ಈ ಹಿಂದೆ ಮೌಲ್ಯಾಂಕನ ಪರೀಕ್ಷೆ ನಡೆಸದಂತೆ ಸುಪ್ರೀಂ ಕೋರ್ಟ್ ತಡೆಯಾಜ್ನೆ ನೀಡಿತ್ತು. ಆದರೆ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಪರಿಶೀಲಿಸಿ ಈಗ ಪರೀಕ್ಷೆ ನಡೆಸಲು ಸಮ್ಮತಿ ಸಿಕ್ಕಿದೆ. ಶಿಕ್ಷಣ ಇಲಾಖೆಯು ಹೊಸದಾಗಿ ಪರೀಕ್ಷಾ ವೇಳಾಪಟ್ಟಿಯನ್ನು ನೀಡಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ಭಯ ಮತ್ತು ಆತಂಕ ಪಡದೇ ಪರೀಕ್ಷೆ ಎದುರಿಸುವಂತೆ ತಿಳಿಸಿದೆ. ಸರ್ಕಾರದ ಮೊದಲಿನ ಅಧಿಸೂಚನೆಯ ಪ್ರಕಾರವೇ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ವೇಳಾಪಟ್ಟಿಯ ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಈಗಾಗಲೇ ಏಷ್ಟು ಪರೀಕ್ಷೆ ನಡೆದಿತ್ತು?: ಶಿಕ್ಷಣ ಇಲಾಖೆಯ ವೇಳಾಪಟ್ಟಿಯ ಪ್ರಕಾರ ಮಾರ್ಚ್ 12 ಮತ್ತು ಮಾರ್ಚ್ 13ನೇ ತಾರೀಖಿನ ದಿನದಂದು ಪ್ರಥಮ ಮತ್ತು ದ್ವಿತೀಯ ಭಾಷೆ ಪರೀಕ್ಷೆ ನಡೆದಿತ್ತು. ನಂತರ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬೇಲಾ ತ್ರಿವೇದಿ ನೇತೃತ್ವದ ನ್ಯಾಯಪೀಠ ಪರೀಕ್ಷೆಗೆ ತಡೆ ಆಜ್ಞೆ ಹೊರಡಿಸಿತ್ತು. ತಡೆ ನೀಡಿದ ಕಾರಣದಿಂದ ಪರೀಕ್ಷೆಯನ್ನು ಮುಂದಿನ ಆದೇಶದವರೆಗೆ ಮುಂದೂಡುವುದಾಗಿ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಈ ಹಿಂದೆ ಆದೇಶ ಹೊರಡಿಸಿತ್ತು. ಈಗ ವಾದ ವಿವಾದಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಶಿಕ್ಷಣ ಇಲಾಖೆಯ ನೂತನ ವೇಳಾಪಟ್ಟಿ :-
ಇದೇ ಬರುವ ಮಾರ್ಚ್ 25 ರಿಂದ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆಯು ತಿಳಿಸಿದೆ. ಶಿಕ್ಷಣ ಇಲಾಖೆಯ ನೂತನ ವೇಳಾಪಟ್ಟಿ ಹೀಗಿದೆ
- 5 ನೇ ತರಗತಿಯ ಮಕ್ಕಳ ನೂತನ ವೇಳಾಪಟ್ಟಿ: ಮಾರ್ಚ್ 25 ಸೋಮವಾರದಂದು ಪರಿಸರ ಅಧ್ಯಯನ ವಿಷಯ ಹಾಗೂ ಮಾರ್ಚ್ 26 ಮಂಗಳವಾರದಂದು ಗಣಿತ ಪರೀಕ್ಷೆ ನಡೆಯಲಿದೆ.
8 ನೇ ತರಗತಿಯ ಮಕ್ಕಳ ನೂತನ ವೇಳಾಪಟ್ಟಿ
- ಮಾರ್ಚ್ 25 ಸೋಮವಾರದಂದು ತೃತೀಯ ಭಾಷೆ.
- ಮಾರ್ಚ್ 26- ಮಂಗಳವಾರ ಗಣಿತ.
- ಮಾರ್ಚ್ 27 ಬುಧವಾರದಂದು ವಿಜ್ಞಾನ.
- ಮಾರ್ಚ್ 28 ಗುರುವಾರದಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.
9 ನೇ ತರಗತಿಯ ಮಕ್ಕಳ ನೂತನ ವೇಳಾಪಟ್ಟಿ
- ಮಾರ್ಚ್ 25 ಸೋಮವಾರದಂದು ತೃತೀಯ ಭಾಷೆ.
- ಮಾರ್ಚ್ 26 ಮಂಗಳವಾರದಂದು ಗಣಿತ.
- ಮಾರ್ಚ್ 27 ಬುಧವಾರದಂದು ವಿಜ್ಞಾನ.
- ಮಾರ್ಚ್ 28 ಗುರುವಾರದಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.
ಎಸೆಸೆಲ್ಸಿ ಪರೀಕ್ಷೆ ಇರುವ ಶಾಲೆಗಳಲ್ಲಿ ಪರೀಕ್ಷೆ ಸಮಯ ಏನು?: ಕೆಲವು ಪ್ರಾಥಮಿಕ ಶಾಲೆಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು. ಅಂತಹ ಶಾಲೆಗಳಲ್ಲಿ ಪರೀಕ್ಷೆಯನ್ನೂ ಮಧ್ಯಾನ್ಹ ನಡೆಸಲಾಗುವುದು. ಶಾಲೆಗಳ ನೋಟಿಸ್ ಬೋರ್ಡ್ ನಲ್ಲಿ ಅಥವಾ ನಿಮ್ಮ ಶಾಲಾ ಶಿಕ್ಷಕರು ಪರೀಕ್ಷೆ ಸಮಯ ತಿಳಿಸುತ್ತಾರೆ. ಆದರೆ ಎಸೆಸೆಲ್ಸಿ ಪರೀಕ್ಷೆ ನಡೆಯದ ಶಾಲೆಗಳಲ್ಲಿ ಹಳೆಯ ವೇಳಾಪಟ್ಟಿಯಲ್ಲಿ ಇರುವಂತೆ ಬೆಳಗ್ಗೆ ಪರೀಕ್ಷೆಗಳು ನಡೆಯಲಿವೆ.
ಈ ಹಿಂದೆ ಮೌಲ್ಯಾಂಕನ ಪರೀಕ್ಷೆಗಳಿಗೆ ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಖಾಸಗಿ ಶಾಲೆಗಳು ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಪರೀಕ್ಷೆಗಳನ್ನು ನಡೆಸದಂತೆ ತಡೆ ನೀಡಿತ್ತು. ಈಗ ಪರೀಕ್ಷೆ ನಡೆಸಲು ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ. ಇದರಿಂದ ಮಕ್ಕಳ ಮತ್ತು ಹೆತ್ತವರ ಆತಂಕ ದೂರವಾಗಿದೆ. ಈ ಹಿಂದಿನ ಪರೀಕ್ಷಾ ನಿಯಮಗಳು ಇರಲಿದ್ದು , ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಶಿಕ್ಷಣ ಇಲಾಖೆಯು ಶಾಲೆಗಳಿಗೆ ತಿಳಿಸಿದೆ.
ಇದನ್ನೂ ಓದಿ: LIC ಈ ಹೊಸ ಯೋಜನೆಯಲ್ಲಿ ಕೇವಲ ರೂ.121 ಹೂಡಿಕೆ ಮಾಡಿ, ಮಗಳ ಮದುವೆಯ ಸಮಯಕ್ಕೆ ಪಡೆಯಿರಿ 27 ಲಕ್ಷ ರೂ.ಗಳು
ಇದನ್ನೂ ಓದಿ: ಜಿಯೋ ಕೇವಲ ರೂ.49 ಕ್ಕೆ ನೀಡುತ್ತಿದೆ Unlimited Data Plan, ಇಂದಿನಿಂದಲೇ ಪ್ರಾರಂಭ!