ಉದ್ಯೋಗಿಗಳ ಭವಿಷ್ಯದ ಉಳಿತಾಯಕ್ಕೆ ಪ್ರತಿ ತಿಂಗಳ ಸಂಬಳದಲ್ಲಿ ಕೆಲವು ಪರ್ಸಂಟೇಜ್ ಹಣವೂ ನಿಮ್ಮ ಪಿಎಫ್ ಖಾತೆಗೆ ನೇರವಾಗಿ ನೀವು ಕೆಲಸ ಮಾಡುವ ಸಂಸ್ಥೆ ನೀಡುತ್ತದೆ. ಅದು ಉದ್ಯೋಗಗಳು ರಿಟೈರ್ಮೆಂಟ್ ಆದಮೇಲೆ ನಿಮಗೆ ಆರ್ಥಿಕ ಸಹಾಯಕ್ಕೆ ಬರುತ್ತದೆ.ಪ್ರತಿ ತಿಂಗಳು ಕಡಿತವಾದ ಪಿಎಫ್ ಹಣಕ್ಕೆ ಬಡ್ಡಿದರ ಏಷ್ಟು. ಹಾಗೂ ನಮ್ಮ ಬಡ್ಡಿದರವನ್ನು ಲೆಕ್ಕ ಹಾಕುವುದು ಹೇಗೆ ಎಂದು ತಿಳಿಯೋಣ.
ಯಾವ ಯಾವ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪಿಎಫ್ ಹಣವೂ ಕಡಿತವಾಗಿತ್ತದೆ?: ಉದ್ಯೋಗಿಗಳ ಭವಿಷ್ಯ ನಿಧಿ ಅಂದರೆ EPF. ಇದು ಸರ್ಕಾರಿ ಸಂಬಳ ಪಡೆಯುವ ಉದ್ಯೋಗಿಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ವೇತನದಲ್ಲಿ ಇಪಿಎಫ್ ಹಣವೂ ಕಡಿತ ಆಗುತ್ತದೆ.. ನಿಮ್ಮ ಕಂಪನಿಯಲ್ಲಿ ನಿಮ್ಮ ಸಂಬಳದಲ್ಲಿ ಇಪಿಎಫ್ ಖಾತೆಯ ವ್ಯವಸ್ಥೆ ಇದೆಯೋ ಇಲ್ಲವೋ ಎಂಬ ಬಗ್ಗೆ ನೀವು ನಿಮ್ಮ ಉನ್ನತಾಧಿಕಾರಿಗಳು ಅಥವಾ ಆಡಿಟ್ ಡಿಪಾರ್ಟ್ಮೆಂಟ್ ನಲ್ಲಿ ತಿಳಿದು ಕೊಳ್ಳಬಹುದು.
ನಿಯಮದ ಪ್ರಕಾರ ಪ್ರತಿ ತಿಂಗಳು ಏಷ್ಟು ಪ್ರತಿಶತ ಹಣವೂ ಇಪಿಎಫ್ ಖಾತೆಗೆ ಜಮಾ ಆಗುತ್ತದೆ?: ಪ್ರತಿ ತಿಂಗಳು ಉದ್ಯೋಗಿಗಳು ತಮ್ಮ ಮೂಲ ವೇತ ಹಾಗೂ ಭತ್ಯೆಯ 12% EPF ಖಾತೆಗೆ ಜಮಾ ಆಗುತ್ತದೆ. EPF ಬಡ್ಡಿದರಗಳನ್ನು ವಾರ್ಷಿಕವಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರಕಟಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಡ್ಡಿದರದ ಮಾಹಿತಿ :-
ಪ್ರತಿ ವರ್ಷವೂ ಸಹ ಬಡ್ಡಿದರಗಳು ವ್ಯತ್ಯಾಸ ಆಗುತ್ತವೆ. ಆ ವಾರ್ಷಿಕ ಹಣಕಾಸು ವರ್ಷದಲ್ಲಿ ಸಂಸ್ಥೆಯು ಏಷ್ಟು ಬಡ್ಡಿದರವನ್ನು ನಿಗದಿ ಮಾಡಿದೆ ಎನ್ನುವುದರ ಮೇಲೆ ನೀವು ಬಡ್ಡಿದರ ಲೆಕ್ಕಾಹಾಕಬೇಕು. 2023-24 ರ ಹಣಕಾಸು ವರ್ಷದ EPF ಬಡ್ಡಿ ದರ ಶೇಕಡಾ 8.25%.. ನೀವು ಪ್ರತಿ ವರ್ಷ ಏಷ್ಟು ಬಡ್ಡಿದರ ಇದೆ ಹಾಗೂ ನಿಮ್ಮ ತಿಂಗಳ ವೇತನದಲ್ಲಿ ಕಟ್ಟಾಗುವ ಮೊತ್ತ ಏಷ್ಟು ಎಂಬುದರ ಮೇಲೆ ಪ್ರತಿ ವರ್ಷವೂ ಇಪಿಎಫ್ ಬಡ್ಡಿದರವನ್ನು ಲೆಕ್ಕಹಾಕಬಹುದು.
ಇಪಿಎಫ್ ಬಡ್ಡಿಯನ್ನು ಹೇಗೆ ಲೆಕ್ಕ ಹಾಕುತ್ತಾರೆ ಎಂಬುದನ್ನು ತಿಳಿಯೋಣ: ಉದಾಹರಣೆಗೆ ಮೊದಲ ತಿಂಗಳ ನಿಮ್ಮ ಹಣವೂ ₹10,000 ತಿಳಿಯೋಣ. ಈ ತಿಂಗಳಲ್ಲಿ ಯಾವುದೇ ಬಡ್ಡಿ ಸಿಗುವುದಿಲ್ಲ. ಮುಂದಿನ ತಿಂಗಳಿನಲ್ಲಿ ಆ ತಿಂಗಳ ಹಣ ಮತ್ತು ಹಿಂದಿನ ತಿಂಗಳಿನ ಬ್ಯಾಲೆನ್ಸ್ ದ್ವಿಗುಣಗೊಂಡು ₹20,000 ಆಗುತ್ತದೆ.
ಇದನ್ನೂ ಓದಿ: LIC ಈ ಹೊಸ ಯೋಜನೆಯಲ್ಲಿ ಕೇವಲ ರೂ.121 ಹೂಡಿಕೆ ಮಾಡಿ, ಮಗಳ ಮದುವೆಯ ಸಮಯಕ್ಕೆ ಪಡೆಯಿರಿ 27 ಲಕ್ಷ ರೂ.ಗಳು
ಈ ತಿಂಗಳಿನಲ್ಲಿ ಸಿಗುವ ಬಡ್ಡಿ:
- ಸಂಚಿತ ಬಡ್ಡಿ = ₹137.5 (20,000 x 8.25%) ÷12
- ಪ್ರಸ್ತುತ ಬಡ್ಡಿ = ₹137
ಕೊನೆಯಲ್ಲಿ, ಎಲ್ಲಾ ಮಾಸಿಕ ಬಾಕಿಗಳನ್ನು ಸೇರಿಸುವ ಮೂಲಕ ಅಂತಿಮ ವಾರ್ಷಿಕ ಬಡ್ಡಿ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ಇದೇ ರೀತಿ ಪ್ರತಿ ವರ್ಷವೂ ವಾರ್ಷಿಕ ಬಡ್ಡಿಯನ್ನು ಲೆಕ್ಕಾಹಾಕಲಾಗುತ್ತದೆ.
ಇಪಿಎಫ್ ಹಣ ಏಕೆ ಮುಖ್ಯ?: ಇಪಿಎಫ್ ಖಾತೆ ಜಮಾದ ಹಣವು ನಿವೃತ್ತಿಯ ನಂತರ ಒಂದು ಆದಾಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಉದ್ಯೋಗಿಗಳು ನಿವೃತ್ತಿ ಆದ ಬಳಿಕ ಖಾತೆಯಲ್ಲಿ ಜಮಾದ ಒಟ್ಟು ಮೊತ್ತವನ್ನು ಪಡೆಯಬಹುದು. ಇಪಿಎಫ್ ಖಾತೆ ಜಮದ ಹಣದ ಒಂದು ಭಾಗವನ್ನು ಮನೆ ಖರೀದಿಗೆ ಮುಂಗಡದಲ್ಲಿ ಪಡೆಯಬಹುದು. ಗಂಭೀರ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಇಪಿಎಫ್ ಖಾತೆಯಲ್ಲಿ ಜಮಾದ ಹಣದ ಒಂದು ಭಾಗವನ್ನು ಪಡೆಯಬಹುದು. ಈ ಹಣವನ್ನು ಮಕ್ಕಳ ಮದುವೆಗೆ ಅಥವಾ ನಿಮ್ಮ ಹಣದ ಅಗತ್ಯಕ್ಕೆ ನೀವು ಈ ಹಣವನ್ನು ಪಡೆಯಲು ಸಾಧ್ಯವಿದೆ.
ಇದನ್ನೂ ಓದಿ: ಇನ್ನು ಮುಂದೆ ರೈಲಿನಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಡಿಜಿಟಲ್ ಪಾವತಿ ಸೌಲಭ್ಯ