದೆ ನಮ್ಮ ದೇಹದ ಆರೋಗ್ಯಕ್ಕೂ ಇದು ಬಹಳ ಒಳ್ಳೆಯದು. ಕಣ್ಣಿನ ದೃಷ್ಠಿ ಸುಧಾರಿಸಲು ಕಿತ್ತಳೆ ರಸಕ್ಕೆ ಸ್ವಲ್ಪ ಕರಿಮೆಣಸಿನ ಪುಡಿಯನ್ನು ಸೇರಿಸಿ ಸತತವಾಗಿ ಒಂದು ತಿಂಗಳ ಕಾಲ ಸೇವನೆ ಮಾಡಬೇಕು. ಕಿತ್ತಳೆ ರಸದಲ್ಲಿ ಇರುವ ವಿಟಮಿನ್ ಗಳು ನಮ್ಮ ದೇಹದ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಕಣ್ಣಿನ ಆರೋಗ್ಯದ ಜೊತೆಗೆ ನಮ್ಮ ದೇಹದ ಪೂರ್ಣ ಆರೋಗ್ಯಕ್ಕೆ ಕಿತ್ತಳೆ ರಸದ ಸೇವನೆ ಬಹಳ ಉತ್ತಮ ಆಗಿದೆ.
3)ತ್ರಿಫಲಾ ಚೂರ್ಣ:- ಇದು ಆಯುರ್ವೇದಿಕ್ ಅಂಗಡಿಗಳಲ್ಲಿ ಸಿಗುತ್ತದೆ. ತ್ರಿಫಲಾ ಚರ್ಮದ ಪುಡಿಯನ್ನು ರಾತ್ರಿ ಮಲಗುವ ಮೊದಲು ನೀರಿನಲ್ಲಿ ನೆನೆಸಿ ಬೆಳಗ್ಗೆ ಆ ನೀರಿನಿಂದ ನಿಮ್ಮ ಕಣ್ಣನ್ನು ತೊಳೆಯಿರಿ. ಇದರಿಂದ ನಿಮ್ಮ ದೃಷ್ಠಿ ಸುಧಾರಣೆ ಆಗುತ್ತದೆ.
4) ಬಾದಾಮಿ:- ಬಾದಾಮಿ ಒಂದು ಡ್ರೈ ಫುಟ್. ಬಾದಾಮಿಯನ್ನು ನಿತ್ಯ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರುವುದರಿಂದ ನಮ್ಮ ದೇಹದ ಆರೋಗ್ಯಕ್ಕೂ ಬಾದಾಮಿಯನ್ನು ಸೇವನೆ ಮಾಡುವುದು ಒಳ್ಳೆಯದು. ದೃಷ್ಠಿ ಸುಧಾರಣೆಗೆ ರಾತ್ರಿ ಮಲಗುವ ಮುನ್ನ 4-5 ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾದಾಮಿ ತಿನ್ನಬೇಕು. ನಂತರ ಒಂದು ಗ್ಲಾಸ್ ಹಾಲು ಕುಡಿಯುವುದರಿಂದ ದೃಷ್ಠಿ ದೋಷ ನಿವಾರಣೆ ಆಗುತ್ತದೆ.
5) ಕ್ಯಾರೆಟ್:- ಕ್ಯಾರೆಟ್ ನಲ್ಲಿ ವಿಟಮಿನ್ ಎ ಬಹಳ ಹೆಚ್ಚಾಗಿ ಇದೆ. ಈ ತರಕಾರಿಯನ್ನು ನಾವು ಸಾಂಬಾರ್, ಪಲ್ಯ, ಪಲಾವ್ ಹೀಗೆ ನಮ್ಮ ಊಟದಲ್ಲಿ ಸೇವಿಸುತ್ತೇವೆ. ಆದರೆ ಕ್ಯಾರೆಟ್ ಅನ್ನು ಬೇಯಿಸಿ ತಿನ್ನುವ ಬದಲಿಗೆ ಹಸಿಯಾಗಿ ತಿನ್ನುವುದರಿಂದ ಕಣ್ಣಿನ ದೃಷ್ಠಿ ಸುಧಾರಿಸುತ್ತದೆ. ಇದು ತೂಕ ಇಳಿಕೆಗು ಬಹಳ ಮುಖ್ಯ.
ನಮ್ಮ ಆಹಾರ ಸುಧಾರಣೆಗೆ ನಮ್ಮ ಮನೆಯಲ್ಲಿಯೇ ನಾವು ನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿ ಔಷಧಿ ಗುಣಗಳು ಇವೆ. ಆದರೆ ನಾವು ಇದನ್ನು ನಿರ್ಲಕ್ಷಿಸಿ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗೂ ಸಹ ವೈದ್ಯರ ಬಳಿ ಹೋಗುತ್ತೇವೆ. ಆದರೆ ಮನೆ ಮದ್ದುಗಳನ್ನು ಅರಿತು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡರೆ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು. ಆದರೆ ಮನೆಮದ್ದುಗಳನ್ನು ಬಳಸುವ ಮೊದಲು ಒಮ್ಮೆ ವೈದ್ಯರನ್ನು ಅಥವಾ ಹಳ್ಳಿ ಔಷಧಿ ನೀಡುವ ತಜ್ಞರನ್ನು ಭೇಟಿ ಆಗುವುದು ಬಹಳ ಉತ್ತಮ.
ಇದನ್ನೂ ಓದಿ: ಲಿವರ್ ಆರೋಗ್ಯಕ್ಕೆ ಈ ಹಣ್ಣುಗಳನ್ನು ತಿನ್ನಬೇಕು